Breaking News
Home / 2021 (page 10)

Yearly Archives: 2021

ಪ್ರಧಾನಿಗೆ 12 ಕೋಟಿ ಮೌಲ್ಯದ ಹೊಸ ಕಾರು, ಇದರ ವಿಶೇಷತೆ ಏನು ಗೊತ್ತಾ..?

ನವದೆಹಲಿ,ಡಿ.28- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 12 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಐಶರಾಮಿ ಕಾರನ್ನು ಬಳಕೆ ಮಾಡಲಾರಂಭಿಸಿದ್ದಾರೆ. ಮರ್ಸಿಡೇಸ್ ಬೆಂಜ್ ಕಂಪೆನಿಯ ಮೇಬ್ಯಾಕ್ ಎಸ್650 ಸರಣಿಯ ಶಸ್ತ್ರಸ್ತ್ರ ಸಜ್ಜಿತ ಕಾರನ್ನು ಪ್ರಧಾನಿ ಅವರಿಗಾಗಿ ಮತ್ತಷ್ಟು ಮಾರ್ಪಡಿಸಲಾಗಿದೆ.   ಈಗಾಗಲೇ ರೆಂಜ್‍ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರುಗಳು ಪ್ರಧಾನಿ ಅವರ ಕಚೇರಿಯಲ್ಲಿವೆ. ಅವುಗಳ ಜೊತೆ ಈಗ ಮರ್ಸಿಡೆಸ್ ಬೆಂಜ್ ಸೇರ್ಪಡೆಯಾಗಿದೆ. ಇತ್ತೀಚೆಗೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ …

Read More »

ಉದ್ಯೋಗಕ್ಕಾಗಿ ಐಟಿಐ ವಿದ್ಯಾರ್ಥಿಗಳಿಂದ ನಕಲಿ ದಾಖಲೆ ಸಲ್ಲಿಕೆ

ಬೆಂಗಳೂರು: ರಾಜ್ಯದ ವಿವಿಧ ಐಟಿಐಗಳಲ್ಲಿ ವ್ಯಾಸಂಗ ಮಾಡಿದ್ದ 91 ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ದಾಖಲೆಗಳ ಪರಿಶೀಲನೆ ವೇಳೆ ದೃಢಪಟ್ಟಿದೆ. ಈ ಸಂಬಂಧ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಜಂಟಿ ನಿರ್ದೇಶಕ ಬಿ.ಎಲ್‌.ಚಂದ್ರಶೇಖರ್‌ ಅವರು ಇದೇ 23ರಂದು ನಗರದ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.   ‘ರಾಜ್ಯದ ವಿವಿಧೆಡೆಯಲ್ಲಿರುವ ಸರ್ಕಾರಿ ಏಜೆನ್ಸಿಗಳ ಮೂಲಕ 2017-18ನೇ ಸಾಲಿನಲ್ಲಿ ಸಾವಿರಾರು ಮಂದಿ ಉದ್ಯೋಗ ಬಯಸಿ ಅರ್ಜಿಗಳನ್ನು ಸಲ್ಲಿಸಿದ್ದರು. ಇವುಗಳ ಪರಿಶೀಲನೆಗಾಗಿ …

Read More »

ಮಗಳ ಮದುವೆಗೆ 7 ವರ್ಷಗಳಲ್ಲಿ 50 ಲಕ್ಷ ರೂಪಾಯಿ ಸಿದ್ಧಪಡಿಸಿಕೊಳ್ಳಿ: ಹೇಗೆ ಎಂಬುದರ ಮಾಹಿತಿ ಇಲ್ಲಿದೆ

ಭಾರತೀಯ ಪೋಷಕರ ಪಾಲಿಗೆ ಹೆಣ್ಣು ಮಕ್ಕಳ ಮದುವೆ ಒಂದು ದೊಡ್ಡ ಜವಾಬ್ದಾರಿ. ಹೆಣ್ಣು ಮಗು ಹುಟ್ಟಿದ್ದೆ ಆಕೆಯ ಮದುವೆ ಬಗ್ಗೆ ಯೋಚನೆ ಮಾಡುತ್ತಾರೆ. ಅದೆಷ್ಟೋ ಹೆತ್ತವರು ತಮ್ಮ ಇಡೀ ಜೀವನದ ದುಡಿಮೆಯ ದೊಡ್ಡ ಪಾಲನ್ನು ಮಗಳ ಮದುವೆಗೆ ಮೀಸಲಿಡುತ್ತಾರೆ. ನಿಮಗೆ ಮಗಳಿದ್ದು, ಅವಳ ಮದುವೆಗೆ ಹಣ ಕೂಡಿಡುವ ಯೋಜನೆಯಿದ್ದರೆ ನಿಮಗಾಗಿ ಸುಲಭದ, ಲಾಭದಾಯಕ ಯೋಜನೆ ಬಗ್ಗೆ ನಾವು ಇಲ್ಲಿ ವಿವರಿಸಿದ್ದೇವೆ. ನೀವೂ ಕೂಡ ನಿಮ್ಮ ಮಗಳನ್ನು ವಿಜೃಂಭಣೆಯಿಂದ ಮದುವೆಯಾಗಲು ಬಯಸಿದರೆ, …

Read More »

ಘರ್‌ ವಾಪಸಿಯಾದರೆ ನಮ್ಮನ್ನು ಎಲ್ಲಿ ಇಡುತ್ತೀರಿ? ಡಾ.ಮಲ್ಲಿಕಾ ಘಂಟಿ

ಹಾವೇರಿ: ‘ಮತಾಂತರ ಆದವರು ಘರ್‌ ವಾಪಸಿಯಾಗಿ ಎಂದು ಯುವ ಸಂಸದರೊಬ್ಬರು ಕರೆ ನೀಡಿದ್ದಾರೆ. ನಾವು ಘರ್‌ ವಾಪಸಿಯಾದರೆ ನೀವು ನಮ್ಮನ್ನು ಎಲ್ಲಿ ಇಡುತ್ತೀರಿ? ತಲೆಯಲ್ಲಾ? ಅಥವಾ ಕಾಲಲ್ಲ? ಎಂಬುದನ್ನು ಸ್ಪಷ್ಟಪಡಿಸಿ’ ಎಂದು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಖಾರವಾಗಿ ಪ್ರಶ್ನಿಸಿದರು. ನಾವು ಘರ್‌ ವಾಪಸಿಯಾದರೆ ನೀವು ನಮ್ಮನ್ನು ಎಲ್ಲಿ ಇಡುತ್ತೀರಿ? ತಲೆಯಲ್ಲಾ? ಅಥವಾ ಕಾಲಲ್ಲ? ಎಂಬುದನ್ನು ಸ್ಪಷ್ಟಪಡಿಸಿ’ ಎಂದು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಖಾರವಾಗಿ ಪ್ರಶ್ನಿಸಿದರು. ನಗರದ ಬಸವಕೇಂದ್ರ …

Read More »

ನೈತಿಕ ಪೊಲೀಸ್ ಗಿರಿ: ಬೆಳಗಾವಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ದಂಡ ಹಾಕಿದ ಹೈಕೋರ್ಟ್!

ಬೆಳಗಾವಿ: 22 ವರ್ಷದ ತಾಯಿ ಹಾಗೂ ಮೂರು ವರ್ಷದ ಹೆಣ್ಣು ಮಗುವನ್ನು ಐದು ತಿಂಗಳ ಕಾಲ ವೇಶ್ಯಾವಾಟಿಕೆಗಾಗಿ ಮಾನವ ಕಳ್ಳ ಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಅಕ್ರಮವಾಗಿ ಇಟ್ಟು ನೈತಿಕ ಪೊಲೀಸ್ ಗಿರಿ ಪ್ರಯತ್ನಕ್ಕಾಗಿ ಮಾಳ್ ಮಾರುತಿ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ಬಾಳಸಾಹೇಬ್ ಪಾಟೀಲ್ ಗೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ. ಬಿಡುಗಡೆ ಮಾಡುವಂತೆ ಪದೇ ಪದೇ ಮನವಿ ಮಾಡಿದರೂ ಅಕ್ರಮವಾಗಿ ತಾಯಿ ಮತ್ತು ಮಗುವನ್ನು ಹಿಡಿದಿಟ್ಟುಕೊಂಡಿರುವ …

Read More »

ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್: ಇರುವಲ್ಲೇ ಉಚಿತ ಆರೋಗ್ಯ ಸೇವೆಗೆ ‘ಶ್ರಮಿಕ ಸಂಜೀವಿನಿ’ ಸಂಚಾರಿ ಕ್ಲಿನಿಕ್

ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರ ಕುಟುಂಬದವರಿಗೆ ಆರೋಗ್ಯ ಸೌಲಭ್ಯ ಒದಗಿಸಲು ಮತ್ತೊಂದು ಕ್ರಮಕೈಗೊಳ್ಳಲಾಗಿದ್ದು, ಸಂಚಾರಿ ಕ್ಲಿನಿಕ್ ಆರಂಭಿಸಲಾಗುವುದು. ಕಾರ್ಮಿಕ ಇಲಾಖೆಯಿಂದ ‘ಶ್ರಮಿಕ ಸಂಜೀವಿನಿ’ ಯೋಜನೆ ಜಾರಿಗೆ ಅಂತಿಮ ಹಂತದ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರಾಯೋಗಿಕವಾಗಿ ಮೂರು ಜಿಲ್ಲೆಗಳಲ್ಲಿ ಸಂಚಾರಿ ಕ್ಲಿನಿಕ್ ಆರಂಭಿಸಲಾಗುತ್ತದೆ. ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇದಾಗಿದ್ದು, ಶ್ರಮಿಕ ವರ್ಗದವರು ಇರುವಲ್ಲಿಯೇ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಸಂಚಾರಿ ಕ್ಲಿನಿಕ್ …

Read More »

ರಸ್ತೆ ಬದಿಯ ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಶಾಸಕ ಸಿ.ಟಿ.ರವಿ ಅವರು ಸ್ಥಳದಲ್ಲೇ ತರಾಟೆ

ಚಿಕ್ಕಮಗಳೂರು : ರಸ್ತೆ ಬದಿಯ ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಶಾಸಕ ಸಿ.ಟಿ.ರವಿ ಅವರು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ. ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆ ಉಪ್ಪಳ್ಳಿ ಚಿತಾಗಾರ ಸಮೀಪದ ಹಳ್ಳಕ್ಕೆ ಕಸ ಎಸೆದ ಯುವಕನನ್ನ ಮತಗಟ್ಟೆಗೆ ತೆರಳುವ ಸಮಯದಲ್ಲಿ ನೋಡಿದ ಸಿ.ಟಿ.ರವಿ ಅವರು ಕಾರ್ ನಿಂದ ಇಳಿದು ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡರು , ಹೊಟ್ಟೆಗೆ ಏನು ತಿನ್ನುತ್ತಿ, ನೀನು ಯಾರ ಮಗ , ಇನ್ನೊಮ್ಮೆ ಕಸ …

Read More »

ಕೊಡಗಿನ ಸೊಸೆಯಾಗುತ್ತಿದ್ದಾರೆ ಸ್ಯಾಂಡಲ್ ವುಡ್ ಬೆಡಗಿ ಅದಿತಿ ಪ್ರಭುದೇವ : ವರ ಯಾರು ಗೊತ್ತಾ ?

ಮಡಿಕೇರಿ : ಸ್ಯಾಂಡಲ್ ವುಡ್ ಬೆಡಗಿ ದಾವಣಗೆರೆ ಮೂಲದ ಅದಿತಿ ಪ್ರಭುದೇವ ಕೊಡಗಿನ ಸೊಸೆಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಎರಡೂ ಕುಟುಂಬಗಳು ತಾಂಬೂಲ ಬದಲಾಯಿಸಿಕೊಂಡಿದ್ದು, ವಿವಾಹದ ನಿಶ್ಚಿತಾರ್ಥವಾಗಿದೆ. ಸೋಮವಾರಪೇಟೆಯ ಕಾಫಿ ಬೆಳೆಗಾರ ಪಿ.ಡಿ.ಚಂದ್ರಕಾಂತ್ ಹಾಗೂ ಸುಚರಿತ ದಂಪತಿಗಳ ಪುತ್ರ ಯಶಸ್ವಿಯನ್ನು ಅದಿತಿ ವರಿಸಲಿದ್ದಾರೆ. ಯಶಸ್ವಿ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಕೃಷಿ ಕ್ಷೇತ್ರದ ಕಡೆಗೂ ಒಲವು ಹೊಂದಿದ್ದಾರೆ. ಗ್ರಾಮೀಣ ಭಾಗದ ಸೊಗಡಿನ ಬಗ್ಗೆ ಅತೀವ ಅಭಿಮಾನ ಹೊಂದಿರುವ ಮತ್ತು ಕೃಷಿಕ ಕುಟುಂಬದ ಬಗ್ಗೆ ಆಸಕ್ತಿಯಿದ್ದ ಅದಿತಿ ತಮ್ಮ …

Read More »

ಇಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ, ಸಿಎಂ ಸ್ಥಾನದಿಂದ ಬೊಮ್ಮಾಯಿಗೆ ಕೊಕ್​?

ಹುಬ್ಬಳ್ಳಿ(ಡಿ.28): ಹತ್ತು ವರ್ಷಗಳ ನಂತರ ಹುಬ್ಬಳ್ಳಿ(Hubli)ಯಲ್ಲಿ ನಡೆಯುತ್ತಿರೋ ಬಿಜೆಪಿ ರಾಜ್ಯ ಕಾರ್ಯಕಾರಿಣಿ(BJP Core Committee Meeting)ಯತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಧಾರವಾಡ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ತವರು ಜಿಲ್ಲೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadeesh Shettar) ರಾಜಕೀಯ ಕರ್ಮಭೂಮಿಯಾಗಿರೋ ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಕಾರ್ಯಕಾರಿಣಿ ಬಿಸಿಯೇರಿದ ಚರ್ಚೆಗೆ ವೇದಿಕೆಯಾಗುತ್ತೆ ಎಂದೇ ಚರ್ಚೆಗೊಳ್ಳುತ್ತಿದೆ. ಸಿಎಂ ಬದಲಾವಣೆ(CM Change) ಕುರಿತೂ ಮಾಹಿತಿ ಸಂಗ್ರಹಿಲಾಗುತ್ತಿದೆ ಎನ್ನೋ ಮಾತೂ …

Read More »

ಅಕ್ರಮ 4.13 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು

ಬೆಂಗಳೂರು: ಸುಳ್ಳು ಮಾಹಿತಿ ನೀಡಿ ಅನರ್ಹರು ಪಡೆದುಕೊಂಡಿದ್ದ 4.13 ಲಕ್ಷ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುಗಳನ್ನು ಆಹಾರ ಇಲಾಖೆ ರದ್ದುಪಡಿಸಿದೆ. ಇದರಿಂದಾಗಿ ಸರ್ಕಾರಕ್ಕೆ ಪ್ರತಿವರ್ಷ 249 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಮೂರು ಹೆಕ್ಟೇರ್ ಗಿಂತ ಹೆಚ್ಚು ಜಮೀನು ಹೊಂದಿದವರು, ಸರ್ಕಾರಿ ನೌಕರರು, ಪಿಂಚಣಿ ಪಡೆಯುತ್ತಿರುವ ನಿವೃತ್ತರು ಹೀಗೆ ಅನೇಕ ಅನರ್ಹರು ಪಡೆದುಕೊಂಡಿದ್ದು, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಮೃತಪಟ್ಟ ಫಲಾನುಭವಿಗಳ ಹೆಸರಿನಲ್ಲಿ ಆಹಾರಧಾನ್ಯ ಪಡೆಯಲಾಗುತ್ತಿತ್ತು. ಇಂತಹವರನ್ನು ಪತ್ತೆಹಚ್ಚಿ ಪಟ್ಟಿಯಿಂದ …

Read More »