Breaking News
Home / 2021 / ಜೂನ್ / 03 (page 3)

Daily Archives: ಜೂನ್ 3, 2021

ಕೊರೊನಾ ಮಧ್ಯೆ ಶುರುವಾಯ್ತು ಜನರಿಗೆ ಚಿಕನ್ ಗುನ್ಯಾ ಕಾಟ

ಧಾರವಾಡ: ಕೊರೊನಾ ಮಧ್ಯೆ ಗ್ರಾಮವೊಂದಕ್ಕೆ ಕೊರೊನಾ ಮಧ್ಯದಲ್ಲಿ ಈಗ ಚಿಕನ್ ಗುನ್ಯಾ ಕಾಟ ಆರಂಭವಾಗಿದೆ. ಜಿಲ್ಲೆಯ ಲಕಮಾಪುರ ಎಂಬ 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು. ಕಳೆದ ವಾರ ಗ್ರಾಮದಲ್ಲಿ ಕೈ ಕಾಲು ಬೇನೆ ಬಂದವರಿಗೆ ತಪಾಸಣೆ ಮಾಡಿಸಿದಾಗ, ಗ್ರಾಮದ ಒಬ್ಬರಲ್ಲಿ ಚಿಕನ್ ಗುನ್ಯಾ ಪತ್ತೆಯಾಗಿತ್ತು. ನಂತರ ಗ್ರಾಮದಲ್ಲಿ ಇದು ಹೆಚ್ಚಾಗಬಾರದೆಂದು ಆರೋಗ್ಯ ಇಲಾಖೆಯವರು ಲಾರ್ವಾ ಸರ್ವೇ ಕೂಡಾ ಮಾಡಿಸಿದ್ದರು. ಈಗ ಗ್ರಾಮದಲ್ಲಿ ಚಿಕನ್ ಗುನ್ಯಾ …

Read More »

ತಂದೆ ತಾಯಿ ಕಳೆದುಕೊಂಡ ಮಕ್ಕಳ ಜೊತೆ ನಾವಿದ್ದೇವೆ: ಶಶಿಕಲಾ ಜೊಲ್ಲೆ

ಬೆಂಗಳೂರು: ಕೋವಿಡ್‍ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ದುಃಖದಲ್ಲಿ ಭಾಗಿಯಾಗಿ, ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ. ಅಂತಹ ಮಕ್ಕಳೊಂದಿಗೆ ನಾವಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ. ಕೋವಿಡ್-19ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಅವರನ್ನು ಪಾಲನೆ ಮಾಡುತ್ತಿರುವ ಪಾಲಕರ ಜೊತೆಗೆ ಗೂಗಲ್ ಮೀಟ್ ಮೂಲಕ ವೀಡಿಯೊ ಸಂವಾದ ನಡೆಸಿ, ಅವರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿ, ಅವರ ಮನಸ್ಸಿನ ನೋವು, ಸಮಸ್ಯೆಗಳನ್ನು …

Read More »

ಆನಂದಯ್ಯರ ಆಯುರ್ವೇದಿಕ್ ಔಷಧ ನೀಡಲು ಕೋರ್ಟ್ ಅಸ್ತು, ನಾಳೆಯಿಂದ ಕೊವಿಡ್‌ಗೆ ಔಷಧ ವಿತರಣೆ ಶುರು

ಆಂಧ್ರ ಪ್ರದೇಶ: ದೇಶದಲ್ಲಿ ಮಹಾಮಾರಿ ಕೊರೊನಾ ಜನರಲ್ಲಿ ತಲ್ಲಣ ಉಂಟು ಮಾಡಿದೆ. ಈಗಾಗಲೇ ಕೊರೊನಾಗೆ ವ್ಯಾಕ್ಸಿನ್ ಬಂದಿದ್ರೂ ದೇಶದ ಎಲ್ಲರಿಗೂ ಈಗಲೇ ತಲುಪಿಸಲು ಆಗ್ತಿಲ್ಲ. ಇದರ ನಡುವೆ ಅಲ್ಲಲ್ಲಿ ಕೆಲವರು ಆಯುರ್ವೇದಿಕ್ ಔಷಧಿಗಳನ್ನ ನೀಡ್ತಿದ್ದಾರೆ. ಕೊರೊನಾಗೆ ಆಯುರ್ವೇದಿಕ್ ಔಷಧ ನೀಡಿದ್ರೆ ಗುಣವಾಗುತ್ತೆ ಅಂತಾ ಹೇಳಿಕೊಂಡಿದ್ದಾರೆ. ಇಂತಹವರಲ್ಲಿ ಒಬ್ಬರು ಅಂದ್ರೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ನಂ ನಿವಾಸಿ ಆನಂದಯ್ಯ ಕೂಡ ಒಬ್ಬರು. ಆನಂದಯ್ಯನವರ ಆಯುರ್ವೇದಿಕ್ ಔಷಧಿಯಿಂದ ಕೊರೊನಾ ಗುಣಮುಖವಾಗುತ್ತೆ ಅಂತಾ ಸಾವಿರಾರು …

Read More »

ಕೆಎಸ್‌ಆರ್‌ಟಿಸಿ’ ಕೇರಳ ಪಾಲು : 7 ವರ್ಷಗಳ ಕಾನೂನು ಸಮರದಲ್ಲಿ ಕರ್ನಾಟಕಕ್ಕೆ ಸೋಲು

ಹೊಸದಿಲ್ಲಿ: “ಕೆಎಸ್‌ಆರ್‌ಟಿಸಿ’ ಪದ ಬಳಕೆಗೆ ಸಂಬಂಧಿಸಿ 7 ವರ್ಷ ನಡೆದ ಕಾನೂನು ಸಮರದಲ್ಲಿ ಕರ್ನಾಟಕಕ್ಕೆ ಸೋಲಾಗಿದೆ. “ಕೆಎಸ್‌ಆರ್‌ಟಿಸಿ’ ಹೆಸರು ಮತ್ತು ಲಾಂಛನ ಕೇರಳದ ಸ್ವತ್ತು ಎಂದು ಟ್ರೇಡ್‌ ಮಾರ್ಕ್‌ ರಿಜಿಸ್ಟ್ರಿ ತೀರ್ಪು ನೀಡಿದೆ. ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆ ಆಧಾರದಲ್ಲಿ ಇದನ್ನು ಕೇರಳಕ್ಕೆ ಬಿಟ್ಟುಕೊಡಬೇಕೆಂದು ರಿಜಿಸ್ಟ್ರಿ ತೀರ್ಪಿತ್ತಿದೆ. ಈ ಸಂಬಂಧ 2013ರಲ್ಲೇ ಕಾನೂನು ಸಮರ ಆರಂಭವಾಗಿತ್ತು. “ವಿಚಾರ ಗಮನಕ್ಕೆ ಬಂದಿದ್ದು, ಅಧಿಕೃತ ನೋಟಿಸ್‌, ತೀರ್ಪಿನ ಪ್ರತಿ ಸಿಕ್ಕಿಲ್ಲ. ಅದು ದೊರೆತ ಬಳಿಕ …

Read More »

14 ಲಕ್ಷ ರೂ ಮೌಲ್ಯದ ಅನಧಿಕೃತ ಬೀಜ ಸಂಗ್ರಹ: ಕೃಷಿ ಅಧಿಕಾರಿಗಳಿಂದ ದಾಳಿ

ಗಂಗಾವತಿ: ಕೃಷಿ ಇಲಾಖೆಯ ಅನುಮತಿ ಪಡೆಯದೇ 14ಲಕ್ಷ ರೂ.ಮೌಲ್ಯದ ಬೀಜ, ಗೊಬ್ಬರ ಅನಧಿಕೃತ ಸಂಗ್ರಹ ಮಾಡಿದ ಗೋಡೌನ್ ಮೇಲೆ ಕೃಷಿ ಇಲಾಖೆ ಮತ್ತು ಕೃಷಿ ಜಾಗೃತ ದಳದ ಅಧಿಕಾರಿ ದಾಳಿ ನಡೆಸಿದ್ದಾರೆ. ಸಿಬಿಎಸ್ ವೃತ್ತದ ಸಮೀಪದ ಗೋಡೌನ್ ನಲ್ಲಿ ಶಂಕ್ರಪ್ಪ ಮೇಟಿ ಎಂಬುವವರಿಗೆ ಸೇರಿದ‌ ಮಲ್ಲಿಕಾರ್ಜುನ ಸೀಡ್ಸ್ ಕಂಪನಿ ಹೆಸರಿನಲ್ಲಿದ್ದ ಬೀಜ ಗೊಬ್ಬರ ಅಂಗಡಿಯಲ್ಲಿ ಕೃಷಿ ಇಲಾಖೆಯಿಂದ ಪರವಾನಿಗೆ ಪಡೆಯದೇ ಸುಮಾರು 14 ಲಕ್ಷ ರೂ.ಮೌಲ್ಯದ ಸಜ್ಜಿ ಮೆಕ್ಕೆಜೋಳ ಹಾಗೂ …

Read More »

ಬಿಎಸ್​ವೈ ನಾಯಕತ್ವ ಬದಲಾವಣೆ ಇಲ್ಲ; ಸಂಪುಟದ ಶೇ.50 ಪುನಾರಚನೆಗೆ ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ!

ಕೊರೋನಾ ಕಾಲದಲ್ಲಿ ಅತಿದೊಡ್ಡ ರಾಜಕೀಯ ಬೆಳವಣಿಗೆ ನಡೆದಿದ್ದು, ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟಕ್ಕೆ ಸರ್ಜರಿ ಮಾಡಲಾಗುವುದು ಎನ್ನಲಾಗಿದೆ. ಸ್ವತಃ ಅಖಾಡಕ್ಕಿಳಿದಿರುವ ಬಿಜೆಪಿ ಹೈಕಮಾಂಡ್ ಆಡಳಿತಕ್ಕೆ ಚುರುಕು ನೀಡಲು ಮುಂದಾಗಿದೆ. ಸಂಪುಟ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಕೈಹಾಕಿದ್ದು, ಬಹುತೇಕ ಸಚಿವರಿಗೆ ಗೇಟ್ ಫಾಸ್ ನೀಡುವ ಸಾಧ್ಯತೆ ಇದೆ. ಹಿರಿಯ ಸಚಿವರಿಗೆ ಪಕ್ಷದ ಹೊಣೆಗಾರಿಕೆ ವಹಿಸಲಾಗುವುದು. ಎರಡನೇ ತಲೆಮಾರಿನ ನಾಯಕರಿಗೆ …

Read More »

ಗುತ್ತಿಗೆ ನೌಕರರಿಗೆ ಸರ್ಕಾರದಿಂದ ರಿಸ್ಕ್ ಭತ್ಯೆ ಘೋಷಣೆ; ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯದಲ್ಲಿರುವ ಗುತ್ತಿಗೆ ನೌಕರರಿಗೆ ಮಾಸಿಕ ರಿಸ್ಕ್ ಭತ್ಯೆ ಘೋಷಿಸಲಾಗಿದೆ. ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಲ್ಲಿನ 922 ಗುತ್ತಿಗೆ ನೌಕರರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾಸಿಕ ಅಪಾಯ ಭತ್ಯೆಯನ್ನು ಘೋಷಿಸಿದೆ. ಸಂಶೋಧನಾ ವಿಜ್ಞಾನಿ, ಸಂಶೋಧನಾ ಸಹಾಯಕರು, ಲ್ಯಾಬ್ ತಂತ್ರಜ್ಞರು, ಡೇಟಾ ಎಂಟ್ರಿ ಆಪರೇಟರುಗಳಿಗೆ 5,000 ರೂ., ದಾದಿಯರಿಗೆ 8,000 ರೂ. ಮತ್ತು ಡಿ ಗ್ರೂಪ್ ನೌಕರರಿಗೆ 10,000 ರೂ. ಅಪಾಯ …

Read More »

ತಮಿಳು ಖ್ಯಾತ ನಟ ವಿಶಾಲ್ ವಿರುದ್ಧ ಕಿಡಿಕಾರಿದ ನಟಿ ಗಾಯಿತ್ರಿ ರಘುರಾಮ್

ಬೆಂಗಳೂರು : 5 ದಿನಗಳ ಹಿಂದೆ ತಮಿಳು ಖ್ಯಾತ ನಟ ವಿಶಾಲ್ ತಮಿಳುನಾಡಿನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನೋರ್ವ ಅತ್ಯಾಚಾರ ಎಸಗಿದ್ದನ್ನು ಕುರಿತು ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಯಾಂಡಲ್ ವುಡ್ ನ ಮನಸೆಲ್ಲ ನೀನೇ ‘ ಚಿತ್ರದ ನಟಿ , ಕೊರಿಯೋಗ್ರಾಫರ್ , ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಗಾಯಿತ್ರಿ ರಘುರಾಮ್ ವಿಶಾಲ್ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬರುವಂತೆ ಟ್ವೀಟ್ ಮಾಡಿದ್ದಾರೆ. ವಿಶಾಲ್ ಅವರು …

Read More »

ಸೀಡಿ ಪ್ರಕರಣ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ S.I.T.

ಬೆಂಗಳೂರು,: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಇಬ್ಬರು ಶಂಕಿತ ಆರೋಪಿಗಳು ಸಲ್ಲಿಸಿದ್ದ ಅರ್ಜಿಗೆ ಎಸ್‍ಐಟಿ ಪೊಲೀಸರು ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್‍ಗೆ ತನಿಖೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಜತೆಗೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ. ಅಶ್ಲೀಲ ಸೀಡಿ ಬೆಳಕಿಗೆ ಬಂದ ಬೆನ್ನಲ್ಲೇ ಪರಾರಿಯಾಗಿರುವ ಶಂಕಿತ ಆರೋಪಿಗಳಾದ ನರೇಶ್‍ಗೌಡ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನು ಕೋರಿ …

Read More »

ದರೋಡೆಗೆ ಸಂಚು: ಐದು ಮಂದಿ ಬಂಧನ

ಬೆಂಗಳೂರು: ಸಾರ್ವಜನಿಕರನ್ನು ಬೆದರಿಸಿ, ದರೋಡೆಗೆ ಸಂಚು ರೂಪಿಸಿದ್ದ ಆರೋಪದಡಿ ಕುಖ್ಯಾತ ರೌಡಿಗಳ ಸಹಚರರಾದ ಐದು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಸ್ಲೀಂ ಪಾಷಾ (38), ಶೇಖ್ ತನ್ವರ್‌ (21), ಮಹಮದ್ ಸುಲ್ತಾನ್ (23), ಸೈಯದ್‌ ಫೈರೋಜ್‌ (32) ಹಾಗೂ ಇಮ್ರಾನ್ ಪಾಷಾ (34) ಬಂಧಿತರು. ‘ಇವರು ವಿವೇಕನಗರ ಠಾಣಾ ವ್ಯಾಪ್ತಿಯ ಇನ್ಫೆಂಟ್ ಜೀಸಸ್ ಚರ್ಚ್‌ ಸಮೀಪದ ದಾರಿಯಲ್ಲಿ ಒಂಟಿಯಾಗಿ ಬರುವವರ ಮೇಲೆ ಹಲ್ಲೆ ನಡೆಸಿ, ನಗದು-ಚಿನ್ನಾಭರಣ ದೋಚಲು ಆರೋಪಿಗಳು …

Read More »