Breaking News

ಚಳಿಗಾಲದಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣ – ಚಾಲಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ KSRTC ಸೂಚನೆ

Spread the love

ಬೆಂಗಳೂರು: ಚಳಿಗಾಲದಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿರುವುದರಿಂದ ವಾಹನ ಚಲಾಯಿಸುವಾಗ ಪಾದಾಚಾರಿಗಳು, ಪ್ರಯಾಣಿಕರ ಸುರಕ್ಷತೆಯತ್ತ ಗಮನ ಹರಿಸಲು ಚಾಲಕರಿಗೆ ಕೆಎಸ್‌ಆರ್‌ಟಿ  ಸೂಚಿನೆ ನೀಡಿದೆ.

ವಾಹನ ಚಲಾಯಿಸುವಾಗ ರಾತ್ರಿ ಸಮಯದಲ್ಲಿ, ಬೆಳಗಿನ ಜಾವ ಕಡಿಮೆ ಗೋಚರತೆ ಹಾಗೂ ಮಂಜಿನ ಸಮಯದಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ಹೊರಡುವ ಮುನ್ನ ವಾಹನದ ಹೆಡ್‌ಲೈಟ್, ಇಂಡಿಕೇಟರ್, ಬ್ರೇಕ್‌ಲೈಟ್ ಮತ್ತು ವೈಪರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ. ಮಂಜು ಅಥವಾ ಕಡಿಮೆ ಗೋಚರತೆಯ ಸಂದರ್ಭದಲ್ಲಿ ಲೋ-ಬೀಮ್ ಲೈಟ್ ಬಳಸಿಕೊಂಡು ವೇಗವನ್ನು ನಿಯಂತ್ರಣದಲ್ಲಿರಿಸಿ ಎಂದು ತಿಳಿಸಿದೆ.

ವಾಹನಗಳ ನಡುವೆ ಸುರಕ್ಷಿತ ಅಂತರ ಕಾಪಾಡಿಕೊಳ್ಳಿ. ತುರ್ತು ಸಂದರ್ಭಗಳಲ್ಲಿ ವಾಹನ ನಿಲ್ಲಿಸಲು ಅಗತ್ಯ ಅಂತರವನ್ನು ಪರಿಗಣಿಸಿ. ಅನಗತ್ಯ ಓವರ್‌ಟೇಕ್ ಹಾಗೂ ಅಪಾಯಕಾರಿ ರೀತಿಯ ಲೇನ್ ಬದಲಾವಣೆಯನ್ನು ತಪ್ಪಿಸಿ. ಹಠಾತ್ ಬ್ರೇಕ್ ಹಾಕುವುದನ್ನು ಮತ್ತು ವೇಗದ ಏರಿಳಿತಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎಂದು ಸೂಚಿಸಿದೆ.

ದೀರ್ಘ ಪ್ರಯಾಣದ ವೇಳೆ ಅಗತ್ಯ ವಿಶ್ರಾಂತಿ ಪಡೆಯಿರಿ. ಆಯಾಸ ಅಥವಾ ನಿದ್ರಾಹೀನ ಸ್ಥಿತಿಯಲ್ಲಿ ಚಾಲನೆ ಮಾಡಬೇಡಿ. ಮುಂಜಾನೆ ಹಾಗೂ ರಾತ್ರಿ ವೇಳೆಯಲ್ಲಿ ಹೆಚ್ಚು ಜಾಗರೂಕರಾಗಿರಿ. ಈ ಸಮಯದಲ್ಲಿ ಮಂಜಿನ ಪ್ರಮಾಣ ಹೆಚ್ಚಿರುತ್ತದೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲಾ ವಾಹನಗಳ ಸಮೀಪ ಹೆಚ್ಚಿನ ಎಚ್ಚರಿಕೆ ವಹಿಸಿ ಎಂದಿದೆ.

ವಾಹನದ ಟೈರ್‌ಗಳ ಸ್ಥಿತಿ ಹಾಗೂ ಗಾಳಿಯ ಒತ್ತಡವನ್ನು ನಿಯಮಿತವಾಗಿ ಪರಿಶೀಲಿಸಿ. ಮಳೆ, ಮಂಜು ಅಥವಾ ಜಾರುವ ರಸ್ತೆಗಳಿರುವ ಸಂದರ್ಭದಲ್ಲಿ, ತಿರುವುಗಳಲ್ಲಿ ಮತ್ತು ಘಾಟ್ ರಸ್ತೆಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಿ. ಅಲ್ಲದೇ ಪ್ರಯಾಣಿಕರು ಬಸ್ ಹತ್ತುವಾಗ ಮತ್ತು ಇಳಿಯುವಾಗ ವಾಹನವನ್ನು ಸಂಪೂರ್ಣ ನಿಲ್ಲಿಸಿದ ನಂತರವೇ ಚಾಲನೆ ಪ್ರಾರಂಭಿಸಿ. ಸಂಚಾರ ನಿಯಮ ಉಲ್ಲಂಘನೆಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಿ. ಚಾಲನೆಯ ಮೊದಲು ಮತ್ತು ನಂತರ ವಾಹನದ ಸುರಕ್ಷತಾ ತಪಾಸಣೆಯನ್ನು ಕಡ್ಡಾಯವಾಗಿ ನಿರ್ವಹಿಸಿ. ಯಾವುದೇ ತಾಂತ್ರಿಕ ದೋಷ ಕಂಡುಬಂದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ದೋಷ ಸರಿಪಡಿಸಿದ ನಂತರವೇ ವಾಹನ ಚಾಲನೆ ಮಾಡಿ ಹಾಗೂ ರಾಜ್ಯ / ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ಅನಧಿಕೃತ ಸ್ಥಳಗಳಲ್ಲಿ ನಿಲುಗಡೆ ಮಾಡದಂತೆ ಸೂಚನೆ ನೀಡಿದೆ.


Spread the love

About Laxminews 24x7

Check Also

ಆಶಾ ಕಾರ್ಯಕರ್ತೆಯರ ಸೇವೆ ಕಡೆಗಣಿಸುವ ಉದ್ದೇಶವಿಲ್ಲ: ಯು.ಟಿ ಖಾದರ್ ಸ್ಪಷ್ಟನೆ

Spread the loveಶಿವಮೊಗ್ಗ: ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಆರೋಗ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ