Breaking News
Home / 2021 / ಜುಲೈ / 27 (page 4)

Daily Archives: ಜುಲೈ 27, 2021

ಬ್ರಾಹ್ಮಣ ಸಮುದಾಯದ ನಾಯಕರನ್ನು ಸಿಎಂ ಮಾಡುವತ್ತ ಬಿಜೆಪಿ ಹೈಕಮಾಂಡ್ ಒಲವು?

ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನಾಗಿ ಬ್ರಾಹ್ಮಣ ಸಮಾಜದ ಓರ್ವ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಉತ್ಸುಕವಾಗಿದೆ ಎಂದು ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧಿ ಬಣದಲ್ಲಿ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಕೇಂದ್ರ ಸಚಿವ, ಸಂಸದ ಪ್ರಲ್ಹಾದ ಜೋಶಿ ಬದಲು ಬಿ.ಎಲ್.ಸಂತೋಷ್ ಅವರ ಬಗ್ಗೆ ಹೈಕಮಾಂಡ್​ಗೆ ಹೆಚ್ಚಿನ ಒಲವಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಬ್ರಾಹ್ಮಣ ಸಮುದಾಯದವರು ಸಿಎಂ ಆಗಿ ಆಯ್ಕೆಯಾದರೆ ಎಸ್​​​​​ಟಿ ಸಮುದಾಯದವರು ಉಪ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಹಾಗಾದಲ್ಲಿ ವಾಲ್ಮೀಕಿ …

Read More »

ಪ್ರವಾಹದ ಹೊಡೆತಕ್ಕೆ ಮನೆ ಬಾಗಿಲಿಗೆ ಬಂದ ಮೊಸಳೆ ಮರಿ

ದಾವಣಗೆರೆ: ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಮೊಸಳೆ ಮರಿಯೊಂದು ಮನೆಗೆ ಬಂದಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ತುಂಗಭದ್ರಾ ನದಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ನೀರಿನ ಪ್ರಮಾಣ ಹೆಚ್ಚಿದಂತೆ ದಡಕ್ಕ ಬಂದ ಮೊಸಳೆ ಮರಿಯೊಂದು ನದಿ ದಡದಲ್ಲಿದ್ದ ರೈತನ ಮನೆಗೆ ಬಂದು ಪರದಾಡಿದೆ. ತಕ್ಷಣ ಮೊಸಳೆ ಮರಿಯನ್ನು ಗ್ರಾಮಸ್ಥರು ರಕ್ಷಿಸಿದ್ದು, ಮಾವಿನ …

Read More »

ಜೊಲ್ಲೆ ಮೊಟ್ಟೆ ಡೀಲ್; ರಾಜ್ಯದ ವಿವಿಧೆಡೆ ಪ್ರತಿಭಟನೆ

ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್ ಪ್ರಕರಣಕ್ಕ ಸಂಬಂಧಿಸಿ ಇಂದು ಚಿಕ್ಕೋಡಿ ಪಟ್ಟಣದಲ್ಲಿ ಯೂಥ್ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು, ಮೊಟ್ಟೆ ಭ್ರಷ್ಟಾಚಾರದಲ್ಲಿ ತೊಡಗಿದ ಸಚಿವೆಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಮೊಟ್ಟೆ ಕಳ್ಳಿ ಶಶಿಕಲಾ ಜೊಲ್ಲೆಗೆ ಧಿಕ್ಕಾರ ಎಂದು ಕೂಗಿದ ಕಾರ್ಯಕರ್ತರು ಜೊಲ್ಲೆ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.     ಕಲಬುರಗಿ: …

Read More »

ಯಡಿಯೂರಪ್ಪ ಅವರನ್ನು ಹೆದರಿಸಿ ರಾಜೀನಾಮೆ ಪಡೆದಿದ್ದಾರೆ: ಸಿದ್ದರಾಮಯ್ಯ

ಬೆಳಗಾವಿ: ‘ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್‌ನವರು ಹೆದರಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಇಲ್ಲಿನ ಪ್ರವಾಸಿಮಂದಿರದಲ್ಲಿ ಸೋಮವಾರ ರಾತ್ರಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಸ್ವಇಚ್ಛೆಯಿಂದ ರಾಜೀನಾಮೆ ನೀಡಿಲ್ಲ’ ಎಂದರು. ‘2019ರಲ್ಲಿ ಪ್ರವಾಹ ಬಂದಾಗ ಸಚಿವ ಸಂಪುಟ ಇರಲಿಲ್ಲ. ಈ ಬಾರಿ ಪ್ರವಾಹ ಬಂದಾಗ ಮುಖ್ಯಮಂತ್ರಿಯೇ ರಾಜೀನಾಮೆ ನೀಡಿದ್ದಾರೆ. ಇದು ಕರ್ನಾಟಕದ ದುರ್ದೈವವೆ ಸರಿ. ಯಡಿಯೂರಪ್ಪ ಕೇರ್‌ ಟೇಕರ್‌ …

Read More »

ಯಡಿಯೂರಪ್ಪ ಅವರ ಹೆಸರು, ಅಧಿಕಾರ ಎಲ್ಲವೂ ಪುತ್ರ ವಿಜಯೇಂದ್ರನಿಂದ ಹಾಳಾಯಿತು: ಎಚ್‌.ವಿಶ್ವನಾಥ್‌ :

ಬೆಂಗಳೂರು: ಯಡಿಯೂರಪ್ಪ ಅವರ ಹೆಸರು, ಅಧಿಕಾರ ಎಲ್ಲವೂ ಪುತ್ರ ವಿಜಯೇಂದ್ರನಿಂದ ಹಾಳಾಯಿತು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು. ಸೋಮವಾರ ಸಿಎಂ ರಾಜೀನಾಮೆ ಬಳಿಕ ಮಾತನಾಡಿದ ಅವರು, ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ. ವಿಜಯೇಂದ್ರ ಹಾಗೂ ಮೊಮ್ಮಕ್ಕಳು ಎಲ್ಲವನ್ನೂ ಹಾಳು ಮಾಡಿಬಿಟ್ಟರು. ಯಡಿಯೂರಪ್ಪ ಹೆಸರು, ಅಧಿಕಾರ, ರಾಜ್ಯದ ಅಭಿವೃದ್ಧಿ ಎಲ್ಲವೂ ಅವರ ಮಗನಿಂದ ಹಾಳಾಯಿತು. ಭ್ರಷ್ಟಾಚಾರದಿಂದಾಗಿಯೇ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಭ್ರಷ್ಟಾಚಾರಕ್ಕೆ ಅವರ ಮನೆಯೇ ಮೂಲವಾಯಿತು. ಅದಕ್ಕೆ …

Read More »

ನೂತನ ‘ಸಂಪುಟ ರಚನೆ’ಯಲ್ಲಿ ಯಾರು ಇನ್.? ಯಾರು ಔಟ್.?

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ( BS Yediyurappa Resignation ) ನೀಡುತ್ತಿದ್ದಂತೇ, ರಾಜ್ಯಪಾಲರು ಯಡಿಯೂರಪ್ಪ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ.. ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾಗಿದ್ದಂತ ಸಚಿವ ಸಂಪುಟ ವಿಸರ್ಜನೆಗೊಂಡಿದೆ. ಇನ್ನೇನಿದ್ದರೂ ನೂತನ ಸಿಎಂ, ನೂತನ ಸಚಿವ ಸಂಪುಟ ರಚನೆಯಾಗಬೇಕಿದೆ. ಹಾಗಾದ್ರೇ.. ಕರ್ನಾಟಕದ ನೂತನ ಮುಖ್ಯಮಂತ್ರಿ ( Karnataka New Chief Minister ) ನೇಮಕಗೊಂಡು, ಸಚಿವ ಸಂಪುಟ ( Karnataka Cabinet ) ರಚನೆಯಾದ್ರೇ …

Read More »

ಸ್ವಾತಂತ್ರ್ಯೋತ್ಸವ ಆಚರಣೆಗೆ ವಾಯು ಧಾಳಿ ಸಾಧ್ಯತೆ ; ರಾಜ್ಯಗಳಿಗೆ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

ದೆಹಲಿ – ಮುಂದಿನ ಆಗಸ್ಟ್‌ 15 ರಂದು ದೇಶವು ಸಂಭ್ರಮ ಸಡಗರದಿಂದ ಸ್ವಾತಂತ್ರ್ಯದಿನಾಚರಣೆ ಆಚರಣೆಗೆ ಉಗ್ರರ ಕರಿನೆರಳು ಬಿದ್ದಿದೆ. ಆಚರಣೆಯ ಸಂದರ್ಭದಲ್ಲಿ ವಾಯುಮಾರ್ಗದ ಸಂಭಾವ್ಯ ಧಾಳಿಯ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು ಭದ್ರತೆಯ ದೃಷ್ಟಿಯಿಂದ ಅಗತ್ಯವಾದ ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದೆ. ಕೇಂದ್ರವು ನೀಡಿರುವ ಸೂಚನೆಯ ಪ್ರಕಾರ ಡ್ರೋನ್‌ ಗಳಿಂದ ಧಾಳಿ ನಡೆಯುವ ಸಾದ್ಯತೆ ಇದೆ ಎನ್ನಲಾಗಿದೆ. ಕಳೆದ …

Read More »

ಐಪಿಎಸ್​ ಅಧಿಕಾರಿ ಚನ್ನಣ್ಣನವರ್ ನನ್ನಣ್ಣ ಎಂದು ಭಕ್ತರಿಂದ ಲಕ್ಷ ಲಕ್ಷ ಲಪಟಾಯಿಸಿ ಎಸ್ಕೇಪ್​ ಆದ ಅರ್ಚಕ!

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ನನ್ನ ಅಣ್ಣ, ಬೇಕಿದ್ದರೆ ಈ ಫೋಟೋ ನೋಡಿ. ನಾನು ಪ್ರಭಾವಿ ವ್ಯಕ್ತಿ. ಆಶ್ರಯ ಯೋಜನೆ ಅಡಿ ಮನೆ ಬೇಕಿದ್ದರೆ ಇಷ್ಟು ಲಕ್ಷ ರೂಪಾಯಿ ಕೊಡಿ, ಅಣ್ಣನ ಇನ್​ಫ್ಲುಯೆನ್ಸ್​ ಬಳಸಿ ಮನೆ ಕೊಡಿಸುವೆ ಎಂದ ಅರ್ಚಕನೊಬ್ಬ ದೇವಾಲಯಕ್ಕೆ ಬರುವ ಭಕ್ತರಿಗೆ ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉತ್ತರಹಳ್ಳಿಯ ಅರ್ಚಕ ಮಹಾಬಲ ಅಲಿಯಾಸ್ ಮಂಜನಾಥ್ ವಂಚನೆ ಮಾಡಿದ ಆರೋಪಿ. ಉತ್ತರಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ …

Read More »

ಹಳಿ ಮೇಲೆ ಮುಂಡ, ಲಾರಿಯಲ್ಲಿ ರುಂಡ ಪತ್ತೆಯಾದ ಪ್ರಕರಣ: ಚಾಲಕ ಬಂಧನ

ಬೆಂಗಳೂರು: ರೈಲ್ವೆ ಹಳಿಯ ಮೇಲೆ ವೃದ್ಧೆಯ ಮೃತದೇಹ ಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ತನಿಖೆಯ ವೇಳೆ ವೃದ್ಧೆಯನ್ನು ಕೊಲೆ ಮಾಡಿ ಮೃತ ದೇಹವನ್ನು ರೈಲ್ವೆ ಟ್ರಾಕ್ ಮೇಲೆ ಹಾಕಿರುವುದು ಬೆಳಕಿಗೆ ಬಂದಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಬಾಲಚಂದ್ರನನ್ನು ಸದ್ಯ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಕೊಲೆ ಮಾಡಲು ಬಾಲಚಂದ್ರನಿಗೆ ಸಹಕರಿಸಿದ ಆರೋಪಿ ಲತಾ ಪರಾರಿಯಾಗಿದ್ದು, ಆಕೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಮಂಡ್ಯದ ನಿಂಗಮ್ಮನನ್ನು ಬಾಲಚಂದ್ರ ಮತ್ತು …

Read More »

ಸಬ್‌ ಇನ್ಸ್‌ಪೆಕ್ಟರ್‌ ವಿರುದ್ದ ಅತ್ಯಾಚಾರ ಮೊಕದ್ದಮೆ

ಮೈಸೂರು: ರೌಡಿಶೀಟರ್ ಹಾಗೂ ಸ್ನೇಹಿತರೊಡನೆ ಹಾರಂಗಿ ಜಲಾಶಯದ ಗೆಸ್ಟ್ ಹೌಸ್‌ನಲ್ಲಿ ಪಾರ್ಟಿ ಮಾಡಿ ಅಮಾನತು ಶಿಕ್ಷೆಗೊಳಗಾಗಿದ್ದ ಸಬ್ ಇನ್ಸ್‌ಪೆಕ್ಟರ್ ಪಿ.ಲೋಕೇಶ್ ಮೇಲೆ ಇದೀಗ ಅತ್ಯಾಚಾರದ ಆರೋಪ ಎದುರಾಗಿದೆ. ಯುವತಿಯನ್ನು ಪರಿಚಯ ಮಾಡಿಕೊಂಡ ಲೋಕೇಶ್, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ವಂಚಿಸಿರುವ ಸಂಬಂಧ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಗಾಯತ್ರಿಪುರಂ ನಿವಾಸಿಯಾದ ಯುವತಿ ಲೋಕೇಶ್ ವಿರುದ್ಧ ಜುಲೈ 16 ರಂದು ದೂರು ದಾಖಲಿಸಿದ್ದಾರೆ. ದೂರು ದಾಖಲಾದಾಗಿನಿಂದ ಲೋಕೇಶ್ ತಲೆಮರೆಸಿಕೊಂಡಿದ್ದಾರೆ …

Read More »