Breaking News
Home / ರಾಜ್ಯ / ಮುಖ್ಯಮಂತ್ರಿ ಅನಿಲಭಾಗ್ಯ, ಉಜ್ವಲ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಮುಖ್ಯಮಂತ್ರಿ ಅನಿಲಭಾಗ್ಯ, ಉಜ್ವಲ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್

Spread the love

ಧಾರವಾಡ: ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳು ಅಡುಗೆ ಅನಿಲವನ್ನು ಬಳಸುವಂತೆ ಹಾಗೂ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕಗಳನ್ನು ಜಿಲ್ಲೆಯಲ್ಲಿ ನೀಡಲಾಗಿದೆ.

ಇತ್ತೀಚಿನ ಮಾಹಿತಿಗಳನ್ವಯ ಮುಖ್ಯಮಂತ್ರಿ ಅನಿಲಭಾಗ್ಯ ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದಿರುವ ಫಲಾನುಭವಿಗಳು ಅಡುಗೆ ಅನಿಲ ಬಳಕೆಯನ್ನು ಸಮರ್ಪಕವಾಗಿ ಮುಂದುವರಿಸದೇ ಇರುವುದು ಕಂಡು ಬಂದಿರುತ್ತದೆ.

ಆರಂಭದಲ್ಲಿ ನೀಡಲಾಗಿದ್ದ ಉಚಿತ ಸಿಲಿಂಡರ್‍ಗಳನ್ನು ಬಳಕೆ ಮಾಡಿದ್ದು, ಮುಂದೆ ರಿಫೀಲ್ ಪಡೆಯುವಲ್ಲಿ ಗ್ರಾಹಕರು ಹೆಚ್ಚಿನ ದರವನ್ನು ಪಾವತಿಸಲು ಹಿಂಜರಿಯುತ್ತಿದ್ದಾರೆ. ಈ ಕಾರಣದಿಂದಾಗಿ ಗ್ರಾಹಕರಿಗೆ ಸಾಧಾರಣವಾಗಿ ಬಳಸುವ 14.2 ಕೆಜಿ ಸಾಮಥ್ರ್ಯದ ಗೃಹ ಸಿಲಿಂಡರ್ ಬದಲಾಗಿ ವಿಶೇಷ 5 ಕೆಜಿ ತೂಕದ ಸಿಲಿಂಡರ್‍ಗಳನ್ನು ಬಳಕೆ ಮಾಡುವುದರಿಂದ ಪ್ರತಿ ಸಿಲಿಂಡರ್‍ಗೆ ತಗಲುವ ವೆಚ್ಚ ಸುಮಾರು ಅರ್ಧದಷ್ಟು ಕಡಿಮೆಯಾಗಲಿದೆ.

ಇದರಿಂದಾಗಿ ಫಲಾನುಭವಿಗಳು ಸುಲಭವಾಗಿ 5 ಕೆಜಿ ತೂಕದ ಸಿಲಿಂಡರ್‍ಗಳ ರಿಫೀಲ್‍ಗಳನ್ನು ಪಡೆದು ಬಳಸಲು ಅನುಕೂಲವಾಗಲಿದೆ. ಎಲ್ಲಾ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಮತ್ತು ಅವರ ಸ್ವ-ಇಚ್ಛೆಯಂತೆಯೇ 5 ಕೆಜಿ ಸಿಲಿಂಡರ್‍ಗಳನ್ನು ಬಳಕೆ ಮಾಡಲು ಮುಖ್ಯಮಂತ್ರಿ ಅನಿಲಭಾಗ್ಯ ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಗ್ರಾಹಕರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ