Breaking News
Home / 2021 / ಜೂನ್ (page 52)

Monthly Archives: ಜೂನ್ 2021

ಸಿದ್ದರಾಮಯ್ಯ, ಜಮೀರ್, ದಿಗ್ವಿಜಯ ಸಿಂಗ್ ಪಾಕಿಸ್ತಾನದ ಪರ ಇರುವ ಜನ : ಈಶ್ವರಪ್ಪ

ಶಿವಮೊಗ್ಗ : ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೂನ್ 16 ರಿಂದ ಮೂರು ದಿನ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಕ್ಯಾಬಿನೆಟ್ ಸಚಿವರು, ಕೋರ್ ಕಮಿಟಿ ಸದಸ್ಯರು, ಶಾಸಕರ ಜೊತೆ ಸಭೆ ನಡೆಸಲಿದ್ದಾರೆ. ಶಾಸಕರು ತಮ್ಮ ಅಭಿಪ್ರಾಯ ಹೇಳಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಹೇಳುವವರು, ಕೇಳುವವರು ಇದ್ದಾರೆ, ಇದುವೆ ಬಿಜೆಪಿ ವಿಶೇಷತೆ ಎಂದು ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪರಿಸ್ಥಿತಿ ಈಗ ಹೇಗಾಗಿದೆ? ಎಂಬ ವಿಚಾರವಾಗಿ ಮಾತನಾಡಿದ ಅವರು, …

Read More »

ಗಂಡನ ಕೊಲೆಗೈದು ಮರ್ಮಾಂಗ ಫ್ರೈ ಮಾಡಿ ವಿಕೃತಿ ಮೆರೆದ ಪತ್ನಿ

ಬ್ರೆಜಿಲ್ : ಬ್ರೆಜಿಲ್​ನ ಸಾವೊ ಗೊನ್ಕಾಲೊ ನಗರದಲ್ಲಿ ಮಹಿಳೆಯೊಬ್ಬಳ ವಿಕೃತಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಕ್ರಿಸ್ಟಿನಾ ರೊಡ್ರಿಗಸ್ ಮಸಾಡೊ ಎಂಬಾಕೆ ತನ್ನ ಗಂಡ ಆಂಡ್ರೆ ಎಂಬಾತನ ಕೊಂದು ಆತನ ಮರ್ಮಾಂಗವನ್ನೇ ಕಟ್ ಮಾಡಿ ಫ್ರೈಮಾಡಿದ್ದಾಳೆ. ದಂಪತಿ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇತ್ತು ಎನ್ನಲಾಗಿದೆ.. ಅಲ್ಲದೇ ದಂಪತಿಗೆ 8 ವರ್ಷದ ಮಗ ಹಾಗೂ 5 ವರ್ಷದ ಮಗಳಿದ್ದಾಳೆ. ಇವರು ಮದುವೆಯಾಗಿ ಸುಮಾರು 10 ವರ್ಷಗಳಾದ ನಂತರ ಬೇರೆಯಾಗಿ , ಮತ್ತೆ 2 ವರ್ಷಗಳ …

Read More »

ತಮಿಳುನಾಡಿನಲ್ಲಿ’ಮಮತಾ ಬ್ಯಾನರ್ಜಿʼಯನ್ನು ಮದುವೆಯಾದ ‘ಸೋಶಿಯಲಿಸಂʼ

ಚೆನ್ನೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಡ ಪಕ್ಷಗಳೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದಿದ್ದರೂ, ಮಮತಾ ಬ್ಯಾನರ್ಜಿ ಎಂಬ ಹೆಸರಿನ ಯುವತಿಯನ್ನು ಸೋಶಿಯಲಿಸಂ ಹೆಸರಿನ ಯುವಕನೋರ್ವ ಮದುವೆಯಾದ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಹೆಸರಿನ ಕಾರಣದಿಂದಾಗಿ ಈ ಮದುವೆ ವಿಚಾರ ರಾಷ್ಟ್ರಾದ್ಯಂತ ಸುದ್ದಿಯಾಗಿದೆ. ವಧು ಪಿ. ಮಮತಾ ಬ್ಯಾನರ್ಜಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಕುಟುಂಬದಿಂದ ಬಂದ ವಧುವಿನ ಹೆಸರನ್ನು ಈಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿರುವ …

Read More »

ಜೂ.17 ರವರೆಗೆ ಕರ್ನಾಟಕದಲ್ಲಿ ಭಾರೀ ‘ಮಳೆ’ ಮುನ್ಸೂಚನೆ ನೀಡಿದ ‘ಹವಾಮಾನ ಇಲಾಖೆ’

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿ ದ್ದು, ಇದೀಗ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇನ್ನೂ 4 ದಿನ ಜೂನ್ 17 ರವರೆಗೆ ಭಾರೀ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ( ಜೂ.13) ಐದು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರದಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, …

Read More »

ಮುಂಗಾರು ಮಳೆಯ ಅಬ್ಬರ : ಮತ್ತೆ ಜೀವ ಪಡೆದುಕೊಂಡ ಜೋಗ ಜಲಪಾತ

ಸಾಗರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಾನ್ಸೂನ್ ಮಳೆಯ ಹಿನ್ನೆಲೆಯಲ್ಲಿ ತಾಲೂಕಿನ ಜೋಗ ಜಲಪಾತ ಮತ್ತೆ ಜೀವಕಳೆ ಪಡೆಯಲಾರಂಭಿಸಿದೆ. ಜಲಪಾತದ ರಾಜಾ, ರಾಣಿ, ರೋರರ್, ರಾಕೆಟ್ ಭಾನುವಾರದಂದು ಬೋರ್ಗರೆಯುತ್ತ ಧುಮುಕುತ್ತಿರುವುದು ಕಂಡುಬಂದಿತು. ಕೋವಿಡ್ ಲಾಕ್‌ಡೌನ್ ಕಾರಣದಿಂದ ಪ್ರವಾಸಿಗರಿಗೆ ದರ್ಶನ ಅವಕಾಶ ಮಾತ್ರ ಲಭ್ಯವಾಗಲಿಲ್ಲ.

Read More »

ಸಿದ್ದುಗೆ ಬಾಗಲಕೋಟೆಯಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ ಮಾಜಿ ಸಚಿವ ಮೇಟಿ

ಬಾಗಲಕೋಟೆ : ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿದ ಸಿದ್ದರಾಮಯ್ಯ ಅವರು, ರಾಜ್ಯದ 224 ಕ್ಷೇತ್ರಗಳಲ್ಲಿ ಯಾವುದೇ ಭಾಗದಿಂದ ಸ್ಪರ್ಧಿಸಲು ಸಮರ್ಥರು. ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ, ಈ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಎಚ್.ವೈ. ಮೇಟಿ ಮನವಿ ಮಾಡಿದ್ದಾರೆ. ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು, ಕಳೆದ ಬಾರಿ …

Read More »

19 ಜಿಲ್ಲೆಗಳಲ್ಲಿ ನಾಳೆಯಿಂದ ಏನೆಲ್ಲ ಲಭ್ಯ, ಏನೆಲ್ಲ ಅಲಭ್ಯ ,ನಾಳೆಯಿಂದ 19 ಜಿಲ್ಲೆಗಳು ಅನ್ ಲಾಕ್

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯಾದ್ಯಂತ ಜಾರಿಯಾಗಿದ್ದ ಲಾಕ್ ಡೌನ್ ನಾಳೆಯಿಂದ 19 ಜಿಲ್ಲೆಗಳಲ್ಲಿ ತೆರವುಗೊಳ್ಳಲಿದ್ದು, ಅನ್ ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಆದರೆ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಸೋಂಕಿತರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಾದ ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಮುಂದುವರೆಯಲಿದೆ. …

Read More »

ಕೊರೊನಾದಿಂದ ಸಾವನ್ನಪ್ಪಿದ ತಂದೆಯ ಅಂತ್ಯಕ್ರಿಯೆ ಮಾಡಿದ ಪುತ್ರಿಯರು

ದಾವಣಗೆರೆ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಕುಟುಂಬಸ್ಥರು ಅಂಬುಲೆನ್ಸ್ ನಲ್ಲೇ ಬಿಟ್ಟುಹೋಗುವ ಪ್ರಕರಣಗಳನ್ನು ನೋಡಿದ್ದೇವೆ. ಕೆಲವರು ಅಪ್ಪನ ಹಣ ಬೇಕು, ಅಪ್ಪ ಬೇಡ ಎಂದವರೂ ಇದ್ದಾರೆ. ಇಂತಹವರ ಮಧ್ಯೆ ಕೋವಿಡ್ ನಿಂದ ಮೃತರಾದ ತಂದೆಯ ಶವದ ಅಂತ್ಯಕ್ರಿಯೆಯನ್ನು ಇಬ್ಬರು ಹೆಣ್ಣುಮಕ್ಕಳು ಮಾಡಿ ಜವಾಬ್ದಾರಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಗಾಂಧಿ ವೃತ್ತದಲ್ಲಿರುವ ಶಾಸ್ತ್ರೀ ಬೇಕರಿ ಮಾಲೀಕರಾದ ಶ್ರೀಕಂಠ ಅವರು ಕೋವಿಡ್ ನಿಂದ ಬಾಪೂಜಿ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಅವರ ಇಬ್ಬರು …

Read More »

ಕೇವಲ 2 ರೂ.ಗೆ ಸರ್ಜಿಕಲ್ ಮಾಸ್ಕ್

ಹುಬ್ಬಳ್ಳಿ: ಇಂದಿನ ಕೊರೊನಾ ಪರಿಸ್ಥಿತಿಯಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಆದರೆ ಜನ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಸುಲಭವಾಗಿ ಮಾಸ್ಕ್ ಸಿಗಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಮೊದಲ ಭಾರಿಗೆ ಸ್ವಯಂಚಾಲಿತ ಮಾಸ್ಕ್ ವೆಂಡಿಂಗ್ ಮಷೀನ್ ನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುತ್ತಿದೆ. ಈ ಮೂಲಕ ಕೇವಲ 2 ರೂ.ಗೆ ಸರ್ಜಿಕಲ್ ಮಾಸ್ಕ್ ಸಿಗಲಿದೆ. ದೇಶದಲ್ಲಿ ಚೆನ್ನೈ ಬಳಿಕ ಇತಂಹದ್ದೊಂದು ಪ್ರಯೋಗವನ್ನು ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆ ಅನುಷ್ಕಾನಗೊಳಿಸಿದೆ. 20 ಸಾವಿರ ರೂಪಾಯಿ ವೆಚ್ಚದ …

Read More »

ಗಂಡನನ್ನು ತೊರೆದು ಪ್ರೀತಿಸಿದವನ ಜೊತೆ ರೈಲಿನಲ್ಲಿ ಮದುವೆಯಾದ ಯುವತಿ

ಪಾಟ್ನಾ: ಯುವ ಪ್ರೇಮಿಗಳಿಬ್ಬರು ಚಲಿಸುತ್ತಿದ್ದ ರೈಲಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಬಿಹಾರಿನಲ್ಲಿ ನಡೆದಿದೆ. ಬಿಹಾರದ ಸುಲ್ತಾನ್​ಗಂಜ್ ಪ್ರದೇಶದ ಭಿರ್ ಕುರ್ದ್ ಎಂಬ ಗ್ರಾಮದ ನಿವಾಸಿ ಆಶು ಕುಮಾರ್ ಹಾಗೂ ಅನು ಕುಮಾರಿ ಹೀಗೆ ವಿಭಿನ್ನವಾಗಿ ಮದುವೆಯಾದ ಪ್ರೇಮ ಪಕ್ಷಿಗಳು. ಹಲವು ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಹುಡುಗಿ ಮನೆಯವರಿಗೆ ಗೊತ್ತಾಗಿತ್ತು. ಹೀಗಾಗಿ ತರಾತುರಿಯಲ್ಲಿ ಕಿರಣಪುರ್ ಹಳ್ಳಿಯ ಬೇರೊಬ್ಬನ ಜೊತೆ ಕಳೆದ ಎರಡು ತಿಂಗಳ ಹಿಂದ ಮದುವೆ …

Read More »