Home / ರಾಜ್ಯ / ವಿದ್ಯಾರ್ಥಿಗಳೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ, ಮನೆಯಲ್ಲೇ ‘ರೇಡಿಯೋ ಪಾಠ’ ಆಲಿಸಿ!

ವಿದ್ಯಾರ್ಥಿಗಳೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ, ಮನೆಯಲ್ಲೇ ‘ರೇಡಿಯೋ ಪಾಠ’ ಆಲಿಸಿ!

Spread the love

ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದಾಗಿ ಶೈಕ್ಷಣಿಕ ಚಟುವಟಿಕೆ ತಡವಾಗಿ ಆರಂಭಗೊಂಡಿದೆ. ಸದ್ಯಕ್ಕೆ 9ನೇ, 10ನೇ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಇಂದಿನಿಂದ ಆರಂಭಗೊಳ್ಳಲಿವೆ. ಆದ್ರೇ 1 ರಿಂದ 5ನೇ ತರಗತಿ ಆರಂಭಗೊಂಡಿಲ್ಲ. 6 ರಿಂದ 8ನೇ ತರಗತಿವರೆಗೆ ವಿದ್ಯಾಗಮ ತರಗತಿಗಳ ಮೂಲಕ ಶೈಕ್ಷಣಿಕ ಚಟುವಟಿಕೆ ಮುಂದುವರೆದಿದೆ. ಇದರ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ರೇಡಿಯೋ ಪಾಠದ ಮೂಲಕವೂ ಶೈಕ್ಷಣಿಕ ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಶೈಕ್ಷಣಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು, ಜಸ್ಟ್ ನಿಮ್ಮ ಮೊಬೈಲ್ ನಲ್ಲಿ ಈ ಒಂದು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡ್ರೇ ಸಾಕು, ಮನೆಯಲ್ಲೇ ಕುಳಿತು ರೇಡಿಯೋ ಪಾಠ ಕೇಳಬಹುದಾಗಿದೆ.

ಹೌದು.. ವಿದ್ಯಾರ್ಥಿಗಳೇ.. ನಿಮ್ಮ ಇಲ್ಲವೇ ನಿಮ್ಮ ಪೋಷಕರ ಮೊಬೈಲ್ ನಲ್ಲಿ ಕೂಡ ಪ್ರಸಾರ ಭಾರತಿಯ NewsOnAir ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಓಪನ್ ಮಾಡಿ, NewsOnAir: Prasar Bharati Official App News+Live ಎಂದು ಸರ್ಚ್ ಮಾಡಿ.

 

ಹೀಗೆ ಸರ್ಚ್ ಮಾಡಿದ ನಂತ್ರ, ಸಿಂಹ ಲಾಂಚನದ ಆಪ್ ಒಂದು ನಿಮಗೆ ಕಾಣಿಸುತ್ತದೆ. ಅಂತಹ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡ್ರೇ, ಬಾನುಲಿ ಪಾಠಗಳನ್ನು ಲೈವ್ ಮೂಲಕ ಕೇಳಬಹುದು. ಇಲ್ಲವೇ ಈಗಾಗಲೇ ಪ್ರಸಾರವಾದಂತ ರೇಡಿಯೋ ಪಾಠಗಳು ಕೂಡ ಆಪ್ ನಲ್ಲಿ ಲಭ್ಯವಿದ್ದು, ಮತ್ತೆ ನೀವು ಕೇಳಬಹುದಾಗಿದೆ. ಈ ಮೂಲಕ ನಿಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ