Home / 2021 (page 12)

Yearly Archives: 2021

ಮೇಲ್ಜಾತಿಯವರು ತಯಾರಿಸಿದ ಬಿಸಿಯೂಟ ತಿನ್ನದೆ ದಲಿತ ವಿದ್ಯಾರ್ಥಿಗಳಿಂದ ಪ್ರತಿರೋಧ

ಪಿಥೋರಗಢ: ಪರಿಶಿಷ್ಟ ಜಾತಿಗೆ ಸೇರಿದ ಮಧ್ಯಾಹ್ನದ ಬಿಸಿಯೂಟ ತಯಾರಕಿಯನ್ನು ಕೆಲಸದಿಂದ ತೆಗೆದು ಹಾಕಿ, ಮೇಲ್ಜಾತಿಗೆ ಸೇರಿದ ಅಡುಗೆ ತಯಾರಕಿಯನ್ನು ನೇಮಿಸಿದ್ದಕ್ಕೆ ಪ್ರತಿರೋಧ ತೋರಿರುವ ದಲಿತ ವಿದ್ಯಾರ್ಥಿಗಳು ಊಟವನ್ನು ತ್ಯಜಿಸಿದ್ದಾರೆ.   ಉತ್ತರಾಖಂಡದ ಚಂಪಾವತ್‌ ಜಿಲ್ಲೆಯ ಸರ್ಕಾರಿ ಇಂಟರ್‌-ಕಾಲೇಜಿನಲ್ಲಿ ಬಿಸಿಯೂಟದ ವಿಚಾರವಾಗಿ ಮೇಲ್ಜಾತಿ ವಿದ್ಯಾರ್ಥಿಗಳು ಮತ್ತು ದಲಿತ ವಿದ್ಯಾರ್ಥಿಗಳ ನಡುವೆ ಊಟ ನಿರಾಕರಣೆಯ ಹೋರಾಟ ನಡೆದಿದೆ. ಈ ಮೊದಲು ಮಧ್ಯಾಹ್ನದ ಬಿಸಿಯೂಟ ತಯಾರಕಿಯಾಗಿ ಸುಖಿ ದಂಗ್‌ ಎಂಬ ಮಹಿಳೆ ಕೆಲಸ ಮಾಡುತ್ತಿದ್ದರು. ಈಕೆ …

Read More »

ಕಲಂ ೩೭೦ ರ ತೆಗೆದ ನಂತರ ಕಾಶ್ಮೀರದಲ್ಲಾದ ಬದಲಾವಣೆಗಳು

೨೮.೧೨.೨೦೨೧ ರಂದು ಕಾಶ್ಮೀರಿ ಹೋಮ್‌ಲ್ಯಾಂಡ್ ಡೇ ನಿಮಿತ್ತ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ ನೇ ಕಲಂ ತೆಗೆದು ಹಾಕಿ ಎರಡು ವರ್ಷಗಳು ಪೂರ್ಣವಾಗಿದೆ. ೨೦೧೯ ರಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಲಾಯಿತು. ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಜಮ್ಮು-ಕಾಶ್ಮೀರ ಮತ್ತು ಲಡಾಖ್), ಎಂದು ವಿಜ್ರಂಭಿಸಲಾಗಿದೆ. ಈ ಎರಡು ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಹಲವು ಬದಲಾವಣೆಗಳು ಮಾಡಲಾಗಿದೆ. ಅದರಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಈ ಕೆಳಗಿನಂತಿವೆ. ೧. ಸ್ಥಳೀಯ ನಿವಾಸಿಗಳ ಸ್ಥಾನ …

Read More »

ನಾಟಿ ಕೋಳಿ ಸಾರು ಮುದ್ದೆ ತಿನ್ನೋ ಸ್ಪರ್ದೆ, 2.5 kg ಮುದ್ದೆ ತಿಂದ ಮೊತ್ತಳ್ಳಿ ಕೆಂಪರಾಜು.

ಸಕ್ಕರೆನಾಡು ಮಂಡ್ಯ, ನಾಟಿಕೋಳಿ ಸಾರು ಮುದ್ದೆಗೆ ಹೆಸರುವಾಸಿ ಅಂತಾದ್ರಲ್ಲಿ ಮುದ್ದೆ ತಿನ್ನೋ ಸ್ಪರ್ದೇ ಇಟ್ರೆ ಸುಮ್ಮನೆ ಇರೋಕಾಗುತ್ತ.. ಒಂದ್‌ ಕೈ ನೋಡೇ ಬಿಡೋಣ ಅಂತ ಊರಿನ ಗ್ರಾಮಸ್ತರೆಲ್ಲ ಜಮಾಯಿಸಿದ್ರೂ. ಹಿಂಗೆ ನಾಟಿಕೋಳಿ ಸಾರು ಮುದ್ದೆ ತಿನ್ನೋ ಸ್ಪರ್ದೆ ನಡೆದಿದ್ದು ಮಂಡ್ಯ ತಾಲೋಕಿನ ಕೊತ್ತತ್ತಿ ಗ್ರಾಮದಲ್ಲಿ. ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ನಡೆದ ಗ್ರಾಮೀಣ ಕ್ರೀಡೆಯನ್ನ ವಿಶ್ವೇಶ್ವರಯ್ಯ ಯುವಕರ ಬಳಗದಿಂದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಗ್ರಾಮೀಣ …

Read More »

5 ನಗರಸಭೆ, 19 ಪುರಸಭೆ, 34 ಪ.ಪಂ.ನ 1185 ವಾರ್ಡ್​ಗಳಿಗೆ ಇಂದು ಚುನಾವಣೆ

ಬೆಂಗಳೂರು, ಡಿ. 27: ಓಮೈಕ್ರಾನ್ ಕೋವಿಡ್ ಪ್ರಕರಣದ ಭೀತಿಯಲ್ಲೂ ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಚುನಾವಣೆ ನಡೆಯುತ್ತಿದೆ. 9 ವಾರ್ಡ್​ಗಳಿಗೆ ಉಪಚುನಾವಣೆಯೂ ಆಗುತ್ತಿದೆ. 19 ಜಿಲ್ಲೆಗಳ 58 ಸ್ಥಳೀಯ ನಗರ ಸಂಸ್ಥೆಗಳ 1185 ವಾರ್ಡ್​ಗಳಿಗೆ ಇಂದು ಮತದಾನ ನಡೆಯಲಿದೆ.

Read More »

ರಾಜ್ಯ ಬಿಜೆಪಿ ಪಕ್ಷದಲ್ಲಿ ( Karnataka BJP ) ಮೇಜರ್ ಸರ್ಜರಿ

ಬೆಂಗಳೂರು: ರಾಜ್ಯ ಬಿಜೆಪಿ ಪಕ್ಷದಲ್ಲಿ ( Karnataka BJP ) ಮೇಜರ್ ಸರ್ಜರಿ ಮಾಡಲಾಗಿದೆ. ಮುಂಬರುವ ಚುನಾವಣಾ ಹಿನ್ನಲೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ಹಾಗೂ ಪ್ರಕೋಷ್ಠಾಧಿಕಾರಿಗಳನ್ನು ನೇಮಕ ಮಾಡಿ, ಬಿಜೆಪಿ ರಾಜ್ಯಾಧ್ಯಕ್ಷರು ( BJP President ) ಆದೇಶಿಸಿದ್ದಾರೆ.   ಈ ಸಂಬಂಧ ನೇಮಕಾತಿ ಆದೇಶ ಹೊರಡಿಸಿರುವಂತ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ( Karnataka BJP President Nalin Kumar Kateel ) ಅವರು, ರಾಜ್ಯ ಬಿಜೆಪಿ …

Read More »

ಕರ್ನಾಟಕ ರಾಜ್ಯ ಬಂದ್‍ಗೆ ನಮ್ಮ ನೈತಿಕ ಬೆಂಬಲ ಇದೆ.: ಸಿದ್ದರಾಮಯ್ಯ

ಕರ್ನಾಟಕ ರಾಜ್ಯ ಬಂದ್‍ಗೆ ನಮ್ಮ ನೈತಿಕ ಬೆಂಬಲ ಇದೆ. ಕರ್ನಾಟಕದ ಬಾವುಟವನ್ನು ಮಹಾರಾಷ್ಟ್ರದಲ್ಲಿ ಸುಟ್ಟಿದ್ದಾರೆ. ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರ ಕೃತ್ಯ ಮತ್ತು ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ ಖಂಡಿಸಿ ಡಿ.31ರಂದು ಕರ್ನಾಟಕ ಬಂದ್‍ಗೆ ಕೆಲ ಕನ್ನಡ ಸಂಘಟನೆಗಳು ಕರೆ ಕೊಟ್ಟಿವೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಬೆಂಗಳೂರಿನಲ್ಲಿ ಪ್ರತಿಕ್ರಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ …

Read More »

ರಾಜ್ಯ ಸರ್ಕಾರದಿಂದ ವಸತಿ ರಹಿತರಿಗೆ ಭರ್ಜರಿ ಸಿಹಿಸುದ್ದಿ

ಹಾವೇರಿ : ನಮ್ಮ ಸರ್ಕಾರದ ಒಂದೂವರೆ ವರ್ಷದ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಒಂದು ಲಕ್ಷ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಸೇರಿದಂತೆ ಐದು ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಣೆಬೆನ್ನೂರು ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ರಾಣೇಬೆನ್ನೂರ ಮತ್ತು ಬ್ಯಾಡಗಿ ತಾಲೂಕಿನ ಕೋವಿಡ್‍ನಿಂದ ಮೃತರಾದವರ ಕುಟುಂಬಗಳಿಗೆ ತಲಾ ರೂ. ಒಂದು …

Read More »

ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಉಚಿತವಾಗಿ ಮನೆ ಬಾಗಿಲಿಗೆ ಪಹಣಿ, ನಕ್ಷೆ, RTC

ವಿಜಯಪುರ: ರಾಜ್ಯದಲ್ಲೆಡೆ ಆರ್.ಟಿ.ಸಿ. ಅಭಿಯಾನ ನಡೆಸಲಾಗುವುದು. ಒಂದೇ ದಿನ ರೈತರ ಮನೆ ಬಾಗಿಲಿಗೆ ಉಚಿತವಾಗಿ ಆರ್.ಟಿ.ಸಿ., ಪಹಣಿ, ಸ್ಕೆಚ್ ಕಾಪಿ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಜಮೀನುಗಳಿಗೆ ನ್ಯಾಯವಾದ ಬೆಲೆ ಒದಗಿಸಲು 79 /ಎ/ಬಿ ತೆಗೆದುಹಾಕಲಾಗಿದೆ. ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಲು ನಿಯಮವನ್ನು ಸರಳಿಕರಣ ಮಾಡಲಾಗಿದೆ. ಒಂದೇ ದಿನ ರಾಜ್ಯದ ಸುಮಾರು 40 ಲಕ್ಷ ರೈತರ ಮನೆ …

Read More »

ಆಟೋದಲ್ಲಿ ವಿಲೀಂಗ್ ಮಾಡಲು ಹೋಗಿ ಸಂಭವಿಸಿದ ಅಪಘಾತ

ಬೆಂಗಳೂರು: ಆಟೋದಲ್ಲಿ ವಿಲೀಂಗ್ ಮಾಡಲು ಹೋಗಿ ಸಂಭವಿಸಿದ ಅಪಘಾತದಲ್ಲಿ ಯುವಕ ಸಾವನ್ನಪ್ಪಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ. ಮುತ್ತು ಮೃತ ದುರ್ದೈವಿ. ಮುತ್ತು ತನ್ನ ಸ್ನೇಹಿತರೊಂದಿಗೆ ಆಟೋದಲ್ಲಿ ತೆರಳಿದ್ದ, ಈ ವೇಳೆ ಮುತ್ತು ವೀಲಿಂಗ್​ ಮಾಡಲು ಯತ್ನಿಸಿದ್ದು, ಆಟೋ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮುತ್ತು ತಲೆಗೆ ಗಂಭೀರ ಗಾಯವಾಗಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆಟೋ …

Read More »

ಬಟ್ಟೆ ಮಾಸ್ಕ್ ಬೇಡ.. ಎನ್95, ಕೆ95 ಮಾಸ್ಕ್‌ಗಳನ್ನೇ ಬಳಸಿ – ತಜ್ಞರ ಸಲಹೆ

ಕೊರೊನಾ ವೈರಸ್‌ನ ಹೊಸ ರೂಪಾಂತರದ ಭೀತಿಯನ್ನು ಇಡೀ ಪ್ರಪಂಚ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಮಾಸ್ಕ್‌ಗಳ ಅಪ್ಗ್ರೇಡ್ ಮಾಡಲು ಸೂಚಿಸುತ್ತಿದ್ದಾರೆ. ಕೋವಿಡ್-19 ಪ್ರಾರಂಭವಾದಾಗ ವೈದ್ಯಕೀಯ ಸಾಧನಗಳ ಕೊರತೆಯಿತ್ತು. ಈ ಕಾರಣ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಎನ್95 ಮಾಸ್ಕ್‌ಗಳ ಬದಲು ಬಟ್ಟೆಯ ಮಾಸ್ಕ್‌ಗಳನ್ನು ಬಳಸಲು ಪ್ರೋತ್ಸಾಹಿಸಿದ್ದರು. ಈ ಬಟ್ಟೆಯ ಮಾಸ್ಕ್‌ಗಳನ್ನು ಜನರು ಕಡಿಮೆ ಬೆಲೆಯಲ್ಲಿ ಕೊಳ್ಳಬಹುದಿತ್ತು. ಅವುಗಳನ್ನು ಮರುಬಳಕೆಯೂ ಮಾಡಬಹುದಿತ್ತು. ಹೀಗಾಗಿ ಜನರು ಸಿಂಗಲ್ ಲೇಯರ್‌ನ ಬಟ್ಟೆಯ ಮಾಸ್ಕ್‌ಗಳನ್ನೇ ಹೆಚ್ಚಾಗಿ …

Read More »