Breaking News
Home / 2021 / ಸೆಪ್ಟೆಂಬರ್ (page 22)

Monthly Archives: ಸೆಪ್ಟೆಂಬರ್ 2021

ಪೆಟ್ರೋಲ್, ಡೀಸೆಲ್​ಗೆ ನೀರು ಬೆರಕೆ! ಬಂಕ್ ಮಾಲೀಕರ ವಿರುದ್ಧ ಆಕ್ರೋಶ

ಬಾಗಲಕೋಟೆ: ಒಂದು ಕಡೆ ಪೆಟ್ರೋಲ್ ಡಿಸೆಲ್ ಬೆಲೆ ಗಗನಕ್ಕೆ ಏರಿದೆ. ಇಂಧನದ ಖರ್ಚು ವೆಚ್ಚದ ಭರಾಟೆಯಲ್ಲಿ ಗ್ರಾಹಕರು ಸಿಲುಕಿದ್ದಾರೆ. ಮತ್ತೊಂದೆಡೆ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಡೀಸೆಲ್​ನಲ್ಲಿ ನೀರು ಬೆರಕೆ ಮಾಡಲಾಗಿದೆ. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಬಂಕ್ ಎದುರು ಜಮಾಯಿಸಿದ ಬೈಕ್ ಹಾಗೂ ಇತರ ವಾಹನ ಸವಾರರು ಬಂಕ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಹಾಗೂ ಡಿಸೇಲ್ ನಲ್ಲಿ …

Read More »

ನರೇಂದ್ರ ಗಿರಿ ಅಸಹಜ ಸಾವು ಕೇಸ್; FIR ದಾಖಲಿಸಿ ತನಿಖೆ ಆರಂಭಿಸಿದ ಸಿಬಿಐ

ನವದೆಹಲಿ: ದೇಶದಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಅಖಿಲ ಭಾರತೀಯ ಅಖಾಡ ಪರಿಷದ್ ಅಧ್ಯಕ್ಷ ನರೇಂದ್ರಗಿರಿ ಅಸಹಜ ಸಾವಿನ ತನಿಖೆಯನ್ನ ಇಂದಿನಿಂದ ಸಿಬಿಐ ಅಧಿಕೃತವಾಗಿ ವಹಿಸಿಕೊಂಡಿದೆ. ತನಿಖೆ ಹಿನ್ನೆಲೆಯಲ್ಲಿ 6 ಅಧಿಕಾರಿಗಳ ನೇತೃತ್ವದ ತಂಡ ಪ್ರಯಾಗ್​ರಾಜ್​ ನಗರಕ್ಕೆ ಆಗಮಿಸಿದ್ದು, ಪ್ರಕರಣ ಸಂಬಂಧ ಎಫ್​ಐಆರ್ ದಾಖಲಿಸಿಕೊಂಡಿದೆ. ಕಳೆದ ಸೋಮವಾರ ಬಘಮಬರಿ ಗದ್ದಿ ಮಠದಲ್ಲಿರುವ ರೂಮಿನಲ್ಲಿ ನರೇಂದ್ರ ಗಿರಿಯ ಶವ ಪತ್ತೆಯಾಗಿತ್ತು. ನರೇಂದ್ರ ಗಿರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಡೆತ್​ನೋಟ್ ಕೂಡ ಸಿಕ್ಕಿದೆ. ಇನ್ನು …

Read More »

ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್‍ನಿಂದ ಸಂಪೂರ್ಣ ಬೆಂಬಲ

ಬೆಂಗಳೂರು: ಒಕ್ಕೂಟ ಸರ್ಕಾರವು ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಪೂರ್ಣ ಬೆಂಬಲ ಘೋಷಿಸುತ್ತದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತಿಳಿಸಿದ್ದಾರೆ. ಒಕ್ಕೂಟ ಸರ್ಕಾರವು ವಿವಾದಿತ ಕೃಷಿ ಕಾನೂನು ಜಾರಿಗೆ ತಂದು ಒಂದು ವರ್ಷವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ರೈತ ವಿರೋಧಿಕಾಯ್ದೆಗಳನ್ನು ಹಿಂಪಡೆಯಬೇಕೆಂದು …

Read More »

ಚೆನ್ನಾಗಿ ಮುತ್ತು ಕೊಡುವ ಪುರುಷರು ನನಗಿಷ್ಟ: ಮಲೈಕಾ ಅರೋರ

ನಟಿ ಮಲೈಕಾ ಅರೋರ ಸಿನಿಮಾಗಳಿಗಿಂತಲೂ ವೈಯಕ್ತಿಕ ಜೀವನದಿಂದ, ತಮ್ಮ ಗ್ಲಾಮರಸ್ ಮೈಮಾಟದಿಂದ ಸುದ್ದಿಯಾದವರು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್‌ ಜೊತೆಗೆ ವಿವಾಹವಾಗಿದ್ದ ಮಲೈಕಾ ಅರೋರಾಗೆ ಒಬ್ಬ 9 ವರ್ಷದ ಮಗನಿದ್ದಾನೆ. ಆದರೆ 2016ರಲ್ಲಿ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರ ದೂರಾಗಿದ್ದು ವಿಚ್ಛೇಧನ ಪಡೆದಿದ್ದಾರೆ. ವಿಚ್ಛೇಧನದ ಬಳಿಕ ಮಲೈಕಾ ಅರೋರ ಯುವ ನಟ ಅರ್ಜುನ್ ಜೊತೆಗೆ ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಮಲೈಕಾ ಅರೋರಾಗೆ ಈಗ 47 ವರ್ಷ ವಯಸ್ಸಾದರೆ ಅರ್ಜುನ್ …

Read More »

“ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರದ ಬಗ್ಗೆ ಆತಂಕ ಬೇಡ”

ಬೆಂಗಳೂರು- ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ವೈರಲ್ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಮತ್ತು ಡೆಂಗ್ಯು ಜ್ವರದ ಲಕ್ಷಣಗಳೇ ಕಂಡುಬರುತ್ತಿದ್ದು ಮಕ್ಕಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬರುತ್ತಿದೆ. ಹಾಗಾದರೆ ಇದು ಕೊರೋನಾ ರೂಪಾಂತರಿಯೇ ಎಂಬ ಸಂಶಯ, ಭಯ ಸಾರ್ವಜನಿಕರನ್ನು ಕಾಡುತ್ತಿದೆ. ಸಾಮಾನ್ಯವಾಗಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಲ್ಲಿ ಋತುಗಳು ಬದಲಾದಾಗ ಶೀತ, ನೆಗಡಿ- ಜ್ವರ ಬರುವುದು ಸಾಮಾನ್ಯ. ಆದರೆ ಇತ್ತೀಚೆಗೆ ಬರುತ್ತಿರುವ ಜ್ವರ ಅದರಲ್ಲೂ ಮಕ್ಕಳಲ್ಲಿ ಮಾತ್ರ ದೀರ್ಘಕಾಲ ಇದೆ. ಶಿಶುಗಳಿಂದ ಹಿಡಿದು …

Read More »

ನಿಮ್ಮ ಕಣ್ಣುಗಳನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ.

ಮೇಕೆ ಮಾಂಸ ತಿನ್ನುವುದನ್ನು ಊಹಿಸಿದ್ದೀರಾ ? ಹುಲ್ಲಿನ ಬದಲಿಗೆ ಮಾಂಸ ಸೇವನೆ ಮಾಡುವ ಮೇಕೆಯೇ ಎಂದು ಅಚ್ಚರಿಪಟ್ಟಿದ್ದೀರಾ ? ಏನಪ್ಪಾ ಇದು ! ಎಂದು ಉದ್ಘಾರವೆತ್ತುವಂತೆ ಮಾಡುವ ಮೇಕೆಯ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋ ನೋಡಿದ ಮಂದಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಬುಟ್ಟಿಯೊಂದರಲ್ಲಿ ಇರುವ ಮೀನುಗಳನ್ನು ತೆಗೆದುಕೊಂಡು ಮೇಕೆಯೊಂದು ಮೆಲ್ಲುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಸಾಮಾನ್ಯವಾಗಿ ಹುಲ್ಲು ಸೇವನೆ ಮಾಡುವ ಮೇಕೆಗಳನ್ನು ಕಂಡಿರುವ ಮಂದಿ, ಈ ಮಾಂಸಾಹಾರಿ ಮೇಕೆ ಕಂಡು …

Read More »

ಶಾಲೆಗಳು ಆರಂಭವಾದ ಬೆನ್ನಲ್ಲೇ 14 ಮಕ್ಕಳಿಗೆ ಕೊರೊನಾ ಪಾಸಿಟಿವ್..!

ದಾವಣಗೆರೆ, ಸೆ, 24:- ರಾಜ್ಯದಲ್ಲಿ ಮೂರನೇ ಅಲೆ ಭೀತಿ ಆರಂಭವಾಗಿದೆ. ಎರಡು ಕೊರೊನಾ ಅಲೆಗಳಿಂದ ತತ್ತರಿಸಿದ ಪೋಷಕರಿಗೆ ಇದೀಗ ಮಕ್ಕಳ ಚಿಂತೆ ಹೆಚ್ಚಾಗಿದೆ. ಈಗಾಗಲೇ ಶಾಲೆ ಆರಂಭವಾಗಿದ್ದು, ಪೋಷಕರು ಅಂಗೈಯಲ್ಲಿ ಜೀವ ಹಿಡಿದುಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಅದ್ರೇ ಶಾಲೆ ಆರಂಭವಾಗಿ ಕೆಲವೆ ದಿನಗಳು ಕಳೆದಿದೆ. ಸೆ 06 ರಿಂದ ಸೆ 23 ರ ತನಕ ಅಂದ್ರೇ 17 ದಿನಗಳಲ್ಲಿ 14 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ …

Read More »

ಕಬ್ಬಿನಗದ್ದೆಯಲ್ಲಿ ಬೆತ್ತಲೆ ಬಿದ್ದಿದ್ದ ಬಾಲಕಿ, ಅಮಾನವೀಯ ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎರಡು ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ. ಬೆತ್ತಲೆ ಸ್ಥಿತಿಯಲ್ಲಿದ್ದ ಬಾಲಕಿಯ ಮೈಮೇಲೆ ಸಿಗರೇಟ್ ನಿಂದ ಸುಟ್ಟ ಗಾಯಗೊಳಿಸಲಾಗಿದೆ. ಮಗುವಿನ ಮೈತುಂಬ ಸುಟ್ಟ ಗಾಯಗಳಾಗಿದ್ದು, ಬಾಲಕಿ ಎರಡು ದಿನಗಳ ಕಾಲ ಗದ್ದೆಯಲ್ಲಿ ನರಳಾಡಿದ್ದಾಳೆ. ನರಳಾಟದ ಸದ್ದು ಕೇಳಿ ಕಬ್ಬಿನ ಗದ್ದೆಯಲ್ಲಿ ಹುಡುಕಾಡಿದ ಗ್ರಾಮಸ್ಥರು ಅಮಾನವೀಯ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಬಾಲಕಿಯನ್ನು ರಕ್ಷಿಸಿ ಅಥಣಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ಹೆಚ್ಚಿನ …

Read More »

ಅನ್ನಭಾಗ್ಯ’ ಯೋಜನೆ: ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲು ಸರ್ಕಾರ ಮತ್ತೊಂದು ಕ್ರಮಕೈಗೊಂಡಿದೆ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲೋನಿಗಳು, ಹಾಡಿಗಳು, ತಾಂಡಾಗಳು, ಗೊಲ್ಲರಹಟ್ಟಿ ಕಾಲೋನಿಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ 10,89,445 ಅಂತ್ಯೋದಯ, 1,15,02,798 ಬಿಪಿಎಲ್ ಮತ್ತು 21,44,006 ಎಪಿಎಲ್ ಕಾರ್ಡ್ ದಾರರಿದ್ದು, ಪಡಿತರ ಪಡೆದುಕೊಳ್ಳಲು ಅನುಕೂಲವಾಗುವಂತೆ 100 ರೇಷನ್ ಕಾರ್ಡ್ ಗಳಿಗೆ ಒಂದರಂತೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಾಗುವುದು ಎನ್ನಲಾಗಿದೆ.

Read More »

ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಆರೋಪ: ಸರ್ಕಾರದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್

ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕರು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮ 69ರ ಅಡಿಯ ಚರ್ಚೆಯ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ, ಹೈದರಾಬಾದ್ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಆದಾಗ ಜನರು ಖುಷಿಪಟ್ಟಿದ್ದರು. ಆದರೆ ಯವುದೇ ರೀತಿಯ ಅಭಿವೃದ್ಧಿ ಆಗಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಈವರೆಗೆ ರಚನೆ ಆಗಿಲ್ಲ. ಯಾವುದೇ ಅಧ್ಯಕ್ಷರ ನೇಮಕಾತಿಯೂ ಆಗಿಲ್ಲ, ಒಂದೇ …

Read More »