Breaking News
Home / 2021 / ಜೂನ್ / 26 (page 3)

Daily Archives: ಜೂನ್ 26, 2021

ಪ್ರಧಾನಮಂತ್ರಿ ಆವಾಸ್‌ ಯೋಜನೆ : 80 ಸಾವಿರ ಬಹುಮಹಡಿ ಮನೆಗಳಿಗೆ ಸೀಮಿತ : ವಿ.ಸೋಮಣ್ಣ

\: ಪ್ರಧಾನಮಂತ್ರಿ ಅವಾಸ್‌ ಯೋಜನೆಯಡಿ ಬಡ ಜನರಿಗೆ ವಿತರಿಸಲು ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ಮಾಣ ಮಾಡುತ್ತಿರುವ ಒಂದು ಲಕ್ಷ ಬಹುಮಹಡಿ ಮನೆಗಳ ಯೋಜನೆ 80 ಸಾವಿರಕ್ಕೆ ಸೀಮಿತಗೊಳ್ಳಲಿದೆ. ಜಮೀನು ಕೊರತೆ ಹಿನ್ನೆಲೆಯಲ್ಲಿ ಒಂದು ಲಕ್ಷ ಮನೆಗಳ ಬದಲಿಗೆ 80 ಸಾವಿರ ಮನೆ ಮಾತ್ರ ನಿರ್ಮಾಣವಾಗಲಿದೆ. ಆಗಸ್ಟ್‌ 15 ರೊಳಗೆ 5 ಸಾವಿರ ಮನೆಗಳು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ವಿಕಾಸಸೌಧಲ್ಲಿ ಶುಕ್ರವಾರ ರಾಜೀವ್‌ಗಾಂಧಿ ವಸತಿ …

Read More »

ಮುಂದಿನ ಸಿ.ಎಂ. ಚರ್ಚೆ ನೇಣು ಹಾಕಿಕೊಂಡಂತೆ: ಕಾಗೋಡು ತಿಮ್ಮಪ್ಪ

ಸಾಗರ: ‘ರಾಜ್ಯದ ಮುಂದಿನ ಸಿ.ಎಂ. ಯಾರು ಎಂದು ಕಾಂಗ್ರೆಸ್ ನಾಯಕರು ಈಗಲೇ ಚರ್ಚಿಸುವುದು ನೇಣು ಹಾಕಿಕೊಂಡಂತಾಗಲಿದೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದಿನ ವಿಧಾನಸಭೆ ಚುನಾವಣೆ ಬರುವವರೆಗೂ ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಕಾಂಗ್ರೆಸ್ ಹೋರಾಟ ನಡೆಸಬೇಕೇ ಹೊರತು, ಈಗಲೇ ಮುಂದಿನ ಸಿ.ಎಂ. ಯಾರು ಎಂದು ಚರ್ಚಿಸುವುದು ಸಾಧುವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

Read More »

ಜಿಲ್ಲಾ ಪಂಚಾಯತಿ‌ ಮಾಜಿ ಉಪಾಧ್ಯಕ್ಷೆಇಂದು ಮುಂಜಾನೆ ತೀರಿಕೊಂಡರು.

ಬೆಳಗಾವಿ: ಜಿಲ್ಲಾ ಪಂಚಾಯತಿ‌ ಮಾಜಿ ಉಪಾಧ್ಯಕ್ಷೆ ಹಾಗೂ ಚಿಕ್ಕೋಡಿ ಜಿಲ್ಲಾ ಕೆಪಿಸಿಸಿ ಮಹಿಳಾ ಮೋರ್ಚಾದ ಅಧ್ಯಕ್ಷೆ ತೇಜಸ್ವಿನಿ ಅರ್ಜುನ ನಾಯಿಕವಾಡಿ (51) ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತಮ್ಮ ಮೃದು ಸ್ವಭಾವದದ ವ್ಯಕ್ತಿತ್ವದಿಂದ ಪರಿಚಿತರಾಗಿದ್ದ ರಾಯಬಾಗ ತಾಲೂಕು ಕಂಕಣವಾಡಿ ಮೂಲದವರಾದ ತೇಜಸ್ವಿನಿ ಅವರು, ಕೆಲವು ದಿನಗಳ ಹಿಂದಷ್ಟೆ ಕೋವಿಡ್ ನಿಂದ ಗುಣಮುಖರಾಗಿದ್ದರು. ಆದರೆ ಕಡಿಮೆ ರಕ್ತದೊತ್ತಡದ ಕಾರಣಕ್ಕೆ ಆಕಸ್ಮಿಕವಾಗಿ ಇಂದು ಮುಂಜಾನೆ ತೀರಿಕೊಂಡರು. ಇಂದು ಮಧ್ಯಾಹ್ನ ಕಂಕಣವಾಡಿಯಲ್ಲಿ ಅಂತ್ಯಕ್ರಿಯೆ …

Read More »

ಸುಪ್ರೀಂ ಚಾಟಿ ಬಳಿಕ SSLC,PUC ಪರೀಕ್ಷೆ ಬ್ಯಾನ್ ಮಾಡಿದ ಸರ್ಕಾರ

ಅಮರಾವತಿ: ಹೆಮ್ಮಾರಿ ಸೋಂಕಿನ ಮಧ್ಯೆಯೂ ಎಸ್ ಎಸ್ ಎಲ್ ಸಿ ಮತ್ತು ದ್ವಿತಿಯ ಪಿಯುಸಿ ಪರೀಕ್ಷೆ ರದ್ದು ಮಾಡದ ಆಂಧ್ರ ಪ್ರದೇಶದ ಸರ್ಕಾರದ ವಿರುದ್ಧ ಸುಪ್ರೀಂ ಚಾಟಿ ಬೀಸಿದ ಬೆನ್ನಲ್ಲೇ ಸರ್ಕಾರ ಪರೀಕ್ಷೆ ಬ್ಯಾನ್ ಮಾಡಿದೆ.ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ವಿಚಾರವಾಗಿ ನಿನ್ನೆ ಸುಪ್ರೀಂ ಕೋರ್ಟ್ ಆಂಧ್ರ ಪ್ರದೇಶ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಕೋವಿಡ್ ನಿಂದಾಗಿ ಯಾವುದೇ ಮಾರಣಾಂತಿಕ ಘಟನೆಗಳು ಸಂಭವಿಸಿದಲ್ಲಿ ರಾಜ್ಯ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. …

Read More »

ಜುಲೈ 31ರೊಳಗೆ ದ್ವಿತೀಯ ಪಿಯು ಫಲಿತಾಂಶ: ಸುರೇಶ್‌ ಕುಮಾರ್

ಬೆಂಗಳೂರು: ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಜುಲೈ 31ರೊಳಗೆ ಫಲಿತಾಂಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳ 12ನೇ ತರಗತಿ ಮಕ್ಕಳಿಗೆ ಜು.31ರೊಳಗೆ ಫಲಿತಾಂಶ ನೀಡಲು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ರಾಜ್ಯದಲ್ಲೂ ಅಷ್ಟರೊಳಗೆ ಫಲಿತಾಂಶ ನೀಡುತ್ತೇವೆ’ ಎಂದು ಹೇಳಿದರು. ‘ಶೀಘ್ರದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ …

Read More »