ಬೆಂಗಳೂರು: ನಾನು ಈಗಾಗಲೇ ಆಶಾ ಕಾರ್ಯಕರ್ತೆಯರಿಗೆ ಭರವಸೆ ಕೊಟ್ಟಿದ್ದೇನೆ. ನಮ್ಮನ್ನ ನಂಬಿ ಅಂತಾ ಹೇಳಿದ್ದೇನೆ. ಅದನ್ನು ಬಿಟ್ಟು ಸಹಿ ಮಾಡಿ, ಲಿಖಿತ ಭರವಸೆ ಕೊಡಿ ಅಂದ್ರೆ ಸಾಧ್ಯ ಇಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಆಶಾ ಕಾರ್ಯಕರ್ತೆಯರ ಬೇಡಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಹಿ ಮಾಡಿ, ಲಿಖಿತ ಭರವಸೆ ಕೊಡಿ ಅಂದ್ರೇ ನಾನು ಕೊಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ನಾನು ಈಗಾಗಲೇ ಭರವಸೆ ಕೊಟ್ಟಿದ್ದೀನಿ, ನಮ್ಮ …
Read More »Daily Archives: ನವೆಂಬರ್ 28, 2026
ರೇಣುಕಾಸ್ವಾಮಿ ಕೇಸ್ – ಸುಪ್ರೀಂ ಕೋರ್ಟ್ನಿಂದ ಐವರು ಆರೋಪಿಗಳಿಗೆ ರಿಲೀಫ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನ ಐವರು ಆರೋಪಿಗಳಿಗೆ ನೀಡಲಾಗಿದ್ದ ಜಾಮೀನು ರದ್ದು ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಎ-3 ಪವನ್, ಎ5 ನಂದೀಶ್, ಎ9 ಧನರಾಜ್, ಎ10 ವಿನಯ್ ಹಾಗೂ ರಾಘವೇಂದ್ರಗೆ ನೀಡಲಾಗಿದ್ದ ಜಾಮೀನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್ಗೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪ್ರರ್ದಿವಾಲ್ ಹಾಗೂ ವಿನೋದ್ ಚಂದ್ರನ್ ಪೀಠವು, ಒಂದೂವರೆ ವರ್ಷದ ಬಳಿಕ ಅರ್ಜಿ …
Read More »38 ಕಾಡಾನೆಗಳ ಹಿಂಡು ಬೇಲೂರಿಗೆ ವಾಪಸ್ – ಜನರಲ್ಲಿ ಆತಂಕ
ಹಾಸನ: ಕಾಡಾನೆ ಹಾವಳಿ ಹಾಸನ, ಚಿಕ್ಕಮಗಳೂರು ಜನರ ನಿದ್ದೆಗೆಡಿಸಿದೆ. ಹಾಸನದಿಂದ ಚಿಕ್ಕಮಗಳೂರಿಗೆ ಓಡಿಸಲಾಗಿದ್ದ 38 ಕಾಡಾನೆಗಳನ್ನ ಮತ್ತೆ ಬೇಲೂರು ತಾಲೂಕಿಗೆ ವಾಪಸ್ ಕಳುಹಿಸಲಾಗಿದೆ. ನಿನ್ನೆ ರಾತ್ರಿ ಚಿಕ್ಕಮಗಳೂರು ಸಿಸಿಎಫ್, ಡಿಎಫ್ಓ ನೇತೃತ್ವದಲ್ಲಿ ಚಿಕ್ಕಮಗಳೂರು ಭಾಗದಲ್ಲಿದ್ದ ಕಾಡಾನೆಗಳನ್ನ ಬೇಲೂರು ಭಾಗಕ್ಕೆ ಓಡಿಸಲಾಗಿದೆ. ಈ ವೇಳೆ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ. ವಿರೋಧದ ನಡುವೆಯೂ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಓಡಿಸಿದ್ದಾರೆ. ಬೇಲೂರು …
Read More »814 ಪಿಯು ಉಪನ್ಯಾಸಕರ ನೇಮಕಕ್ಕೆ KEA ಅಧಿಸೂಚನೆ – ಆನ್ಲೈನ್ ಅರ್ಜಿ ಸಲ್ಲಿಸಲು ಡಿ.25 ಕೊನೆ ದಿನ
ಬೆಂಗಳೂರು: ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಡಿ.25 ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಡಿ.26 ಕೊನೆ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಟ್ಟು ಉಪನ್ಯಾಸಕರ ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದದ 778 ಹಾಗೂ ಕಲ್ಯಾಣ ಕರ್ನಾಟಕ …
Read More »ಒತ್ತುವರಿ ವಿಚಾರಕ್ಕೆ ಗಲಾಟೆ – ಗುಂಡು ಹಾರಿಸಿ ಯುವಕನ ಕೊಲೆ
ಬೆಂಗಳೂರು: ಒತ್ತುವರಿ ವಿಚಾರಕ್ಕೆ ಶುರುವಾದ ಗಲಾಟೆ ಓರ್ವ ಕೊಲೆಯಲ್ಲಿ ಅಂತ್ಯವಾಗಿದೆ. ಗುಂಡು ಹಾರಿಸಿ ಯುವಕನನ್ನ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಯಲದ ಹೊಸಕೋಟೆ ಸಮೀಪದ ಸೋಲೂರಿನಲ್ಲಿ ನಡೆದಿದೆ. ಲಿಖಿಕ್ ಗೌಡ ( 25 ) ಕೊಲೆಯಾದ ಯುವಕ. ರಮೇಶ್ ಕೊಲೆಗೈದ ಆರೋಪಿ. ಆಗಿದ್ದೇನು? ಆಶ್ರಯ ಯೋಜನೆ ಜಮೀನು ಗುರುತು ಮಾಡುವ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆ ಸರ್ಕಾರಿ ಜಾಮೀನಿನ ಸುಮಾರು 10 ಗುಂಟೆ ಜಾಗವನ್ನ ಆರೋಪಿ ರಮೇಶ್ ಒತ್ತುವರಿ ಮಾಡಿಕೊಂಡಿದ್ದ. …
Read More »ಲೋಕಸಭೆಗೆ 850, ವಿಧಾನಸಭೆಗೆ 650 ಗರಿಷ್ಠ ಮಿತಿ – ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಏನಿದೆ?
ನವದೆಹಲಿ: ದೇಶದ ರಾಜಕೀಯ ನಕ್ಷೆಯನ್ನೇ ಬದಲಿಸುವ ಹಾಗೂ ಮಹಿಳಾ ಮೀಸಲಾತಿಗೆಹೊಸ ವೇಗ ನೀಡುವ ಐತಿಹಾಸಿಕ ಮಸೂದೆಯ ರಹಸ್ಯ ಇದೀಗ ಬಯಲಾಗಿದೆ. ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಬರೋಬ್ಬರಿ ಶೇ. 50ರಷ್ಟು ಹೆಚ್ಚಿಸುವ ‘ದಿ ಡಿಲಿಮಿಟೇಶನ್ (ಸೆಕೆಂಡ್) ಬಿಲ್, 2026 ಕರಡು ಪ್ರತಿ ಬಹಿರಂಗಗೊಂಡಿದ್ದು, ಮುಂಬರುವ ಚುನಾವಣಾ ವ್ಯವಸ್ಥೆಯ ಸಂಪೂರ್ಣ ಚಿತ್ರಣವನ್ನೇ ಬದಲಿಸಲಿದೆ. ನವೆಂಬರ್ 30ರಂದು ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಹತ್ವದ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ …
Read More »ದೀಪ ಹಚ್ಚಲು ಸುಪ್ರೀಂ ಅನುಮತಿ| “ಭಗವಾನ್ ಮುರುಗನಿಗೆ ಜಯವಾಗಲಿ”: ಮೋದಿ ಸಂಭ್ರಮ
ನವದೆಹಲಿ: ತಮಿಳುನಾಡಿನ ಮದುರೈ ಬಳಿಯಿರುವ ಐತಿಹಾಸಿಕ ತಿರುಪ್ಪರಂಕುಂದ್ರಂ ( ಬೆಟ್ಟದ ತುದಿಯಲ್ಲಿ ಕಾರ್ತಿಕ ದೀಪ ಹಚ್ಚುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ವೆಟ್ರಿವೇಲ್ ಮುರುಗನುಕ್ಕು ಅರೋಗರಾ!.ಭಗವಾನ್ ಮುರುಗನಿಗೆ ಜಯವಾಗಲಿ! ಎಂದು ಬರೆಯುವ ಮೂಲಕ ಪ್ರಧಾನಿ ಮೋದಿ ತಮ್ಮ ಭಕ್ತಿ ಮತ್ತು ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಶಿವ ಮತ್ತು ಪಾರ್ವತಿಯರ ಮಗನಾದ ಮುರುಗನ್ ದೇವರನ್ನು ಪ್ರದೇಶಕ್ಕೆ …
Read More »ಬೆಳಗಾವಿಯಲ್ಲಿ ಜೋಡಿ ಕೊಲೆ
ಬೆಳಗಾವಿ: ಆಸ್ತಿ ವಿಚಾರವಾಗಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವರನ್ನು ರಮೇಶ್ ಹಣಮಂತ ನಾಯ್ಕರ (29) ಹಾಗೂ ಬಸವ್ವ ಭೀಮಪ್ಪ ನಾಯ್ಕರ (60) ಎಂದು ಗುರುತಿಸಲಾಗಿದೆ. ಆಸ್ತಿ ಸಂಬಂಧಿತ ವಿಚಾರವಾಗಿ ಕುಟುಂಬದವರ ನಡುವೆ ನಡೆಯುತ್ತಿದ್ದ ಕಲಹವೇ ಈ ಜೋಡಿ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ವಿವಾದ ತೀವ್ರಗೊಂಡ ಪರಿಣಾಮ ಇಬ್ಬರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ. …
Read More »2 ಕೋಟಿ ವಿಮೆಗಾಗಿ ಪತಿಯ ಊಟದಲ್ಲೇ ವಿಷ: ಮಗನನ್ನೂ ಬಿಡದ ಪತ್ನಿಯ ಭೀಕರ ಸಂಚು ಬಯಲು
ಹಣ ಮತ್ತು ಆಸ್ತಿಯ ಮೇಲಿನ ದುರಾಸೆ ಮನುಷ್ಯನನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಮತ್ತು ವಿಮೆ ಹಣದ ಆಸೆಗೆ ಪತ್ನಿಯೇ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಸ್ವಂತ ಮಗ ಮತ್ತು ಸೋದರಳಿಯನಿಗೂ ವಿಷ ನೀಡಿರುವ ಶಂಕೆ ವ್ಯಕ್ತವಾಗಿದೆ. ಪದೇಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಕುಟುಂಬದ ಸದಸ್ಯರ ವೈದ್ಯಕೀಯ ಪರೀಕ್ಷೆಯಲ್ಲಿ ಕೊನೆಗೂ ಭಯಾನಕ ಸತ್ಯ ಬಯಲಾಗಿದೆ. …
Read More »ಅಮಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಆಡಳಿತ ಮಂಡಳಿ ಅವಿರೋಧ ಆಯ್ಕೆ
ಬೆಳಗಾವಿ: ಖಾನಾಪುರ ತಾಲೂಕಿನ ಅಮಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಸದಸ್ಯರು ಲಕ್ಷ್ಮಣ ಕಸರ್ಲೆಕರ್ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗಾವಿಯ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಭೇಟಿಯಾಗಿ, ಆಯ್ಕೆಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಿದರು. ನೂತನ ಸದಸ್ಯರನ್ನು ಅಭಿನಂದಿಸಿದ …
Read More »
Laxmi News 24×7