Daily Archives: ಸೆಪ್ಟೆಂಬರ್ 20, 2021

ಜನ ಕಲ್ಯಾಣಕ್ಕಾಗಿ ನವ ಚಂಡಿಕಾ ಹೋಮ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಕ್ಷೇತ್ರದ ಜನರು, ಕೆಎಂಎಫ್ ಸಂಸ್ಥೆಯ ಪ್ರಗತಿ ಹಾಗೂ ಕುಟುಂಬಸ್ಥರ ಏಳ್ಗೆಗಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನವ ಚಂಡಿಕಾ ಹೋಮ ನೆರವೇರಿಸಿದರು.   ಕಳೆದ ಭಾನುವಾರ ಮತ್ತು ಸೋಮವಾರದಂದು ಎರಡು ದಿನಗಳವರೆಗೆ ಉಡುಪಿ ಜಿಲ್ಲೆಯ ನಾಡಿನ ಸುಪ್ರಸಿದ್ಧ ದೇವಸ್ಥಾನವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಹೋಮ-ಹವನ ನೆರವೇರಿಸಿದರು.   ಕಳೆದ ಎರಡು …

Read More »

ಸೈಮಾ ಅವಾರ್ಡ್ಸ್: ನಟಿ ರಶ್ಮಿಕಾ ಮಂದಣ್ಣ ಡಬಲ್‌ ಪ್ರಶಸ್ತಿ

ನಟಿ ರಶ್ಮಿಕಾ ಮಂದಣ್ಣ ಈಗ ಖುಷಿಯ ಕಡಲಲ್ಲಿ ತೇಲುತ್ತಿದ್ದಾರೆ. ಎಲ್ಲ ಭಾಷೆಗಳಿಂದಲೂ ಅವರಿಗೆ ಆಫರ್​ ಬರುತ್ತಿವೆ. ಅಲ್ಲದೇ, ಈಗಾಗಲೇ ನಟಿಸಿದ ಸಿನಿಮಾಗಳಿಗೆ ಪ್ರಶಸ್ತಿಗಳು ಸಿಕ್ಕಿವೆ. ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮಿರಿಮಿರಿ ಮಿಂಚಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರಿಗೆ 2 ಪ್ರಶಸ್ತಿಗಳು ಸಿಕ್ಕಿರುವುದು ವಿಶೇಷ. ಆ ಖುಷಿಯ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. 2019ರಲ್ಲಿ ತೆರೆಕಂಡ ಸಿನಿಮಾಗಳು ಈ ಪ್ರಶಸ್ತಿ ಕಣದಲ್ಲಿ ಸ್ಪರ್ಧಿಸಿದ್ದವು. …

Read More »

ಪ್ರೇಕ್ಷಕರಿಂದ ಶಬ್ಬಾಷ್​ ಎನಿಸಿಕೊಂಡಿರೋ ‘ಕೃಷ್ಣ ಸುಂದರಿ’ಗೆ ಶತಕದ ಸಂಭ್ರಮ

ಕೃಷ್ಣ ಸುಂದರಿ.. ಹೆಸರೇ ಹೇಳುವಂತೆ ಬೆಣ್ಣೆ ಕಳ್ಳ, ನೀಲಿ ವರ್ಣದ ಮುದ್ದು ಕೃಷ್ಣನ ಭಕ್ತೆ ನಮ್ಮ ಶ್ಯಾಮ. ಬಣ್ಣಕ್ಕಿಂತ ಮನಸ್ಸು ಮುಖ್ಯ ಎನ್ನುವ ಮಾನವೀಯ ಮೌಲ್ಯಗಳನ್ನ ಹೊಂದಿರುವ ಅಖಿಲ್​ ಸಮಾಜದ ಮಾತುಗಳಿಗೆ ತಲೆ ಕೆಡಸಿಕೊಳ್ಳದೇ ಅಮ್ಮನ ವಿರೋಧದ ನಡುವೆ ಶ್ಯಾಮಳನ್ನು ಮದುವೆಯಾಗುತ್ತಾನೆ. ಇವರಿಬ್ಬರ ಜರ್ನಿಯೇ ಕೃಷ್ಣ ಸುಂದರಿ. ಜ್ಹೀ ಕನ್ನಡ ಅಂದ್ರೆ ಅಲ್ಲಿ ಹೊಸತನದ ಪ್ರಯೋಗಗಳು ಇರಲೇಬೇಕು ಎಂಬುವಷ್ಟು ವಿಭಿನ್ನ ಕಥೆಗಳನ್ನ ಕೊಡುಗೆ ನೀಡಿರುವ ಹೆಮ್ಮೆ ವಾಹಿನಿಯದ್ದು. ಇನ್ನೂ ಕನ್ನಡಕ್ಕೆ …

Read More »

ಸರ್ಕಾರಿ ಕಚೇರಿಗೆ ನುಗ್ಗಿ ಹಿರಿಯ ಕೆಎಎಸ್​ ಅಧಿಕಾರಿಗೆ ಕೊಲೆ ಬೆದರಿಕೆ ಆರೋಪ

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿ ನೇಮಕಗೊಂಡಿರುವ ಕೆಎಎಸ್ ಅಧಿಕಾರಿ ಬಿ.ಕೆ.ನಾಗರಾಜಪ್ಪ ಅವರ ಮೇಲೆ ಕೊಲೆ ಬೆದರಿಕೆ ಕೇಳಿ ಬಂದಿದ್ದು ಸರ್ಕಾರಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮಹಾಲಕ್ಷ್ಮಿ ಲೇಔಟ್ ನ ಭೋವಿ ಪಾಳ್ಯದಲ್ಲಿರುವ ಭೋವಿ ಅಭಿವೃದ್ಧಿ ನಿಗಮದ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ ಹಣ ಮಂಜೂರಾತಿ ಮಾಡುವಂತೆ ಧಮ್ಕಿ ಹಾಕಿರೋ ಆರೋಪಿಗಳು. ನಾವು ಹೇಳಿದ ವ್ಯಕ್ತಿಗಳಿಗೆ ಹಣ ಮಂಜೂರು ಮಾಡಬೇಕು. ಇಲ್ಲದಿದ್ದರೆ ಸರ್ಕಾರಿ ಕಚೇರಿಯಲ್ಲಿ …

Read More »

ತಾ.ಪಂ., ಜಿ.ಪಂ.ಕ್ಷೇತ್ರ ನಿರ್ಣಯ ವಿವಾದ ಹೈಕೋರ್ಟ್‌ಗೆ

ಬೆಂಗಳೂರು: ತಾ.ಪಂ., ಜಿ.ಪಂ. ಚುನಾವಣ ಕ್ಷೇತ್ರಗಳನ್ನು ನಿರ್ಣಯಿಸುವ ಬಗ್ಗೆ ರಾಜ್ಯ ಚುನಾವಣ ಆಯೋಗಕ್ಕೆ ನೀಡ ಲಾಗಿದ್ದ ಅಧಿಕಾರ ವಾಪಸ್‌ ಪಡೆ ದಿರುವುದು ಹೈಕೋರ್ಟ್‌ ಮೆಟ್ಟಿ ಲೇರಿದೆ. ಸರಕಾರದ ಕ್ರಮವನ್ನು ಪ್ರಶ್ನಿಸಿ ಧಾರವಾಡದ ಹೈಕೋರ್ಟ್‌ ಪೀಠಕ್ಕೆ 8 ಜಿಲ್ಲೆಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, ಸೋಮವಾರದಿಂದ ವಿಚಾರಣೆ ಆರಂಭವಾಗಲಿದೆ. ಚುನಾವಣ ಕ್ಷೇತ್ರ ನಿರ್ಣಯಕ್ಕೆ ಆಯೋಗ ರಚಿಸಿದ್ದನ್ನೂ ಪ್ರಶ್ನಿಸಲಾಗಿದೆ. ಕ್ಷೇತ್ರಗಳ ವಿಂಗಡನೆ ಮತ್ತು ಮೀಸಲಾತಿ ತನ್ನ ಅಧಿಕಾರ ಎಂದು ಸರಕಾರ ಹೇಳುತ್ತಿದ್ದರೆ, ನಿಗದಿತ ಅವಧಿಯೊಳಗೆ ಚುನಾವಣೆ …

Read More »

ಬೆಲೆ ಏರಿಕೆ ವಿಚಾರ ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ್ದು, ಆಡಳಿ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಗದ್ದಲ

ಬೆಂಗಳೂರು: ಬೆಲೆ ಏರಿಕೆ ವಿಚಾರ ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ್ದು, ಆಡಳಿ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಗದ್ದಲಕ್ಕೆ ಕಾರಣವಾಯಿತು. ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಉತ್ತರ ನೀಡುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಬಿಜೆಪಿಯವರದ್ದು ಲೂಟಿ ಸರ್ಕಾರ ಎಂದು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಕಿಡಿಕಾರಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರದ್ದು ಲೂಟ್ ಸರ್ಕಾರ. ಕಾಂಗ್ರೆಸ್ ಸರ್ಕಾರವನ್ನು ಕ್ರಿಮಿನಲ್ ಲೂಟ್ ಎಂದು ಕರೆಯಲಾಗಿತ್ತು. ಕ್ರಿಮಿನಲ್ …

Read More »

ಕನ್ನಡಿಗರನ್ನು ಕೆಣಕುವ ಮಹಾರಾಷ್ಟ್ರ ಏಕೀಕರಣ ಸಮಿತಿ ಫುಡರಿಗೆ ಭಾನುವಾರ ಮಧ್ಯರಾತ್ರಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಪಾಠ ಕಲಿಸಿದ್ದಾರೆ.

ಬೆಳಗಾವಿ – ಸದಾ ಕಿರಿಕ್ ಮಾಡುತ್ತ ಕನ್ನಡಿಗರನ್ನು ಕೆಣಕುವ ಮಹಾರಾಷ್ಟ್ರ ಏಕೀಕರಣ ಸಮಿತಿ ಫುಡರಿಗೆ ಭಾನುವಾರ ಮಧ್ಯರಾತ್ರಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಪಾಠ ಕಲಿಸಿದ್ದಾರೆ. ಗಣೇಶ ವಿಸರ್ಜನೆ ಸ್ಥಳದಲ್ಲಿ ಕನ್ನಡದಲ್ಲಿ ಮಾತ್ರ ಬ್ಯಾನರ್ ಹಾಕಿದ್ದರಿಂದ ಎಇಎಸ್ ಫುಂಡರು ಗಲಾಟೆ ಶುರು ಮಾಡಿದರು. ಈ ವೇಳೆ ಅವರನ್ನು ಶಾಂತವಾಗಿಯೇ  ಸಮಾಧಾನಪಡಿಸಲು ಪಾಲಿಕೆಯ ಉಪಾಯುಕ್ತೆ ಲಕ್ಷ್ಮಿ ನಿಪ್ಪಾಣಿಕರ್ (ಸುಳಗೆಕರ್) ಪ್ರಯತ್ನಿಸಿದರು. ಆದರೆ ಇದರಿಂದ ಅವರ ಪುಂಡಾಟಿಕೆ ನಿಲ್ಲುವ ಬದಲು ಮತ್ತಷ್ಟು ಜೋರಾಯಿತು. ಅಧಿಕಾರಿಗೆ ಬೆದರಿಕೆ …

Read More »

ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ: ಕಾಂಗ್ರೆಸ್‌ ಟೀಕೆ

ಬೆಂಗಳೂರು : ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ ಎಂದು ಕರ್ನಾಟಕ ಕಾಂಗ್ರೆಸ್‌ ಸೋಮವಾರ ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಈಗಾಗಲೇ ಬೆಲೆ ಏರಿಕೆಯಿಂದ ಜನರ ಬದುಕು ಹೈರಾಣಾಗಿದೆ, ಇದರ ನಡುವೆಯೇ ಕೇಂದ್ರ ಸರ್ಕಾರ ಮತ್ತಷ್ಟು ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಿಸಿ ಜನರ ಬದುಕನ್ನು ಮತ್ತಷ್ಟು ದುಬಾರಿಯಾಗಿಸಿದೆ. ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ಸರ್ಕಾರ ಸಾಮಾನ್ಯರ ಮೇಲೆ ತೆರಿಗೆ ಬರೆ ಹಾಕುತ್ತಿದೆ. ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ …

Read More »

ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ : ಸ್ಥಳೀಯರ ವಿರೋಧ

ಶಿವಮೊಗ್ಗ : ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ ನಿಷೇಧಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದರೂ ಅದನ್ನು ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ ನೀಡಲು ಬಂದ ಭಕ್ತರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಕ್ಷೇತ್ರದಲ್ಲಿ ನಡೆದಿದೆ. ಹಣಗೆರೆಕಟ್ಟೆಯಲ್ಲಿರುವ ಶ್ರೀ ಚೌಡೇಶ್ವರಿ ಭೂತರಾಯ ಹಾಗೂ ಸೈಯದ್ ಸಾದತ್ ದರ್ಗಾ ಇರುವ ಧಾರ್ಮಿಕ ಕ್ಷೇತ್ರದಲ್ಲಿ ಆದೇಶ ಉಲ್ಲಂಘನೆಯಾಗಿದ್ದು ಈ ಹಿಂದೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರದಲ್ಲಿ ಕುರಿ …

Read More »

ವಿದೇಶಿ ಏಜೆನ್ಸಿಗಳಿಗೆ ರಕ್ಷಣಾ ಮಾಹಿತಿ ನೀಡುತ್ತಿದ್ದ ಬೆಂಗಳೂರಿನ ಬಟ್ಟೆ ವ್ಯಾಪಾರಿಯ ಬಂಧನ

ಬೆಂಗಳೂರು: ನಗರದ ಸಿಸಿಬಿ ಪೊಲೀಸರು ಮತ್ತು ಮಿಲಿಟರಿ ಗುಪ್ತಚರ ವಿಭಾಗದ ಅಧಿಕಾರಿಗಳ ಜಂಟಿ ಕಾರ್ಯಾಚಾರಣೆಯಲ್ಲಿ ವಿದೇಶಿ ಏಜೆನ್ಸಿಗಳಿಗೆ ಭಾರತದ ರಕ್ಷಣಾ ಮಾಹಿತಿ ನೀಡುತ್ತಿದ್ದ ಯುವಕನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಈತ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಎನ್ನಲಾಗಿದೆ. ಆರೋಪಿಯು ರಾಜಸ್ಥಾನದ ಬೆರ್ಮರ್ ಮೂಲದವನು. ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ. ಸೇನೆಯ ಕಮಾಂಡೋ ಸಮವಸ್ತ್ರ ಧರಿಸಿ ಬಾರ್ಮರ್ ನ ಮಿಲಿಟರಿ ಸ್ಟೇಶನ್ ಮಾಹಿತಿ, ಸೇನಾ ವಾಹನಗಳ ಓಡಾಟದ ಮಾಹಿತಿಯನ್ನು …

Read More »