Breaking News
Home / 2021 / ಮೇ / 16 (page 5)

Daily Archives: ಮೇ 16, 2021

ಒಳಿತು ಮಾಡು ಮನುಷ್ಯಾ.. ನೀ ಇರೋದು ಮೂರು ದಿವಸಾ: ಹಿಂಗೆ ನಡೆದುಕೊಳ್ಳುತ್ತಿದ್ದಾರೆ ಹುಬ್ಬಳ್ಳಿ ಪೊಲೀಸರು…!

ಹುಬ್ಬಳ್ಳಿ: ಕೊರೋನಾ ಎಂಬ ಮಹಾಮಾರಿ ಪ್ರತಿಯೊಬ್ಬರ ನೆಮ್ಮದಿಯನ್ನ ಹಾಳು ಮಾಡುವುದಲ್ಲದೇ, ಬದುಕನ್ನ ನಿರ್ಜೀವಿಯನ್ನಾಗಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತೆಯಿದೆ. ತಾನೂ ಇರುವುದೆಷ್ಟು ದಿನ ಎಂಬುದು ಗೊತ್ತೆಯಿಲ್ಲದಿದ್ದರೂ, ಮನುಷ್ಯ ಮಾತ್ರ ಮಾನವೀಯ ಇನ್ನೂ ಮೈಗೂಡಿಸಿಕೊಳ್ಳುತ್ತಿಲ್ಲ. ಆದರೆ, ಸದಾಕಾಲ ಸಾರ್ವಜನಿಕರಿಂದ ವಿನಾಕಾರಣ ಬೈಸಿಕೊಳ್ಳುವ ಪೊಲೀಸರು ಮಾತ್ರ, ತಾವೂ ಎಷ್ಟು ಮಾನವೀಯತೆ ಹೊಂದಿದ್ದೇವ ಎಂಬುದನ್ನ ಸದ್ದಿಲ್ಲದೇ ತೋರಿಸಿಕೊಂಡು ಹೋಗುತ್ತಿದ್ದಾರೆ.. ಹುಬ್ಬಳ್ಳಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಬಂದ ನಂತರ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಗಳು …

Read More »

ಕೊರೋನಾ ಭಯ ಬೇಡ- ನಿಮ್ಮೊಂದಿಗೆ ಡಾ.ಸೀಮಾ ಸಾಧಿಕಾ ಇರ್ತಾರೆ…!

ಬೆಂಗಳೂರು: ಕೊರೋನಾ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯ ಬಹುತೇಕರಿಗೆ ಈಗಾಗಲೇ ಸಹಾಯ ಮಾಡುತ್ತಿರುವ ನಮ್ಮ ಮಿತ್ರ ಫೌಂಡೇಷನ್ ಸಂಸ್ಥಾಪಕಿ ಡಾ.ಸೀಮಾ ಸಾಧಿಕಾ ಅವರು, ಪ್ರತಿಯೊಂದು ಮಾಹಿತಿಯನ್ನ ನೀಡಲು ಮುಂದಾಗಿದ್ದಾರೆ.     ಕೊರೋನಾ ಸಮಯದಲ್ಲಿ ಆರೋಗ್ಯ ಏರುಪೇರಾದ ತಕ್ಷಣ ಏನು ಮಾಡಬೇಕು. ಮನೆಯಲ್ಲಿಯೇ ಹೇಗೆ ಆರೋಗ್ಯ ಸುಧಾರಿಸಿಕೊಳ್ಳಬಹುದು. ನೀವು ಯಾವ ಔಷಧ ತೆಗೆದುಕೊಳ್ಳಬಹುದೆಂಬ ಮಾಹಿತಿಯನ್ನ ನೀಡಲಿದ್ದಾರೆ. ಅವಶ್ಯಕವಿದ್ದ ಸಮಯದಲ್ಲಿ ಆಸ್ಪತ್ರೆಗಳ ಮಾಹಿತಿಯನ್ನೂ ತಮಗೆ ನೀಡಲಿದ್ದಾರೆ.     ಜ್ವರ, ಕೆಮ್ಮು …

Read More »

ಕೋವಿಡ್ ಕೇರ್ ಸೆಂಟರನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟನೆ ಮಾಡಿದರು

ದಾವಣಗೆರೆ: ಕೋವಿಡ್ ಸೋಂಕಿತರಿಗಾಗಿ ದಾವಣಗೆರೆ-ಶಿರಮಗೊಂಡನಹಳ್ಳಿ ಮಾರ್ಗದಲ್ಲಿರುವ ತರಳಬಾಳು ವಿದ್ಯಾರ್ಥಿನಿಯರ ವಸತಿನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ವ್ಯವಸ್ಥೆಗೊಳಿಸಲಾಗಿದ್ದು, ಶನಿವಾರ ಸಂಸದ ಜಿ.ಎಂ. ಸಿದ್ದೇಶ್ವರ ಅದಕ್ಕೆ ಚಾಲನೆ ನೀಡಿದರು. ‘ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕಿತರಿಂದ ಇತರರಿಗೆ ರೋಗ ಹರಡುವುದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ವಿವಿಧೆಡೆ ವ್ಯವಸ್ಥಿತವಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ತರಳಬಾಳು ವಿದ್ಯಾರ್ಥಿನಿಯರ ವಸತಿನಿಲಯವನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ …

Read More »

ಲಾಕ್‌ಡೌನ್‌ ಜಾರಿಗೊಳಿಸಿ ಇಷ್ಟು ದಿನಗಳಾದರೂ ರಸ್ತೆಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಗಿತ್ತು.

ಬೆಂಗಳೂರು: ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಸೆಮಿ ಲಾಕ್‌ಡೌನ್‌ ಜಾರಿಗೊಳಿಸಿ ಇಷ್ಟು ದಿನಗಳಾದರೂ ರಸ್ತೆಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಗಿತ್ತು. ಆದರೆ ತೌಕ್ಟೆ ಚಂಡಮಾರುತ ಶನಿವಾರ ಚಿತ್ರಣವನ್ನೇ ಬದಲಿಸಿದ್ದರಿಂದ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಜನ ರಸ್ತೆಗಿಳಿಯಲು ಮನಸ್ಸನ್ನೇ ಮಾಡಲಿಲ್ಲ. ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲೂ ಅಗತ್ಯ ವಸ್ತುಗಳನ್ನು ಖರೀದಿಸಿ 10 ಗಂಟೆ ವೇಳೆ ಮನೆ ಸೇರಿಕೊಂಡಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಜನ ಸಂಚಾರ, ವಾಹನ ಸಂಚಾರ ಬಹುತೇಕ ವಿರಳವಾಗಿತ್ತು. ದಕ್ಷಿಣ ಕನ್ನಡದಲ್ಲಿ …

Read More »

ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನವದೆಹಲಿ: ಅರಬ್ಬೀ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಸೃಷ್ಟಿಯಾಗಿರುವ ತೌಕ್ಟೆಚಂಡಮಾರುತ, ಶನಿವಾರ ಮತ್ತಷ್ಟುಪ್ರಬಲವಾಗಿದ್ದು, ದಕ್ಷಿಣದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸುರಿಸಿದೆ. ಜೊತೆಗೆ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ಇನ್ನಷ್ಟುಗಂಭೀರವಾಗಲಿದೆ. ಮೇ 18ರಂದು ಗುಜರಾತ್‌ನ ಪೋರಬಂದರ್‌ ಮತ್ತು ನಲಿಯಾ ನಡುವಿನ ಕರಾವಳಿ ತೀರದ ಮೇಲೆ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಂಡಮಾರುತದ ಪ್ರಭಾವದಿಂದಾಗಿ ಲಕ್ವದ್ವೀಪ, ಕೇರಳದಲ್ಲಿ ಶುಕ್ರವಾರ ರಾತ್ರಿಯಿಂದಲೂ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಭಾರೀ …

Read More »

ಕೊರೊನಾ ಎರಡನೇ ಅಲೆ ಹರಡುವಿಕೆ ತೀವ್ರಗತಿಯದ್ದಾಗಿದೆ.

ಬೆಳಗಾವಿ: ಕೊರೊನಾ ಎರಡನೇ ಅಲೆ ಹರಡುವಿಕೆ ತೀವ್ರಗತಿಯದ್ದಾಗಿದೆ. ಸೋಂಕಿತರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲದೇ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಹೀಗಾಗಿ ಸರ್ಕಾರ ಪರಿಸ್ಥಿತಿಯನ್ನು ಹತೋಟಿಗೆ ತರಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಕೊವಿಡ್ ಕೇರ್ ಸೆಂಟರ್ ವ್ಯವಸ್ಥೆ ಕೂಡ ಮಾಡುತ್ತಿದೆ. ಅಷ್ಟೇ ಅಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಆಕ್ಸಿಜನ್ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಕೊರೊನಾ ಸೋಂಕಿತರಿಗೆ ಮಾತ್ರ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಈ …

Read More »

ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ದಿನ ಡ್ಯೂಟಿ ಮಾಡಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿಯಾಗಿದ್ದಾರೆ.

ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ದಿನ ಡ್ಯೂಟಿ ಮಾಡಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿಯಾಗಿದ್ದಾರೆ. 52 ವರ್ಷದ ವಿಜಯಶ್ರೀ ನಾಗನೂರೆ ಸೋಂಕಿಗೆ ಬಲಿಯಾದ ಅಧಿಕಾರಿ. ಇವರು ಬೆಳಗಾವಿ ನಗರದ ಯಮನಾಪುರ ನಿವಾಸಿ. ವಿಜಯಶ್ರೀ ನಾಗನೂರೆಗೆ ಮೇ 3 ರಂದು ಕೊರೊನಾ ಸೋಂಕು ದೃಢವಾಗಿತ್ತು. ಕಳೆದ ಹನ್ನೆರಡು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಮೇ 15) ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ವಿಜಯಶ್ರೀ ಸದ್ಯ …

Read More »