Breaking News
Home / 2021 / ಮಾರ್ಚ್ / 13 (page 2)

Daily Archives: ಮಾರ್ಚ್ 13, 2021

ನಾವು ಗಾಳಿಯಲ್ಲಿ ಗುಂಡು ಹೊಡಿಯಲ್ಲ, ಪಕ್ಕಾ ಸಾಕ್ಷ್ಯ ಇಟ್ಟುಕೊಂಡು ದೂರು ನೀಡ್ತೀವಿ: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್​ಐಟಿ ತಂಡದ ಹಿರಿಯ ಅಧಿಕಾರಿಗಳು ನಿನ್ನೆ ನಡೆಸಿದ ಸಭೆಯಲ್ಲಿ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ ಎಫ್​ಐಆರ್​ ಹಾಕುವ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ತೀರ್ಮಾನಿಸಿದ್ದು, ಎಫ್‌ಐಆರ್​ ದಾಖಲಿಸದಿದ್ದರೆ ಸಮಗ್ರ ತನಿಖೆ ಸಾಧ್ಯವಿಲ್ಲ ಹೀಗಾಗಿ ತನಿಖೆಗೆ ಸಹಕಾರಿಯಾಗಲು ಈ ಮಾರ್ಗವನ್ನು ಅನುಸರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾಗಿ ತಿಳಿದುಬಂದಿದೆ. ರಾಜಕಾರಣಿಯ ವಿರುದ್ಧ ಸಿಡಿ ಷಡ್ಯಂತ್ರ …

Read More »

ಸಿಡಿ ಪ್ರಕರಣ: ಬಾಲ್ಕಿಯಲ್ಲಿ ಯುವಕನನ್ನು ವಶಕ್ಕೆ ಪಡೆದ ಎಸ್‌ಐಟಿ; ಸಿಡಿಗಳು ಪತ್ತೆ!

ಬೀದರ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಭಾಲ್ಕಿಯ ವಾಲಿ ಬಡಾವಣೆಯ ಅವಿನಾಶ್ ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯರಾತ್ರಿ ವಶಕ್ಕೆ ಪಡೆದಿದ್ದು, ಯುವಕ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಯ ಗೆಳೆಯನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನೂ ಯುವಕನ ಮನೆ ಮೇಲೆ ದಾಳಿ ಮಾಡಿರುವ ಎಸ್‌ಐಟಿ …

Read More »

ಎಂತಹ ಸಂದರ್ಭದಲ್ಲೂ ನಾವೆಲ್ಲರೂ ಜಾರಕಿಹೊಳಿ ಜೊತೆಗಿದ್ದೇವೆ: ಭೈರತಿ ಬಸವರಾಜು

ಬೆಂಗಳೂರು: ನಾವೆಲ್ಲರೂ ರಮೇಶ್ ಜಾರಕಿಹೊಳಿ ಜೊತೆಗಿದ್ದೇವೆ. ಎಂತಹ ಸಂದರ್ಭದಲ್ಲೂ ಜೊತೆಗಿರುತ್ತೇವೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ನಡೆಯಲಿ ಬಿಡಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದರು. ಸಚಿವ ಸುಧಾಕರ್ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸುಧಾಕರ್ ಅವರು ವ್ಯಾಕ್ಸಿನ್ ಪಡೆದಿದ್ದರು. ಅದಕ್ಕೆ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಅವರು ಆರೋಗ್ಯವಾಗಿದ್ದಾರೆ, ಸ್ವಲ್ಪ ಜ್ವರವಿದೆ ಎಂದರು.

Read More »

ನಗರಸಭೆ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ -ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

ಉಡುಪಿ ಮಾರ್ಚ್ 13: ಕಸ ವಿಂಗಡಣೆ ಕುರಿತಂತೆ ನಗರಸಭೆಯ ಕಸ ಸಂಗ್ರಹ ಮಾಡುವ ಕಾರ್ಮಿಕರೊಬ್ಬರ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನೇಜಾರಿನ ಇಸ್ಮಾಯಿಲ್‌(55) ಹಾಗೂ ಹೂಡೆಯ ಸೊಹೇಲ್‌(28) ಎಂದು ಗುರುತಿಸಲಾಗಿದೆ. ಉಡುಪಿ ನಗರಸಭೆಯ ಕಾರ್ಮಿಕ ಬಾಗಲಕೋಟೆ ಮೂಲದ ನಿಟ್ಟೂರು ನಿವಾಸಿ ಸಂಜು ಎಂಬವರಿಗೆ ಕಸದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ರಸ್ತೆ ಮಧ್ಯೆ ಹಲ್ಲೆ ನಡಸಿದ್ದಾರೆ. ಈ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ …

Read More »

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ :ಎಸ್‌ಐಟಿ ಖೆಡ್ಡಾಕ್ಕೆ ಬಿದ್ದ ಹ್ಯಾಕರ್ , ಮಹತ್ವದ ದಾಖಲೆ ವಶ

ಬೆಂಗಳೂರು, ಸುದ್ದಿಒನ್ : ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ರಾಸಲೀಲೆ ಸಿಡಿಯನ್ನು ರಷ್ಯಾದಲ್ಲಿ ಅಪ್ಲೋಡ್ ಮಾಡಿದ ಹ್ಯಾಕರ್ ನ ಸಹೋದರನ ಮನೆ ಮೇಲೆ ಎಸ್ ಐಟಿ ತಂದ ಶನಿವಾರ ರೇಡ್ ನಡೆಸಿದೆ. ವಿಜಯಪುರಕ್ಕೆ ತೆರಳಿದ ಟೀಂ‌ ಆತನ ಮನೆಯಲ್ಲಿದ್ದ ಹಾರ್ಡ್ ಡಿಸ್ಕ್, ಕಂಪ್ಯೂಟರ್ ಲ್ಯಾಪ್ ಟಾಪ್, ಪೆನ್ ಡ್ರೈವ್ ಸೇರಿದಂತೆ ಕೆಲವು ತಾಂತ್ರಿಕ ವಸ್ತುಗಳನ್ನು ವಶ ಪಡಿಸಿಕೊಂಡಿದೆ. ಸಿಡಿಯ ವಿಷ್ಯುವಲ್ಸ್ ನ್ನು ಎಪಿ ಅಡ್ರೆಸ್ ಬಳಸಿ ರಷ್ಯಾದ ಮಾಸ್ಕೊದಲ್ಲಿ ಅಪ್ಲೋಡ್ ಮಾಡಿದ್ದಾನೆ …

Read More »

ಸಮಯ ಪ್ರಜ್ಞೆ ಮೆರೆದ ಮಹಿಳೆ: ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ATM ಕಳ್

ಸಂತಾಪ ಸೂಚನೆಗಾಗಿ ಸಂಬಂಧಿಕರನ್ನ ಭೇಟಿಯಾಗಲು ಬಂದಿದ್ದ 45 ವರ್ಷದ ಮಹಿಳೆಯೊಬ್ಬರು ಎಟಿಎಂನಲ್ಲಿ ನಡೆಯುತ್ತಿದ್ದ ಕಳ್ಳತನವನ್ನ ತಪ್ಪಿಸಿದ ಘಟನೆ ಮಹಾರಾಷ್ಟ್ರದ ವಸೈನಲ್ಲಿ ನಡೆದಿದೆ. ಕಳ್ಳ ಎಟಿಎಂ ಕೇಂದ್ರದ ಒಳಗೆ ನುಗ್ಗಿದ್ದನ್ನ ಕಂಡ ಸುಕನ್ಯಾ ಪವಾರ್​, ಕೂಡಲೇ ಶಟರ್ ಎಳೆದು ಬಳಿಕ ನೆರೆಹೊರೆಯವರನ್ನ ಎಚ್ಚರಿಸಿದ್ದಾರೆ. ಸಂಬಂಧಿಕರೊಬ್ಬರು ನಿಧನರಾದ ಹಿನ್ನೆಲೆ ಸಂತಾಪ ಸೂಚಿಸಲು ಸುಕನ್ಯಾ ವಸೈಗೆ ಆಗಮಿಸಿದ್ದರು. ಮುಂಜಾನೆ 2.30ರ ಸುಮಾರಿಗೆ ಧಾರ್ಮಿಕ ಗ್ರಂಥವನ್ನ ಪಠಿಸುತ್ತಾ ಕುಳಿತಿದ್ದ ವೇಳೆ ಸುಕನ್ಯಾಗೆ ಎಟಿಎಂ ಕೇಂದ್ರದ ಬಳಿ …

Read More »

ವರ್ಚಸ್ಸಿಗೆ ಧಕ್ಕೆ ಆಗೋದಿಲ್ಲ,ನಮ್ಮವರು ನಮ್ಮ ಜೊತೆಗಿದ್ದಾರೆ.

ಬೆಳಗಾವಿ-ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ,ಎಸ್‌ಐಟಿ ಪ್ರಕರಣಕ್ಕೆ ತನಿಖೆ ಕೊಟ್ಟಿದ್ದು ಸದ್ಯದ ಮಟ್ಟಿಗೆ ಸ್ವಾಗತ ಮಾಡ್ತೇನೆ,ಎಂದು,ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಯಾವ ಹಂತಕ್ಕೆ ತನಿಖೆ ಮಾಡ್ತಾರೆ ಏನ್ ಮಾಡ್ತಾರೆ ಕಾದು ನೋಡಬೇಕು, ನಾವು ಸದ್ಯಕ್ಕೆ ಎಸ್‌ಐಟಿ ತನಿಖೆ ಕೊಟ್ಟಿದ್ದು ಸ್ವಾಗತ ಮಾಡುತ್ತೇವೆ, ಹೇಗೆ ಇನ್ವೆಸ್ಟಿಗೇಷನ್ ಮಾಡ್ತಾರೆ ಅದರ ಮೇಲೆ ಅವಲಂಬಿತವಾಗಿದೆ. ಕೇಸ್ ದಾಖಲಾಗಿಲ್ಲ, ವಿಚಾರಣೆ ಮಾಡುವ ಅಧಿಕಾರ ಮಾತ್ರ ಕೊಟ್ಟಿದ್ದಾರೆ, ನಿನ್ನೆ …

Read More »

ಕರ್ನಾಟಕ-ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತ ಕೊಲ್ಹಾಪುರದಲ್ಲಿ ಗಲಾಟೆ ಹಿನ್ನೆಲೆ

ಬೆಳಗಾವಿ:ಕೊಲ್ಹಾಪುರದಲ್ಲಿ ನಡೆದ ಗಲಾಟೆ ಬೆನ್ನಲ್ಲೇ ಕರ್ನಾಟಕ ಹಾಗೂ ಮಾಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ 400 ಬಸ್ ಗಳು ಸಂಚರಿಸುತ್ತಿದ್ದವು. ಇನ್ನು ಮಹಾರಾಷ್ಟ್ರದಿಂದ ಬೆಳಗಾವಿಗೆ 58 ಬಸ್ ಗಳು ಸಂಚರಿಸುತ್ತಿದ್ದವು. ಆದರೆ ಗಲಾಟೆ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ನಿನ್ನೆ ಕೊಲ್ಹಾಪುರದಲ್ಲಿ ಗಲಾಟೆ ನಡೆದಿದ್ದು, ಇದೇ ಕಾರಣಕ್ಕಾಗಿ ಮುಂಜಾಗೃತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Read More »

ಐಎಂಎ ವಂಚನೆ ಪ್ರಕರಣ: ಬಿಡಿಎ ಕುಮಾರ್‌ ವಿರುದ್ಧ ಆರೋಪಪಟ್ಟಿ

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ₹ 5 ಕೋಟಿ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಿಂದಿನ ಕಾರ್ಯನಿರ್ವಾಹಕ ಎಂಜಿನಿಯರ್‌ ಪಿ.ಡಿ. ಕುಮಾರ್‌ ಅಲಿಯಾಸ್‌ ಬಿಡಿಎ ಕುಮಾರ್ ಸೇರಿದಂತೆ ಆರು ಜನರ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಐಎಂಎ ಮುಖ್ಯ ಕಾನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೊಹಮ್ಮದ್ ಮನ್ಸೂರ್ ಖಾನ್‌, …

Read More »

ತಿಮಿಂಗಿಲಗಳ ಬಗ್ಗೆ ನಾವು ಆದಷ್ಟು ಬೇಗ ದೂರು ಕೊಡುತ್ತೇವೆ.: ಬಾಲಚಂದ್ರ ಜಾರಕಿಹೊಳಿ,

ಬೆಂಗಳೂರು: ರಾಸಲೀಲೆ ಸಿಡಿ ಕೇಸ್ ನಲ್ಲಿ ಐವರನ್ನು ವಶಕ್ಕೆ ಪಡೆದು ಎಸ್‌ಐಟಿ ವಿಚಾರಣೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜೊತೆಗೆ ನಿನ್ನೆ ಚರ್ಚೆ ಮಾಡಿದ್ದು, ಆದಷ್ಟು ಬೇಗನೆ ದೂರು ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಸೋಮವಾರದ ನಂತರ ಇಬ್ಬರು ಇಲ್ಲವೇ ಮೂವರ ವಿರುದ್ಧ ದೂರು ನೀಡುತ್ತೇವೆ. ತಿಮಿಂಗಿಲಗಳ ಬಗ್ಗೆ ನಾವು ಆದಷ್ಟು ಬೇಗ ದೂರು ಕೊಡುತ್ತೇವೆ. ತಿಮಿಂಗಿಲಗಳಿಗೆ ಸಹಕಾರ ನೀಡಿದವರನ್ನು …

Read More »