Breaking News
Home / 2021 / ಆಗಷ್ಟ್ (page 78)

Monthly Archives: ಆಗಷ್ಟ್ 2021

ಇನ್ನು ಎರಡು ದಿನ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ 5 ಮತ್ತು 6 ರಂದು ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 8 ರವರೆಗೆ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಅದೇ ರೀತಿ, ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ …

Read More »

ಜಮೀರ್ ಅಹಮದ್ ಖಾನ್ ಅವರ ಮನೆಯ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಐಟಿ, ಇಡಿ ಬಳಸಿಕೊಂಡು ಕಿರುಕುಳ ನೀಡುವ ಬಿಜೆಪಿಯ ವರ್ತನೆ ಖಂಡನೀಯ ಎಂದು ಸಿದ್ದರಾಮಯ್ಯ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ …

Read More »

ಶಾಸಕ ಜಮೀರ್ ಗೆ ಐಟಿ ಶಾಕ್ ಬೆನ್ನಲ್ಲೇ ಮಾಜಿ ಸಚಿವ ರೋಷನ್ ಬೇಗ್ ಗೆ ಇಡಿ ಬಿಗ್ ಶಾಕ್

ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಾಜಿನಗರದ ರೋಷನ್ ಬೇಗ್ ನಿವಾಸ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಎಂಎ ಅವ್ಯವಹಾರ, ವಂಚನೆ ಪ್ರಕರಣ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಸಿ.ಆರ್.ಪಿ.ಎಫ್. ಭದ್ರತೆಯೊಂದಿಗೆ ಇಡಿ ದಾಳಿ ನಡೆಸಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಬಿಜೆಪಿ ಮುಖಂಡ ರೋಷನ್ …

Read More »

ಕೊರೋನಾದಿಂದ ಪಾರಾದವರಿಗೆ ಶುಗರ್, ಗುಣಮುಖರಾದ ಶೇ. 14.46 ರಷ್ಟು ಮಂದಿಗೆ ಡಯಾಬಿಟಿಸ್

ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಮಧುಮೇಹ ಕಾಡತೊಡಗಿದೆ. ಸೋಂಕಿನಿಂದ ಪಾರಾದವರಲ್ಲಿ ಶೇಕಡ 14.46 ರಷ್ಟು ಜನರಿಗೆ ಡಯಾಬಿಟಿಸ್ -2 ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಇಂಟರ್ ನ್ಯಾಷನಲ್ ಡಯಾಬಿಟಿಕ್ ಫೆಡರೇಶನ್(IDF) ನೀಡಿದ ವರದಿಯಲ್ಲಿ ಹೇಳಲಾಗಿದೆ. ಕೊರೋನಾಗೆ ಚಿಕಿತ್ಸೆ ಪಡೆದು ಗುಣಮುಖರಾದವರ ಪೈಕಿ ಶೇಕಡ 14.46 ರಷ್ಟು ಮಂದಿಗೆ ಡಯಾಬಿಟಿಸ್ -2 ಕಾಣಿಸಿಕೊಂಡಿದೆ. ಕೊರೋನಾ ಸೋಂಕಿನಿಂದ ಶ್ವಾಸಕೋಶ ಮತ್ತು ಕಿಡ್ನಿಯ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ ಎನ್ನುವುದು ಸಂಶೋಧನೆಯಲ್ಲಿ ಗೊತ್ತಾಗಿದೆ. ರೋಗನಿರೋಧಕ ಶಕ್ತಿ …

Read More »

ಈಗ ನಾನು ಬೆತ್ತಲಾಗಿ ನಿಮ್ಮ ಮುಂದೆ ಬಂದಿದ್ದೇನೆ, ನಿಮಗೆ ನನ್ನ ನೋಡಿದರೆ ಅಶ್ಲೀಲ ಎಂದು ಅನಿಸುತ್ತದೆಯೇ?

ನಟಿ, ರೂಪದರ್ಶಿ ಗಹನಾ ವಶಿಷ್ಠ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬೆತ್ತಲೆಯಾಗಿ ವಿಡಿಯೊ ಹಂಚಿಕೊಳ್ಳುವ ಮೂಲಕ ಅಶ್ಲೀಲ ಎಂದರೆ ಇದೇನಾ ಎಂದು ಪ್ರಶ್ನೆ ಮಾಡಿದ್ದಾರೆ. ನೀಲಿ ಚಿತ್ರ ನಿರ್ಮಾಣದ ಆರೋಪ ಎದುರಿಸುತ್ತಿರುವ ಗಹನಾ ವಶಿಷ್ಠ್‌ ಬೆತ್ತಲೆಯಾಗಿ ವಿಡಿಯೊ ಮಾಡುವ ಮೂಲಕ ಶೃಂಗಾರ (ಎರೋಅಟಿಕ) ಹಾಗೂ ಅಶ್ಲೀಲ ವಿಡಿಯೊಗಳಿಗೆ ವ್ಯತ್ಯಾಸ ಇದೆ ಎಂಬುದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.     ‘ಈಗ ನಾನು ಬೆತ್ತಲಾಗಿ ನಿಮ್ಮ ಮುಂದೆ ಬಂದಿದ್ದೇನೆ, ನಿಮಗೆ ನನ್ನ ನೋಡಿದರೆ …

Read More »

ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ಬೆಂಗಳೂರು: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಮದುವೆಯಾಗಿ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಪ್ರಾಣಕ್ಕೆ ಪ್ರಾಣ ಕೊಡುವಂತಿದ್ದ ಗೆಳೆಯನ ಮನೆಯಲ್ಲೇ ತನ್ನ ಪತ್ನಿ ಜತೆಗೆ ಗಂಡ ತಂಗಿದ್ದ. ಆದರೀಗ ಆತ ದುರಂತ ಅಂತ್ಯಕಂಡಿದ್ದಾನೆ… ಈ ಸಾವಿನ ಜಾಡು ಹಿಡಿದು ಹೊರಟ ಪೊಲೀಸರ ಮುಂದೆ ಬೆಚ್ಚಿಬೀಳಿಸೋ ಚೆಂದುಳ್ಳಿ ಚೆಲುವೆಯ ಅಸಲಿ ಮುಖ ಅನಾವರಣಗೊಂಡಿದೆ. ಇದು ಲವ್ ಮ್ಯಾರೆಜ್ ಮಾಡಿಕೊಂಡು ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದವಳ ಎರಡನೇ ಲವ್ ಸ್ಟೋರಿಗೆ ಅಮಾಯಕ ಬಲಿಯಾದ ದುರಂತ …

Read More »

ಹುಬ್ಬಳ್ಳಿ : ಕಾರಾಗೃಹದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಶವವಾಗಿ ಪತ್ತೆ

ಹುಬ್ಬಳ್ಳಿ: ಇಲ್ಲಿನ ಕಾರಾಗೃಹದಿಂದ ಪರಾರಿಯಾಗಿದ್ದ ಕೊಲೆ ಆರೋಪದಲ್ಲಿ ಬಂಧಿತನಾಗಿದ್ದ, ವಿಚಾರಾಧೀನ ಕೈದಿ ವಿಜಯಾನಂದ ನರೇಗಲ್, ಅಣ್ಣಿಗೇರಿ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಅನುಮಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2014 ರಂದು ಕುರಿ ಕದಿಯಲು ಹೋಗಿದ್ದ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಇಬ್ಬರು ಕುರಿಗಾಹಿಗಳನ್ನು ವಿಜಯಾನಂದ ಹಾಗೂ ಆತನ ಜೊತೆ ಇನ್ನಿಬ್ಬರು ಸೇರಿ ಕುರಿಗಾಹಿಗಳನ್ನು ಕೊಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ 2014 ರಿಂದ ಇಲ್ಲಿನ ಉಪಕಾರಾಗೃದಲ್ಲಿದ್ದ ವಿಜಯಾನಂದ ಆಗಸ್ಟ್ …

Read More »

ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ : ಮುಕ್ತವಾದ ಸೇತುವೆ ಹಾಗೂ ರಸ್ತೆಗಳು

ಬನಹಟ್ಟಿ : ಮಹಾರಾಷ್ಟ್ರ ರಾಜ್ಯದಲ್ಲಿನ ಹಾಗೂ ಪಶ್ಚಿಮ ಘಟ್ಟಗಳಲ್ಲಿನ ಮಹಾಮಳೆಯ ಪರಿಣಾಮ ಉಂಟಾದ ಪ್ರವಾಹದಿಂದಾಗಿ ಕಳೆದ 13 ದಿನಗಳಿಂದ ಕೃಷ್ಣಾನದಿ ಹಾಗೂ ಘಟಪ್ರಭಾ ನದಿಯು ಉಕ್ಕಿ ಹರಿದ ಪರಿಣಾಮ ರಬಕವಿ-ಬನಹಟ್ಟಿ ತಾಲೂಕಿನ ನದಿಪಾತ್ರದ ಗ್ರಾಮಗಳು ಜಲಾವೃತವಾಗಿ ಸಾಕಷ್ಟು ಆವಾಂತರಗಳನ್ನು ಸೃಷ್ಠಿಸಿತ್ತು. ಕಳೆದ 3-4 ದಿನಗಳಿಂದ ಕೃಷ್ಣಾ ಹಾಗೂ ಘಟಪ್ರಭಾ ಎರಡು ನದಿಗಳ ನೀರಿನ ಪ್ರಮಾಣ ನದಿಯ ನೀರಿನ ಹರಿವು ಕಡಿಮೆಯಾಗುತ್ತಿದೆ. ಮುಚ್ಚಿಕೊಂಡ ಬಹುತೇಕ ಸೇತುವೆ ಹಾಗೂ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ. …

Read More »

ಬಿಜೆಪಿ ಭಿನ್ನಮತ ನೋಡಿದರೆ ಶೀಘ್ರದಲ್ಲೇ ಮಧ್ಯಂತರ ಚುನಾವಣೆ? ಸಿಎಂ ಬೆಟ್ಟ ಅಗೆದು ಇಲಿ ಹಿಡಿದಂತಿದೆ, ಸಂಪುಟ :ಸಿದ್ದರಾಮಯ್ಯ ಭವಿಷ್ಯ

ಬೆಂಗಳೂರು: ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲೀಗ 29 ಸಚಿವರು ಸೇರ್ಪಡೆಯಾಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಭಿನ್ನಮತ ನೋಡಿದರೆ ಶೀಘ್ರದಲ್ಲೇ ಮಧ್ಯಂತರ ಚುನಾವಣೆ ನಡೆಯಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿಗಳು ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಎಂದು ಸಿಎಂ ಬೊಮ್ಮಾಯಿ ಸಂಪುಟ ರಚನೆ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ ಪ್ರತಿಕ್ರಿಯೆ ನೀಡಿದ್ದಾರೆ. ದಲಿತ ಸಮುದಾಯದ ಉದ್ಧಾರಕ್ಕೆ ಅವತಾರ …

Read More »

ಬೆನ್ನಿಗೆ ಚೂರಿ ಹಾಕಿದವರಿಗೆ ಅವಕಾಶ ನೀಡಲಾಗುತ್ತಿದೆ:ಶಾಸಕ ಸಿದ್ದು ಸವದಿ ಹೇಳಿಕೆ

ಬೆಂಗಳೂರು : ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆಯಾದ ಹಿನ್ನಲೆ. ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭಾರಿ ಬೇಸರವುಂಟಾಗಿದೆ. ಅವರಲ್ಲಿ ಶಾಸಕ ಸಿದ್ದು ಸವದಿ ಸಹ ಇದ್ದಾರೆ. ಸಿಎಂ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದ್ದಾರೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ತೇರದಾಳದ ಶಾಸಕ ಸಿದ್ದು ಸವದಿ ಸಹ ಇದ್ದರು. ಸಚಿವ ಸ್ಥಾನದ ಪಟ್ಟಿಯಲ್ಲಿ ಅವರ ಹೆಸರು ಇಲ್ಲ. ಹಾಗಾಗಿ ಆಕ್ರೋಶ ಹೊರಹಾಕಿದ ಅವರು ಬಕೆಟ್ ಹಿಡಿದವರಿಗೆ, ಲಾಬಿ ಮಾಡಿದವರಿಗೆ ಮಂತ್ರಿ …

Read More »