Breaking News
Home / ರಾಜಕೀಯ / ಸೀಡಿ ಪ್ರಕರಣ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ S.I.T.

ಸೀಡಿ ಪ್ರಕರಣ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ S.I.T.

Spread the love

ಬೆಂಗಳೂರು,: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಇಬ್ಬರು ಶಂಕಿತ ಆರೋಪಿಗಳು ಸಲ್ಲಿಸಿದ್ದ ಅರ್ಜಿಗೆ ಎಸ್‍ಐಟಿ ಪೊಲೀಸರು ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್‍ಗೆ ತನಿಖೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಜತೆಗೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ.

ಅಶ್ಲೀಲ ಸೀಡಿ ಬೆಳಕಿಗೆ ಬಂದ ಬೆನ್ನಲ್ಲೇ ಪರಾರಿಯಾಗಿರುವ ಶಂಕಿತ ಆರೋಪಿಗಳಾದ ನರೇಶ್‍ಗೌಡ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನು ಕೋರಿ ಮೇ 24ರಂದು ಅರ್ಜಿ ಸಲ್ಲಿಸಿದ್ದರು. ಬುಧವಾರ ನ್ಯಾಯಪೀಠ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಎಸ್‍ಐಟಿ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ.

ರಮೇಶ್ ಜಾರಕಿಹೊಳಿಯಿಂದ ಹಣ ವಸೂಲಿ ಮಾಡಿದ್ದ ಸೀಡಿ ಗ್ಯಾಂಗ್, ಪ್ರಚೋದನಕಾರಿ ರೀತಿಯಲ್ಲಿ ಮಾತನಾಡಲು ಯುವತಿಗೆ ಸೂಚಿಸಿದ್ದರು. ಮೊಬೈಲ್, ವಾಟ್ಸ್‍ಆಪ್, ವಿಡಿಯೋ ಕಾಲ್ ಮೂಲಕವೂ ಸಂಪರ್ಕ ಸಾಧಿಸಲು ಹೇಳಿದ್ದರು ಎಂದು ಎಸ್‍ಐಟಿ ಪರ ವಕೀಲರು ಪೀಠಕ್ಕೆ ತಿಳಿಸಿದ್ದಾರೆ.

ಆರೋಪಿಗಳು ಈವರೆಗೂ ತಲೆಮರೆಸಿಕೊಂಡಿದ್ದಾರೆ, ನ್ಯಾಯಸಮ್ಮತ ತನಿಖೆಗೆ ಆರೋಪಿಗಳಿಂದ ಅಡ್ಡಿಯಾಗಿದೆ. ಸೀಡಿ ಬಹಿರಂಗವಾದ ದಿನವೇ ಯುವತಿ, ಆರೋಪಿಗಳ ನಡುವೆ ಹಲವು ಬಾರಿ ಮೊಬೈಲ್ ಸಂಭಾಷಣೆ ಆಗಿದೆ. ಯುವತಿ ಸ್ನೇಹಿತನ ಮೊಬೈಲ್ ಮೂಲಕವೂ ಕರೆ ಬಂದಿದೆ. ಸೀಡಿ ಪ್ರಕರಣ ಬಹಿರಂಗವಾದ ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಭೇಟಿಯಾಗಿದ್ದಾರೆ.

ಖಾಸಗಿ ಹೊಟೇಲ್‍ನಲ್ಲಿ ಭೇಟಿಯಾದ ದೃಶ್ಯಗಳು ಇವೆ. ನಂತರ ಯುವತಿ ಹಾಗೂ ಸ್ನೇಹಿತನನ್ನು ಗೋವಾಗೆ ಕಳುಹಿಸಿದ್ದರು. ಗೋವಾದಲ್ಲಿ ಅವರು ಉಳಿದುಕೊಳ್ಳಲು ಸವಿತಾ ಎಂಬಾಕೆಯ ನೆರವಿನಿಂದ ವ್ಯವಸ್ಥೆ ಮಾಡಲಾಗಿತ್ತು. ಯುವತಿಗೂ ಆರೋಪಿಗಳಿಗೂ ಮೊದಲೇ ಪರಿಚಯವಿದ್ದು, ಯುವತಿ ಮನೆಯಲ್ಲಿ 9.20 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಒಡೆದ ಮೊಬೈಲ್ ಹಾಗೂ ದಾಖಲೆ ಕೂಡ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹಾಗೂ ಯುವತಿ ಭೇಟಿ ಬಗ್ಗೆ, ಸುಲಿಗೆಯ ಹಣ ವಿನಿಮಯ ಬಗ್ಗೆ ಸಾಕ್ಷ್ಯ ಲಭ್ಯವಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಬಹುಮುಖ್ಯವಾಗಿ ಸೀಡಿ ಬಹಿರಂಗವಾದ ನಂತರ ಯುವತಿಯನ್ನು ಸಂತೈಸಲು ಮೊಹಾಂತಿ ಎಂಬುವನಿಗೆ ಸೂಚನೆ ನೀಡಲಾಗಿತ್ತು. ಮೊಹಾಂತಿ ತನ್ನ ಕಾರಿನಲ್ಲಿ ರಾಜ್ಯಾದ್ಯಂತ ಸುತ್ತಾಡಿಸಿದ್ದ. ಕರ್ನಾಟಕ, ಕೇರಳದಲ್ಲಿ ಮಾ.6ರಿಂದ 8ರ ನಡುವೆ ಸುತ್ತಾಡಿಸಿದ್ದ. ಇತ್ತ ಶ್ರವಣ್ ದೊಡ್ಡ ಕಾರ್ಯಾಚರಣೆಯಲ್ಲಿರುವುದಾಗಿ, ದೊಡ್ಡ ಲಾಭ ಬರುವ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಲೈಂಗಿಕ ಚಟುವಟಿಕೆ ಬಳಸಿಕೊಂಡು ಹಣ ಮಾಡುವುದಾಗಿ ಹೇಳಿದ್ದ.

ಅಲ್ಲದೇ, ನರೇಶ್ ಗೌಡ ಪುತ್ರಿಯ ನಾಮಕರಣದಲ್ಲಿ ಯುವತಿ ಭಾಗಿಯಾಗಿದ್ದು, ಸಂತ್ರಸ್ತೆ ಯುವತಿ ಹಾಗೂ ಶ್ರವಣ್ ಅದೇ ದಿನ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ, ಯುವತಿಯ ಬ್ಯಾಂಕ್ ಖಾತೆಗೆ ಶ್ರವಣ್ ಹಲವು ಬಾರಿ ಹಣ ಹಾಕಿದ್ದ. ಶ್ರವಣ್ ಮತ್ತು ಯುವತಿಯ ನಡುವೆ ಮೊದಲೇ ಸಂಪರ್ಕವಿತ್ತು. ಲೈಂಗಿಕ ಚಟುವಟಿಕೆಯ ಚಿತ್ರೀಕರಣದ ನಂತರ ಯುವತಿ ಕರೆ ಮಾಡಿ ಕೆಲಸ ಆಗಿದೆ, ಹೊರಡುತ್ತೇನೆ ಎಂದಿದ್ದಳು ಎನ್ನುವ ಮಾಹಿತಿಯನ್ನೂ ನ್ಯಾಯಪೀಠಕ್ಕೆ ತಿಳಿಸಲಾಗಿದೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ