Breaking News
Home / 2021 / ಏಪ್ರಿಲ್ / 25 (page 3)

Daily Archives: ಏಪ್ರಿಲ್ 25, 2021

ನೀವು ತಿನ್ನಲು ಅನ್ನ ಸಿಗದೆ ಸಾಯುತ್ತೀರಿ: ಆಂಬುಲೆನ್ಸ್-ಸ್ಮಶಾನದವರ ವಿರುದ್ಧ ಜಗ್ಗೇಶ್ ಆಕ್ರೋಶ

ಬೆಂಗಳೂರು: ಕೋವಿಡ್ ಮಹಾಮಾರಿಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಆಯಂಬುಲೆನ್ಸ್ ಹಾಗೂ ಚಿತಾಗಾರದ ಸಿಬ್ಬಂದಿಗಳು ಹಣ ಪೀಕುತ್ತಿರುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಬಿಬಿಎಂಪಿಯವರೇ ಮಾಡಬೇಕು. ಆದರೆ, ಈ ನಿಮಯ ಗಾಳಿಗೆ ತೂರಿರುವ ಕೆಲವರು, ಕೋವಿಡ್‍ನಿಂದ ಬಲಿಯಾದವರ ಶವಗಳ ಮೇಲೆ ಹಣದ ದಂಧೆಗೆ ಇಳಿದಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೀಗ ಸ್ವತಃ ಕನ್ನಡದ ನಟ ನವರಸ ನಾಯಕ ಜಗ್ಗೇಶ್ …

Read More »

ರೆಮಿಡಿಸಿವಿರ್‌ ಮರುಹಂಚಿಕೆ : ರಾಜ್ಯಕ್ಕೆ 1.22 ಲಕ್ಷ ವಯಲ್‌

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಶನಿವಾರ ರೆಮಿಡಿಸಿವಿರ್‌ ಮರು ಹಂಚಿಕೆ ಮಾಡಿದ್ದೇವೆ. ಕರ್ನಾಟಕದ ಪಾಲು 1.22 ಲಕ್ಷ ವಯಲ್‌ಗ‌ಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ನಾನು ನಿರ್ವಹಿಸುವ ಔಷಧ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರದ ಸಮಿತಿಯು ಈ ನಿರ್ಣಯ ಕೈಗೊಂಡಿದೆ ಎಂದು ಡಿವಿಎಸ್‌ ಟ್ವೀಟ್‌ ಮಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ನಾವು ಸಂಪೂರ್ಣ ಸಹಕಾರ, …

Read More »

ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಕೊರತೆಯಿಲ್ಲ:ಜಗದೀಶ ಶೆಟ್ಟರ

ಹುಬ್ಬಳ್ಳಿ, ಏ24: ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಕೊರತೆಯಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಲ್ಲಾಡಳಿತ ತುರ್ತು ಪರಿಸ್ಥಿತಿಯಿದ್ದರೆ ದಿನದ 24 ತಾಸು ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಧಾರವಾಡ ಜಿಲ್ಲೆಯಲ್ಲಿ 2ಸಾವಿರ ಬೆಡ್ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಆಕ್ಸಿಜನ್ ಜೊತೆಗೆ 2 ಸಾವಿರ ಬೆಡ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದ ಅವರು ಕಿಮ್ಸನಲ್ಲಿ 500 ಬೆಡ್ ಬದಲಿಗೆ 1 ಸಾವಿರ …

Read More »

ಬೆಳಗಾವಿಯಲ್ಲಿ ಉಸ್ತುವಾರಿ ಸಚಿವರಿಲ್ಲದೇ ಕೋವಿಡ್ ತಡೆಗೆ ಹಿನ್ನಡೆ ಆತಂಕ

ಬೆಳಗಾವಿ: ಕೋವಿಡ್ ಸೋಂಕಿನಿಂದ ತೀವ್ರ ಆತಂಕದಲ್ಲಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸೂಕ್ತ ಮತ್ತು ಕಠಿಣ ನಿರ್ಧಾರ ತೆಗೆದುಕೊಳ್ಳಲು ಯಾವುದೇ ಉಸ್ತುವಾರಿ ಸಚಿವರಿಲ್ಲದೇ ಇರುವದು ಸಾರ್ವಜನಿಕರಲ್ಲಿ ಗೊಂದಲದ ಜೊತೆಗೆ ಚಿಂತೆ ಉಂಟುಮಾಡಿದೆ. ರಾಜ್ಯದಲ್ಲಿ ಕೊರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಸಚಿವರು ತಕ್ಷಣದಿಂದಲೇ ಜಿಲ್ಲೆಯಲ್ಲಿ ಸೋಂಕಿತರ ನೋವಿಗೆ ಸ್ಪಂದಿಸಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೂಚಿಸಿದ್ದರು. ಆದರೆ ಜಿಲ್ಲೆಯಲ್ಲಿ ಯಾವುದೇ ಉಸ್ತುವಾರಿ ಸಚಿವರಿಲ್ಲದೆ ಅಧಿಕಾರಿಗಳು ಪ್ರತಿಯೊಂದೂ …

Read More »

ಖಾಸಗಿ ಆಸ್ಪತ್ರೆಗಳಿಗೆ ₹600, ರಾಜ್ಯಗಳಿಗೆ ₹400, ಕೇಂದ್ರಕ್ಕೆ 150 ರೂಪಾಯಿಗೆ ಕೊರೊನಾ ಲಸಿಕೆ ಮಾರಾಟ: ಸೀರಮ್ ಸ್ಪಷ್ಟನೆ

ನವದೆಹಲಿ: ಕೋವಿಶೀಲ್ಡ್ ಕೊರೊನಾ ವೈರಸ್ ಲಸಿಕೆಯ ಮುಕ್ತ ಮಾರುಕಟ್ಟೆ ಬೆಲೆ ನಿಗದಿ ಕುರಿತು ಟೀಕೆಗೆ ಸೀರಮ್ ಸಂಸ್ಥೆ ಶನಿವಾರ ಪ್ರತಿಕ್ರಿಯಿಸಿದ್ದು, ‘ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ ₹600 ಮಾರಾಟ ಮಾಡಲಾಗುವುದು, ರಾಜ್ಯಗಳಿಗೆ ₹400 ಮತ್ತು ಕೇಂದ್ರಕ್ಕೆ 150 ರೂಪಾಯಿಗೆ ನೀಡಲಾಗುವುದು’ ಎಂದಿದ್ದಾರೆ. ತಯಾರಕರು ‘ಭಾರತದೊಂದಿಗೆ ಲಸಿಕೆಯ ಜಾಗತಿಕ ಬೆಲೆಗಳ ನಡುವೆ ಮಾಡಲಾದ ನಿಖರವಲ್ಲದ ಹೋಲಿಕೆ’ಯಾಗಿದೆ. ಪ್ರಸ್ತುತ ದೇಶದಲ್ಲಿ ಬಳಸಲಾಗುತ್ತಿರುವ ಎರಡು ಲಸಿಕೆಗಳಲ್ಲಿ ಒಂದಾದ ಕೋವಿಶೀಲ್ಡ್, ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ …

Read More »

BIG BREAKING: ಬೆಳಗ್ಗೆ 11 ಗಂಟೆಗೆ ಮೋದಿ ಭಾಷಣ, ದೇಶಾದ್ಯಂತ ಲಾಕ್ ಡೌನ್ ಜಾರಿ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ ನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಬಿತ್ತರವಾಗಲಿದೆ. ದೇಶದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದ್ದು, ಅನೇಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ನಂತಹ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಹಲವೆಡೆ ಲಾಕ್ಡೌನ್ ಮಾದರಿಯ ನಿರ್ಬಂಧ ಹೇರಲಾಗಿದೆ. ಕೊರೋನಾಗೆ ಲಾಕ್ಡೌನ್ …

Read More »

ಭಾರತಕ್ಕೆ ಅಮೆರಿಕ ಮಿತ್ರದ್ರೋಹ!

ಭಾರತದಲ್ಲಿ ಕೊರೋನಾ ಸಂಖ್ಯೆ ಮಿಂಚಿನ ವೇಗದಲ್ಲಿ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಆಕ್ಸಿಜನ್ ಸಿಗದೇ ಜನ ಪರದಾಡ್ತಿದ್ದಾರೆ. ಮತ್ತೊಂದ್ಕಡೆ ಲಸಿಕೆ ಉತ್ಪಾದಿಸಲು ಬೇಕಾದ ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಇಂಥಾ ಹೊತ್ತಲ್ಲಿ ಭಾರತ ಅಮೆರಿಕದ ಬಳಿ ಸಹಾಯ ಯಾಚಿಸಿದ್ದು, ಅಮೆರಿಕ ಉಲ್ಟಾ ಹೊಡೆದಿದೆ. ಅಮೆರಿಕ ಲಸಿಕೆಯಲ್ಲಿ ಬಳಸಲಾಗುವ ಕಚ್ಚಾ ವಸ್ತುಗಳ ರಫ್ತಿನ ಮೇಲೆ ನಿರ್ಬಂಧ ವಿಧಿಸಿದೆ. ಹೀಗಾಗಿ ಈ ನಿರ್ಬಂಧವನ್ನು ಸಡಿಲಗೊಳಿಸಿ ಭಾರತಕ್ಕೆ ಲಸಿಕೆಗೆ ಬೇಕಾಗುವ ಕಚ್ಚಾವಸ್ತುಗಳನ್ನು …

Read More »

ಬೆಡ್​ ಸಿಗದೇ ಬೆಂಗಳೂರಿನ ಸ್ವಾಬ್​ ಕಲೆಕ್ಟರ್​ ದಾರುಣ ಸಾವು

ಬೆಂಗಳೂರು (ಏ. 24): ಕೊರೋನಾ ಎರಡನೇ ಅಲೆ ತಜ್ಞರು ಅಂದಾಜಿಸಿದ್ದಕ್ಕಿಂತ ಸಾಕಷ್ಟು ಕ್ರೂರವಾಗಿದೆ. ಸೋಂಕಿನ ಹರಡುವಿಕೆ ಅಂದಾಜಿಗೆ ಸಿಗದಾಗಿದ್ದು, ದಿನನಿತ್ಯ ಸಾವಿರಾರು ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಕೂಡ ಎದುರಾಗಿದೆ. ಜನರ ರಕ್ಷಣೆ ಮಾಡಬೇಕಾದ ವೈದ್ಯರು ಸೇರಿದಂತೆ ಅನೇಕ ಕೊರೋನಾ ವಾರಿಯರ್​ಗಳು ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಸಿಲಿಕಾನ್​ ಸಿಟಿಯಲ್ಲಿ ಸ್ವಾಬ್​ ಕಲೆಕ್ಟರ್​ರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮರ್ಸಿಟೌನ್​ ಗೀತಾ …

Read More »

ನಿನ್ನೆಗಿಂತ ಹೆಚ್ಚು ಪ್ರಕರಣ : ರಾಜ್ಯದಲ್ಲಿಂದು 29438 ಕೋವಿಡ್ ಹೊಸ ಕೇಸ್‍ ಪತ್ತೆ

ಬೆಂಗಳೂರು : ಇಂದೂ ಕೂಡ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಮುಖದಲ್ಲಿಯೇ ಸಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 29438 ಹೊಸ ಕೇಸ್‍ಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 234483ಕ್ಕೆ ಏರಿಕೆಯಾಗಿದೆ. ಇಂದು ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಇಂದು 9058 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಗೂ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ …

Read More »

ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆ ನಾಶ; ರೈತರಲ್ಲಿ ಹೆಚ್ಚಿದ ಆತಂಕ

ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ಎರಡು ಸಾವಿರ ಅಡಿಗಳ ಪಾತಾಳದಿಂದ ನೀರು ತೆಗೆದು, ತರಕಾರಿ ಹಾಗೂ ಹಣ್ಣು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಇನ್ನೇನು ಕಟಾವು ಮಾಡಿ ಅದರಿಂದ ಆದಾಯ ಗಳಿಸಬಹುದು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಅಷ್ಟರಲ್ಲಿ ಶುಕ್ರವಾರ ಸಂಜೆ ಸುರಿದ ಆಲಿಕಲ್ಲು ಮಳೆಗೆ ಎಲ್ಲವೂ ಮಣ್ಣು ಪಾಲಾಗಿವೆ. ಮತ್ತೊಂದೆಡೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಟ್ಟಿದ್ದ ಪಾಲಿ ಹೌಸ್​ಗಳು ಅಸ್ತವ್ಯಸ್ತವಾಗಿವೆ. ಕೊರೊನಾ …

Read More »