Breaking News
Home / 2021 / ಸೆಪ್ಟೆಂಬರ್ (page 60)

Monthly Archives: ಸೆಪ್ಟೆಂಬರ್ 2021

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ

ಬೆಳಗಾವಿ: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಹುಕ್ಕೇರಿ ಹಿರೇಮಠ ಪ್ರದಾನ ಮಾಡುವ ವೀರಭದ್ರೇಶ್ವರ ಪ್ರಶಸ್ತಿ ಇದಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಬೆಳಗಾವಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 14ರಂದು ವೀರಭದ್ರೇಶ್ವರ ಜಯಂತಿ ಇದೆ. ವೀರಭದ್ರೇಶ್ವರ ಜಯಂತಿಗೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಭಾದ್ರಪದ ಮಾಸ ಮೊದಲ ಮಂಗಳವಾರ ವೀರಭದ್ರೇಶ್ವರ ಜಯಂತಿ ಮಾಡಬೇಕೆಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಆದರೆ …

Read More »

ವಿಧಾನ ಪರಿಷತ್ ಸಭಾ ನಾಯಕರಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಾಮ ನಿರ್ದೇಶನ

ಬೆಂಗಳೂರು: ವಿಧಾನ ಪರಿಷತ್ ಸಭಾ ನಾಯಕರಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಈಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ ಸಭಾಪತಿಗೆ ಬಸವರಾಜ ಹೊರಟ್ಟಿ ಅವರಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಜಾತಿಗಣತಿ ವರದಿ ಬಿಡುಗಡೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಸಿದ್ಧವಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಾತಿಗಣತಿ ವರದಿಗೆ 170 ಕೋಟಿ ರೂಪಾಯಿ ಖರ್ಚಾಗಿದ್ದು, …

Read More »

ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತನೆ: ಗೋವಿಂದ ಕಾರಜೋಳ

ಬೆಳಗಾವಿಯಲ್ಲಿ ಗಣೇಶೋತ್ಸವ 11 ದಿನ ಮಾಡಬೇಕೆಂದು ಯುವಕರು, ಹಿಂದು ಸಂಘಟನೆಗಳ ಒತ್ತಾಯವಿತ್ತು. ಹೀಗಾಗಿ 11 ದಿನಗಳ ಗಣೇಶೋತ್ಸವಕ್ಕೆ ಸೋಮವಾರ ಆದೇಶ ಬರಲಿದೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಹತ್ವದ ಮಾಹಿತಿ ನೀಡಿದ್ದಾರೆ. ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಐತಿಹಾಸಿಕ ನಗರ ಅನ್ನೋದು ಸಾಬೀತು ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಇನ್ನು ಏನೇನು ಅಭಿವೃದ್ಧಿ ಕೆಲಸಗಳು ಆಗಬೇಕು, ಅದೆಲ್ಲವನ್ನು ನಾನು ಹಾಗೂ ದಕ್ಷಿಣ …

Read More »

ಆಪರೇಷನ್​​ ಕಮಲ; ಎಲ್ಲೂ ಹೋಗದೆ ರೆಸಾರ್ಟ್​ನಲ್ಲೇ ಉಳಿದುಕೊಂಡ ಕಲಬುರಗಿ JDS ಕಾರ್ಪೊರೇಟರ್​​ಗಳು

ಬೆಂಗಳೂರು: ಇತ್ತೀಚೆಗಿನ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ನಾಲ್ವರು ಜೆಡಿಎಸ್​ ಕಾರ್ಪೊರೇಟರ್​​ಗಳು ಆಪರೇಷನ್​​ ಕಮಲದ ಭೀತಿಯಿಂದ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಯಾರಿಗೆ ಬೆಂಬಲ ನೀಡಬೇಕು ಎಂದು ಸೆಪ್ಟೆಂಬರ್​​ 7ನೇ ತಾರೀಕಿನಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ ಪಾಲಿಕೆ ಸದದ್ಯರು ಇನ್ನೂ ನಗರದ ಈಗಲ್​​ ಟನ್​​​ ರೆಸಾರ್ಟ್​ನಲ್ಲೇ ಉಳಿದುಕೊಂಡಿದ್ದಾರೆ.     ಕಳೆದ ನಾಲ್ಕ ದಿನಗಳಿಂದ ಈಗಲ್​​ ಟನ್​​​ …

Read More »

ರಾಜಕಾರಣಿಗಳ ಹುಟ್ಟುಹಬ್ಬಕ್ಕಿಲ್ವಾ ಕೊರೊನಾ ನಿಯಮ? ಎಂಎಲ್​​ಸಿ ಹುಟ್ಟುಹಬ್ಬಕ್ಕೆ ಸಂಗೀತ ಸಂಜೆ

ಬಾಗಲಕೋಟೆ: ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ ಅವರ 54ನೇ ಹುಟ್ಟು ಹಬ್ಬ ಹಿನ್ನೆಲೆ, ಕೋವಿಡ್ ನಿಯಮ ಗಾಳಿಗೆ ತೂರಿ ಹುಟ್ಟುಹಬ್ಬದಾಚರಣೆ ಮಾಡಲಾಗಿದೆ. ಸಚಿವ ಮುರುಗೇಶ್ ನಿರಾಣಿ ಸಹೋದರ ಹನಮಂತ ನಿರಾಣಿ ಅವರ 54ನೇ ಹುಟ್ಟು ಹಬ್ಬದ ಹಿನ್ನೆಲೆ, ಬೀಳಗಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ಜನ ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ಭಾಗಿಯಾಗಿದ್ದು ಕಂಡುಬಂತು. ಇನ್ನು ಗಣೇಶ್ ಉತ್ಸವ ಆಚರಣೆಗೆ ಕಠಿಣ ರೂಲ್ಸ್ ಜಾರಿ ಮಾಡಿ ಸರ್ಕಾರ ಆದೇಶವನ್ನ …

Read More »

ಅಡುಗೆ ಮನೆಗೆ ಭೇಟಿ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು: ದೇಶದಲ್ಲಿ ಎಲ್​​​ಪಿಜಿ ಸಿಲಿಂಡರ್​ ದರ ಹೆಚ್ಚಳ ಕುರಿತಂತೆ ಕೇಂದ್ರ ಸರ್ಕಾರ ವಿರುದ್ಧ ಅಭಿಯಾನವನ್ನು ಆರಂಭ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು, ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇ ಏರಿರುವ ಕುರಿತಂತೆ ಮಾತನಾಡಿ ಕಿಡಿಕಾರಿದ್ದಾರೆ. ಪ್ರಿಯ ಸ್ನೇಹಿತರೇ, ವಿಶೇಷವಾಗಿ ತಾಯಂದ್ರೇ, ಅಕ್ಕ-ತಂಗಿಯರೇ ಈ ವಾರ ಗಂಭೀರವಾದ ಪ್ರಶ್ನೆಯೊಂದನ್ನ ನಿಮ್ ಮುಂದೆ ಇಡ್ತಿದ್ದೀನಿ ಎಂದು ಆಡುಗೆ ಮನೆಯಲ್ಲಿ ಟೀ ಕುಡಿಯುತ್ತಾ ಮಾತನಾಡಿರುವ ಡಿಕೆಎಸ್, ಎಲ್‌ಪಿಜಿ ಗ್ಯಾಸ್ ಬೆಲೆ ಇಳಿಕೆಯಾಗಬೇಕಾ? ಬೇಡವಾ? …

Read More »

ಕಾಣೆಯಾದ ಅಪ್ಪನ ಹುಡುಕಲು ಹೋದ ಮಗನೂ ವಾಪಸ್‌ ಬರಲಿಲ್ಲ!; ಪವಾಡಸದೃಶವಾಗಿ ಬದುಕುಳಿದರೂ ಆಕೆಯ ಬಾಳೀಗ ಗೋಳು..

ಬಳ್ಳಾರಿ: ತಂದೆ ಕಾಣೆಯಾಗಿದ್ದಾರೆ ಎಂದು ಹುಡುಕುವ ಸಲುವಾಗಿ ಮನೆಯಿಂದ ಹೋಗಿದ್ದ ಮಗ, ವಾಪಸ್‌ ಹೆಣವಾಗಿ ಮರಳುವಂತೆ ಆಗಿದೆ. ಜೊತೆಗಿದ್ದ ಪತ್ನಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದರೂ ಆಕೆಯ ಬಾಳೀಗ ಗೋಳು ಎಂಬಂತಾಗಿದೆ. ಬಳ್ಳಾರಿಯ 35ನೇ ವಾರ್ಡ್ ನಿವಾಸಿ ತಿಪ್ಪೇಸ್ವಾಮಿ ( 40) ಮೃತ ಪಟ್ಟ ದುರ್ದೈವಿ. ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ ಬಳಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈತ ಮೃತ ಪಟ್ಟಿದ್ದಾನೆ. ತಂದೆ ದೊರೆಸ್ವಾಮಿ ಏಕಾಏಕಿ ಮನೆಯಿಂದ ಕಾಣೆಯಾಗಿದ್ದರಿಂದ ವಿಚಲಿತಗೊಂಡಿದ್ದ ಪುತ್ರ, …

Read More »

ಸಾಲ ಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತ

ಕಲಬುರಗಿ: ಸಾಲ ಬಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮಹಾಂತಪ್ಪ ( 45 ) ಆತ್ಮಹತ್ಯೆ ಮಾಡಿಕೊಂಡ ರೈತ. ಅಫಾಜಲ್ಪುರ್ ತಾಲ್ಲೂಕಿನ ದಿಕ್ಸಂಗಾ ಗ್ರಾಮದಲ್ಲಿ ತನ್ನ ಸ್ವಂತ ಹೊಲದಲ್ಲೇ ಕ್ರಿಮಿನಾಷಕ ಔಷಧ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ರಿಮಿನಾಷಕ ಔಷಧ ಸೇವನೆ ಮಾಡಿದ ಕೂಡಲೇ ರೈತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ಈಗ ಚಿಕಿತ್ಸೆ ಫಲಕಾರಿಯಾಗದೆ ರೈತ ಸಾವನ್ನಪ್ಪಿದ್ದಾರೆ. ರೈತ ಬ್ಯಾಂಕ್ ಮಾತ್ರವಲ್ಲದೇ ಲಕ್ಷಾಂತರ ರೂಪಾಯಿ ಕೈ …

Read More »

ಹವ್ಯಾಸಿ‌ ಸೈಕ್ಲಿಸ್ಟ್ ಬಸನಗೌಡ ಶಿವಳ್ಳಿ (35) ಸ್ನೇಹಿತರ ಜೊತೆಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಹುಬ್ಬಳ್ಳಿ: ನಗರದ ಹವ್ಯಾಸಿ‌ ಸೈಕ್ಲಿಸ್ಟ್ ಬಸನಗೌಡ ಶಿವಳ್ಳಿ (35) ಸ್ನೇಹಿತರ ಜೊತೆಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಶನಿವಾರ ಒಟ್ಟು 200 ಕಿ.ಮೀ. ಸೈಕಲ್ ಓಡಿಸುವ ಗುರಿ ಇಟ್ಟುಕೊಂಡಿತ್ತು. ಹುಬ್ಬಳ್ಳಿಯಿಂದ ಶಿಗ್ಗಾವಿಗೆ ಹೋಗಿ ವಾಪಸ್ ಬರುವುದು, ಹುಬ್ಬಳ್ಳಿಯಿಂದ ಕಿತ್ತೂರಿಗೆ ಹೋಗಿ ಮರಳುವುದು ಗುರಿಯಾಗಿತ್ತು ಒಟ್ಟು 35 ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು. ಶಿವಳ್ಳಿ ಅವರು ರೈಡ್‌ಗೆ ಹೆಸರು ನೋಂದಾಯಿಸಿರಲಿಲ್ಲ. ಆದರೆ, ಸ್ನೇಹಿತರಿಗೆ ಬೀಳ್ಕೊಡುವ ಸಲುವಾಗಿ ಹುಬ್ಬಳ್ಳಿಯಿಂದ …

Read More »

ಗಣೇಶ ವಿಸರ್ಜನೆ ವೇಳೆ ಪೊಲೀಸರನ್ನೇ ತಳ್ಳಾಡಿದ ಯುವಕರು

ಹಾಸನ: ಗಣೇಶ ವಿಸರ್ಜನೆ ವೇಳೆ ಯುವಕರ ಗುಂಪೊಂದು ಪೊಲೀಸರನ್ನೇ ತಳ್ಳಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಡಿಜೆ ಡ್ಯಾನ್ಸ್​ ತಡೆಯಲು ಮುಂದಾದ ಪೊಲೀಸ್​​ ಅಧಿಕಾರಿಯ ಮೇಲೆ ದುಂಡಾ ವರ್ತನೆ ತೋರಿದ್ದಾರೆ. ಸಕಲೇಶಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಯುವಕರು ಡಿಜೆ ಸೌಂಡಿಗೆ ಡ್ಯಾನ್ಸ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಡಿಜೆ ಡ್ಯಾನ್ಸ್​ ತಡೆಯಲು ಹೋದ ಪೊಲೀಸ್​​ ಸಬ್​​​​ ಇನ್ಸ್​ಪೆಕ್ಟರ್ ಬಸವರಾಜು ಚಿಂಚೋಳಿ ಮತ್ತು ಯುವಕರ ನಡುವೆ ಮಾತಿಗೆ ಮಾತು ಬೆಳೆದಿದೆ. ಇನ್ನು, ಗಲಾಟೆಗೆ ಜೋರಾಗಿಯೇ ನಡೆದಿದ್ದು …

Read More »