Breaking News
Home / 2021 / ಮೇ (page 21)

Monthly Archives: ಮೇ 2021

ನೀರಿನಲ್ಲೂ ಪತ್ತೆಯಾದ ಕೋವಿಡ್ ವೈರಸ್​​​!

ಲಖನೌ : ಕೋವಿಡ್​ ಎರಡನೇ ಅಲೆಗೆ ಸಿಲುಕಿ ದೇಶಕ್ಕೆ ದೇಶವೇ ತತ್ತರಿಸಿರುವ ನಡುವೆ, ಈಗ ಇನ್ನೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದ್ದು, ನೀರಿನಲ್ಲಿ ಕೋವಿಡ್ ವೈರಸ್ ಪತ್ತೆಯಾಗಿರುವುದಾಗಿ ತಜ್ಞರು ಹೇಳಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್ ( ಐಸಿಎಂಆರ್​) ಮತ್ತು ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯುಹೆಚ್​ಒ ) ಜಂಟಿಯಾಗಿ ಕೊಳಚೆ ನೀರಿನಲ್ಲಿ ವೈರಸ್ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿತ್ತು.ಇದಕ್ಕಾಗಿ ಉತ್ತರ ಪ್ರದೇಶದ ಕೆಲ ಭಾಗಗಳಿಂದ ಕೊಳಚೆ ನೀರು …

Read More »

ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ಇನ್ನೂ ಪೂರ್ಣವಾಗಿಲ್ಲ: ಎಸ್‌ಪಿ

ವಿಜಯಪುರ: ‘ಬಾಗೇವಾಡಿ ತಾಲ್ಲೂಕಿನ ಗ್ರಾಮವೊಂದರ ಇಬ್ಬರು ಬಾಲಕಿಯರನ್ನು ಅತ್ಯಾಚಾರ ಮಾಡಿ, ಕೊಲೆಗೈದಿರುವ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿದೆ’ ಎಂದು ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರಾದ ಅಡಿವೆಪ್ಪ ಸಾಲಗಲ್, ಉಮೇಶ ನಡುವಿನಮನಿ, ದೇವೇಂದ್ರ ಹಾದಿಮನಿ, ಗುರುರಾಜ ಗುಡಿಮನಿ, ಸಂಜು ಕಂಬಾಗಿ ಮತ್ತಿತರರು ಆರೋಪಿಸಿದ್ದಾರೆ. ಈ ಸಂಬಂಧ ‘ಪ್ರಜಾವಾಣಿ’ಗೆ ಸೋಮವಾರ ಕರೆ ಮಾಡಿ ಮಾತನಾಡಿದ ಸಂಘಟನೆಗಳ ಮುಖಂಡರು, ‘ಬಾಲಕಿಯರ ಅತ್ಯಾಚಾರ, ಕೊಲೆ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸುವ ಹುನ್ನಾರ ನಡೆದಿದೆ. ಇದು ಸಂಪೂರ್ಣ …

Read More »

ಸಬ್‌ ಇನ್ಸ್ ಪೆಕ್ಟರ್‌ ಅರ್ಜುನ್‌ ನ್ನು ಜೈಲಿಗೆ ಕಳಿಸಲು ಸಂಸದ ಹನುಮಂತಯ್ಯ ಒತ್ತಾಯ

ಬೆಂಗಳೂರು: ‘ವಿಚಾರಣೆ ನೆಪದಲ್ಲಿ ದಲಿತ ಯುವಕನನ್ನು ಠಾಣೆಗೆ ಕರೆದೊಯ್ದು ಮೂತ್ರ ನೆಕ್ಕಿಸಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಅರ್ಜುನ್‌ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಜೊತೆಗೆ ಸೇವೆಯಿಂದಲೇ ವಜಾಗೊಳಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಒತ್ತಾಯಿಸಿದ್ದಾರೆ. ‘ಕಿರುಗುಂದ ಗ್ರಾಮದ ಕೆ.ಎಲ್‌.ಪುನೀತ್‌ ಜೊತೆ ಅರ್ಜುನ್‌ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಯಾಗಿ ಅವರು ನಡೆದುಕೊಂಡಿರುವ ರೀತಿ ಖಂಡನೀಯ. ಅವರ ಕ್ರೂರ ವರ್ತನೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದರೂ ಸರ್ಕಾರವು ಆರಂಭದಲ್ಲಿ ಯಾವುದೇ …

Read More »

ಸ್ಥಳೀಯ ಸಂಸ್ಥೆಗಳಿಗೆ SDA, ಬಿಲ್ ಕಲೆಕ್ಟರ್ ಹುದ್ದೆಗಳಿಗೆ ನೇರ ನೇಮಕಾತಿ

ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ದ್ವಿತೀಯ ದರ್ಜೆ ಸಹಾಯಕರು ಮತ್ತು ಬಿಲ್ ಕಲೆಕ್ಟರ್ ಹುದ್ದೆಗಳ ನೇಮಕಾತಿ ವಿಧಾನ ಬದಲಿಸಿದೆ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಹೊಸ ನೇಮಕಾತಿ ನಿಯಮ ಜಾರಿಯಾಗಲಿದ್ದು, ದ್ವಿತೀಯ ದರ್ಜೆ ಸಹಾಯಕರು ಮತ್ತು ಬಿಲ್ ಕಲೆಕ್ಟರ್ ಹುದ್ದೆಗಳಿಗೆ ಪರೀಕ್ಷೆ ಇರುವುದಿಲ್ಲ. ನೇರ ನೇಮಕಾತಿ ಮೂಲಕ ಆಯ್ಲೆ ಮಾಡಿಕೊಳ್ಳಲಾಗುವುದು. ಜಿಲ್ಲಾಧಿಕಾರಿಗಳ ಸಮಿತಿ ಆಯ್ಕೆ ತೀರ್ಮಾನ ಕೈಗೊಳ್ಳಲಿದೆ. ಲೋಕಸೇವಾ ಆಯೋಗದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, ಅಂಕಗಳ ಆಧಾರದ ಮೇಲೆ …

Read More »

ಸೋಂಕಿತರನ್ನು ಕುಣಿದು, ರಂಜಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ : ಹೊನ್ನಾಳ್ಳಿಯ ಹೋರಿಯ ಡ್ಯಾನ್ಸ್ ಸಖತ್ ವೈರಲ್.!

ಹೊನ್ನಾಳ್ಳಿ : ಈಗಾಗಲೇ ಅನೇಕ ವಿಷಯಗಳಿಂದ ಸುದ್ದಿಯಾಗಿರುವಂತ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳ್ಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ, ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕೊರೋನಾ ಸೋಂಕಿತರೊಂದಿಗೆ ಕುಣಿದು ಕುಪ್ಪಳಿಸುವ ಮೂಲಕ, ಅವರನ್ನು ರಂಜಿಸಿ, ಸೋಂಕಿನ ಬಾಧೆಯಿಂದ ಕೆಲಕಾಲ ಮರೆಯುವಂತೆ ಮಾಡಿದ್ದಾರೆ. ಹೌದು.. ಹೊನ್ನಾಳ್ಳಿಯ ಹೋರಿ ಎಂದು ಸಹ ಪ್ರಸಿದ್ಧವಾಗಿರುವಂತ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಕೊರೋನಾ ಸೋಂಕಿತರಿಗೆ ಒಂದಷ್ಟು ಉಲ್ಲಾಸಭರಿತರನ್ನಾಗಿ ಮಾಡಿದ್ದಾರೆ. ಅದು ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ರಿಮೇಕ್ ಹಾಡನ್ನು ಹಾಕಿ, …

Read More »

ಪ್ಯಾಕೇಜ್ ಪರಿಹಾರ ಸಿಗದವರಿಗೆ ಸಿಹಿ ಸುದ್ದಿ: 10 -12 ದಿನಗಳಲ್ಲಿ ಮತ್ತೊಂದು ವಿಶೇಷ ಪ್ಯಾಕೇಜ್; ಸಿಎಂ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲವಾಗುವಂತೆ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು. ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ಯಾಕೇಜ್ ನಲ್ಲಿ ಪರಿಹಾರಧನ ಸಿಗದವರಿಗೆ ಮುಂದಿನ 10 -12 ದಿನಗಳಲ್ಲಿ ಇನ್ನೊಂದು ಪ್ಯಾಕೇಜ್ ಮೂಲಕ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಹಣಕಾಸಿನ ಇತಿಮಿತಿಯಲ್ಲಿ ಆರ್ಥಿಕ ಪ್ಯಾಕೇಜ್ ವಿಚಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ಹತ್ತರಿಂದ ಹನ್ನೆರಡು ದಿನಗಳಲ್ಲಿ ಪರಿಹಾರ ದಿನ ಸಿಗದವರಿಗೆ ಇನ್ನೊಂದು ಪ್ಯಾಕೇಜ್ ನೀಡಲು ಪ್ರಯತ್ನಿಸುತ್ತೇನೆ ಎಂದು …

Read More »

ಭಕ್ತಿ – ಶ್ರದ್ದಾ ಕೇಂದ್ರ ಇಡಗುಂಜಿಯ ಸಿದ್ದಿ ವಿನಾಯಕ ದೇವಸ್ಥಾನ

ಉತ್ತರ ಕನ್ನಡ ಜಿಲ್ಲೆ ಹಲವಾರು ಪ್ರಾಕೃತಿಕ ವಿಸ್ಮಯವನ್ನು ಹೊಂದಿದ್ದು, ಮಾತ್ರವಲ್ಲ ತನ್ನ ಮಡಿಲಿನಲ್ಲಿ ಹಲವಾರು ಶಕ್ತಿ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವೂ ಸಹ ಅತ್ಯಂತ ಶ್ರದ್ದಾ ಕೇಂದ್ರವಾಗಿದ್ದು ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದೆ. ಕರ್ನಾಟಕದ ಅತ್ಯಂತ ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ ಮಾತ್ರವಲ್ಲ ಸುಮಾರು 1500 ವ‌ರ್ಷಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿದ ಇಡಗುಂಜಿ ವಿನಾಯಕ ದೇವಸ್ಥಾನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ …

Read More »

ಅರಬ್ ನಿಂದ ಬಂತು 220 ಮೆಟ್ರಿಕ್ ಟನ್ ಜೀವರಕ್ಷಕ ಆಕ್ಸಿಜನ್

ಮಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ರಾಜ್ಯದಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಎದುರಾಗಿದ್ದು, ಹೊರದೇಶಗಳಿಂದ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಇದೀಗ ಯುನೈಟೆಡ್ ಅರಬ್ ಎಮಿರೈಟ್ಸ್ ನಿಂದ 220 ಮೆಟ್ರಿಕ್ ಟನ್ ಆಕ್ಸಿಜನ್ ಆಗಮಿಸಿದೆ.   ಭಾರತೀಯ ನೌಕಾಪಡೆಯ ಐ ಎನ್ ಎಸ್ ಶಾರ್ದೂಲ ಎಂಬ ವಾರ್ ಶಿಪ್, ಕುವೈಟ್ ನಿಂದ 11 ಕಂಟೇನರ್ ಗಳಲ್ಲಿ ಒಟ್ಟು 220 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ನ್ನು ಹೊತ್ತು ತಂದಿದೆ. ನವಮಂಗಳೂರು …

Read More »

ಮೌಢ್ಯದ ಕಡೆ ಮುಖ ಮಾಡಿದ ಗ್ರಾಮೀಣ ಭಾಗದ ಜನ ನೂರಾರು ಕೆ.ಜಿ ಅನ್ನ ಮಣ್ಣುಪಾಲಾಗಿದೆ.

ಬಳ್ಳಾರಿ: ಹಳ್ಳಿ ಹಳ್ಳಿಗೂ ಸೋಂಕು ಹಬ್ಬಿದ ಹಿನ್ನೆಲೆಯಲ್ಲಿ ಮೌಢ್ಯದ ಕಡೆ ಮುಖ ಮಾಡಿದ ಗ್ರಾಮೀಣ ಭಾಗದ ಜನ, ಇದೀಗ ನೂರಾರು ಕೆಜಿ ಅನ್ನ ಮಣ್ಣುಪಾಲು ಮಡಿರುವ ಘಟನೆ ಬಳ್ಳಾರಿ ತಾಲೂಕಿನ ಡಿ ಕಗ್ಗಲ್ಲು ಗ್ರಾಮದಲ್ಲಿ ನಡೆದಿದೆ. ಕೊರೊನಾ ದೂರವಾಗಲಿ ಅಂಥಾ ನೂರಾರು ಕೆಜಿ ಅನ್ನ ಮಣ್ಣುಪಾಲು ಮಾಡಿದ್ದಾರೆ. ಮನೆ ಮನೆಯಲ್ಲಿ ಅನ್ನ ಮಾಡಿಸಿ ರಾತ್ರಿ ವೇಳೆಯಲ್ಲಿ ಊರ ಆಚೆ ಚೆಲ್ಲಿ ಬಂದಿದ್ದಾರೆ. ಗ್ರಾಮದಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಹಳ್ಳಿ ಜನತೆ …

Read More »

ಹೋಮ ಹವನ ಮಾಡುವ ಮೂಲಕ ವಾತಾವರಣ ಶುದ್ಧೀಕರಿಸುತ್ತದೆ, : ಅಭಯ್ ಪಾಟೀಲ್

ಬೆಳಗಾವಿ: ಹೋಮ ಹವನ ಮಾಡುವ ಮೂಲಕ ವಾತಾವರಣ ಶುದ್ಧೀಕರಿಸುತ್ತದೆ, ಸನಾತನ ಹಿಂದೂ ಸಂಸ್ಕೃತಿ, ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ ಇದೀಗ ಕೊರೊನಾ ಎಲ್ಲ ಕಡೆ ಹೆಚ್ಚಾಗಿದ್ದರಿಂದ ನಮ್ಮ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರತಿ ಗಲ್ಲಿಯಲ್ಲಿ ಆಯಾ ಭಾಗದ ಯುವಕ ಮಂಡಳಿ, ಮಹಿಳಾ ಸಂಘಗಳು ಹಾಗೂ ಅಲ್ಲಿನ ಪ್ರಮುಖರು ತಮ್ಮ ಮನೆ, ಗಲ್ಲಿಗಳಲ್ಲಿ ಹೋಮ ಮಾಡಬೇಕಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.   ಹೊಸೂರಿನಲ್ಲಿ ಸುಮಾರು 50 …

Read More »