Breaking News

ಬೆಳಗಾವಿ ಮೀಸಲು ಪಡೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಂಗಮೇಶ ಅನಿ ‘ಐರನ್ ಮ್ಯಾನ್’ ಪ್ರಶಸ್ತಿ

Spread the love

ಬೆಳಗಾವಿ: ಶ್ರೀಲಂಕಾ ದೇಶದ ಕೋಲಂಬೋ ನಗರದಲ್ಲಿ ನಡೆದ ‘ಐರನ್ ಮ್ಯಾನ್ 70.3’ ಸ್ಪರ್ಧೆಯಲ್ಲಿ ಬೆಳಗಾವಿ ಮೀಸಲು ಪಡೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಂಗಮೇಶ ಅನಿ ‘ಐರನ್ ಮ್ಯಾನ್’ ಪ್ರಶಸ್ತಿ ಪಡೆದಿದ್ದಾರೆ.
ವಿಶ್ವದ ಅತ್ಯಂತ ಕಠಿಣ, ಬಹುಶಿಸ್ತೀಯ ಸಹಿಷ್ಣುತಾ ಸ್ಪರ್ಧೆಗಳಲ್ಲೊಂದಾದ ಇದು ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥೈರ್ಯ ಹಾಗೂ ಪರಿಶ್ರಮದ ಪರೀಕ್ಷೆಯಾಗಿದೆ. ಸ್ಪರ್ಧೆಯನ್ನು ಸಂಗಮೇಶ 5.9 ಗಂಟೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಳೆಯ ಸವಾಲು ಮೀರಿ 90 ಕಿ.ಮೀ. ಸೈಕ್ಲಿಂಗ್ 2.51 ಗಂಟೆಯಲ್ಲಿ ಪೂರ್ಣಗೊಳಿಸಿದರು.
ಬಳಿಕ 21.1 ಕಿಲೋಮೀಟರ್ ಅರ್ಧ ಮ್ಯಾರಥಾನ್ ಓಟವನ್ನು 2.15 ಗಂಟೆಯಲ್ಲಿ ಮುಗಿಸಿದರು. ಸಂಗಮೇಶ ಅನಿ ಕ್ರೀಡಾ ಸಾಧನೆಗೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Spread the love

About Laxminews 24x7

Check Also

ಅಂತರರಾಷ್ಟ್ರೀಯ ರೋಬೋಟಿಕ್ಸ್ ಸ್ಪರ್ಧೆ ಗೆದ್ದ ಬೆಳಗಾವಿ ವಿದ್ಯಾರ್ಥಿಗಳು

Spread the love ಬೆಳಗಾವಿ : ನಗರದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಒಬ್ಬರು ವಿದ್ಯಾರ್ಥಿಗಳು ಇಂಡೋನೇಷ್ಯಾದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ