Breaking News
Home / 2021 / ಏಪ್ರಿಲ್ / 14 (page 3)

Daily Archives: ಏಪ್ರಿಲ್ 14, 2021

SBI Recruitment 2021: ಎಸ್‌ಬಿಐನಲ್ಲಿ ಬಂಪರ್ ಉದ್ಯೋಗಾವಕಾಶ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಬಯಸುವವರಿಗೆ ಒಳ್ಳೆಯ ಸುದ್ದಿ ಇದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (ಎಸ್‌ಬಿಐ) ಸ್ಪೆಷಲಿಸ್ಟ್ ಕೇಡರ್ ಆಫೀಸರ್ (ಎಸ್‌ಸಿಒ) ಮತ್ತು ಫಾರ್ಮಸಿಸ್ಟ್ ಕ್ಲೆರಿಕಲ್ ಕೇಡರ್ (SBI Recruitment 2021 Notification) ಹುದ್ದೆಗಳಿಗೆ ನಿಯಮಿತವಾಗಿ ಮತ್ತು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅಧಿಸೂಚನೆ ಹೊರಡಿಸಿದೆ. ಎಸ್‌ಬಿಐ ನೇಮಕಾತಿ 2021: ಅಧಿಕೃತ ಅಧಿಸೂಚನೆ ಸ್ಟೇಟ್ ಬ್ಯಾಂಕ್ (State Bank Of India) …

Read More »

ಕ್ಯಾಚ್ ಕೈ ಚೆಲ್ಲಿದರೂ ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್ – ಮುಂಬೈಗೆ 10 ರನ್‍ಗಳ ರೋಚಕ ಜಯ

ಮುಂಬೈ: ಕ್ಯಾಚ್ ಕೈ ಚೆಲ್ಲಿದ್ದರೂ ಕೊನೆಯಲ್ಲಿ ಬೌಲರ್‌ಗಳು ಮ್ಯಾಜಿಕ್ ಮಾಡಿದ ಪರಿಣಾಮ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ 10 ರನ್‍ಗಳಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ. ಮುಂಬೈ ನೀಡಿದ್ದ 153 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ಸುಲಭವಾಗಿ ಗೆಲ್ಲಬಹುದು ಎಂದು ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ರಾಹುಲ್ ಚಹರ್ ಸ್ಪಿನ್ ಮೋಡಿ ಜೊತೆಗೆ ಸ್ಲಾಗ್ ಓವರ್‌ಗಳಲ್ಲಿ ರನ್‍ಗಳಿಗೆ ಮುಂಬೈ ಬೌಲರ್‍ಗಳು ಕಡಿವಾಣ ಹಾಕಿದ್ದರಿಂದ ಕೋಲ್ಕತ್ತಾ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 142 …

Read More »

ಮೊದಲ ಬಾರಿ ಕೋರ್ಟ್​ ಒಳಗೆ ಕಾಲಿಟ್ಟ ರಕ್ಷಿತ್​ ಶೆಟ್ಟಿಗೆ ಇಂಥ ಅನುಭವ! ಇನ್ನೂ ಮುಗಿದಿಲ್ಲ ಕಿರಿಕ್​ ಪಾರ್ಟಿ ಕಿರಿಕ್​

ಕಿರಿಕ್​ ಪಾರ್ಟಿ’ ಸಿನಿಮಾದ ಹಾಡೊಂದರ ಕಾಪಿರೈಟ್​ ಕೇಸ್​ಗೆ ಸಂಬಂಧಿಸಿದ ಕಿರಿಕ್​ ಇನ್ನೂ ಬಗೆಹರಿದಿಲ್ಲ. ಲಹರಿ ಮ್ಯೂಸಿಕ್​ ಆಡಿಯೋ ಕಂಪನಿ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮ್​ವಾ ಸ್ಟುಡಿಯೋ ನಡುವೆ ಇನ್ನೂ ಜಟಾಪಟಿ ಮುಂದುವರಿದಿದೆ. ಈ ಪ್ರಕರಣದ ವಿಚಾರಣೆ ಸಲುವಾಗಿ ಸೋಮವಾರ (ಏ.12) ರಕ್ಷಿತ್​ ಶೆಟ್ಟಿ ಕೋರ್ಟ್​ಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಬಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸಿನಿಮಾ ರಿಲೀಸ್​ ಆಗುವಾಗ ಬೇಕಂತಲೇ ಈ ರೀತಿ ಮಾಡುತ್ತಾರೆ. ತುಂಬ ಸಿನಿಮಾಗಳಿಗೆ …

Read More »

ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸಿದರೂ ಸರಿ 6ನೇ ವೇತನ ಆಯೋಗ ಜಾರಿ ಅಸಾಧ್ಯ:B.S.Y.

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು 7ನೇ ದಿನಕ್ಕೆ ಕಾಲಿಟ್ಟಿದ್ದು, ಸಾರಿಗೆ ಸಿಬ್ಬಂದಿಗಳು ಹಾಗೂ ಸರ್ಕಾರದ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಮುಷ್ಕರ ನಿರತ ಸಿಬ್ಬಂದಿಗಳ ವಿರುದ್ಧ ಸಿಎಂ ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸಾರಿಗೆ ನೌಕರರೊಂದಿಗೆ ಮಾತುಕತೆಯ ಪ್ರಶ್ನೆಯೇ ಇಲ್ಲ, ಮುಷ್ಕರ ನಿರತ ಸಿಬ್ಬಂದಿಗಳ ಸಂಬಳ ನೀಡಲೂ ಸಾಧ್ಯವಿಲ್ಲ. ಒಂದು ತಿಂಗಳ ಕಾಲ ಪ್ರತಿಭಟನೆ …

Read More »

ಮಯನ್ಮಾರ್​​ನಿಂದ​ ಬೆಂಗಳೂರಿನವರೆಗೆ ಮಿಕ್ಸರ್​, ಗ್ರೈಂಡರ್​​ ಬಾಕ್ಸ್‌ ನಲ್ಲಿ ಡ್ರಗ್ಸ್​ ಸಾಗಾಟ ಜಾಲ ; ಪೋಲೀಸ್‌ ಬಲೆಗೆ

ಬೆಂಗಳೂರು : ಬೌನ್ಸ್ ಕಂಪನಿಯ ಬೈಕ್​ಗಳ ಮುಖಾಂತರ ಗ್ರಾಹಕರಿಗೆ ಡ್ರಗ್ಸ್​​​ ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ದಂಧೆಕೋರರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಣಿಪುರ ಮೂಲದ ಮೊಹಮ್ಮದ್ ಸಜೀದ್ ಖಾನ್, ಮೊಹಮ್ಮದ್ ಅಜಾದ್ ಹಾಗೂ ಸಪಮ್ ಸೀತಲ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳು. ಬಂಧಿತರಿಂದ 60 ಲಕ್ಷ ರೂ. ಮೌಲ್ಯದ 130 ಗ್ರಾಂ ಹೆರಾಯಿನ್, 2480 ಎಕ್ಸೆಟೆನ್ಸಿ ಮಾತ್ರೆಗಳನ್ನ ವಶಪಡಿಸಿಕೊಳ್ಳಲಾಗಿದೆ. .ಆರೋಪಿಗಳು ಕೆಲಸ ಅರಸಿ‌ ಮೂರು ವರ್ಷಗಳ ಹಿಂದೆ ರಾಜಧಾ‌ನಿಗೆ ಬಂದಿದ್ದರು. …

Read More »

ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಮಂಜುನಾಥ ಅಲಿಯಾಸ್ ಅಂಬಾರಿ ಮೇಲೆ ಫೈರಿಂಗ್

ಬೆಂಗಳೂರು: ಕೊಲೆ ಆರೋಪಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಮಂಜುನಾಥ ಅಲಿಯಾಸ್ ಅಂಬಾರಿ ಮೇಲೆ ಫೈರಿಂಗ್ ಮಾಡಲಾಗಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ಸ್ ಪೆಕ್ಟರ್ ಕಿಶೋರ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದು, ಆರೋಪಿ ಮಂಜುನಾಥ್ ನನ್ನು ಬಂಧಿಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಬಲ್ ಮರ್ಡರ್ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. …

Read More »

ಯುಗಾದಿ ‘ಹೊಸತೊಡಕು’ ಆಚರಣೆಗೆ ಭರ್ಜರಿ ಸಿದ್ದತೆ:‌ ಮಾಂಸದಂಗಡಿಗಳ ಮುಂದೆ ಕ್ಯೂ ನಿಂತ ಜನ

ರಾಜ್ಯದ ಜನತೆ ನಿನ್ನೆ ಭರ್ಜರಿಯಾಗಿ ಯುಗಾದಿ ಹಬ್ಬ ಆಚರಿಸಿ, ಬೇವು ಬೆಲ್ಲ, ಒಬ್ಬಟ್ಟು ತಿಂದು ಖುಷಿಪಟ್ಟಿದ್ರು. ಅಂತೆಯೇ ಇವತ್ತೂ ಕೂಡ ಹೊಸತೊಡಕು ಆಚರಿಸೋಕೆ ರೆಡಿಯಾಗಿದ್ದಾರೆ. ಕಳೆದ ವರ್ಷ ಕೊರೊನಾ ಲಾಕ್‌ ಡೌನ್‌ ನಡುವೆಯೂ ತಮ್ಮ ಎಂದಿನ ಆಚರಣೆಯನ್ನು ಬಿಡದ ಜನ ಹಲವು ನಿರ್ಬಂಧಗಳ ನಡುವೆಯೂ ಮಾರುದ್ದದ ಕ್ಯೂನಲ್ಲಿ ಕಾದು ನಿಂತು ಮಟನ್‌ – ಚಿಕನ್‌ ಖರೀದಿಸಿದ್ದರು. ಮಟನ್‌ – ಚಿಕನ್‌ ಬೆಲೆ ಗಗನಕ್ಕೇರಿದ್ದರೂ ಹೊಸ ತೊಡಕು ಆಚರಣೆ ಸಂಭ್ರಮವೇನು ಕಡಿಮೆಯಾಗಿಲ್ಲ. …

Read More »

8,778 ಹೊಸ ಪ್ರಕರಣ, 67 ಸಾವು, ಬೆಂಗ್ಳೂರಲ್ಲಿ 5,500 ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಓಟ ಮುಂದುವರಿದಿದ್ದು, ಇಂದು 8,778 ಜನರಿಗೆ ಕೊರೊನಾ ಸೋಂಕು ತಗುಲಿದೆ. 67 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 5,500 ಜನರಿಗೆ ಸೋಂಕು ತಗುಲಿದ್ದು, ಸಿಲಿಕಾನ್ ಸಿಟಿಯಲ್ಲಿ 55 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 78,617ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,83,647ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇಂದು 6,079 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು …

Read More »

ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಅಗತ್ಯ ಸೇವೆಗಳು ಲಭ್ಯವಿರುತ್ತದೆ. ರಾತ್ರಿ 8ರ ಬಳಿಕ ಅಂಗಡಿಗಳನ್ನು ಮುಚ್ಚಬೇಕು:

ಮುಂಬೈ: ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ 15 ದಿನ ಜನತಾ ಕರ್ಫ್ಯೂ ವಿಧಿಸಿದೆ. ಈ ಕಠಿಣ ನಿಯಮಗಳಿಂದ ಶ್ರೀಸಾಮಾನ್ಯರು, ಬಡವರಿಗೆ ತೊಂದರೆ ಆಗದಿರುಲು ಮಹಾ ನೆರವು ಸಹ ಘೋಷಿಸಿದೆ. ಜೀವ ಮತ್ತು ಜೀವನ.. ಮಂತ್ರ ಪಠಿಸಿದ ‘ಮಹಾ’ ಅಘಾಡಿ ಸರ್ಕಾರ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸದವರ ಖಾತೆಗೆ ನಗದು ಪರಿಹಾರ ನೀಡಲು ಮುಂದಾಗಿದೆ. ಬಡ ಕುಟುಂಬಗಳಿಗೆ ಹೆಚ್ಚುವರಿ ಪಡಿತರದ ಜೊತೆ ‘ಶಿವ’ ಭೋಜನ್ ಆರಂಭಿಸಲು ಮುಂದಾಗಿದೆ. ಇದರ …

Read More »

ಹೊಂಬಾಳೆ ಫಿಲಂಸ್ ಬ್ಯಾನರಿ ಅಡಿ ಮತ್ತೊಂದು ಸಿನಿಮಾ

ಬೆಂಗಳೂರು: ಯುಗಾದಿ ಹಬ್ಬದಂದು ನಟ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಯುವರತ್ನ ಸಿನಿಮಾ ಬಳಿಕ ಮತ್ತೆ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ಪುನೀತ್ ರಾಜ್‍ಕುಮಾರ್ ಅಭಿನಯಿಸುತ್ತಿದ್ದಾರೆ. ಈ ಕುರಿತು ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರ್ ಟ್ವೀಟ್ ಮಾಡಿ ಖಚಿತಪಡಿಸಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ಪುನೀತ್ ರಾಜ್‍ಕುಮಾರ್ ಅವರಿಗೆ ಮತ್ತೊಂದು ಸಿನಿಮಾ ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದಾರೆ. ಅಪ್ಪು ಸಹ ಇದನ್ನು ರೀ ಟ್ವೀಟ್ ಮಾಡಿದ್ದಾರೆ. ಇನ್ನೂ ವಿಶೇಷ ಎಂಬಂತೆ …

Read More »