Breaking News
Home / 2021 / ಜೂನ್ / 08 (page 3)

Daily Archives: ಜೂನ್ 8, 2021

ಫ್ರೈಡ್ ಚಿಕನ್ ಆರ್ಡರ್ ಮಾಡಿದ ಮಹಿಳೆಗೆ ಬಂದಿದ್ದ ಫ್ರೈಡ್ ಟವಲ್

ಮನಿಲಾ: ಫ್ರೈಡ್ ಚಿಕನ್ ಆರ್ಡರ್ ಮಾಡಿದ ಮಹಿಳೆಗೆ ಬಂದಿದ್ದ ಫ್ರೈಡ್ ಟವಲ್ ನೋಡಿ ಮಹಿಳೆ ಶಾಕ್ ಆಗಿರುವ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ. ಈ ಸುದ್ದಿ ಸೋಶಿಯಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಲೀಫರೇಜ್ ಎಂಬ ಮಹಿಳೆ ಫ್ರೈಡ್ ಚಿಕನ್ ತಿನ್ನಬೇಕು ಎಂದು ಆಸೆಯಿಂದ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ಡೀಪ್ ಫ್ರೈಡ್ ಚಿಕನ್ ಬದಲು ಡೀಪ್ ಫ್ರೈಡ್ ಟವಲ್ ಸಿಕ್ಕಿದೆ. ಅಲೀ ಚಿಕನ್ ಅಂದುಕೊಂಡು ತಿನ್ನಲು ಶುರು ಮಾಡಿದಾಗ ವಿಚಿತ್ರವೆನಿಸಿದ್ದು, ಪೂರ್ತಿ …

Read More »

ಸಿಂಧೂರಿ ನೇಮಕ ಪ್ರಶ್ನಿಸಿದ್ದ ಅರ್ಜಿ: ಹೈಕೋರ್ಟ್‌ ನೋಟಿಸ್

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ನೇಮಕ ಮಾಡಿದ್ದ ಅರ್ಜಿ ಮರು ಪರಿಶೀಲಿಸಲು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿ ಆಧರಿಸಿ ಐಎಎಸ್ ಅಧಿಕಾರಿ ಬಿ.ಶರತ್ ಅವರಿಗೆ ನೋಟಿಸ್ ಜಾರಿ ಮಾಡಲು ಹೈಕೋರ್ಟ್‌ಆದೇಶಿಸಿದೆ. ‘ರೋಹಿಣಿ ಸಿಂಧೂರಿ ಅವರನ್ನು ಬೇರೆ ಹುದ್ದೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ’ ಎಂದು ಸರ್ಕಾರದ ಪರ ವಕೀಲರು ನ್ಯಾಯಮೂರ್ತಿ ಅರವಿಂದಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠದ ಗಮನಕ್ಕೆ ತಂದರು. …

Read More »

ಜಿಂದಾಲ್​ಗೆ 3,667 ಎಕರೆ ಭೂಮಿ ಪರಭಾರೆ; ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್

ಬೆಂಗಳೂರು: ಜಿಂದಾಲ್ ಸಂಸ್ಥೆಗೆ 3,667 ಎಕರೆ ಭೂಮಿ ಪರಭಾರೆ ಮಾಡಿಕೊಡುವ ಸರ್ಕಾರದ ನಿರ್ಧಾರವನ್ನ ಪ್ರಶ್ನಿಸಿ ಹೈಕೋರ್ಟ್​ಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ಕೆ.ಎ.ಪಾಲ್ ಎಂಬುವವರ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಕೋರ್ಟ್​, ಅರ್ಜಿದಾರರ ಪಿಐಎಲ್​ಗೆ ಉತ್ತರಿಸುವಂತೆ ರಾಜ್ಯ ಸರ್ಕಾರ, ಜಿಂದಾಲ್ ಸಂಸ್ಥೆಗೆ ನೋಟಿಸ್ ನೀಡಿದೆ. ಹೈಕೋರ್ಟ್​ನ ಮುಖ್ಯ ವಿಭಾಗೀಯ ಪೀಠ ನೋಟಿಸ್ ನೀಡಿದೆ. ಸಿಎಂ ಯಡಿಯೂರಪ್ಪ ವಿರುದ್ಧ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ರಾಜ್ಯದಲ್ಲಿ‌ ಸರ್ವಾಧಿಕಾರಿ ರೀತಿಯಲ್ಲಿ ಜಿಂದಾಲ್​​ಗೆ ಭೂಮಿಯನ್ನ …

Read More »

ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ ವಿತರಣೆ; ‘ಸುಪ್ರೀಂ ಕೋರ್ಟ್​​ಗೆ ಧನ್ಯವಾದ’ ಎಂದ ಕಾಂಗ್ರೆಸ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಇಂದು ಮಾತನಾಡಿದ ಸಂದರ್ಭದಲ್ಲಿ ಜೂನ್ 21 ರಿಂದ ಕೋವಿಡ್ 19 ಲಸಿಕೆ ಉಚಿತವಾಗಿ ಕೇಂದ್ರೀಕೃತ ವಿತರಣೆಯನ್ನು ಮತ್ತೆ ಆರಂಭಿಸುವುದಾಗಿ ನೀಡಿರುವ ಹೇಳಿಕೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆಯಾಗುವ ಶೇ. 75ರಷ್ಟು ಲಸಿಕೆಯನ್ನು ವಿತರಿಸುವುದರಿಂದ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಸೇವಾ ಶುಲ್ಕ 150/- ರೂ. ಗಳಿಗೆ ನಿಗದಿ ಪಡಿಸಿರುವುದರಿಂದ ಲಸಿಕೆ ಅಭಿಯಾನ ಇನ್ನಷ್ಟು ಸುಗಮವಾಗಿ …

Read More »

ಕನ್ನಡವನ್ನು ಕಾಯಲು ಕಠಿನ ಕಾನೂನೇ ಇಲ್ಲ ! ಹೆಚ್ಚುತ್ತಿವೆ ಕನ್ನಡದ ಅವಮಾನ ಪ್ರಕರಣ

ಬೆಂಗಳೂರು : ಕನ್ನಡ ನಾಡು-ನುಡಿಯನ್ನು ಅವಮಾನಿಸುವ ಘಟನೆಗಳು ನಡೆದಾಗ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಹೌದು. ಆದರೆ ಯಾವ ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂಬುದೇ ಯಕ್ಷಪ್ರಶ್ನೆ! ಇತ್ತೀಚೆಗೆ ಗೂಗಲ್‌ ಮತ್ತು ಅಮೆಜಾನ್‌ ಕನ್ನಡ ಭಾಷೆ, ಕನ್ನಡದ ಧ್ವಜ ಮತ್ತು ರಾಜ್ಯ ಸರಕಾರದ ಲಾಂಛನಕ್ಕೆ ಅಗೌರವ ತೋರಿದಾಗ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳುವುದಾಗಿ ಸರಕಾರ ಭರವಸೆ ನೀಡಿತು. ಕನ್ನಡಿಗರ ಭಾವನಾತ್ಮಕ ಪ್ರತಿರೋಧಕ್ಕೆ ಮಣಿದ ಗೂಗಲ್‌, …

Read More »

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲ ಪತ್ತೆ

ಬೆಂಗಳೂರು, ಜೂ. 07: ಬೆಂಗಳೂರಿನಿಂದ ವಿದೇಶಕ್ಕೆ ಕೊರಿಯರ್ ಮೂಲಕ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳನ್ನು ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ. ಕಿರಾತಕರು ಚಿಕ್ಕ ಬ್ಯಾಗ್ ಗಳಲ್ಲಿ ತುಂಬಿಸಿದ್ದ ಸುಮಾರು ಎರಡು ಕೆ.ಜಿ. ಚರಸ್ ನ್ನು ವಶಪಡಿಸಿಕೊಂಡಿದ್ದಾರೆ. ಎಚ್‌. ಹುಸೇನ್ ಮತ್ತು ಆರ್. ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 3.8 ಕೆ.ಜಿ. ಚರಸ್ ಪತ್ತೆಯಾಗಿದೆ. ಬೆಂಗಳೂರಿನಿಂದ ಕತಾರ್ ಗೆ ಕೊರಿಯರ್ ಮೂಲಕ …

Read More »

ಬೆಳಗಾವಿ :ಚಿನ್ನ ಎಗರಿಸಿದ ಪ್ರಕರಣದ ಕಿಂಗ್ ಪಿನ್ ಕಿರಣ್ ಮೇಲೆ ಮತ್ತೊಂದು ದೂರು ದಾಖಲು

ಬೆಳಗಾವಿ: ಪೊಲೀಸ್ ಎಂದು ನಕಲಿ ಗುರುತಿನ ಚೀಟಿ ಇಟ್ಟುಕೊಂಡು ತಿರುಗಾಡುತ್ತಿದ್ದ ಕಿರಣ ವೀರನಗೌಡ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ಸಿಐಡಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿಯ ಚಿನ್ನ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಶದಲ್ಲಿರುವ ಕಿರಣ ವೀರನಗೌಡ ಖೊಟ್ಟಿ ದಾಖಲೆ ಸೃಷ್ಟಿಸಿ ಪೊಲೀಸ್ ಆಗಿರುವ ಬಗ್ಗೆ ನಕಲಿ ಗುರುತಿನ ಚೀಟಿ ಇಟ್ಟುಕೊಂಡಿದ್ದನು ಎಂದು ದೂರು ದಾಖಲಾಗಿದೆ.   ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಲ್ಲಿ ತಿರುಗಾಡುವಾಗ …

Read More »

ಪುಣೆಯ ಕಾರ್ಖಾನೆಯಲ್ಲಿ ಬೆಂಕಿ ಅವಘಡಕ್ಕೆ 18 ಮಂದಿ ಬಲಿ

ಪುಣೆ: ಇಲ್ಲಿನ ಮುಲ್ಶಿ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅವಘಢದಲ್ಲಿ 15 ಮಂದಿ ಮಹಿಳೆಯರು ಸೇರಿ 18 ಜನರು ಮೃತಪಟ್ಟಿದ್ದಾರೆ. ಪಿರಂಗುಟ್ ಗ್ರಾಮದಲ್ಲಿರುವ ‘ಎಸ್‌ವಿಎಸ್‌ ಅಕ್ವಾ ಟೆಕ್ನಾಲಜೀಸ್’ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದೆ. ಸುಮಾರು 20 ಮಂದಿ ಪಾರಾಗಿದ್ದಾರೆ. ಬೆಂಕಿಯಿಂದ ತೀವ್ರವಾಗಿ ಸುಟ್ಟಿದ್ದ ಶವಗಳನ್ನು ಹೊರತೆಗೆಯಲಾಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಬೆಂಕಿಯಿಂದಾಗಿ ವಾತಾವರಣವನ್ನು ದಟ್ಟ ಹೊಗೆ ಆವರಿಸಿತ್ತು. ಸ್ಥಳಕ್ಕೆ ಪುಣೆ ಜಿಲ್ಲಾಧಿಕಾರಿ …

Read More »

ರಾಜಕೀಯ ಮಾತು ನಿಲ್ಲಿಸಿ ಕೆಲಸ ಮಾಡಿ: ಸ್ವಪಕ್ಷಿಯರ ಮೇಲೆ ಬಿಎಸ್‌ವೈ ಸಿಡಿಮಿಡಿ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ವಪಕ್ಷೀಯರ ಮೇಲೆಯೇ ಸಿಡಿಮಿಡಿಗೊಂಡಿದ್ದಾರೆ. ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಅವರು, ‘ಕೋವಿಡ್ ಸಾಂಕ್ರಾಮಿಕದಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬ ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು.ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು …

Read More »

ಸಿಎಂ ಯಡಿಯೂರಪ್ಪ ಕಿಡಿ ಕಾರಿರುವ ‘ಮಠ’ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್

ಬೆಂಗಳೂರು : ಫೇಸ್ ಬುಕ್ ಲೈವ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಸಿಎಂ ಯಡಿಯೂರಪ್ಪ ಕಿಡಿ ಕಾರಿರುವ ‘ಮಠ’ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್. ಇಂದು ಅವರು, ಮಹಾಮಾರಿ ಕೋವಿಡ್ ವೈರಸ್​ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ‘ಯಡಿಯೂರಪ್ಪ ಇಂದು ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ ಅವರು ಅವರ ಮಗನ, ವಂಶದ ಸೇವೆ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಸಾವಿರಾರು ಜನರು ಸತ್ತಿದ್ದಾರೆ. ನಿಮಗೆ …

Read More »