Home / 2021 / ಮೇ / 16

Daily Archives: ಮೇ 16, 2021

ಸರ್ಕಾರದ ವಿನಾಶಕಾರಿ ನೀತಿಯಿಂದ ಕೊರೊನಾ 3ನೇ ಅಲೆ : ರಾಹುಲ್ ಗಾಂಧಿ

ನವದೆಹಲಿ : ಕೊರೊನಾ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರಾಷ್ಟ್ರೀಯ ಲಸಿಕಾ ವಿತರಣಾ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಸರ್ಕಾರದ ವಿನಾಶಕಾರಿ ನೀತಿ, ಸಂತ್ರಸ್ತರ ಶವ ನದಿಯಲ್ಲಿ ತೇಲುತ್ತಿರುವುದರ ಕುರಿತಾಗಿ ಗಂಗಾ ಮಾತೆ ದುಃಖಿಸುವಂತೆ ಮಾಡಿದ್ದಾರೆ. ಭಾರತ ಸರ್ಕಾರದ ಲಸಿಕೆ ವಿತರಣಾ ಯೋಜನೆ ವಿನಾಶಕಾರಿ ಮೂರನೇ ಅಲೆಯನ್ನು ಖಚಿತಪಡಿಸುತ್ತದೆ. ಇದನ್ನು ಮತ್ತೆ ಸರಿದೂಗಿಸಲು …

Read More »

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಒಂದು ವಾರ ಲಾಕ್‌ಡೌನ್‌ ವಿಸ್ತರಣೆ ; ಅರವಿಂದ್‌ ಕೇಜ್ರೀವಾಲ್‌

ನವದೆಹಲಿ: “ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್‌ಡೌನ್‌ ವಿಸ್ತರಿಸಲಾಗಿದ್ದು, ಮೇ 24ರವರೆಗೆ ಲಾಕ್‌ಡೌನ್‌‌ ಅನ್ನು ವಿಸ್ತರಿಸಲು ನಿರ್ಧರಿಸಲಾಗಿದೆ” ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ. ಈ ಕುರಿತು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌‌ ಮಾಹಿತಿ ನೀಡಿದ್ದು, “ಲಾಕ್‌ಡೌನ್‌ ಪರಿಣಾಮ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಇಷ್ಟು ದಿನಗಳ ಕಾಲ ನಾವು ಪಟ್ಟ ಪರಿಶ್ರಮವನ್ನು ನಾವು ನಷ್ಟವಾಗಲು ಬಿಡುವುದಿಲ್ಲ. ಹಾಗಾಗಿ ಇನ್ನೂ ಒಂದು ವಾರ ಲಾಕ್‌ಡೌನ್‌ ಅನ್ನು …

Read More »

5.5 ಕೋಟಿ ಮಂದಿಗೆ ಉಚಿತ ರೀಚಾರ್ಚ್ ಆಫರ್ ಕೊಟ್ಟ ಏರ್‌ಟೆಲ್

ಬೆಂಗಳೂರು, ಮೇ 16: ಕೊರೊನಾ ಸಂಕಷ್ಟ ಕಾಲದಲ್ಲಿ ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದ ಪರಿಸ್ಥಿತಿಯನ್ನು ಕೋಟ್ಯಂತರ ಮಂದಿ ಎದುರಿಸುತ್ತಿದ್ದಾರೆ. ಇಂಥ ಕಡಿಮೆ ಆದಾಯಯುಳ್ಳ ಮಂದಿಗೆ ಉಚಿತವಾಗಿ ಪ್ರೀಪೇಯ್ಡ್ ರೀಚಾರ್ಚ್ ಕೊಡುಗೆಯನ್ನು ಭಾರ್ತಿ ಏರ್‌ಟೆಲ್‌ ಘೋಷಿಸಿದೆ. ಇದರಿಂದ ಸುಮಾರು 5.5 ಕೋಟಿ ಮಂದಿಗೆ ನೆರವಾಗಲಿದೆ. ಇದಲ್ಲದೆ 79 ರು ಗಳ ರೀಚಾರ್ಜ್ ಕೂಪನ್ ಮೂಲಕ ಡಬ್ಬಲ್ ಕೊಡುಗೆ ಪಡೆದುಕೊಳ್ಳಬಹುದು ಎಂದು ಸಂಸ್ಥೆ ಹೇಳಿದೆ. ಸುಮಾರು 270 ಕೋಟಿ ರು ಮೌಲ್ಯದ …

Read More »

ಮಾನವೀಯತೆಯ ಮೂಲಕ ಅಂತ್ಯ ಸಂಸ್ಕಾರ ಮಾಡುವ ರಬಕವಿಯ ಮುಸ್ಲಿಂ ಯುವಕರು

ಬನಹಟ್ಟಿ : ಮಹಾಮಾರಿ ಕೋವಿಡ್‌ನಿಂದಾಗಿ ಪ್ರತಿ ನಿತ್ಯ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಶವ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಮುಸ್ಲಿಂ ಯುವಕರು ಜಾತ್ಯತೀತ ಭಾವನೆಯಿಂದ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ರಬಕವಿಯ ಅಂಜುಮನ್ ಇಸ್ಲಾಂ ಮುಸ್ಲಿಂ ಜಮಾತನ ಮುಖಂಡರ ಚಿಂತನೆ ಮೂಲಕ ಯುವಕರ ತಂಡ ರಚನೆ ಮಾಡಿ, ಅಂತ್ಯಸಂಸ್ಕಾರ ಮಾಡಲು ಸಜ್ಜಾಗಿದ್ದಾರೆ. ಯಾವುದೇ ಜಾತಿ ಭೇದ ನೋಡದೆ, ಅವರ …

Read More »

ಬ್ಲಾಕ್ ಫಂಗಲ್ ಪೀಡಿತ ಯುವಕನ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ಡಿಸಿಎಂ ಸವದಿ

ಚಿಕ್ಕೋಡಿ:ರಾಜ್ಯಾದ್ಯಂತ ಕೊವಿಡ್ ಎರಡನೆಯ ಅಲೆಯ ನಡುವೆಯೆ ಕೊವಿಡ್ ಚಿಕಿತ್ಸೆ ಪಡೆದು ಗುಣಮುಖರಾದವರನ್ನು ಭಾಧಿಸುತ್ತಿರುವ ಕಪ್ಪು ಶಿಲಿಂಧ್ರ (ಬ್ಲಾಕ್ ಫಂಗಲ್ ಇಂಪೆಕ್ಷನ್) ರೋಗ ಹಲವರಲ್ಲಿ ಕಂಡು ಬರುತ್ತಿದೆ.ಆರಂಭದಲ್ಲಿ ಗಲ್ಲ,ಮೂಗು,ಕಣ್ಣಿನ ರೆಪ್ಪೆಯ ಮೇಲ್ಭಾಗದಲ್ಲಿ ಬಾವು ಕಾಣಿಸಿಕೊಂಡು ನಂತರದಲ್ಲಿ ದೇಹದ ಒಳಭಾಗಕ್ಕೆ ಹರಡಿ ಜೀವಕ್ಕೆ ಎರವಾಗುತ್ತಿರುವ ಈ ಕಾಯಿಲೆ ಕೋವಿಡ್ ಚಿಕಿತ್ಸೆ ಪಡೆದವರಲ್ಲಿ ಕಂಡುಬರುತ್ತಿರುವದು ತೀವ್ರ ತಲೆನೋವಾಗಿ ಪರಿಣಮಿಸಿದೆ. ಚಿಕಿತ್ಸೆಗೆ ಬಳಕೆ ಆಗುವ ಔಷಧಿಗಳ ಅಡ್ಡಪರಿಣಾಮ ಎಂದು ಹೇಳುತ್ತಿದ್ದರೂ ಕೂಡ ಕೋವಿಡ್ ಗಿಂತ ಮುಂದುವರೆದ …

Read More »

ಸಾಯೋರು ಎಲ್ಲಾದರೂ ಸಾಯಲಿ’ : ಶಾಸಕ ಚಂದ್ರಪ್ಪ

ಚಿತ್ರದುರ್ಗ : ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ನಿರ್ಮಾಣದ ವಿಚಾರವಾಗಿ ಹೊಳಲ್ಕೆರೆ ಬಿಜೆಪಿ‌ ಶಾಸಕ ಹಾಗೂ ಸಾರಿಗೆ ನಿಗಮ‌ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಡಿಹೆಚ್‌ಓ ಡಾ.ಪಾಲಾಕ್ಷ ಜೊತೆ ಮಾತಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಶಾಸಕರು, ‘ನಾನು ಇಲ್ಲಿ ಆಸ್ಪತ್ರೆ‌ ಮಾಡೋದಿಲ್ಲ‌, ಅದು ನನಗೆ ಅವಶ್ಯಕತೆ ಇಲ್ಲ, ಸಾಯೋರು ಎಲ್ಲಾದರೂ ಸಾಯಲಿ’ ಎಂದು ನುಡಿದಿದ್ದಾರೆ. ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರ ಬಳಿ ಶಾಸಕರು ಹಾಗೂ ಡಿಎಚ್‌ಒ ನಡುವೆ ಈ ವಾಗ್ವಾದ …

Read More »

ಕ್ಷಮೆ ಕೇಳಲಿ ಎಂದ ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆಗೈದ ಶಾಸಕ ಸಾರಾ ಮಹೇಶ್!

ಮೈಸೂರು: ಚಾಮರಾಜನಗರ ಆಕ್ಸಿಜನ್​ ದುರಂತ ನಡೆದಾಗ ನನ್ನ ವಿರುದ್ಧ ಆರೋಪ ಮಾಡಿದವರು ಕ್ಷಮೆ ಕೇಳಲಿ ಎಂಬ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆಗೆ ಮಾಜಿ ಸಚಿವ ಸಾ.ರಾ. ಮಹೇಶ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ​ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಾ.ರಾ. ಮಹೇಶ್​, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು ಕೇವಲ 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದು ಸುಳ್ಳಾ? ಎಂದು ಪ್ರಶ್ನೆಯನ್ನು ಆರಂಭಿಸಿದರು. ಪ್ರಶ್ನೆಗಳ ಸವಾಲನ್ನು ಮುಂದುವರಿಸಿದ ಸಾ.ರಾ.ಮಹೇಶ್​, ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ …

Read More »

”ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ, ಇನ್ನಾದರೂ ವಾಸ್ತವ ಅರಿತು ಕೆಲಸ ಮಾಡಿ”

ಬೆಂಗಳೂರು, ಮೇ 16: ಕೋವಿಡ್ ಮೊದಲ ಅಲೆಯ ನಂತರ ಜನರು, ಸರಕಾರದಿಂದ ನಿರ್ಲಕ್ಷ್ಯ ಉಂಟಾಯಿತು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದು, ಇದನ್ನು ಉಲ್ಲೇಖಿಸಿದ ರಾಜ್ಯ ಕಾಂಗ್ರೆಸ್ ‘ಈಗ ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ. ಇನ್ನಾದರೂ ವಾಸ್ತವ ಅರಿತು ಕೆಲಸ ಮಾಡಿ’ ಎಂದು ರಾಜ್ಯ ಸರಕಾರವನ್ನು ಕುಟುಕಿದೆ. ಕೊರೋನ ಸಾಂಕ್ರಾಮಿ ರೋಗದ ಮೊದಲ ಅಲೆಯ ನಂತರ ರಾಷ್ಟ್ರದ ಎಲ್ಲಾ ವರ್ಗದವರು ತೋರಿಸಿರುವ ನಿರ್ಲಕ್ಷ್ಯವು ದೇಶಾದ್ಯಂತ ಈಗ ತಲೆದೋರಿರುವ …

Read More »

BIG NEWS: ಸಾಯೋರು ಎಲ್ಲಾದರೂ ಸಾಯಲಿ; ಬಿಜೆಪಿ ಶಾಸಕನ ದರ್ಪಕ್ಕೆ ಅವಾಕ್ಕಾದ ಆರೋಗ್ಯಾಧಿಕಾರಿ

ಚಿತ್ರದುರ್ಗ: ಆಕ್ಸಿಜನ್ ಬೆಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಆರೋಗ್ಯಾಧಿಕಾರಿ ವಿರುದ್ಧ ದರ್ಪದಿಂದ ಮಾತನಾಡಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪ್ರವಾಸಿ ಮಂದಿರದ ಬಳಿ 50 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ವಾರ್ಡ್ ನಿರ್ಮಿಸಲಾಗಿದ್ದು, ಈ ಬಗ್ಗೆ ಶಾಸಕ ಎಂ.ಚಂದ್ರಪ್ಪ ಅವರಿಗೆ ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಪಾಲಾಕ್ಷ, 50 ಬೆಡ್ ಗಳಲ್ಲಿ 10 ಬೆಡ್ ಗಳಿಗೆ ಮಾತ್ರ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. …

Read More »

ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಆನೆಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಚಾಮರಾಜನಗರ: ಇಲ್ಲಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ಮೊಳೆಯೂರು ವಲಯದ ಮೀನಕಟ್ಟೆಯ ಅರಣ್ಯದಲ್ಲಿ ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹೆಣ್ಣಾನೆಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ರಕ್ಷಿಸುವಲ್ಲಿ ಯಶಸ್ವಿ ಆಗಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೆರೆಯಲ್ಲಿ ಕೆಸರು ಉಂಟಾಗಿತ್ತು. ಕೆರೆಗೆ ನೀರು ಕುಡಿಯು ಬಂದಿದ್ದ ಕಾಡಾನೆಯೊಂದು ಕೆಸರಿನಲ್ಲಿ ಸಿಲುಕಿ ಮೇಲೇಳಲಾಗದೇ ಗಂಟೆಗಟ್ಟಲೆ ಕಷ್ಟ ಪಡುತಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಜೆಸಿಬಿ ಯೊಂದಿಗೆ ತೆರಳಿ ಆನೆಗೆ ತೊಂದರೆ ಆಗದಂತೆ …

Read More »