Breaking News
Home / 2021 / ಏಪ್ರಿಲ್ (page 89)

Monthly Archives: ಏಪ್ರಿಲ್ 2021

ಮಂಜುಕವಿದ ವಾತಾವರಣ: ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ವಿಮಾನ ಮಂಗಳೂರಿಗೆ

ಹುಬ್ಬಳ್ಳಿ, ಏಪ್ರಿಲ್ 3: ದಟ್ಟವಾದ ಮಂಜು ಹಾಗೂ ಮೋಡಕವಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ, ಮಂಗಳೂರು ಕಡೆಗೆ ಹಾರಾಟ ನಡೆಸಿದ ಘಟನೆ ಶನಿವಾರ ಮುಂಜಾನೆ ನಡೆದಿದೆ.   ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಇಂಡಿಗೋ ವಿಮಾನ ಮಾರ್ಗ ಬದಲಿಸಿಕೊಂಡು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಪ್ರಯಾಣ ಬೆಳೆಸಿತು. ಶನಿವಾರ ಬೆಳಗ್ಗೆ ಸರಿಯಾಗಿ 7.20ಕ್ಕೆ ಆಗಮಿಸಿದ ಇಂಡಿಗೋ ವಿಮಾನ, ಹುಬ್ಬಳ್ಳಿ ನಗರ ಸುತ್ತಮುತ್ತ ದಟ್ಟ ಮಂಜು …

Read More »

ಡಿ.ಕೆ.ಶಿವಕುಮಾರ್ ಕೇಳಿ ಭಾರತೀಯ ಜನತಾ ಪಕ್ಷ ಆಡಳಿತ ಮಾಡಲ್ಲ: ಗೋವಿಂದ ಕಾರಜೋಳ

ಬೆಳಗಾವಿ: ಡಿ.ಕೆ.ಶಿವಕುಮಾರ್ ಕೇಳಿ ಭಾರತೀಯ ಜನತಾ ಪಕ್ಷ ಆಡಳಿತ ಮಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರರ್​ಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಇಂದು ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಿಜೆಪಿ ಪದಾಧಿಕಾರಿಗಳ ಹಾಗೂ ಪ್ರಮುಖರ ಸಭೆ ನಡೆಯುತ್ತಿದ್ದು, ಸಭೆಗೂ ಮುನ್ನ ಮಾತನಾಡಿದರು. ಸಿಎಂ ಬಿಎಸ್​ವೈಗೆ ತಮ್ಮ ಆಡಳಿತ ಸರಿ ಅನಿಸಿದ್ರೆ ಈಶ್ವರಪ್ಪರನ್ನು ಡಿಸ್ಮಿಸ್ ಮಾಡಲಿ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ …

Read More »

ಸನ್ಮಾನ್ಯ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರವಾಗಿ ಮತಯಾಚನೆಯ ಕಾರ್ಯಕ್ರಮ ಉಚಗಾಂವ ಪ್ರದೇಶದಲ್ಲಿ ಜರುಗಿತು.

  ಇವತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾಂವ ಪ್ರದೇಶದಲ್ಲಿ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರವಾಗಿ ಮತಯಾಚನೆಯ ಕಾರ್ಯಕ್ರಮ ಜರುಗಿತು. ಸತೀಶಣ್ಣಾ ಜಾರಕಿಹೊಳಿಯವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದು, ಕಳೆದ 30 ವರ್ಷಗಳಿಂದ ಹಲವಾರು ಅಭಿವೃದ್ಧಿ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳು ಸೇರಿದಂತೆ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ನಾಯಕರಾಗಿದ್ದಾರೆ. ಹೀಗಾಗಿ, ಎಪ್ರಿಲ್ 17 ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಸತೀಶಣ್ಣಾ ಅವರನ್ನು ಗೆಲ್ಲಿಸುವ …

Read More »

ಕೊರೋನಾ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ : ಸಚಿವ ಸುಧಾಕರ್

ಬೆಂಗಳೂರು, ಏ.3- ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳನ್ನು ತಡೆಗಟ್ಟಬೇಕಾದ ಅಗತ್ಯವಿರುವ ಕಾರಣ ಸರ್ಕಾರದ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿಯವರ ಶಿಫಾರಸಿನ ಮೇಲೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿ ಮಾರ್ಗಸೂಚಿಯನ್ನು ಜಾರಿ ಮಾಡಲಾಗಿದೆ. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಹೇಳಿದರು. ವೈಜ್ಞಾನಿಕ ವರದಿ ಆಧಾರದ ಮೇಲೆ ಕ್ರಮ ಕೈಗೊಂಡಿದ್ದೇವೆ. ಏಕಾಏಕಿ ಈ …

Read More »

ಮನೆಯ ಮುಂದೆ ಕಾರು ನಿಲ್ಲಿಸಿದ್ದ ಕಾರಿಗೆ ಒಂದೇ ದಿನ ಐದು ಟೋಲ್‌ಗ‌ಳಲ್ಲಿ ಫಾಸ್ಟಾಗ್‌ ಮೂಲಕ ಟೋಲ್‌ ಶುಲ್ಕ ಕಡಿತಗೊಂಡಿರುವ ಕುತೂಹಲದ ಸಂಗತಿ

ದಾವಣಗೆರೆ: ಮನೆಯ ಮುಂದೆ ಕಾರು ನಿಲ್ಲಿಸಿದ್ದ ಕಾರಿಗೆ ಒಂದೇ ದಿನ ಐದು ಟೋಲ್‌ಗ‌ಳಲ್ಲಿ ಫಾಸ್ಟಾಗ್‌ ಮೂಲಕ ಟೋಲ್‌ ಶುಲ್ಕ ಕಡಿತಗೊಂಡಿರುವ ಕುತೂಹಲದ ಸಂಗತಿ ವರದಿಯಾಗಿದೆ. ಒಟ್ಟಾರೆ ಏಳು ಬಾರಿ ವಿವಿಧ ಟೋಲ್‌ಗ‌ಳಲ್ಲಿ ಶುಲ್ಕ ಕಡಿತಗೊಂಡಿದೆ. ಹಾಗಾಗಿ ಕಾರಿನ ಮಾಲಕರು ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ದಾವಣಗೆರೆ ಸಮೀಪದ ಆವರಗೆರೆ ನಿವಾಸಿ, ನ್ಯಾಯವಾದಿ ಎಸ್‌. ಪರಮೇಶ್‌ ಎಂಬವರ ಇನ್ನೋವಾ ಕಾರು (ಕೆಎ-17, ಎನ್‌-6828) ಮನೆಯ ಮುಂದೆಯೇ ನಿಂತಿತ್ತು. ಆದರೂ ಮಾ.31ರ ರಾತ್ರಿ …

Read More »

ಸತೀಶ ಅಣ್ಣನವರಿಗೆ ನರೇಗಾ ಕಾಯಕ ಬಂಧುಗಳ ಬೆಂಬಲ “: ಲಕ್ಷ್ಮೀ ಆರ್ ಹೆಬ್ಬಾಳಕರ್

ನರೇಗಾ ಯೋಜನೆಯಡಿ ಕೆಲಸ ಮಾಡುವ ನೂರಕ್ಕೂ ಹೆಚ್ಚಿನ ಕಾಯಕ ಬಂಧುಗಳ ಸಭೆಯನ್ನು ಆಯೋಜಿಸಿ, ಶ್ರೀ ಸತೀಶಣ್ಣಾ ಜಾರಕಿಹೊಳಿಯವರನ್ನು ಬೆಂಬಲಿಸುವ ಮೂಲಕ ಲೋಕಸಭೆಗೆ ಆಯ್ಕೆ ಮಾಡೋಣವೆಂದು ನರೇಗಾದ ಕಾಯಕ ಬಂಧುಗಳಲ್ಲಿ ಮನವಿಯನ್ನು ಮಾಡಿಕೊಂಡೆ. ನಾವೆಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸುವುದರೊಂದಿಗೆ ಸತೀಶಣ್ಣನವರ ಕೈಗಳನ್ನು ಬಲ ಪಡಿಸೋಣ, ಅವರನ್ನು ಪ್ರಚಂಡ ಬಹುಮತಗಳಿಂದ ಆರಿಸಿ ತಂದು ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕೆಲಸಗಳಿಗೆ ಕಾರಣರಾಗೋಣ ಸತೀಶಣ್ಣನವರು ಕಳೆದ ಮೂವತ್ತು ವರ್ಷಗಳಿಂದ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡು ಅನೇಕ …

Read More »

ಕೊರೊನಾ ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವರು ..!

ಸರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ covid-19 ಎರಡನೆಯ ಅಲೆಯಾಗಿ ಪ್ರಾರಂಭವಾಗಿದ್ದು ಎಲ್ಲರೂ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಜನದಟ್ಟಣೆಯಿಂದ ದೂರ ಇರಬೇಕು ಮತ್ತು ಸ್ಯಾನಿಟೈಸರ್ ಬಳಸಬೇಕು     ಕರ್ನಾಟಕ ರಾಜ್ಯ ಸರ್ಕಾರ ಆದೇಶ ಏನೆಂದರೆ ಯಾವುದೇ ಹಬ್ಬಹರಿದಿನಗಳ ಆಚರಣೆಯನ್ನು ನಿಬಂಧನೆ ಮಾಡಲಾಗಿದೆ ಸಾರ್ವಜನಿಕರು ಜಾತ್ರೆಗಳಿಂದ, ಮತ್ತು ಸಭೆ ಸಮಾರಂಭಗಳಿಂದ ದೂರವಿರುವುದು ಉತ್ತಮ ಉದ್ಯಾನವನಗಳಲ್ಲಿ, (ಸೇರುವುದು) ಮದುವೆ, ಜಾತ್ರೆಯಲ್ಲಿ, ಸೇರುವುದು ನಿಷೇಧಿಸಲಾಗಿದೆ. ಎಂದು ಪಿ ಎಸ್ ಐ ವಾಲಿಕರ್ …

Read More »

ಮಸ್ಕಿಯಲ್ಲಿ ಹಾರದ ಹೆಲಿಕಾಪ್ಟರ್‌ ಧೂಳು!

ಮಸ್ಕಿ: ಚುನಾವಣೆ ಆಯೋಗದ ಮಿತಿಗೆ ತಕ್ಕಂತೆ ಖರ್ಚು-ವೆಚ್ಚ ಸರಿದೂಗಿಸಲು ರಾಜಕೀಯ ಪಕ್ಷಗಳು ಹೆಣಗುತ್ತಿವೆ. ಇದರ ಮೊದಲ ಭಾಗವಾಗಿಯೇ ಮಸ್ಕಿಯಲ್ಲಿ ಹೆಲಿಪ್ಯಾಡ್‌ ಬದಲು ನೆರೆ-ಹೊರೆಯಲ್ಲಿ ಲೋಹದ ಹಕ್ಕಿಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ! ಬಿಜೆಪಿ ಮತ್ತು ಕಾಂಗ್ರೆಸ್‌ ಎರಡು ಪಕ್ಷದಿಂದಲೂ ಇಂತಹ ತಂತ್ರ ಅನುಸರಿಸಲಾಗಿದೆ. ಚುನಾವಣೆ ಖರ್ಚು-ವೆಚ್ಚಕ್ಕೆ ಆಯೋಗ ಮಿತಿ ಹೇರಿದೆ. ಪ್ರತಿ ಅಭ್ಯರ್ಥಿಗೆ 27 ಲಕ್ಷ ರೂ. ನಿಗದಿ ಮಾಡಲಾಗಿದೆ. ಆದರೆ ಇಲ್ಲಿ ಉಪಚುನಾವಣೆ ಕಣದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ, ಮುಖಂಡರ …

Read More »

ಸರ್ಕಾರದ ನಿರ್ಧಾರ ಕೇಳಿ ನನಗೆ ಶಾಕ್ ಆಯ್ತು : ಕಿಚ್ಚ

ಬೆಂಗಳೂರು, ಏ.3- ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟ್ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿರುವ ಸರ್ಕಾರದ ಕ್ರಮ ಅತ್ಯಂತ ಶಾಂಕಿಂಗ್ ವಿಷಯ. ಸಿನಿ ರಂಗಕ್ಕೆ ಸಂಕಷ್ಟದ ವಿಷಯ ಕೂಡ ಎಂದು ಚಿತ್ರನಟ ಸುದೀಪ್ ಹೇಳಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಈ ನಿಯಮ ಒಳ್ಳೆಯ ಉದ್ದೇಶಕ್ಕೆ ಜಾರಿ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದು …

Read More »

ರಾತ್ರಿ ಪಾರ್ಟಿ ಬೆನ್ನಲ್ಲೇ ಮನೆಯಲ್ಲಿ ಬೆಂಕಿ: 5 ವರ್ಷದ ಮಗ-ಸ್ನೇಹಿತ ಸಾವು, ಕೊಲೆ ಶಂಕೆ

ಮೈಸೂರು: ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮಗು ಹಾಗೂ ಓರ್ವ ವ್ಯಕ್ತಿ ಸಜೀವವಾಗಿ ದಹನವಾಗಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ಅಗಚಹಳ್ಳಿಯಲ್ಲಿ ನಡೆದಿದೆ. ತನ್ವೀತ್​(5) ಹಾಗು ದೀಪಕ್​ ಮೃತ ದುರ್ದೈವಿಗಳು. ಕಳಸ ಮೂಲದ ಪೇಂಟರ್​ ಭರತ್​ ಮೈಸೂರಲ್ಲಿ​ ಬಾಡಿಗೆ ಮನೆ ಮಾಡಿಕೊಂಡು ಪುತ್ರ ತನ್ವಿತ್ ಜೊತೆ ವಾಸವಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಭರತ್​​ ಎಣ್ಣೆ ಪಾರ್ಟಿ ಆಯೋಜಿಸಿದ್ದರು. ಸ್ನೇಹಿತರೆಲ್ಲ ರಾತ್ರಿ ಪೂರ ವಿಪರೀತ ಮದ್ಯಪಾನ ಮಾಡಿದ್ದರು. ಬಳಿಕ ಭರತ್​ನ ಒಬ್ಬ …

Read More »