ನವದೆಹಲಿ: ನರೇಂದ್ರ ಮೋದಿ ಮಾತಿನ ಮೋಡಿ ಎದುರು ಸಪ್ಪೆಯಾಗಿ ಕಾಣುವ ಕಾಂಗ್ರೆಸ್ ನೇತಾರ, ಯುವ ನಾಯಕ ರಾಹುಲ್ ಗಾಂಧಿ, ತನ್ನ ಅಮ್ಮ ಸೋನಿಯಾ ಗಾಂಧಿಗಿಂತಲೂ ಹೆಚ್ಚು ಜನರ ಒಲವು ಪಡೆದಿದ್ದಾರೆ.
ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್ಸೈಟ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಶೇ. 53ರಷ್ಟು ಜನರು ಮೋದಿ ಪರ ಒಲವು ತೋರಿದ್ದರೆ, ಶೇ. 13 ರಷ್ಟು ಮಂದಿ ರಾಹುಲ್ ಗಾಂಧಿ ಉತ್ತಮ ನಾಯಕ, ಪ್ರಧಾನಿಯಾಗಲು ಯೋಗ್ಯ ನಾಯಕ ಎಂದು ಬಣ್ಣಿಸಿದ್ದಾರೆ.
ಇನ್ನೂ ಸೋನಿಯಾಗಾಂಧಿ ಪರ ಶೇ.7ರಷ್ಟು ಮಂದಿ ಮಾತ್ರ ಒಲವು ತೋರಿದ್ದಾರೆ.