Breaking News

ದೀಪ ಹಚ್ಚಲು ಸುಪ್ರೀಂ ಅನುಮತಿ| “ಭಗವಾನ್ ಮುರುಗನಿಗೆ ಜಯವಾಗಲಿ”: ಮೋದಿ ಸಂಭ್ರಮ

Spread the love

ನವದೆಹಲಿ: ತಮಿಳುನಾಡಿನ ಮದುರೈ ಬಳಿಯಿರುವ ಐತಿಹಾಸಿಕ ತಿರುಪ್ಪರಂಕುಂದ್ರಂ ( ಬೆಟ್ಟದ ತುದಿಯಲ್ಲಿ ಕಾರ್ತಿಕ ದೀಪ ಹಚ್ಚುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ವೆಟ್ರಿವೇಲ್ ಮುರುಗನುಕ್ಕು ಅರೋಗರಾ!.ಭಗವಾನ್ ಮುರುಗನಿಗೆ ಜಯವಾಗಲಿ! ಎಂದು ಬರೆಯುವ ಮೂಲಕ ಪ್ರಧಾನಿ ಮೋದಿ ತಮ್ಮ ಭಕ್ತಿ ಮತ್ತು ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಶಿವ ಮತ್ತು ಪಾರ್ವತಿಯರ ಮಗನಾದ ಮುರುಗನ್‌ ದೇವರನ್ನು ಪ್ರದೇಶಕ್ಕೆ ತಕ್ಕಂತೆ ಬೇರೆ ಬೇರೆ ಹೆಸರುಗಳಿಂದ ಪೂಜಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸುಬ್ರಹ್ಮಣ್ಯ / ಕುಮಾರಸ್ವಾಮಿ / ಷಣ್ಮುಖ ಎಂದು ಕರೆದರೆ ತಮಿಳುನಾಡು ಮತ್ತು ಕೇರಳದಲ್ಲಿ ಮುರುಗನ್ ಹೆಸರಿನಿಂದ ಕರೆಯಲಾಗುತ್ತದೆ. ಉತ್ತರ ಭಾರತದಲ್ಲಿ ಮತ್ತು ಪುರಾಣಗಳಲ್ಲಿ ಕಾರ್ತಿಕೇಯ / ಸ್ಕಂದ ಹೆಸರುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಏನಿದು ವಿವಾದ?
ಮದುರೈನ ತಿರುಪ್ಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ಕಲ್ಲಿನ ಸ್ತಂಭದ ಮೇಲೆ ‘ಕಾರ್ತಿಕ ದೀಪ’ ಹಚ್ಚುವ ವಿಚಾರವಾಗಿ ಕಳೆದ ಕೆಲವು ಸಮಯದಿಂದ ತಮಿಳುನಾಡು ಸರ್ಕಾರ ಮತ್ತು ಹಿಂದೂ ಸಂಘಟನೆಗಳ ನಡುವೆ ಕಾನೂನು ಸಮರ ನಡೆಯುತ್ತಿತ್ತು. ಕಳೆದ 150 ವರ್ಷಗಳಿಂದ ಬೆಟ್ಟದ ಕೆಳಭಾಗದಲ್ಲಿ ದೀಪ ಹಚ್ಚುವ ಸಂಪ್ರದಾಯವಿದ್ದು, ಬೆಟ್ಟದ ತುದಿಯಲ್ಲಿರುವುದು ದೀಪದ ಕಂಬವಲ್ಲ, ಅದು ಕೇವಲ ಅಳತೆ ಕಂಬ ಎಂದು ತಮಿಳುನಾಡಿನ ಸರ್ಕಾರ ವಾದಿಸಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಮಿಳುನಾಡು ಸರ್ಕಾರದ ಆಕ್ಷೇಪಗಳನ್ನು ತಳ್ಳಿಹಾಕಿ, ಬೆಟ್ಟದ ಮೇಲೆ ಕಾರ್ತಿಕ ದೀಪ ಹಚ್ಚಲು ಅನುಮತಿ ನೀಡಿದೆ. ಅಲ್ಲದೆ, ತಕ್ಷಣವೇ ದೀಪ ಹಚ್ಚಲು ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಬಿಜೆಪಿ ಮತ್ತು ಹಿಂದೂ ಮುನ್ನಣಿ ಸೇರಿದಂತೆ ಹಲವು ಸಂಘಟನೆಗಳು ಸ್ವಾಗತಿಸಿದ್ದು, ಇದು ನ್ಯಾಯ ಮತ್ತು ಭಕ್ತರ ನಂಬಿಕೆಗೆ ಸಂದ ಜಯ ಎಂದು ಬಣ್ಣಿಸಿವೆ. ಪ್ರಧಾನಿ ಮೋದಿ ಅವರ ಈ ಪೋಸ್ಟ್ ಈಗ ಟ್ರೆಂಡ್‌ ಸೃಷ್ಟಿಸಿದ್ದು ಭಕ್ತರ ನಂಬಿಕೆಗೆ ಸಿಕ್ಕ ಗೆಲುವನ್ನು ಅವರು ಈ ರೀತಿ ಸಂಭ್ರಮಿಸಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ – ಪ್ರಿಯಕರನಿಂದಲೇ ದುಷ್ಕೃತ್ಯ

Spread the loveಬೆಂಗಳೂರು: ನಗರದ ಕಾಟನ್ ಪೇಟೆಯ ಮಸ್ತಾನ್ ದರ್ಗಾ ಬಳಿಯ  ಲಾಡ್ಜ್‌ವೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯನ್ನು ಪ್ರಿಯಕರ ಭೀಕರವಾಗಿ ಕೊಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ