Breaking News
Home / ರಾಜ್ಯ / ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ: ಗ್ರಾಹಕರಿಗೆ SBI ಗಿಫ್ಟ್‌

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ: ಗ್ರಾಹಕರಿಗೆ SBI ಗಿಫ್ಟ್‌

Spread the love

ಮಾರ್ಚ್ 31, 2021ರ ವರೆಗೂ ಗೃಹ ಸಾಲದ ಮೇಲಿನ ಪರಿಷ್ಕರಣಾ ಶುಲ್ಕ ಕಡಿತಗೊಳಿಸಿರುವ ಸ್ಟೇಟ್ ಬ್ಯಾಂಕ್, ವಾರ್ಷಿಕ 6.8% ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ.

ಸಾಮಾನ್ಯ ಗೃಹ ಸಾಲ, ಸರ್ಕಾರೀ ನೌಕರರಿಗೆ ಗೃಹ ಸಾಲ, ಸೇನೆಯ ಸಿಬ್ಬಂದಿಗೆ ಶೌರ್ಯ ಗೃಹ ಸಾಲ, ಚಾಲ್ತಿ ಗ್ರಾಹಕರಿಗೆ ಟಾಪ್‌-ಅಪ್ ಸಾಲ, ಮ್ಯಾಕ್ಸಿಗೇನ್, ಸ್ಮಾರ್ಟ್ ಹೌಸ್, ಫ್ಲೆಕ್ಸಿ‌ಪೇ ಹಾಗೂ ಮಹಿಳೆಯರಿಗೆ ಹರ್‌ಘರ್‌ ಯೋಜನೆಗಳ ಮೂಲಕ ಸಾಲ ಕೊಡುವ ವ್ಯವಸ್ಥೆಯನ್ನು ಎಸ್‌ಬಿಐ ಇಟ್ಟುಕೊಂಡಿದೆ.

ಗೃಹ ಸಾಲದ ವಿಭಾಗದಲ್ಲಿ 34% ಪಾಲು ಹೊಂದಿರುವ ಎಸ್‌ಬಿಐ, ಇತ್ತೀಚೆಗೆ ತನ್ನ ಗೃಹ ಸಾಲದ ಬ್ಯುಸಿನೆಸ್‌ನಲ್ಲಿ 5 ಲಕ್ಷ ಕೋಟಿ ರೂ.ಗಳ ಮಟ್ಟ ದಾಟಿದೆ. 2024ರ ವಿತ್ತೀಯ ವರ್ಷದ ವೇಳೆಗೆ ತನ್ನ ಗೃಹ ಸಾಲದ ವಹಿವಾಟನ್ನು ಏಳು ಲಕ್ಷ ಕೋಟಿ ರೂ.ಗಳಿಗೆ ವರ್ಧಿಸಿಕೊಳ್ಳಲು ಎಸ್‌ಬಿಐ ಚಿಂತನೆ ನಡೆಸಿದೆ.

ಪ್ರಧಾನ ಮಂತ್ರಿಯವರ ‘2022ರ ವೇಳೆಗೆ ಸರ್ವರಿಗೂ ಸೂರು’ ಯೋಜನೆಗೆ ಪೂರಕವಾಗಿ ಎಸ್‌ಬಿಐ ನಿರಂತರವಾಗಿ ಗೃಹ ಸಾಲಗಳನ್ನು ಕೊಡುತ್ತಿದ್ದು, ಡಿಸೆಂಬರ್ ವೇಳೆಗೆ‌ 1,94,582 ಗೃಹ ಸಾಲಗಳನ್ನು ಮಂಜೂರು ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ