Breaking News
Home / ರಾಜ್ಯ / ಒಟ್ಟು ೮.೨೫ ಲಕ್ಷ ರೂ.ದಷ್ಟು ಸಾಲ ಮಾಡಿದ್ದ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ

ಒಟ್ಟು ೮.೨೫ ಲಕ್ಷ ರೂ.ದಷ್ಟು ಸಾಲ ಮಾಡಿದ್ದ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ

Spread the love

ಖಾನಾಪುರ: ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಕೃಷಿಕರೊಬ್ಬರು ಕ್ರಿಮಿನಾಶಕ ಔಷಧ ಸೇವಿಸಿ ಸಾವಿಗೆ ಶರಣಾದ ಘಟನೆ ಸೋಮವಾರ ವರದಿಯಾಗಿದೆ. ಗ್ರಾಮದ ಪ್ರಕಾಶ ವೀರಪ್ಪ ಹುಚ್ಚನವರ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಚಿಕ್ಕ ಹಿಡುವಳಿದಾರರಾಗಿದ್ದ ಪ್ರಕಾಶ ತಮ್ಮ ಜಮೀನಿನಲ್ಲಿ ಒಕ್ಕಲುತನ ಕೈಗೊಳ್ಳುವ ಸಲುವಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ನಿರೀಕ್ಷಿತ ಮಟ್ಟದಲ್ಲಿ ಫಸಲು ಕೈಗೆ ದೊರಕದೇ ಇದ್ದದ್ದಕ್ಕೆ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.

ಇದೇ ಕಾರಣಕ್ಕೆ ಅವರು ಕಳೆದ ಮಾ.೭ರಂದು ಸಂಜೆ ತಮ್ಮ ಮನೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಸ್ಥಳೀಯರು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಬ್ಯಾಂಕ್ ಆಫ್ ಇಂಡಿಯಾ ಪಾರಿಶ್ವಾಡ ಶಾಖೆಯಲ್ಲಿ ಕೃಷಿಸಾಲದ ರೂಪದಲ್ಲಿ ೬.೧೫ ಲಕ್ಷ, ಗ್ರಾಮದ ಪಿಕೆಪಿಎಸ್‌ನಲ್ಲಿ ಬೆಳೆಸಾಲದ ರೂಪದಲ್ಲಿ ೬.೧೦ ಲಕ್ಷ, ಕೈಗಡ ಸಾಲವಾಗಿ ಪರಿಚಿತರಿಂದ ೨ ಲಕ್ಷ ಸೇರಿದಂತೆ ಒಟ್ಟು ೮.೨೫ ಲಕ್ಷ ರೂ.ದಷ್ಟು ಸಾಲವನ್ನು ಅವರು ಪಡೆದಿದ್ದರು. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ