Breaking News
Home / 2021 / ಆಗಷ್ಟ್ (page 76)

Monthly Archives: ಆಗಷ್ಟ್ 2021

ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ `ED’ ದಾಳಿ ಅಂತ್ಯ : ದಾಳಿ ಬಗ್ಗೆ ಕೈ ಶಾಸಕ ಹೇಳಿದ್ದೇನು?

ಬೆಂಗಳೂರು : ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ಅಧಿಕಾರಿಗಳ ದಾಳಿ ಅಂತ್ಯವಾಗಿದ್ದು, ಇಡಿ ದಾಳಿ ಕುರಿತಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ನನ್ನ ಮನೆ ವಿಚಾರವಾಗಿ ಯಾರೋ ದೂರು ಕೊಟ್ಟಿದ್ದಾರಂತೆ ಹೀಗಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾನು ನೀಡಿದ ದಾಖಲೆಗಳು ಸರಿಯಿದ್ದ ಕಾರಣ ನನ್ನ ಮನೆಯಿಂದ ಇಡಿ ಅಧಿಕಾರಿಗಳು ವಾಪಸ್ …

Read More »

ಜನತಾ ದರುಶನವನ್ನೇ ಮರೆತ ಸಿಎಂ ಬಸವರಾಜ್ ಬೊಮ್ಮಾಯಿ: ಮುಖ್ಯಮಂತ್ರಿ ನಡೆ ವಿರುದ್ದ ರೈತರ ಆಕ್ರೋಶ

ಬೆಂಗಳೂರು: ಸಿಎಂ ಆಗಿ ಒಂದು ವಾರ ಕಳೆದರೂ ಜನತಾ ದರ್ಶನದ ಕಡೆ ಗಮನ ಹರಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ನೇಮಕಗೊಂಡ ಸಿಎಂ ಬಸವರಾಜ ಬೊಮ್ಮಾಯಿ ಜನತಾ ದರ್ಶನದ ಕಡೆ ಗಮನ ಹರಿಸಿಲ್ಲವೆಂದು ಆರ್ ಟಿ ನಗರದ ನಿವಾಸದ ಬಳಿ ಬೊಮ್ಮಾಯಿ ನಡೆ ವಿರುದ್ದ ರೈತರು ಆಕ್ರೋಶಗೊಂಡಿದ್ದಾರೆ. ಸಿಎಂ ಭೇಟಿ ಸಾಧ್ಯವಾಗದೇ ಇರುವುದಕ್ಕೆ ಕೋಪಗೊಂಡ ರೈತರು, ನಾವು ಎಲ್ಲೆಲ್ಲಿಂದಲೂ ಇಲ್ಲಿಗೆ ಬಂದಿದೇವೆ, ಆದರೆ ಮುಖ್ಯಮಂತ್ರಿಗಳು ನಮ್ಮ ಅಹವಾಲು ಕೇಳುತ್ತಿಲ್ಲ …

Read More »

ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ, ನನ್ನ ಸಮಯ ಬಂದೇ ಬರುತ್ತೆ: ಸಚಿವ ಸ್ಥಾನವೂ ಸಿಗದಿದ್ದಕ್ಕೆ ಬೆಲ್ಲದ್ ಬೇಸರ

ಮುಖ್ಯಮಂತ್ರಿ ರೇಸ್​ನಲ್ಲಿ ಅತ್ಯಂತ ಪ್ರಬಲವಾಗಿ ಕೇಳಿ ಬಂದ ಹೆಸರು ಅರವಿಂದ್​ ಬೆಲ್ಲದ್​​. ಧಾರವಾಡ ಕ್ಷೇತ್ರದ ಶಾಸಕ ಬೆಲ್ಲದ್​​​ ಸಿಎಂ ಆಯ್ಕೆ ವೇಳೆ ಹಲವು ಬಾರಿ ದೆಹಲಿಗೆ ಹಾರಿದ್ದು ಎಲ್ಲರ ಗಮನ ಸೆಳೆದಿತ್ತು. ಆದರೆ ಅಂತಿಮವಾಗಿ ಮುಖ್ಯಮಂತ್ರಿ ಸ್ಥಾನ ಬಸವರಾಜ ಬೊಮ್ಮಾಯಿಯವರ ಪಾಲಾಯಿತು. ನಂತರ ಬೆಲ್ಲದ್​ ಅವರನ್ನು ಡಿಸಿಎಂ ಮಾಡಲಾಗುತ್ತೆ, ಇಲ್ಲವೇ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬೆಲ್ಲಾ ನಿರೀಕ್ಷೆಗಳು ಗರಿ ಬಿಚ್ಚಿ ಹಾರಾಡಿದ್ದವು. ಆದರೆ ಕ್ಯಾಬಿನೆಟ್​ ಪಟ್ಟಿಯಲ್ಲೂ ಅರವಿಂದ್​ ಬೆಲ್ಲದ್​ ಹೆಸರು …

Read More »

ಳಿನ್‌ ಕುಮಾರ್‌ ಕಟೀಲ್‌ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

ಬೆಂಗಳೂರು: ನೂತನ ಸಚಿವ ಸಂಪುಟ ರಚನೆ ಬೆನ್ನಲ್ಲೆ ಬಿಜೆಪಿ ಕಚೇರಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭೇಟಿ ನೀಡಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಜೊತೆ ಚರ್ಚೆ ನಡೆಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತ ನನಗೂ ಒಳ್ಳೆಯ ಕಾಲ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ನಳಿನಕುಮಾರ್‌ ಕಟೀಲ್‌ ಅವರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. …

Read More »

ಮೈಸೂರು: ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ?

ಮೈಸೂರು: ಸಂಶೋಧನ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ಪ್ರಾಧ್ಯಾಪಕನೋರ್ವ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಸಂತ್ರಸ್ತೆ ಹಾಗೂ ಆರೋಪಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ರಾಮಚಂದ್ರಪ್ಪ ವಿರುದ್ಧ ಇಂಥದ್ದೊಂದು ಆರೋಪ ಕೇಳಿ ಬಂದಿದೆ. ಇವರ ಪತ್ನಿ ಇದೇ ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕಿ. ಸಂತ್ರಸ್ತೆಯು ರಾಮಚಂದ್ರಪ್ಪರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮಾಡುತ್ತಿದ್ದು, ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ …

Read More »

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸಾರ್ವಕಾಲಿಕ 54,717ಕ್ಕೆ ಏರಿಕೆ, ನಿಫ್ಟಿ ಜಿಗಿತ

ಮುಂಬಯಿ: ಮುಂಬಯಿ ಷೇರುಪೇಟೆಯ ವಹಿವಾಟು ಸತತ ಎರಡನೇ ದಿನವಾದ ಗುರುವಾರ(ಆಗಸ್ಟ್ 05) ಕೂಡಾ 123.07 ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಅಲ್ಲದೇ ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.   ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 123.07 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 54,717.24 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 35.80 ಅಂಕ …

Read More »

ಸುಳೆಭಾವಿ ಗ್ರಾಮದ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿಗೆ ಭೇಟಿ ನೀಡಿದ ಡಾ. ಸೋನಾಲಿ ಸರ್ನೋಬತ್,

ಇಂದು 2021 ಆಗಸ್ಟ್ 7ರಂದು ಜವಳಿ ದಿನವನ್ನು ಆಚರಿಸಲು ಬಿಜೆಪಿ ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾದ ವತಿಯಿಂದ ಡಾ. ಸೋನಾಲಿ ಸರ್ನೋಬತ್, ಶ್ರೀಮತಿ ಜ್ಯೋತಿ ಕುಲಕರ್ಣಿ ಮತ್ತು ಶ್ರೀಮತಿ ಚೇತನಾ ಅಗಸಗೇಕರ್ ಮತ್ತು ಕಾರ್ಯಕರ್ತೆಯರು ಸುಳೆಭಾವಿ ಗ್ರಾಮದ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿಗೆ ಭೇಟಿ ನೀಡಿದರು. ಏತನ್ಮಧ್ಯೆ ಅಂಗನವಾಡಿ ಶಿಕ್ಷಕಿಯರ ಅಗಾಧವಾದ ಕೆಲಸವನ್ನು ಕಡೆಗಣಿಸಲಾಗಿದೆ. ನಾವು ಆಶಾ ಕಾರ್ಯಕರ್ತೆಯರು ಕೆಲಸ ಮಾಡುವುದನ್ನು ಮಾತ್ರ ಗಮನಿಸುತ್ತೇವೆ.ಆದರೆ ಅಂಗನವಾಡಿಯ ಶಿಕ್ಷಕಿಯಾರು ಸಹ ಶ್ರದ್ಧೆಯಿಂದ …

Read More »

ಯಾವುದೇ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂನ್ನು ನಿರ್ಬಂಧಿಸುವ ಯೋಜನೆ ಇಲ್ಲ

ಚಂದ್ರಶೇಖರ್ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಕಾರಿ ಅಂಶಗಳ ಬಗ್ಗೆ ಬಳಕೆದಾರರರಿಂದ ವಿವಿಧ ದೂರುಗಳನ್ನು ಸರ್ಕಾರ ಸ್ವೀಕರಿಸಿದ್ದು, ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದೆ, ಸದ್ಯ ದೇಶದಲ್ಲಿ ಯಾವುದೇ ಸಾಮಾಜಿಕ ಮಾಧ್ಯ ಫ್ಲಾಟ್ ಫಾರಂಗಳನ್ನು ನಿರ್ಬಂಧಿಸುತ್ತಿಲ್ಲ ಎಂದು ಅವರು ಹೇಳಿದರು. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ದೇಶದ ರಕ್ಷಣೆ, ಭದ್ರತೆ, ಏಕತೆ ಮತ್ತು ಸಾರ್ವಭೌಮತ್ವ ವಿದೇಶಗಳೊಂದಿಗೆ ಸ್ನೇಹಪೂರ್ವಕ ಸಂಬಂಧ ಅಥವಾ ಕಾನೂನು ಹಿತದೃಷ್ಟಿಯಿಂದ ದುರುದ್ದೇಶಪೂರಿತ ಆನ್‌ಲೈನ್ …

Read More »

ಇಂದು 27 ಜನರಿಗೆ ಕೊರೋನಾ ಸೋಂಕು ಬೆಳಗಾವಿಯಲ್ಲಿ ಇಂದು ಮೂವರು ಬಲಿ

ಬೆಳಗಾವಿ: ಜಿಲ್ಲೆಯಲ್ಲಿ ಇಂದು 27 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮೂವರು ಸಾವಿಗೀಡಾಗಿದ್ದಾರೆ. ರಾಯಬಾಗದ ಇಬ್ಬರು ಹಾಗೂ ಸವದತ್ತಿಯ ಓರ್ವರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ 11, ಚಿಕ್ಕೋಡಿಯಲ್ಲಿ 8, ಗೋಕಾಕಲ್ಲಿ 2, ಅಥಣಿ, ಬೈಲಹೊಂಗಲ, ಹುಕ್ಕೇರಿ, ಖಾನಾಪುರ, ರಾಯಬಾಗಗಳಲ್ಲಿ ತಲಾ ಒಬ್ಬರು ಹಾಗೂ ಇತರೇ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

Read More »

ದೂರವಾಣಿ ಮೂಲಕ ಗೋಕಾಕ ಹಾಗೂ ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ.

  ಗೋಕಾಕ : ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಹಾನಿಯಾಗಿರುವ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ತ್ವರಿತಗತಿಯಲ್ಲಿ ಕೈಗೊಂಡು ವರದಿ ಸಲ್ಲಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಧವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಪ್ರವಾಹ ಬಾಧಿತ ಸಂಬಂಧ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆಯನ್ನು ದೂರವಾಣಿ ಮೂಲಕ ನಡೆಸಿದ ಅವರು, ಸಾರ್ವಜನಿಕ ದೂರುಗಳು ಬರದ ರೀತಿಯಲ್ಲಿ …

Read More »