Breaking News

Daily Archives: ನವೆಂಬರ್ 28, 2026

ಲೋಕಸಭೆಗೆ 850, ವಿಧಾನಸಭೆಗೆ 650 ಗರಿಷ್ಠ ಮಿತಿ – ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಏನಿದೆ?

ನವದೆಹಲಿ: ದೇಶದ ರಾಜಕೀಯ ನಕ್ಷೆಯನ್ನೇ ಬದಲಿಸುವ ಹಾಗೂ ಮಹಿಳಾ ಮೀಸಲಾತಿಗೆಹೊಸ ವೇಗ ನೀಡುವ ಐತಿಹಾಸಿಕ ಮಸೂದೆಯ ರಹಸ್ಯ ಇದೀಗ ಬಯಲಾಗಿದೆ. ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಬರೋಬ್ಬರಿ ಶೇ. 50ರಷ್ಟು ಹೆಚ್ಚಿಸುವ ‘ದಿ ಡಿಲಿಮಿಟೇಶನ್ (ಸೆಕೆಂಡ್) ಬಿಲ್, 2026  ಕರಡು ಪ್ರತಿ ಬಹಿರಂಗಗೊಂಡಿದ್ದು, ಮುಂಬರುವ ಚುನಾವಣಾ ವ್ಯವಸ್ಥೆಯ ಸಂಪೂರ್ಣ ಚಿತ್ರಣವನ್ನೇ ಬದಲಿಸಲಿದೆ. ನವೆಂಬರ್ 30ರಂದು ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಹತ್ವದ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ …

Read More »

ದೀಪ ಹಚ್ಚಲು ಸುಪ್ರೀಂ ಅನುಮತಿ| “ಭಗವಾನ್ ಮುರುಗನಿಗೆ ಜಯವಾಗಲಿ”: ಮೋದಿ ಸಂಭ್ರಮ

ನವದೆಹಲಿ: ತಮಿಳುನಾಡಿನ ಮದುರೈ ಬಳಿಯಿರುವ ಐತಿಹಾಸಿಕ ತಿರುಪ್ಪರಂಕುಂದ್ರಂ ( ಬೆಟ್ಟದ ತುದಿಯಲ್ಲಿ ಕಾರ್ತಿಕ ದೀಪ ಹಚ್ಚುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ವೆಟ್ರಿವೇಲ್ ಮುರುಗನುಕ್ಕು ಅರೋಗರಾ!.ಭಗವಾನ್ ಮುರುಗನಿಗೆ ಜಯವಾಗಲಿ! ಎಂದು ಬರೆಯುವ ಮೂಲಕ ಪ್ರಧಾನಿ ಮೋದಿ ತಮ್ಮ ಭಕ್ತಿ ಮತ್ತು ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಶಿವ ಮತ್ತು ಪಾರ್ವತಿಯರ ಮಗನಾದ ಮುರುಗನ್‌ ದೇವರನ್ನು ಪ್ರದೇಶಕ್ಕೆ …

Read More »

ಬೆಳಗಾವಿಯಲ್ಲಿ ಜೋಡಿ ಕೊಲೆ

ಬೆಳಗಾವಿ: ಆಸ್ತಿ ವಿಚಾರವಾಗಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವರನ್ನು ರಮೇಶ್ ಹಣಮಂತ ನಾಯ್ಕರ (29) ಹಾಗೂ ಬಸವ್ವ ಭೀಮಪ್ಪ ನಾಯ್ಕರ (60) ಎಂದು ಗುರುತಿಸಲಾಗಿದೆ. ಆಸ್ತಿ ಸಂಬಂಧಿತ ವಿಚಾರವಾಗಿ ಕುಟುಂಬದವರ ನಡುವೆ ನಡೆಯುತ್ತಿದ್ದ ಕಲಹವೇ ಈ ಜೋಡಿ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ವಿವಾದ ತೀವ್ರಗೊಂಡ ಪರಿಣಾಮ ಇಬ್ಬರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ. …

Read More »

2 ಕೋಟಿ ವಿಮೆಗಾಗಿ ಪತಿಯ ಊಟದಲ್ಲೇ ವಿಷ: ಮಗನನ್ನೂ ಬಿಡದ ಪತ್ನಿಯ ಭೀಕರ ಸಂಚು ಬಯಲು

ಹಣ ಮತ್ತು ಆಸ್ತಿಯ ಮೇಲಿನ ದುರಾಸೆ ಮನುಷ್ಯನನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಮತ್ತು ವಿಮೆ ಹಣದ ಆಸೆಗೆ ಪತ್ನಿಯೇ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಸ್ವಂತ ಮಗ ಮತ್ತು ಸೋದರಳಿಯನಿಗೂ ವಿಷ ನೀಡಿರುವ ಶಂಕೆ ವ್ಯಕ್ತವಾಗಿದೆ. ಪದೇಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಕುಟುಂಬದ ಸದಸ್ಯರ ವೈದ್ಯಕೀಯ ಪರೀಕ್ಷೆಯಲ್ಲಿ ಕೊನೆಗೂ ಭಯಾನಕ ಸತ್ಯ ಬಯಲಾಗಿದೆ. …

Read More »

ಅಮಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಆಡಳಿತ ಮಂಡಳಿ ಅವಿರೋಧ ಆಯ್ಕೆ

ಬೆಳಗಾವಿ: ಖಾನಾಪುರ ತಾಲೂಕಿನ ಅಮಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಸದಸ್ಯರು ಲಕ್ಷ್ಮಣ ಕಸರ್ಲೆಕರ್ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗಾವಿಯ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಭೇಟಿಯಾಗಿ, ಆಯ್ಕೆಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಿದರು. ನೂತನ ಸದಸ್ಯರನ್ನು ಅಭಿನಂದಿಸಿದ …

Read More »

ನಾಳೆ ಬೆಳಗಾವಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಗಮನ: ಪ್ರಬುದ್ಧ ನಾಗರಿಕರೊಂದಿಗೆ ಸಂವಾದ

ಬೆಳಗಾವಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನವೆಂಬರ್ 28ರಂದು ಕುಂದಾನಗರಿ ಬೆಳಗಾವಿಗೆ ಭೇಟಿ ನೀಡಲಿದ್ದು, ನಗರದ ಪ್ರಬುದ್ಧ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತರೊಂದಿಗೆ ಮಹತ್ವದ ಸಂವಾದ ನಡೆಸಲಿದ್ದಾರೆ. ನಗರದ ಧರ್ಮನಾಥ ಭವನದಲ್ಲಿ ಮಧ್ಯಾಹ್ನ 3:30ಕ್ಕೆ ‘ಸೇವ್ ಡೆಮಾಕ್ರಸಿ ಫ್ರಮ್ ಅರಾಜಕತೆ’ ಎಂಬ ಶೀರ್ಷಿಕೆಯಡಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಜಾಪ್ರಭುತ್ವದ ರಕ್ಷಣೆ, ದೇಶದ ಸುರಕ್ಷತೆ ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಫಡ್ನವೀಸ್ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. …

Read More »

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆಗೆ ದ್ವನಿಗೂಡಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ: ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಜಿಲ್ಲೆ ರಚನೆಗೆ ಮೊದಲ ಆದ್ಯತೆ ನೀಡಲಾಗುವುದು. ಮುಂಬರುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚಿಕ್ಕೋಡಿ ಜಿಲ್ಲೆ ರಚನೆ ಕುರಿತು ವಿಶೇಷ ಮನವಿ ಸಲ್ಲಿಸಲಾಗುವುದು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ತಿಳಿಸಿದರು. ಚಿಕ್ಕೋಡಿ ನಗರದ ಸಂಸದರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ, ಸಾರ್ವಜನಿಕರ ಸಮಸ್ಯೆಗಳು ಹಾಗೂ ಹಲವು ಪ್ರಮುಖ …

Read More »

ಬೆಳಗಾವಿ ಕೆನರಾ ಬ್ಯಾಂಕ್‌ನಲ್ಲಿ 86.30 ಲಕ್ಷ ರೂ. ವಂಚನೆ ಆರೋಪ*; *ಆರು ಮಂದಿ ವಿರುದ್ಧ ಎಫ್‌ಐಆರ್

ಬೆಳಗಾವಿ: ಗ್ರಾಹಕನ ಬ್ಯಾಂಕ್ ಖಾತೆಯಿಂದ ಅನುಮತಿಯಿಲ್ಲದೆ 1.32 ಕೋಟಿ ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ, ಉಳಿದ 86.30 ಲಕ್ಷ ರೂ. ಹಣವನ್ನು ಮರುಪಾವತಿಸದೆ ವಂಚಿಸಿರುವ ಆರೋಪದಡಿ ಕೆನರಾ ಬ್ಯಾಂಕ್‌ನ ಅಧಿಕಾರಿಗಳು ಸೇರಿದಂತೆ ಆರು ಮಂದಿ ವಿರುದ್ಧ ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ರುಮೇವಾಡಿ ಕ್ರಾಸ್ ನಿವಾಸಿ, ಗೊಡಂಬಿ ಫ್ಯಾಕ್ಟರಿ ಉದ್ಯಮಿ ಸುರೇಶ ಲಕ್ಷ್ಮಣ ಶಿವನಗೇಕರ (49) ಅವರು ನೀಡಿದ ದೂರಿನ ಆಧಾರದ ಮೇಲೆ …

Read More »

ಮಹಿಳೆಯರ ನೆಚ್ಚಿನ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ: ಎಲ್.ಎಸ್. ಶಾಸ್ತ್ರಿ

ಬೆಳಗಾವಿ :-” ಕನ್ನಡದಲ್ಲಿ ಬಹು ದೊಡ್ಡ ಸಂಖ್ಯೆಯ ಓದುಗರನ್ನು ಸೃಷ್ಟಿಸಿದ ಶ್ರೇಯಸ್ಸು ಕೃ಼ಷ್ಣಮೂರ್ತಿ ಪುರಾಣಿಕ ಅವರಿಗೆ ಸಲ್ಲುತ್ತದೆ. ಅಪಾರ ಜನಪ್ರಿಯತೆ ಪಡೆದಿದ್ದ ಅವರು ನಾಡಿನ ಮಹಿಳೆಯರ ನೆಚ್ಚಿನ ಕಾದಂಬರಿಕಾರರಾಗಿದ್ದರು. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಸಾಧಕರ ಹಿಂದಿನ ಸ್ತ್ರೀ ಶಕ್ತಿಗಳನ್ನು ಗೌರವಿಸುವುದು ಅತ್ಯಂತ ಅರ್ಥಪೂರ್ಣವಾಗಿದೆ” ಎಂದು ಕೃಷ್ಣಮೂರ್ತಿ ಪುರಾಣಿಕ ಟ್ಟಸ್ಟಿನ ಅಧ್ಯಕ್ಷರಾದ ಎಲ್. ಎಸ್. ಶಾಸ್ತ್ರಿ ಹೇಳಿದರು. ಕೃಷ್ಣಮೂರ್ತಿ ಪುರಾಣಿಕ ಟ್ರಸ್ಟ್, ಪರಿಮಳ ಪ್ರಕಾಶನ ಮತ್ತು ಜಿಲ್ಲಾ ಚುಟುಕು ಸಾಹಿತ್ಯ …

Read More »