Breaking News

ಮಹಿಳೆಯರ ನೆಚ್ಚಿನ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ: ಎಲ್.ಎಸ್. ಶಾಸ್ತ್ರಿ

Spread the love

ಬೆಳಗಾವಿ :-” ಕನ್ನಡದಲ್ಲಿ ಬಹು ದೊಡ್ಡ ಸಂಖ್ಯೆಯ ಓದುಗರನ್ನು ಸೃಷ್ಟಿಸಿದ ಶ್ರೇಯಸ್ಸು ಕೃ಼ಷ್ಣಮೂರ್ತಿ ಪುರಾಣಿಕ ಅವರಿಗೆ ಸಲ್ಲುತ್ತದೆ.
ಅಪಾರ ಜನಪ್ರಿಯತೆ ಪಡೆದಿದ್ದ ಅವರು ನಾಡಿನ ಮಹಿಳೆಯರ ನೆಚ್ಚಿನ ಕಾದಂಬರಿಕಾರರಾಗಿದ್ದರು. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಸಾಧಕರ ಹಿಂದಿನ ಸ್ತ್ರೀ ಶಕ್ತಿಗಳನ್ನು ಗೌರವಿಸುವುದು ಅತ್ಯಂತ ಅರ್ಥಪೂರ್ಣವಾಗಿದೆ” ಎಂದು ಕೃಷ್ಣಮೂರ್ತಿ ಪುರಾಣಿಕ ಟ್ಟಸ್ಟಿನ ಅಧ್ಯಕ್ಷರಾದ ಎಲ್. ಎಸ್. ಶಾಸ್ತ್ರಿ ಹೇಳಿದರು.

ಕೃಷ್ಣಮೂರ್ತಿ ಪುರಾಣಿಕ ಟ್ರಸ್ಟ್, ಪರಿಮಳ ಪ್ರಕಾಶನ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ “ಪುರಾಣಿಕರ ಪತ್ರಗಳನ್ನೊಳಗೊಂಡ ಪತ್ರಪ್ರಪಂಚ” ಎಂಬ ಪುಸ್ತಕದ ಬಿಡುಗಡೆ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶಾಸ್ತ್ರಿಯವರು, ಆನಂದ ಪುರಾಣಿಕರು ತಮ್ಮ ತಂದೆಯ ಪತ್ರಗಳನ್ನು ಕಾದಿಟ್ಟು ಸಾಹಿತ್ಯ ಲೋಕಕ್ಕೆ ಆ ಅಮೂಲ್ಯ ಪತ್ರಗಳು ದೊರಕುವಂತೆ ಮಾಡಿರುವುದು ಶ್ಲಾಘನೀಯ ಮತ್ತು ಅದನ್ನು ಪ್ರಕಟಿಸಿದ ಪರಿಮಳ ಪ್ರಕಾಶನಕ್ಕೆ ಪ್ರತಿಷ್ಠಾನ ಕೃತಜ್ಞವಾಗಿದೆ” ಎಂದರು.

ಪುಸ್ತಕದ ಬಿಡುಗಡೆಯನ್ನು ಪುರಾಣಿಕರ ಕೃತಿಗಳ ಓದುಗರಲ್ಲೊಬ್ಬರಾದ ಶ್ರಿಮತಿ ಲಲಿತಾ ಕೋಪರ್ಡೆಯವರು ಶೋಭಾ ಬನಶಂಕರಿಯವರೊಡನೆ ನೆರವೇರಿಸಿಕೊಟ್ಟರು. ಪತ್ರಪ್ರಪಂಚ ಪುಸ್ತಕದೊಳಗಿನ ಕೆಲ ಮಾದರಿ ಪತ್ರಗಳನ್ನು ಡಾ. ರಾಮಕೃಷ್ಣ ಮರಾಠೆ, ಶಿರೀಷ ಜೋಶಿ, ಪ್ರೊ. ಶಂಕರಮೂರ್ತಿ, ಪಿ. ಜಿ.ಕೆಂಪಣ್ಣವರ ಮತ್ತು ಮಮತಾ ಶಂಕರ ಅವರು ಓದಿದರು. ಮುಖ್ಯ ಅತಿಥಿಗಳಾದ ಪ್ರೊ. ಚಂದ್ರಶೇಖರ ಅಕ್ಕಿ ಮತ್ತು ಡಾ. ಸರಜೂ ಕಾಟಕರ ಅವರು ಮಾತನಾಡುತ್ತ ಪುರಾಣಿಕರ ಜೊತೆಗಿನ ತಮ್ಮ ಒಡನಾಟದ ಮಧುರ ಕ್ಷಣಗಳನ್ನು ಸ್ಮರಿಸಿಕೊಂಡರು. ಶ್ರೀಕಾಂತ ಮಹಾಜನ ಕೃತಿ ಕುರಿತು ಮಾತನಾಡಿದರು.
ನಂತರ ಬೆಳಗಾವಿಯ ಆರು ಜನ ಸಾಹಿತ್ಯ ಸಾಧಕರ ಹಿಂದಿನ ಚೈತನ್ಯ ಶಕ್ತಿಗಳೆನಿಸಿದ ಶ್ರೀಮತಿ ಶಾರದಾ ಎಲ್. ಎಸ್. ಶಾಸ್ತ್ರಿ, ಸುಮಾ ಸರಜೂ ಕಾಟಕರ, ಸುಷ್ಮಾ ಬಸವರಾಜ ಜಗಜಂಪಿ, ಮೀರಾ ರಾಮಕೃಷ್ಣ ಮರಾಠೆ, ಮಂಜುಳಾ ಶಿರೀಷ ಜೋಶಿ, ಮತ್ತು ಲಕ್ಷ್ಮಿಬಾಯಿ ಚಿಂತಾಮಣಿ ಜೋರಾಪುರ ಇವರನ್ನು ಸನ್ಮಾನಿಸಲಾಯಿತು.

ಆರಂಭದಲ್ಲಿ ಶ್ರೀಮತಿ ಮಂಜುಳಾ ಜೋಶಿಯವರು ಪ್ರಾರ್ಥನೆ ಹಾಡಿದರು. ಆನಂದ ಪುರಾಣಿಕರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಂದ್ರಶೇಖರ ನವಲಗುಂದ ಪುಷ್ಪಗೌರವ ನೀಡಿದರು

ಡಾ. ನಿರ್ಮಲಾ ಬಟ್ಟಲ ಸನ್ಮಾನ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಅಶೋಕ ಮಳಗಲಿ ನಿರೂಪಣೆಗೈದರು. ಬಸವರಾಜ ಗಾರ್ಗಿ ವಂದಿಸಿದರು. ಸಾಹಿತ್ಯಾಸಕ್ತರು, ಪುರಾಣಿಕರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಆಶಾ ಕಾರ್ಯಕರ್ತೆಯರ ಸೇವೆ ಕಡೆಗಣಿಸುವ ಉದ್ದೇಶವಿಲ್ಲ: ಯು.ಟಿ ಖಾದರ್ ಸ್ಪಷ್ಟನೆ

Spread the loveಶಿವಮೊಗ್ಗ: ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಆರೋಗ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ