Breaking News
Home / 2021 / ಸೆಪ್ಟೆಂಬರ್ (page 69)

Monthly Archives: ಸೆಪ್ಟೆಂಬರ್ 2021

ಕೃಷಿ ಇಲಾಖೆಯಲ್ಲಿ 210 ಕೋಟಿ ಭ್ರಷ್ಟಾಚಾರ; ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು: ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಬಹುಕೋಟಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಸಚಿವರ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ. ಕೃಷಿ ಇಲಾಖೆಯಲ್ಲಿ 210 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಎಸಿಎಫ್ ಕರ್ನಾಟಕ ಸಂಘಟನೆಯ ಕೃಷ್ಣಮೂರ್ತಿ ಎಂಬುವವರು ಎಸಿಬಿಗೆ ದೂರು ನೀಡಿದ್ದಾರೆ. ರೈತರಿಗೆ ನೀಡುವ ಕೃಷಿ ಯಂತ್ರಗಳ ಖರೀದಿ ವೇಳೆ ಬಾರಿ ಹಗರಣ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಸಚಿವ ಬಿ.ಸಿ.ಪಾಟೀಲ್ ಹಾಗೂ ಕೃಷಿ …

Read More »

ಬಿಜೆಪಿ ಬಹುಮತ ನೀಡುವುದರ ಮೂಲಕವಾಗಿ ಬೆಳಗಾವಿ ಜನ ಬುದ್ಧಿವಂತರು ಎನ್ನುವದನ್ನ ತೋರಿಸಿದ್ದಾರೆ : ಉಮೇಶ್ ಕತ್ತಿ

ಬೆಳಗಾವಿ: ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ನೀಡುವುದರ ಮೂಲಕವಾಗಿ ಬೆಳಗಾವಿ ಜನ ಬುದ್ಧಿವಂತರು ಎನ್ನುವದನ್ನ ತೋರಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಪಾಲಿಕೆಯ ಮೇಲೆ ಕನ್ನಡ ಧ್ವಜ ಹಾರಿಸಿದಂತಾಗಿದೆ. ಬೆಳಗಾವಿ ಜನ ಬುದ್ದಿವಂತರು ಎನ್ನುವುದನ್ನು ಈ ಗೆಲುವು ನೀಡುವ ಮೂಲಕ ತೋರಿಸಿದ್ದಾರೆ. …

Read More »

ತೆರಿಗೆ ವಸೂಲಿ ಮಾಡಲು ಸುಳ್ಳು ಲೆಕ್ಕ ಹೇಳಿ ದಾರಿ ತಪ್ಪಿಸ್ತಿದ್ದಾರೆ – ಸಾರ್ವಜನಿಕರ ಆಕ್ರೋಶ

ಚಿಕ್ಕೋಡಿ: ರಣ ಭೀಕರ ಪ್ರವಾಹ ಬಂದು ಎರಡು ತಿಂಗಳು ಕಳೆದರೂ ನದಿ ತೀರದ ಸಂತ್ರಸ್ತರ ಸಂಕಷ್ಟ ಮುಂದುವರೆದಿದೆ. ರೈತರು ನಾಶವಾದ ಬೆಳೆ ತೆಗೆದು ಹೊಸ ಬೆಳೆ ಬಿತ್ತನೆಗೆ ಪರದಾಡುತ್ತಿದ್ದಾರೆ. ಭೀಕರ ಪ್ರವಾಹದಿಂದ ಕಷ್ಟ ಪಟ್ಟು ಬೆಳೆದ ಬೆಳೆಗಳು ಕೊಚ್ಚಿ ಹೋಗಿ ನದಿ ತೀರದ ರೈತರು ಕಂಗಾಲಾಗಿದ್ದಾರೆ. ಈ ಪ್ರವಾಹಕ್ಕೆ ಕಬ್ಬು, ಸೊಯಾಬೀನ್, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ, ಆದರೂ ಸಹ ಸರ್ಕಾರ ಮಾತ್ರ …

Read More »

ಗೌರಿ ಗಣೇಶ ಹಬ್ಬದ ನಿಮಿತ್ತ ಬೆಂಗಳೂರಿನಿಂದ ವಿವಿಧ ಜಿಲ್ಲೆ, ತಾಲೂಕುಗಳಿಗೆ ತೆರಳಲು ಹೆಚ್ಚುವರಿ ಬಸ್

ಬೆಂಗಳೂರು: ಗೌರಿ ಗಣೇಶ ಹಬ್ಬದ ನಿಮಿತ್ತ ಕೆ ಎಸ್ ಆರ್ ಟಿಸಿ ವತಿಯಿಂದ ಸೆಪ್ಟಂಬರ್ 8, 9ರಂದು ರಾಜಧಾನಿ ಬೆಂಗಳೂರಿನಿಂದ ವಿವಿಧ ಜಿಲ್ಲೆ, ತಾಲೂಕುಗಳಿಗೆ ತೆರಳಲು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧೆಡೆ ತೆರಳಲು ಪ್ರಯಾಣಿಕರ ಅನುಕೂಲಕ್ಕಾಗಿ 1,000 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸೆಪ್ಟಂಬರ್ 12ರಂದು ಬೆಂಗಳೂರಿಗೆ ಆಗಮಿಸುವವರಿಗೂ ರಾಜ್ಯದ ವಿವಿಧ ಜಿಲ್ಲಾಕೇಂದ್ರಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಬೆಳಗಾವಿ, ಬೀದರ್, ಕಲ್ಬುರ್ಗಿ, ರಾಯಚೂರು, …

Read More »

ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಬುಧವಾರ ಬೆಳಗಾವಿಗೆ

ಬೆಳಗಾವಿ – ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಬುಧವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಸಚಿವರಾದ ನಂತರ ಇದು ಬೆಳಗಾವಿಗೆ ಅವರ ಮೊದಲ ಭೇಟಿಯಾಗಿದೆ. ಕಂಗ್ರಾಳಿಯ ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ನಡೆಯಲಿರುವ ಸಶಸ್ತ್ರ ಮೀಸಲು ಪೊಲೀಸ್ ಕಾನ್ ಸ್ಟೆಬಲ್  ಪ್ರಶಿಕ್ಷಣಾರ್ಥಿಗಳ ನಿರ್ಗಮ ಪಥ ಸಂಚಲನ ಕಾರ್ಯಕ್ರಮಕ್ಕೆ ಅರಗ ಜ್ಞಾನೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರ್ನಾಟಕ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ …

Read More »

ಮಕ್ಕಳ ಮನೋಸ್ಥಿತಿ ಅರಿತು ಶಿಕ್ಷಣ ನೀಡಿ : ಸಚಿವ ಗೋವಿಂದ ಕಾರಜೋಳ

ಬಾಗಲಕೋಟೆ: ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಮನೋವಿಜ್ಞಾನಿಯಾಗಿ, ತತ್ವಜ್ಞಾನಿಯಾಗಿ ಮಕ್ಕಳ ಮನಸ್ಥಿತಿ ಅರಿತು ಶಿಕ್ಷಣ ನೀಡುವಂತಾಗಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೇ ಉತ್ತಮ ಭವಿಷ್ಯ ನಿರ್ಮಿಕಸುವ ಕಾರ್ಯವಾಗಬೇಕು. …

Read More »

ಗೋಕಾಕ ಪೊಲೀಸ್ ಇಲಾಖೆ ವತಿಯಿಂದ ಗಣೇಶೋತ್ಸವ ಪೂರ್ವಭಾವಿ ಸಭೆ,

ಗೋಕಾಕ ಪೊಲೀಸ್ ಇಲಾಖೆ ವತಿಯಿಂದ ಗಣೇಶೋತ್ಸವ ಪೂರ್ವಭಾವಿ ಸಭೆ, ಗೋಕಾಕ ಶಹರ ಪೊಲೀಸ್ ಠಾಣೆ ಹಾಗೂ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಆಡಳಿತ ಮಂಡಳಿಯ ಅಧ್ಯಕ್ಷರ ಸಭೆ ಕರೆಯಲಾಗಿದ್ದು ಕಡ್ಡಾಯವಾಗಿ ಹಾಜರಾಗಲು ವಿನಂತಿ.ಈ ಸಭೆಯಲ್ಲಿ ಅಪೇಕ್ಷಿತರು ಶಾಂತಿ ಪಾಲನಾ ಸಮಿತಿ ಸದಸ್ಯರು,ಗೋಕಾಕ ಗ್ರಾಮ ದೇವತೆ ಜಾತ್ರಾ ಕಮಿಟಿ ಹಿರಿಯರು,ಗೋಕಾಕ ನಗರ ಸಭೆ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರಿಗೆ ಆಹ್ವಾನಿಸಲಾಗಿದ್ದು ಸರಿಯಾದ ಸಮಯಕ್ಕೆ ಬಂದು ಸಭೆ ಯಶಸ್ವಿಗಾಗಿ ಸಹಕರಿಸಲು ಗೋಕಾಕ …

Read More »

ಸರ್ಕಾರದ ನಿರ್ಬಂಧವನ್ನು ಪಕ್ಕಕ್ಕಿಟ್ಟು ಗಣೇಶೋತ್ಸವಕ್ಕೆ ಸಿದ್ಧತೆ, 21 ದಿನ ಗಣಪತಿ ಇಟ್ಟು ಅದ್ಧೂರಿ ಗಣೇಶ ಉತ್ಸವ ಮಾಡುತ್ತೇವೆ ಎಂದ ಸಂಘ ಪರಿವಾರ

ರಾಜ್ಯ ಬಿಜೆಪಿ ಸರ್ಕಾರ ಗಣೇಶೋತ್ಸವಕ್ಕೆ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಆದ್ರೆ, ಸರ್ಕಾರದ ಆದೇಶಕ್ಕೆ ಸಂಘ ಪರಿವಾರವೇ ಸೆಡ್ಡು ಹೊಡೆಯಲು ಅಣಿಯಾಗಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೋಟೆನಾಡಿನಲ್ಲಿ ಅದ್ಧೂರಿ‌ ಗಣೇಶೋತ್ಸವಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಚಿತ್ರದುರ್ಗ: ಪ್ರತಿ ವರ್ಷ ಕೋಟೆನಾಡಿನಲ್ಲಿ ಗಣೇಶೋತ್ಸವ ನಡೆಯುತ್ತಿತ್ತು. ಆದ್ರೆ ಈ ವರ್ಷ3ನೇ ಅಲೆ ಭೀತಿಯಿಂದ ಗಣೇಶೋತ್ಸವದ ಕೊರೊನಾ ಕರಿನೆರಳು ಬಿದ್ದಿದೆ. ಖಡಕ್ ರೂಲ್ಸ್ ಹೇರಿ ಅದ್ಧೂರಿ ಗಣೇಶೋತ್ಸವಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಹೀಗೆ ಸರ್ಕಾರದ ಟಫ್ …

Read More »

ಅಧಿವೇಶನದ ಬಳಿಕ ದೇವಸ್ಥಾನಗಳಲ್ಲಿ ಭಕ್ತರಿಗೆ ಆಗುವ ಸಮಸ್ಯೆಗಳ ಕುರಿತು ಕ್ರಮ : ಶಶಿಕಲಾ ಜೊಲ್ಲೆ

ಬೆಂಗಳೂರು : ರಾಜ್ಯ ಹಾಗೂ ಹೊರ ರಾಜ್ಯದ ದೇವಸ್ಥಾನಗಳಲ್ಲಿ ರಾಜ್ಯದ ಭಕ್ತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಧಾನ ಮಂಡಲ ಅಧಿವೇಶನ ಮುಗಿದ ನಂತರ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿಯೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಪ್ ಹಾಗೂ ಹಜ್ ಸಚಿವರಾದ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ. ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಸಚಿವರು ಹಾಗೂ ರಾಜ್ಯ ದಾರ್ಮಿಕ ಪರಿಷತ್ತಿನ ಅಧ್ಯಕ್ಷರಾಗಿರುವ ಶಶಿಕಲಾ ಜೊಲ್ಲೆಯವರು …

Read More »

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ನೆರವು ನೀಡಲು ಸಂಪೂರ್ಣ ಸಹಕಾರ : ಬೊಮ್ಮಾಯಿ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಜಾರಿಗೊಳಿಸುತ್ತಿರುವ ಸಾಂದೀಪನಿ ವಿದ್ಯಾರ್ಥಿ ವೇತನವನ್ನು ಡಿಬಿಟಿ ಮೂಲಕ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು 9,206 ವಿದ್ಯಾರ್ಥಿಗಳಿಗೆ ಮಂಡಳಿಯು 13.77 ಕೋಟಿ ರೂ.ಗಳ ವಿದ್ಯಾರ್ಥಿ ವೇತನ ನೀಡಲಾಗಿದೆ. ಬ್ರಾಹ್ಮಣ ಬುದ್ಧಿವಂತಿಕೆಯೊಂದಿಗೆ ಸ್ಥಿತ ಪ್ರಜ್ಞತೆಯನ್ನು ಹೊಂದಿದ್ದಾರೆ. ಇದರಿಂದ ದೇಶ, ಸಮಾಜಕ್ಕೆ ಅನುಕೂಲವಾಗಿದೆ ಎಂದು ಅಭಿಪ್ರಾಯ ಪಟ್ಟರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಕಾರ್ಯಾರಂಭ ಮಾಡಿದ …

Read More »