Breaking News
Home / ರಾಜ್ಯ / ನಿಮ್ಗೆ ಶಾಕ್ ಆದ್ರೂ.. ಸತ್ಯ.! ಬೆಳಗಾವಿಯ ‘ಬಿಮ್ಸ್ ಆಸ್ಪತ್ರೆ’ಯಲ್ಲಿ ಮಹಾ ಎಡವಟ್ಟು : ‘ಕೊರೋನಾ ಸೋಂಕಿತ’ರ ಆರೈಕೆಗಾಗಿ ‘ಕುಟುಂಬಸ್ಥ’ರಿಗೆ ಅವಕಾಶ.!

ನಿಮ್ಗೆ ಶಾಕ್ ಆದ್ರೂ.. ಸತ್ಯ.! ಬೆಳಗಾವಿಯ ‘ಬಿಮ್ಸ್ ಆಸ್ಪತ್ರೆ’ಯಲ್ಲಿ ಮಹಾ ಎಡವಟ್ಟು : ‘ಕೊರೋನಾ ಸೋಂಕಿತ’ರ ಆರೈಕೆಗಾಗಿ ‘ಕುಟುಂಬಸ್ಥ’ರಿಗೆ ಅವಕಾಶ.!

Spread the love

ಬೆಳಗಾವಿ : ಕೊರೋನಾ ಸೋಂಕಿತರಾದಂತವರಿಗೆ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪಿಪಿಇ ಕಿಟ್ ಹಾಕೊಂಡು, ವೈದ್ಯರು, ನರ್ಸ್ ಗಳು ಚಿಕಿತ್ಸೆ ನೀಡೋದು, ಆರೈಕೆ ಮಾಡೋದು ನೋಡಿದ್ದೀರಿ. ಆದ್ರೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಸೋಂಕಿತರ ಆರೈಕೆ ಮಾಡ್ತಾ ಇರೋದು ಕುಟುಂಬಸ್ಥರು. ಹೀಗೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

ಹೌದು.. ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಈಗಾಗಲೇ ಕೊರೋನಾ ಕರ್ಪ್ಯೂ ಜಾರಿಗೊಳಿಸಿದೆ. ಸೋಂಕಿನ ನಿಯಂತ್ರಣಕ್ಕೆ ನಾನಾ ಸರ್ಕಸ್ ಕೂಡ ಮಾಡುತ್ತಿದೆ. ಹೀಗಿದ್ದೂ.. ಆಸ್ಪತ್ರೆಗಳೇ ನಿರ್ಲಕ್ಷ್ಯ ತೋರಿದ್ರೇ.. ಕೊರೋನಾ ನಿಯಂತ್ರಣ ಆಗೋದು ಹೇಗೆ ಎನ್ನುವ ಪ್ರಶ್ನೆಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಕೊರೋನಾ ಕೇರ್ ಸೆಂಟರ್ ದೃಶ್ಯವೊಂದು ಎತ್ತಿದೆ.

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರನ್ನು ನೋಡಿಕೊಳ್ಳಲು ಹಾಗೂ ಆರೈಕೆ ಮಾಡೋದಕ್ಕೆಗಾಗಿ ಕುಟುಂಬಸ್ಥರಿಗೆ ಅವಕಾಶ ನೀಡಲಾಗಿದೆ ಎಂಬುದಾಗಿ ವೀಡಿಯೋದಲ್ಲಿ ತೋರಿ ಬಂದಿದೆ. ಸೋಂಕಿತರ ಬೆಡ್ ಮೇಲೆಯೇ ಕುಳಿತಂತ ಕುಟುಂಬಸ್ಥರು, ಸಂಬಂಧಿಕರು, ಕೊರೋನಾ ಸೋಂಕಿತರ ಆರೈಕೆಯಲ್ಲಿ ತೊಡಗಿರೋದು ಕಂಡು ಬಂದಿದೆ.

ಇನ್ನೂ ಕೊರೋನಾ ಸೋಂಕಿತರ ಆರೈಕೆಗಾಗಿ ಇರುವಂತ ಕುಟುಂಬಸ್ಥರು, ಸೋಂಕಿತರಿಗೆ ಆರೈಕೆ ಮಾಡಿದ ಬಳಿಕ, ಆಸ್ಪತ್ರೆಯಿಂದ ಹೊರಬಂದು ಬಿಂದಾಸ್ ಆಗಿ ಓಡಾಡುತ್ತಾ ಇದ್ದಾರೆ. ಈ ಮೂಲಕ ಕೊರೋನಾ ಸೋಂಕನ್ನು ಮತ್ತಷ್ಟು ಜನರಿಗೆ ಹರಡೋ ಕೆಲಸ ಮಾಡಲಾಗುತ್ತಿದೆ. ಅಂದಹಾಗೇ ಸಾಮಾನ್ಯ ಕೊರೋನಾ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದರೇ ಸಾಕು ಕೊರೋನಾ ಬರುತ್ತದೆ. ಆದ್ರೇ ಬಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಕುಟುಂಬಸ್ಥರು ಆರೈಕೆ ಮಾಡಿ, ಹೊರಗೆ ಓಡಾಡುತ್ತಿರುವುದು ಮತ್ತಷ್ಟು ಆಸ್ಪತ್ರೆಯ ಅವ್ಯವಸ್ಥೆಗೆ ಕೈಗನ್ನಡಿಯಾಗಿದೆ. ಹೀಗಾಗಿ ಈ ಬಗ್ಗೆ ಸಂಬಂಧಿಸಿದಂತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ