Breaking News

KRS ಡ್ಯಾಂನಲ್ಲಿ ದಿನೇ ದಿನೆ ಕುಸಿಯುತ್ತಿದೆ ನೀರಿನ ಮಟ್ಟ – ಬೇಸಿಗೆಯಲ್ಲಿ ಜಲಕ್ಷಾಮದ ಆತಂಕ!

Spread the love

ಮಂಡ್ಯ: ಹಳೇ ಮೈಸೂರು ಭಾಗದ ಕೆಆರ್‌ಎಸ್ ಜಲಾಶಯದ  ನೀರಿನ ಮಟ್ಟದಲ್ಲಿ ಗಣನೀಯ ಕುಸಿತ ಕಂಡುಬರುತ್ತಿದ್ದು, ದಿನದಿಂದ ದಿನಕ್ಕೆ ಬರೋಬ್ಬರಿ 1 ಅಡಿಯಷ್ಟು ನೀರು ಕಡಿಮೆಯಾಗುತ್ತಿದೆ.

ಜಲಾಶಯಕ್ಕೆ ಒಳಹರಿವು ಕ್ಷೀಣಿಸಿ, ಹೊರಹರಿವು ಹೆಚ್ಚಾಗಿರುವುದರಿಂದ ಮುಂಬರುವ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಉಂಟಾಗುವ ಭೀತಿ ಎದುರಾಗಿದೆ.

ನಿನ್ನೆ 95 ಅಡಿಯಷ್ಟಿದ್ದ ಜಲಾಶಯದ ನೀರಿನ ಮಟ್ಟ, ಇಂದು 94 ಅಡಿಗೆ ಇಳಿಕೆಯಾಗಿದೆ. ಪ್ರಸ್ತುತ ಡ್ಯಾಂನಲ್ಲಿ ಒಟ್ಟು 18.882 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 6 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ವಾಸ್ತವವಾಗಿ ಬಳಕೆಗೆ ಲಭ್ಯವಿರುವುದು ಕೇವಲ 12 ಟಿಎಂಸಿ ನೀರು ಮಾತ್ರ.

ಡ್ಯಾಂನ ಒಳಹರಿವು 767 ಕ್ಯೂಸೆಕ್ ಇದ್ದು, ಹೊರಹರಿವು 4,604 ಕ್ಯೂಸೆಕ್ ಇದೆ. ಒಳಹರಿವಿಗಿಂತ ಹೊರಹರಿವಿನ ಪ್ರಮಾಣ ದುಪ್ಪಟ್ಟಿಗಿಂತ ಹೆಚ್ಚಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಕೃಷಿ ಚಟುವಟಿಕೆಗಳು ಮಾತ್ರವಲ್ಲದೇ, ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕಾವೇರಿ ನೀರನ್ನೇ ನೆಚ್ಚಿಕೊಂಡಿರುವ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೆ ಭಾರೀ ಸಂಕಷ್ಟ ಎದುರಾಗುವುದು ಖಚಿತವಾಗಿದೆ.


Spread the love

About Laxminews 24x7

Check Also

KRS ಡ್ಯಾಂನಲ್ಲಿ ದಿನೇ ದಿನೆ ಕುಸಿಯುತ್ತಿದೆ ನೀರಿನ ಮಟ್ಟ – ಬೇಸಿಗೆಯಲ್ಲಿ ಜಲಕ್ಷಾಮದ ಆತಂಕ!

Spread the loveಮಂಡ್ಯ: ಹಳೇ ಮೈಸೂರು ಭಾಗದ ಕೆಆರ್‌ಎಸ್ ಜಲಾಶಯದ  ನೀರಿನ ಮಟ್ಟದಲ್ಲಿ ಗಣನೀಯ ಕುಸಿತ ಕಂಡುಬರುತ್ತಿದ್ದು, ದಿನದಿಂದ ದಿನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ