Breaking News
Home / 2021 / ಜೂನ್ / 13 (page 2)

Daily Archives: ಜೂನ್ 13, 2021

ಪರಮೇಶ್ವರ್ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಉಪಹಾರ: 100 ನಾಟೌಟ್ ಪ್ರತಿಭಟನೆ ಬಗ್ಗೆ ಸಮಾಲೋಚನೆ

ತುಮಕೂರು/ ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದರು. ರಾಜ್ಯಾದ್ಯಂತ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ನಡೆಯುತ್ತಿರುವ ತೈಲ ಬೆಲೆ ಏರಿಕೆ ವಿರುದ್ದದ 100 ನಾಟೌಟ್ ಪ್ರತಿಭಟನೆ ಬಗ್ಗೆ ಜೂಮ್ ವಿಡಿಯೋ ಸಂವಾದದ ಮೂಲಕ ಪರಿಶೀಲನೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದರು. ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ …

Read More »

ಜೂಜಾಟ: 18 ಆರೋಪಿಗಳ ಬಂಧನ

ಬೆಳಗಾವಿ: ಇಲ್ಲಿನ ಖಂಜರ್‌ ಗಲ್ಲಿಯಲ್ಲಿ ಶನಿವಾರ ಮಧ್ಯರಾತ್ರಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಗಲ್ಲಿಯ ಜುಬೇರ ಸುಬೇದಾರ, ಆರೀಫ ಖೊತ್ವಾಲ್, ಅಯಾಜ್ ಖತೀಬ, ಅಬ್ದುಲ್ ಸಲಾಮ್ ಬಾಳೇಕುಂದ್ರಿ, ಸೊಹೆಲ್ ಮುಲ್ಲಾ, ಷರೀಪ ಮುಲ್ಲಾ, ಅಬುತಾಲಿಪ್ ಶೇಕ್‌, ಆಸೀಫ್‌ ಸೈಯದ್, ಆಯೂಬಖಾನ ಪಠಾಣ, ವಾಸಿಂ ಸೌದಾಗರ, ಇಮ್ರಾನ ಪಟೇಲ, ವಾಸಿಂ ಅಲವಾಡಕರ, ಮುಸ್ತಾಕ ತಹಶೀಲ್ದಾರ, ಇಕ್ಬಾಲ ನರೇಗಲ್‌, ಫಿರೋಜ ಪಠಾಣ, ರಫೀಕ ತಹಶೀಲ್ದಾರ, ಸಲೀಂ …

Read More »

ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಪ್ರಯಾಣಿಸಿದ ಸಚಿವರಾದ ಕೆ ಎಸ್ ಈಶ್ವರಪ್ಪ, ಭೈರತಿ ಬಸವರಾಜ್

ಶಿವಮೊಗ್ಗ: ನಂಬರ್ ಪ್ಲೇಟ್ ಇಲ್ಲದಿರುವ ವಾಹನಗಳಲ್ಲಿ ಪ್ರಯಾಣ ಮಾಡಬಾರದು ಎಂದು ಸರ್ಕಾರದ ನಿಯಮವೇ ಇದೆ, ನಂಬರ್ ಪ್ಲೇಟ್ ಇಲ್ಲದಿರುವ ವಾಹನವನ್ನು ಚಲಾಯಿಸಿ ಸಿಕ್ಕಿಬಿದ್ದು ಅನೇಕರು ದಂಡ ಕಟ್ಟಿಸಿಕೊಳ್ಳುವುದೂ ಇದೆ. ಆದರೆ ಜನಸಾಮಾನ್ಯರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯ, ರಾಜಕಾರಣಿಗಳು ಏನು ಮಾಡಿದರೂ ನಡೆಯುತ್ತದೆ ಎಂಬಂತೆ ಹೇಳುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇಂದು ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಪ್ರಯಾಣಿಸಿದ …

Read More »

16.80 ಲಕ್ಷದ ಸ್ಟಾಂಪ್ ಡ್ರಗ್ಸ್ ವಶ- ಕಿಂಗ್ ಪಿನ್ ಬಂಧನ

ಮಂಗಳೂರು: ನಗರದ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐಷಾರಾಮಿ ವ್ಯಕ್ತಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಮೂಲಕ ಡ್ರಗ್ಸ್ ವಿರುದ್ಧದ ಸಮರವನ್ನು ಮುಂದುವರಿಸಿದ್ದಾರೆ. ನಿಷೇಧಿತ ಮಾದಕವಸ್ತು ಎಲ್‍ಎಸ್‍ಡಿ ಮಾರಾಟ ಮಾಡುತ್ತಿದ್ದ ಕೇರಳದ ಕ್ಯಾಲಿಕಟ್ ಮೂಲದ ಆರೋಪಿ ಮೊಹಮ್ಮದ್ ಅಜಿನಾಸ್ ನನ್ನು ಖೆಡ್ಡಾಕೆ ಬೀಳಿಸಿದ್ದಾರೆ. ಈತ ವಿದ್ಯಾರ್ಥಿಯಾಗಿದ್ದು, ಪಿ.ಜಿಯಲ್ಲಿ ವಾಸವಾಗಿದ್ದ. ನಗರದ ಕದ್ರಿ ಮೈದಾನದಲ್ಲಿ ಗ್ರಾಹಕರ ಬರುವಿಕೆಗಾಗಿ ಕಾಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು. 16.80ಲಕ್ಷ …

Read More »

ಪೊಲೀಸ್ ಸೇವೆಗೆ ತೃತೀಯ ಲಿಂಗಿಗಳನ್ನು ನೇಮಿಸಿಕೊಳ್ಳಲು ಮುಂದಾದ ಒಡಿಶಾ ಸರ್ಕಾರ

ಭುವನೇಶ್ವರ್ : ಪ್ರಮುಖ ನಿರ್ಧಾರವೊಂದರಲ್ಲಿ, ಒಡಿಶಾ ಸರ್ಕಾರ ತೃತೀಯ ಲಿಂಗಿಗಳನ್ನು ಪೊಲೀಸ್ ಸೇವೆಗಳಲ್ಲಿ ನೇಮಕ ಮಾಡಲು ನಿರ್ಧರಿಸಿದೆ . 477 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಮತ್ತು ಒಡಿಶಾ ಪೊಲೀಸರ 244 ಕಾನ್‌ಸ್ಟೆಬಲ್‌ಗಳನ್ನು (ಸಂವಹನ) ನೇಮಕ ಮಾಡಿಕೊಳ್ಳಿ ಒಪ್ಪಂದದ ಆಧಾರದ ಮೇಲೆ ಸಿಗ್ನಲ್ ಸೇವೆಗೆ ನೇಮಕಮಾಡಿಕೊಳ್ಳಲು ಒಡಿಶಾ ಪೊಲೀಸ್ ನೇಮಕಾತಿ ಮಂಡಳಿ ನಿರ್ಧರಿಸಿದೆ ಎಂದು ಪೊಲೀಸ್ ಮಹಾನಿರ್ದೇಶಕ ಅಭಯ್ ತಿಳಿಸಿದ್ದಾರೆ. ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳು ಎರಡೂ ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಡಿಜಿಪಿ …

Read More »

ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಭೂಪ

ಬಳ್ಳಾರಿ: ಸಾಮಾನ್ಯವಾಗಿ ಹಾವು ಕಂಡರೆ ಮಾರುದ್ದ ಓಡಿ ಹೋಗುವ ಜನರ ಮಧ್ಯೆ, ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಯುವನೋರ್ವ ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿಯಲ್ಲಿ ನಡೆದಿದೆ. ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗ್ರಾಮದ ಯುವಕ ಕಾಡಪ್ಪನ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಎಚ್ಚರಗೊಂಡ ಕಾಡಪ್ಪ ಪಕ್ಕದಲ್ಲಿ ಇದ್ದ ಹಾವನ್ನು ನೋಡಿದ್ದಾನೆ. ಕೂಡಲೇ ಆ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಗ್ರಾಮದ …

Read More »

ಶಿಕ್ಷಣ ಸಚಿವರ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು; ಎಸ್.ಎಸ್.ಎಲ್.ಸಿ. ಪರೀಕ್ಷೆ ರದ್ದುಗೊಳಿಸಿ; ಸರ್ಕಾರಕ್ಕೆ ಪೋಷಕರ ಡೆಡ್ ಲೈನ್

ಬೆಂಗಳೂರು: ಪರೀಕ್ಷೆ ಬಗ್ಗೆ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ ಖಾತೆ ಬದಲಾವಣೆ ಮಾಡಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಿಂದಾಗಿ ಸರಿಯಾಗಿ ತರಗತಿಗಳೇ ನಡೆದಿಲ್ಲ. ಪಾಠವನ್ನೂ ಮಾಡಲಾಗಿಲ್ಲ. ಹೀಗಿರುವಾಗ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸುವುದಾದರೂ ಹೇಗೆ? ಎಲ್ಲಿಯೂ ನಡೆಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಸಚಿವರು ತಮ್ಮ ಸ್ವಪ್ರತಿಷ್ಠೆಗಾಗಿ ನಮ್ಮಲ್ಲಿ ನಡೆಸುತ್ತಿರುವುದಾದರೂ ಯಾಕೆ ಎಂದು ಪೋಷಕರು …

Read More »

ಮೊಬೈಲ್ ನಲ್ಲಿ ಕಾಲ ಕಳೆಯಬೇಡ ಅಂತ ಬುದ್ದಿ ಹೇಳಿದ್ದಕ್ಕೆ ಪತಿ ಹತ್ಯೆಗೆ ಸುಪಾರಿ ಕೊಟ್ಟ ಪತ್ನಿ!

ಕಾರವಾರ : ಪ್ರತಿ ದಿನ ಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಹರಟುತ್ತಿದ್ದ ಪತ್ನಿಗೆ ಬುದ್ಧಿ ಹೇಳಿದ್ದಕ್ಕೆ ಪತಿಯನ್ನೇ ಕೊಲ್ಲಲು 30 ಸಾವಿರ ಸುಪಾರಿ ನೀಡಿ ಹತ್ಯೆ ಪ್ರಯತ್ನದ ವೇಳೆ ಪತ್ನಿ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಸರಸ್ವತಿ ಸುತಾರ ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ. ಈಕೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬುವವನನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ …

Read More »

ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ.

ಬೆಳಗಾವಿ : ಇಲ್ಲಿನ ಖಂಜರ ಗಲ್ಲಿಯಲ್ಲಿ ನಿನ್ನೆ ರಾತ್ರಿ ಜೂಜು ಅಡ್ಡೆ ಮೇಲೆ ದಾಳಿ ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ. ಜುಬೆರ ಶಕಿಲ ಸುಬೆದಾರ,  ಆರೀಪ ಜಿಲಾನಿ ಖೊತ್ವಾಲ್ , ಅಯಾಜ್ ಬಾಬು ಖತಿಬ್ , ಅಬ್ದುಲ್ ಸಲಾಮ್ ಮೈಬುಸಾಬ ಬಾಳೆಕುಂದ್ರೀ, ಸೊಹೆಲ್ ಅಕ್ತರ ಮುಲ್ಲಾ, ಷರಿಪ್ ದಸ್ಥಗಿರಸಾಬ ಮುಲ್ಲಾ, ಅಬುತಾಲಿಪ್ ಗೌಸ್ ಶೆಕ್, ಆಸಿಪ್ ಯುಸುಪಖಾನ್ ಸಯ್ಯದ, ಆಯೂಬಖಾನ್ ಕರಿಂಖಾನ ಪಠಾಣ , ವಾಸಿಂ ಆಯೂಬ್ ಸೌದಾಗರ್ …

Read More »

ಅಥಣಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಗ್ರಾಪಂ. ಸದಸ್ಯ ಸಾವು

ಅಥಣಿ : ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹತ್ತಿದ ಪರಿಣಾಮ ಗ್ರಾಪಂ. ಸದಸ್ಯ ಸಾವನ್ನಪ್ಪಿದ ಘಟನೆ ನಡೆದಿದೆ. ಶಿರಗುಪ್ಪಿ ಗ್ರಾಮದ ಸೋಮೇಶ್ ಶಿವಾನಂದ ಪಾಟೀಲ ( 32 ) ಮೃತ ಗ್ರಾಪಂ ಸದಸ್ಯ . ಹಳೆ ಮನೆಯ ದುರಸ್ತಿ ಕಾರ್ಯ ನಡೆದಿದ್ದರಿಂದ ಮನೆಯವರೆಲ್ಲ ಬೇರೆ ಮನೆಯಲ್ಲಿ ಇದ್ದರು . ಇವರು ಮಾತ್ರ ಮನೆಯ ಚಾವಣಿಯ ಮೇಲೆ ಮಲಗಿದ್ದರು . ಏಕಾಏಕಿ …

Read More »