Breaking News

Daily Archives: ಆಗಷ್ಟ್ 16, 2021

ಅಪ್ಘಾನಿಸ್ತಾನ ದುರಂತ: ಟೇಕಾಫ್​ ಆಗಿದ್ದ ವಿಮಾನದಿಂದ ಬಿದ್ದು ಇಬ್ಬರು ದಾರುಣ ಸಾವು

ಅಪ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಬಳಿಕ ವಿವಿಧ ದೇಶಗಳು ತಮ್ಮ ನಾಗರಿಕರ ರಕ್ಷಣೆಗೆ ಮುಂದಾಗಿದೆ. ಕಾಬೂಲ್​ನಿಂದ ಹೊರಡುತ್ತಿದ್ದ ವಿಮಾನಗಳನ್ನು ಹತ್ತಲು ಜನರ ದಂಡೇ ಹರಿದು ಬರ್ತಿದ್ದ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದವು. ಕಾಬೂಲ್​ನ ಹಮೀದ್​ ಕರ್ಜೈ ಅಂತಾರಾಷ್ಟ್ರೀಯ ವಿಮಾನದಲ್ಲಿ ಅವ್ಯವಸ್ಥೆ ಉಂಟಾದ ಹಿನ್ನೆಲೆಯಲ್ಲಿ ಎಲ್ಲಾ ನಾಗರಿಕ ವಿಮಾನಗಳನ್ನು ಸ್ಥಗಿತಗೊಳೊಸಲಾಗಿದೆ. ಇದರಿಂದ ಹತಾಶರಾಗಿದ್ದ ಇಬ್ಬರು ಪ್ರಯಾಣಿಕರು ರನ್​ವೇನಿಂದ ಟೇಕಾಫ್​ ಆಗುತ್ತಿದ್ದ ಮಿಲಿಟರಿ ವಿಮಾನದ ಚಕ್ರವನ್ನು ಹಿಡಿದುಕೊಂಡು ಹಾರಿದ್ದಾರೆ. ಮಿಲಿಟರಿ …

Read More »

ಸಿಎಂ ಭೇಟಿ ವೇಳೆ ಮೊಬೈಲ್ ನಿಷೇಧ..!

ಬೆಂಗಳೂರು,ಆ.16- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗುವ ಸಾರ್ವಜನಿಕರ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆರ್‍ಟಿನಗರದಲ್ಲಿರುವ ಅವರ ನಿವಾಸದ ಮುಂದೆ ಫಲಕವನ್ನು ಹಾಕಲಾಗಿದ್ದು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವ ಸಾರ್ವಜನಿಕರು ಮೊಬೈಲ್‍ಗಳನ್ನು ಬಳಸಬಾರದೆಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಒಂದು ವೇಳೆ ಸಾರ್ವಜನಿಕರು ಮೊಬೈಲ್ ಬಳಕೆ ಮಾಡಿದರೆ ಅಂಥವರಿಗೆ ಭೇಟಿಗೆ ಅವಕಾಶವನ್ನೇ ಕೊಡುವುದಿಲ್ಲ ಎಂದು ಎಚ್ಚರಿಸಲಾಗಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವವರು ತಮ್ಮ ಕೆಲಸ ಮುಗಿಸಿಕೊಂಡು ಹೋಗುವ ಬದಲು ಸೆಲ್ಫಿಗೆ ಮುಗಿಬೀಳುವುದು, …

Read More »

ಷ್ಟ್ರಗೀತೆ ಬಗ್ಗೆ ಕಾಮನ್​ ಸೆನ್ಸ್​ ಇಲ್ವಾ?’; ಸುದೀಪ್​ಗೆ ನೆಟ್ಟಿಗನ ನೇರ ಪ್ರಶ್ನೆ: ತಪ್ಪೊಪ್ಪಿಕೊಂಡ ಕಿಚ್ಚನ ಉತ್ತರ ಸೂಪರ್​

ರಾಷ್ಟ್ರಗೀತೆಯನ್ನು 48ರಿಂದ 52 ಸೆಕೆಂಡ್​ ಒಳಗೆ ಹಾಡಬೇಕು. ಆದರೆ ಸುದೀಪ್​ ಅವರು ಅಂದಾಜು 65 ಸೆಕೆಂಡ್​ಗಳಲ್ಲಿ ಹಾಡಿದರು. ಇದನ್ನು ಗಮನಿಸಿದ ನೆಟ್ಟಿಗರೊಬ್ಬರು ಕೊಂಚ ಖಾರವಾಗಿ ಕಮೆಂಟ್​ ಮಾಡಿದ್ದಾರೆ. ಆ.15ರಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು (75th Independence Day) ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ (National Anthem) ಹಾಡಿ, ಸಿಹಿ ಹಂಚುವ ಮೂಲಕ ಆಚರಣೆ ಜೋರಾಗಿತ್ತು. ಅನೇಕ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು. ನಟ ಕಿಚ್ಚ ಸುದೀಪ್​ (Kichcha …

Read More »

ಪ್ರಯಾಣಿಕರಿಗೆ ನೆಕ್ಲೇಸ್ ಮರಳಿಸಿದ ಸಾರಿಗೆ ಸಿಬ್ಬಂದಿ

ಕಲಬುರ್ಗಿ: ವಿಜಯಪುರ ಜಿಲ್ಲೆಯ ಗಬಸಾವಳಗಿ ಗ್ರಾಮದಿಂದ ಕಲಬುರ್ಗಿಗೆ ಬಂದ ಪ್ರಯಾಣಿಕರೊಬ್ಬರು ಚಿನ್ನದ ಸರವಿದ್ದ ಬ್ಯಾಗ್ ಬಿಟ್ಟು ಹೋಗಿದ್ದನ್ನು ಗಮನಿಸಿದ ಸಾರಿಗೆ ಸಂಸ್ಥೆ ಸಿಬ್ಬಂದಿ ಅದನ್ನು ಪ್ರಯಾಣಿಕರಿಗೆ ವಾಪಸ್‌ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ವಿಜಯಪುರದ ಯರಗಲ್ ಗ್ರಾಮದ ಮಹೇಶ ಬಡಿಗೇರ ಅವರು ಭಾನುವಾರ ವಿಜಯಪುರ-ಕಲಬುರ್ಗಿ ಮಧ್ಯೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ಬಸ್‌ ಕಾರ್ಯಾಚರಣೆ ಮುಗಿಸಿ ಘಟಕ 1ಕ್ಕೆ ವಾಪಸಾದಾಗ ಚಾಲಕ ರಾಘವೇಂದ್ರ ಹಾಗೂ ನಿರ್ವಾಹಕ ಖಂಡೋಬಾ ಅವರು ಆ …

Read More »

ಕಾರ್ ಮೇಲೆ ಒಂಟಿ ಸಲಗ ದಾಳಿ, ನಾಲ್ವರಿಗೆ ಗಾಯ, ಓರ್ವ ಗಂಭೀರ

ಬೆಂಗಳೂರು: ಮಾರುತಿ ಓಮ್ನಿ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂಟಿ ಸಲಗ ದಾಳಿಯಿಂದ ಒಬ್ಬನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮದ ಬಳಿ ಒಂಟಿ ಸಲಗ ದಾಳಿ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ಒಂಟಿ …

Read More »

ಶಾಲೆ ಆರಂಭಕ್ಕೆ ಹೊಸ ಗೈಡ್ ಲೈನ್ ಪ್ರಕಟ

ಬೆಂಗಳೂರು: ಆಗಸ್ಟ್ 23ರಿಂದ ಶಾಲೆಗಳು ಆರಂಭವಾಗುತ್ತಿದ್ದು, ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಗಸ್ಟ್ 23ರಿಂದ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಲಿದ್ದು ಅರ್ಧ ದಿನ ಮಾತ್ರ ತರಗತಿಗಳು ನಡೆಯಲಿವೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಗೈಡ್ ಲೈನ್ ಪ್ರಮುಖಾಂಶಗಳು: ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10-1:30 ಗಂಟೆಯವರೆಗೆ ತರಗತಿಗಳು ನಡೆಯಲಿವೆ ಶನಿವಾರ ಬೆಳಿಗ್ಗೆ 10ರಿಂದ 12:30ವರೆಗೆ ತರಗತಿಗಳು ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ …

Read More »

ಗೋಕಾಕ : ಕಲ್ಯಾಣಾ ಟೈಕ್ಸ್ ಟೈಲ್ಸ್ ಬಟ್ಟೆಗಳ ಮಾರಾಟ ಮಳಿಗೆಗೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ

    ಗೋಕಾಕ : ಲೋಳಸೂರು ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಕಲ್ಯಾಣಾ ಟೈಕ್ಸ್ ಟೈಲ್ಸ್ ಬಟ್ಟೆಗಳ ಮಾರಾಟ ಮಳಿಗೆಗೆ ಜನರು ಒಮ್ಮೆ ಭೇಟಿ ನೀಡಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.   ತಾಲ್ಲೂಕಿನ ಲೋಳಸೂರು ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಕಲ್ಯಾಣಾ ಟೆಕ್ಸ್ ಟೈಲ್ಸ್ ಬಟ್ಟೆ ಮಾರಾಟ ಮಳಿಗೆಗೆ ಸೋಮವಾರ ಭೇಟಿ ನೀಡಿ, ವೀಕ್ಷಿಸಿದರು. ಬಳಿಕ ಕಲ್ಯಾಣ ಟೆಕ್ಸ್ ಟೈಲ್ಸ್ ಮಳಿಗೆ ವತಿಯಿಂದ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸನ್ಮಾನಿಸಿ, …

Read More »

ನಾನು ಸಿಎಂ ಆಗಿದ್ರೆ ಲಾಕ್ಡೌನ್ ವೇಳೆ 10 ಸಾವಿರ ಕೊಡ್ತಿದ್ದೆ ಸಿದ್ದರಾಮಯ್ಯ

ಬೆಂಗಳೂರು(ಆ.16): ನಾನು ಸಿಎಂ ಆಗಿದ್ದರೆ ಲಾಕ್ಡೌನ್ ವೇಳೆ 10ಸಾವಿರ ಕೊಡುತ್ತಿದ್ದೆ. ಯಡಿಯೂರಪ್ಪ ಹಾಗೂ ಅವರ ಮಗ ಲೂಟಿ ಹೊಡೆದರು. ಆದ್ರೆ ಕಣ್ಣೀರಿನಲ್ಲಿ ಕೈತೊಳೆಯುವ ಜನರಿಗೆ ಹಣ ಕೊಡಲಿಲ್ಲ. ಕೆಲಸವಿಲ್ಲದೆ ಪರದಾಡುವ ಜನರಿಗೆ ಸಹಾಯ ಮಾಡಲಿಲ್ಲ ಎಂದು ವಿಜಯನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿದ್ದಾರೆ. ಅವನ್ಯಾವನೋ ಸಿ.ಟಿ.ರವಿ ಅಂತ ಇದ್ದಾನೆ. ಅವನಿಗೆ ಮನುಷ್ಯತ್ವವೂ ಇಲ್ಲ. ಬಡವರ ಬಗ್ಗೆಯೂ ಗೊತ್ತಿಲ್ಲ ಅನ್ನಪೂರ್ಣೇಶ್ವರಿ ಹೆಸರು ಇಡಬೇಕು ಎನ್ನುತ್ತಾನೆ. …

Read More »

ಚಿಕಿತ್ಸೆಗೆಂದು ವೃದ್ಧಾಶ್ರಮ ಸೇರಿದ್ದ ವೃದ್ಧ ಮಹಿಳೆ ನಿಗೂಢ ಸಾವು

ಬೆಂಗಳೂರು, ಆ. 16: ವೃದ್ಧರನ್ನು ಪೋಷಣೆ ಮಾಡುವ ಹೆಸರಿನಲ್ಲಿ ದುಡ್ಡಿಗಾಗಿ ಹುಟ್ಟಿಕೊಂಡಿರುವ ಅನಾಥಾಶ್ರಮಗಳಲ್ಲಿ ಮಹಾ ದುರಂತಗಳಲ್ಲಿ ನಡೆಯುತ್ತಿವೆ. ವೃದ್ಧರನ್ನು ಪೋಷಣೆ ಮಾಡುವ ಹೆಸರಿನಲ್ಲಿ ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿದ್ದವು. ಇದೀಗ ವೃದ್ಧ ಮಹಿಳೆಯೊಬ್ಬಳು ಅನಾಥಾಶ್ರಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ರಾಮಚಂದ್ರ ಎಂಬುವರ ತಾಯಿ ಕಮಲಮ್ಮ ಮರೆವು ಕಾಯಿಲೆಯಿಂದ ಬಳಲುತ್ತಿದ್ದರು. ದಿನವೂ ಆಕೆಯನ್ನು ಹಾರೈಕೆ ಮಾಡಲಾಗದ ಕಾರಣದಿಂದ ಅವರು ನಾಗರಭಾವಿಯಲ್ಲಿರುವ ಉಸುರು ಫೌಂಡೇಷನ್ ವೃದ್ಧರ …

Read More »

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಬಿಜೆಪಿ ಮಹತ್ವದ ಸಭೆ

ಬೆಳಗಾವಿ, ಆಗಸ್ಟ್ 16; ಕರ್ನಾಟಕ ಬಿಜೆಪಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸಿದ್ಧತೆಯನ್ನು ಬಿರುಸಿನಿಂದ ಮಾಡುತ್ತಿದೆ. ಸೋಮವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಿದ್ದು,3/9/2021ರಂದು ಮತದಾನ ನಡೆಯಲಿದೆ. ಮಂಗಳವಾರ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ವಿಶೇಷ ಸಭೆಯನ್ನು ನಡೆಸಿದರು. ಈ ಮೂಲಕ ಚುನಾವಣೆ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಚುನಾವಣೆ ಮೇಲೆ ಹೇಗೆ ಪ್ರಭಾವ ಬೀರಲಿದ್ದಾರೆ? ಎಂದು ಕಾದು …

Read More »