Breaking News
Home / ಅಂತರಾಷ್ಟ್ರೀಯ / ನರೇಂದ್ರ ಮೋದಿ ಎಂದಾಕ್ಷಣ ಕಟ್ಟಾ ಹಿಂದೂವಾದಿ ಎಂದೇ ಜಗಜ್ಜಾಹಿರ

ನರೇಂದ್ರ ಮೋದಿ ಎಂದಾಕ್ಷಣ ಕಟ್ಟಾ ಹಿಂದೂವಾದಿ ಎಂದೇ ಜಗಜ್ಜಾಹಿರ

Spread the love

ನವದೆಹಲಿ: ನರೇಂದ್ರ ಮೋದಿ ಎಂದಾಕ್ಷಣ ಕಟ್ಟಾ ಹಿಂದೂವಾದಿ ಎಂದೇ ಜಗಜ್ಜಾಹಿರ. ಈ ಕಾರಣಕ್ಕೆ ಪ್ರತಿಯೊಂದು ನಡೆಗೂ ವಿರೋಧ ಪ್ರತಿಪಕ್ಷಗಳಿಂದ ಎದುರಾಗುತ್ತಲೇ ಇದೆ.

ಅದರಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಳಿಕ ದೇಶದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯ ಮೋದಿ ವಿರುದ್ಧ ತಿರುಗಿಬಿದ್ದಿದೆ ಎಂದೇ ಭಾವಿಸಲಾಗಿದೆ.

ಆದರೆ, ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್ಸೈಟ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಪರ ಶೇ.17ರಷ್ಟು ಮುಸ್ಲಿಮರು ಒಲವು ವ್ಯಕ್ತಪಡಿಸಿದ್ದಾರೆ.

ಮತ್ತೊಮ್ಮೆ ಪ್ರಧಾನಿ ಆಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಬೇಕೆಂಬುದು ನಮ್ಮ ಆಸೆ ಎಂದಿದ್ದಾರೆ. ಶೇ.60ರಷ್ಟು ಹಿಂದೂಗಳು, ಶೇ. 17ರಷ್ಟು ಮುಸ್ಲಿಮರು ಪ್ರಧಾನಿಯಾಗಿ ಮತ್ತೊಮ್ಮೆ ಮೋದಿ ಆಯ್ಕೆಯಾಗಬೇಕೆಂದು ಹೇಳಿದ್ದಾರೆ.

ಇದು ಕಾಂಗ್ರೆಸ್ ಹಾಗೂ ಎಡಪಕ್ಷಗಳಲ್ಲಿ ಆತಂಕವನ್ನು ಉಂಟು ಮಾಡಿದ್ದರೆ, ಬಿಜೆಪಿಯಲ್ಲಿ ಪ್ರಧಾನಿ ಹುದ್ದೆ ಆಕಾಂಕ್ಷಿಗಳಿಗೆ ತೀವ್ರ ಆಘಾತ ತಂದೊಡ್ಡಿದೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ