Breaking News

Daily Archives: ಏಪ್ರಿಲ್ 25, 2021

ನಿಧನ ವಾರ್ತೆ ರಾಮಣ್ಣ ತೋಳಿನವರ ನಿಧನ

ಗೋಕಾಕ: ತಾಲೂಕಿನ ಮಾಲದಿನ್ನಿ ಗ್ರಾಮದ ನಿವಾಸಿ, ಉಪ್ಪಾರ ಸಮಾಜದ ತಾಲೂಕಾಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ರಾಮಣ್ಣ ಭೀಮಪ್ಪ ತೋಳಿನವರ(68) ರವಿವಾರ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂತಾಪ: ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಉಪ್ಪಾರ ಸಮಾಜದ ಮುಖಂಡರು ರಾಮಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Read More »

ಕೊರೊನಾ 2ನೇ ಅಲೆ ಹೇಗೆ ಹರಡುತ್ತಿದೆ ಅನ್ನೋದೆ ಗೊತ್ತಾಗುತ್ತಿಲ್ಲ – ಜೋಶಿ

ಧಾರವಾಡ: ಕೊರೊನಾ 2ನೇ ಅಲೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ, ಹೇಗೆ ಹರಡುತ್ತಿದೆ ಅನ್ನೋದೆ ಗೊತ್ತಾಗುತ್ತಿಲ್ಲ. ಇದು ಇಷ್ಟು ಪರಿಣಾಮ ಬೀರುತ್ತೆ ಎನ್ನುವ ಅಂದಾಜು ಇರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುದ್ಧೋಪಾದಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕಾರ್ಯ ಮಾಡುತ್ತಿದೆ. ನಿನ್ನೆ 800 ಮಿಲಿಯನ ಟನ್ ಆಕ್ಸಿಜನ್ ಕರ್ನಾಟಕಕ್ಕೆ ಹಂಚಿಕೆಯಾಗಿದೆ, 1.25 ಲಕ್ಷ ರೆಮ್‍ಡಿಸಿವಿರ್ ವೈಲ್ ಬಂದಿದೆ. ರೆಮ್‍ಡಿಸಿವಿರ್ ಕೊರೊನಾಗೆ ಅಲ್ಟಿಮೆಟ್ ಡ್ರಗ್ …

Read More »

ಲಾಕ್ ಡೌನ್ ಅವಧಿಯನ್ನು ಮತ್ತೆ ಒಂದು ವಾರಗಳ ಕಾಲ ವಿಸ್ತರಣೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಈಗಾಗಲೇ ಜಾರಿಯಲ್ಲಿರುವ ಲಾಕ್ ಡೌನ್ ಅವಧಿಯನ್ನು ಮತ್ತೆ ಒಂದು ವಾರಗಳ ಕಾಲ ವಿಸ್ತರಣೆ ಮಾಡಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೇಜ್ರಿವಾಲ್, ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕು ನಿಯಂತ್ರಣಕ್ಕೆ ಈಗಾಗಲೇ 6 ದಿನಗಳ ಕಾಲ ಲಾಕ್ ಡೌನ್ ಜಾರಿಯಲ್ಲಿದ್ದು ನಾಳೆ ಬೆಳಿಗ್ಗೆ 6 ಗಂಟೆಗೆ ಈ ಲಾಕ್ ಡೌನ್ ಅವಧಿ …

Read More »

ಡಾ.ಎಂ.ಬಿ.ಪ್ರಭು ಓದುಗರಿಗಾಗಿ ಡಯೆಟ್ ಚಾರ್ಟ್

ಬೆಳಗಾವಿ – ಕೊರೋನಾ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಲೇ ಹೋಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಮನೆಯಲ್ಲೇ ಚಿಕಿತ್ಸೆ ಪಡೆಯಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಡಾ.ಮಾಧವ ಪ್ರಭು ಡೈಯೆಟ್ ಚಾರ್ಟ್ ಮನೆಯಲ್ಲೇ ಉಳಿದುಕೊಂಡು ಚಿಕಿತ್ಸೆ ಪಡೆಯುವುದಾದರೆ ಕೊರೋನಾ ಪಾಸಿಟಿವ್ ಬಂದವರ ಆಹಾರ ಹೇಗಿರಬೇಕು? ಬೆಳಗಾವಿಯಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಕೊರೋನಾ ಕೇರ್ ಸ್ಪೆಷಲಿಸ್ಟ್, ಕೆ.ಎಲ್.ಇ ಆಸ್ಪತ್ರೆಯ ವೈದ್ಯ ಡಾ.ಎಂ.ಬಿ.ಪ್ರಭು ಓದುಗರಿಗಾಗಿ ಡಯೆಟ್ ಚಾರ್ಟ್ ನೀಡಿದ್ದಾರೆ. ಸ್ಥಳೀಯವಾಗಿ ಸಿಗುವ ಆಹಾರಗಳ ಮೇಲೆ ಕೆಲವು …

Read More »

ದೇಶೀಯ ಲಸಿಕೆ ಕೋವ್ಯಾಕ್ಸಿನ್ ದರ ನಿಗದಿ

ಹೈದರಾಬಾದ್: ದೇಶಾದ್ಯಂತ ಕೊರೊನಾ 2ನೇ ಅಲೆ ತಾಂಡವಾಡುತ್ತಿದ್ದು, ಹತೋಟಿಗೆ ತರಲು ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ನಡೆಸಿವೆ. ಇದರ ಭಾಗವಾಗಿ ಮೇ ತಿಂಗಳಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಹೀಗಿರುವಾಗಲೇ ದೇಶೀಯ ಕೊರೊನಾ ಲಸಿಕೆ ಕೋವ್ಯಾಕ್ಸಿನ್‍ಗೆ ದರ ನಿಗದಿಪಡಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,200 ರೂ. ದರ ನಿಗದಿಪಡಿಸಲಾಗಿದೆ. ಈ ಕುರಿತು ಹೈದರಾಬಾದ್ ಮೂಲದ ಕೋವ್ಯಾಕ್ಸಿನ್ …

Read More »

ಗಂಟೆಗೆ 700 ಜನಕ್ಕೆ ಕೊರೊನಾ ಸೋಂಕು5 ದಿನ ಬೆಂಗಳೂರು ನಗರವನ್ನ ಸಂಪೂರ್ಣವಾಗಿ ಲಾಕ್‍ಡೌನ್: ತಜ್ಞರ ಮಹತ್ವದ ಸಲಹೆ

ಬೆಂಗಳೂರು: 15 ದಿನ ಬೆಂಗಳೂರು ನಗರವನ್ನ ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವಂತೆ ಸರ್ಕಾರಕ್ಕೆ ತಜ್ಞರು ಮಹತ್ವದ ಸಲಹೆ ನೀಡಿದ್ದಾರೆ. ವೀಕೆಂಡ್ ಲಾಕ್‍ಡೌನ್ ಸೋಮವಾರ ಬೆಳಗ್ಗೆ 6 ಗಂಟೆಗೆ ಅಂತ್ಯವಾಗಲಿದೆ. ಎರಡು ವಾರ ಲಾಕ್‍ಡೌನ್ ಮಾಡದಿದ್ರೆ ಕೊರೊನಾ ನಿಯಂತ್ರಣ ಅಸಾಧ್ಯ. ಕೊರೊನಾ ಕ್ಷಣ ಕ್ಷಣಕ್ಕೂ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೇವಲ ವೀಕೆಂಡ್ ಲಾಕ್ ಮಾಡಿ ಇನ್ನುಳಿದ ಫ್ರೀ ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಅವಶ್ಯಕವಿದ್ರೆ ಲಾಕ್‍ಡೌನ್ ಮಾಡಬಹುದು ಎಂದು ಪ್ರಧಾನಿಗಳು ಹೇಳಿದ್ದಾರೆ. ಸದ್ಯ …

Read More »

ಪಾರ್ಕ್ ಗಳಲ್ಲಿ ನಡೆಯಲಿದೆ ಅಂತ್ಯಸಂಸ್ಕಾರ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರಿದಿದೆ. ಸ್ಮಶಾನಗಳಲ್ಲಿ ಅಂತ್ಯಕ್ರಿಯೆಗೆ ಸ್ಥಳ ಇಕ್ಕಟ್ಟಾದ ಹಿನ್ನೆಲೆ ಅಂತ್ಯಸಂಸ್ಕಾರಕ್ಕೆ ಪಾರ್ಕ್ ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ದೆಹಲಿಯ ಸರಾಯ ಕಾಲೇಂ ಖಾಂ ಪಾರ್ಕ್ ಸ್ಮಶಾನವಾಗಿ ಬದಲಾಗಿದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹ ಬರುತ್ತಿರೋದರಿಂದ ಜನರು ಕ್ಯೂ ಹಚ್ಚುವಂತಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ದೆಹಲಿ ಸರ್ಕಾರ ಅಲ್ಲಿರುವ ಪಾರ್ಕ್ ನಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದೆ. ಸರಾಯ ಕಾಲೇಂ ಖಾಂನಲ್ಲಿ ಏಕಕಾಲದಲ್ಲಿ …

Read More »

ಹಿಂದೆಲ್ಲ 3 ತಿಂಗಳು ಲಾಕ್‍ಡೌನ್ ಇತ್ತು, ಈಗ ಕೇವಲ 8-10 ದಿನದ ಲಾಕ್‍ಡೌನ್ ಅಷ್ಟೇ ಇದೆ: ಜಗದೀಶ್ ಶೆಟ್ಟರ್

ಧಾರವಾಡ: ಸದ್ಯ ಮೇ 4ರ ವರೆಗೆ ಕಠಿಣ ನಿಯಮ ಜಾರಿಯಲ್ಲಿರುತ್ತದೆ. ಮುಂದಿನ ವಾರವೂ ವೀಕೆಂಡ್ ಕಫ್ರ್ಯೂ ಇರುತ್ತದೆ. ಉಳಿದ ದಿನದ ಕಫ್ರ್ಯೂ, ಲಾಕ್‍ಡೌನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ವಿಸ್ತøತವಾಗಿ ಚರ್ಚೆ ನಡೆಯಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ 11ಕ್ಕೆ ಸಚಿವ ಸಂಪುಟ ಸಭೆ ಇದೆ. ಕ್ಯಾಬಿನೆಟ್‍ನಲ್ಲಿ ಚರ್ಚಿಸಿದ ಬಳಿಕ ಸಿಎಂ ಮುಂದಿನ …

Read More »

ಭಾರತ; 24 ಗಂಟೆಯಲ್ಲಿ 3,49,691 ಹೊಸ ಕೋವಿಡ್ ಪ್ರಕರಣ ದಾಖಲು

ನವದೆಹಲಿ, ಏಪ್ರಿಲ್ 25; ಭಾರತದಲ್ಲಿ 24 ಗಂಟೆಯಲ್ಲಿ 3,49,691 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 2,767 ಜನರು ಸಾವನ್ನಪ್ಪಿದ್ದು, 2,17,113 ಜನರು ಡಿಸ್ಚಾರ್ಜ್ ಆಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಭಾರತದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,69,60,172ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 26,82,751.   ದೇಶದಲ್ಲಿ ಇದುವರೆಗೂ 1,40,85,110 ಜನರು ಗುಣಮುಖಗೊಂಡಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 1,92,311. ಇದುವರೆಗೂ …

Read More »

ಸ್ವಂತ ಟಿವಿ ಚಾನೆಲ್ ಆರಂಭಿಸಿದ ‘ಕಾಂಗ್ರೆಸ್’

ದೇಶದ ಜನತೆಯನ್ನು ತಲುಪಲು ಕಾಂಗ್ರೆಸ್ ಪಕ್ಷ ಇದೀಗ ತನ್ನ ಸ್ವಂತ ಟಿವಿ ಚಾನೆಲ್ ಆರಂಭಿಸಿದೆ. ಐ.ಎನ್.ಸಿ. ಟಿವಿಗೆ ‘ರಾಷ್ಟ್ರೀಯ ಪಂಚಾಯತ್ ರಾಜ್ ದಿನ’ (ಏಪ್ರಿಲ್ 24)ವಾದ ಶನಿವಾರದಂದು ಚಾಲನೆ ನೀಡಲಾಗಿದೆ. ದೇಶದಲ್ಲಿ ವಿವಿಧ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದ್ದರೂ ಸಹ ಇದು ಬಹಳಷ್ಟು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿಲ್ಲ. ಹೀಗಾಗಿ ನೈಜ ವಿಷಯವನ್ನು ಜನರಿಗೆ ತಲುಪಿಸಲು ಟಿವಿ ಚಾನೆಲ್ ಆರಂಭಿಸಿರುವುದಾಗಿ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಈ ನೂತನ ಟಿವಿ ಚಾನೆಲ್ …

Read More »