Breaking News

SSLC ಪರೀಕ್ಷೆಗೆ 525 ಅಂಕ – ಕರಡು ಅಧಿಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ

Spread the love

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ (525 ಅಂಕ ನೀಡುವ ನಿಯಮ ಬದಲಾವಣೆ ಮಾಡಿರುವ ವಿಚಾರದಲ್ಲಿ ಶಿಕ್ಷಣ ಇಲಾಖೆ  ಕರಡು ಅಧಿಸೂಚನೆ ಹೊರಡಿಸಿದೆ. ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 7 ದಿನ ಅವಕಾಶ ನೀಡಲಾಗಿದ್ದು ಆಕ್ಷೇಪಣೆ ಸಲ್ಲಿಸಬಹುದಾಗಿದೆ‌‌.

ಅಧಿಸೂಚನೆಯಲ್ಲಿ 525 ಅಂಕಗಳ ಅನುಷ್ಠಾನ ಹೇಗೆ ನಡೆಯಲಿದೆ ಎಂಬುದನ್ನು ತಿಳಿಸಲಾಗಿದೆ. ಅದರಂತೆ ತೃತೀಯ ಭಾಷೆ ವಿಷಯದಲ್ಲಿ ಅಂಕಗಳ ಬದಲಾಗಿ ಗ್ರೇಡ್ ಸಿಸ್ಟಮ್ ವಿವರಿಸಲಾಗಿದೆ.

ಈ ಮೊದಲು 625 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ತೃತೀಯ ಭಾಷೆಗೆ ನೀಡಲಾಗುತ್ತಿದ್ದ 100 ಅಂಕ ತೆಗೆಯಲಾಗಿದೆ. ಹಾಗಾಗಿ ಐದು ಭಾಷೆಯ ವಿಷಯಗಳಿಗೆ 525 ಅಂಕಗಳಿಗೆ ಫಲಿತಾಂಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಒಟ್ಟು 525 ಅಂಕಗಳಲ್ಲಿ ಕನಿಷ್ಠ 173 ಅಂಕಗಳನ್ನು ಗಳಿಸಬೇಕು. ಅಂದರೆ ಶೇ.33ರಷ್ಟು ಅಂಕ ಗಳಿಸಬೇಕು. ಅಲ್ಲದೇ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.30 ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಲಿದೆ.

ತೃತೀಯ ಭಾಷೆಯ ಪರೀಕ್ಷೆಯಲ್ಲಿ ಅಂಕಗಳ ಬದಲಾಗಿ ಗ್ರೇಡ್ ನೀಡಲಾಗುತ್ತದೆ. 80-100 ರಷ್ಟು ಅಂಕ ಗಳಿಸಿದರೆ A ಗ್ರೇಡ್, 50-79 ರಷ್ಟು ಅಂಕ ಗಳಿಸಿದ್ರೆ B ಗ್ರೇಡ್ 49 ರಷ್ಟು ಅಂಕ ಗಳಿಸಿದ್ರೆ C ಗ್ರೇಡ್ ಅಂತ ಕೊಡಲಾಗುತ್ತದೆ. ಹೊಸ ನಿಯಮ 2025-26ನೇ ಸಾಲಿನಿಂದಲೇ ಜಾರಿಗೆ ಬರಲಿದೆ.


Spread the love

About Laxminews 24x7

Check Also

ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪನೆ ಆಗಲಿ: ಸಿಎಂ

Spread the loveಬೆಂಗಳೂರು: ದಕ್ಷಿಣ ಭಾರತದಲ್ಲಿ  ಸುಪ್ರೀಂಕೋರ್ಟ್  ಪೀಠ ಸ್ಥಾಪನೆ ಆಗಬೇಕು ಅಂತ ಸಿಎಂ ಸಿದ್ದರಾಮಯ್ಯ  ಒತ್ತಾಯ ಮಾಡಿದ್ದಾರೆ. ಜಿಕೆವಿಕೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ