Breaking News
Home / 2021 / ಮಾರ್ಚ್ / 12 (page 3)

Daily Archives: ಮಾರ್ಚ್ 12, 2021

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಹೊಸ ದಾಖಲೆಗೆ ಸಜ್ಜು

ಅಹಮದಾಬಾದ್: ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಇಂದು ನಡೆಯಲಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 3000 ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಅವರಿಗೆ ಇನ್ನು 72 ರನ್ ಬೇಕಿದೆ. ಇದುವರೆಗೆ 85 ಟಿ20 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 2928 ರನ್ ಗಳಿಸಿದ್ದಾರೆ. ಟಿ20ಯಲ್ಲಿ …

Read More »

ನ್ನಡ ಫಲಕಗಳಿಗೆ ಮಸಿ ಬಳಿದ ಎಂಇಎಸ್, ಶಿವಸೇನೆ ಕಾರ್ಯಕರ್ತರು: ಹಲವರು ಪೊಲೀಸ್ ವಶಕ್ಕೆ

ಬೆಳಗಾವಿ, : ನಾಲ್ಕೈದು ದಿನಗಳ ಹಿಂದೆಯಷ್ಟೇ ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ಭಗವಾ ಧ್ವಜ ಹಾರಿಸಲು ವಿಫಲ ಯತ್ನ ನಡೆಸಿದ್ದ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಮತ್ತೆ ಗುರುವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡದ ಫಲಕಗಳಿಗೆ ಮಸಿ ಬಳಿದು ಪುಂಡಾಟ ಮೆರೆದಿದ್ದಾರೆ. ಶಿವಸೇನೆ ಮುಖಂಡ ಸಂಜಯ್ ಪವಾರ್ ಹಾಗೂ ಅವರ ಬೆಂಬಲಿಗರು ಕನ್ನಡದ ಬೋರ್ಡ್ ಗಳಿಗೆ ಮಸಿ ಬಳಿದಿದ್ದಾರೆ. ಕೊಲ್ಲಾಪುರದ ಮಹಾಲಕ್ಷ್ಮೀ ಮಂದಿರ ಬಳಿ ಈ ಕೃತ್ಯ ಎಸಗಿದ್ದಾರೆ. ಕನ್ನಡದ ಬೋರ್ಡ್ …

Read More »

ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿ‌ಗೆ ಕೊಡಬೇಕು: ಶ್ರೀಮಂತ ಪಾಟೀಲ

ಬೆಳಗಾವಿ: ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿ‌ಗೆ ಕೊಡಬೇಕು. ಈ ಬಗ್ಗೆ ನಾನು ಸಹ ಸಿಎಂಗೆ ಒತ್ತಾಯ ಮಾಡುತ್ತೇನೆ ಎಂದು ಸಚಿವ ಶ್ರೀಮಂತ್ ಪಾಟೀಲ ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ‌ ಹೇಳಿದಂತೆ ಸಿಡಿ ಪ್ರಕರಣದ ಬಗ್ಗೆ ಆದಷ್ಟು ಬೇಗ ಉನ್ನತ ಮಟ್ಟದ ತನಿಖೆಯಾಗಬೇಕು. ರಮೇಶ್​ ಒಳ್ಳೆಯ ಮನುಷ್ಯ. ನನ್ನ ಅಭಿಪ್ರಾಯದಂತೆ ಅವರಿಗೆ ಕ್ಲೀನ್ ಚಿಟ್​ ಸಿಗಬಹುದು. ಹೀಗಾಗಿ, ಸಮಗ್ರ ತನಿಖೆ ಆಗಬೇಕು. ಪ್ರಕರಣದಲ್ಲಿ ಯಾರಿದ್ದಾರೋ …

Read More »

ಮೇ. 17 ರಿಂದ ಕೇದಾರನಾಥ ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತ

ಡೆಹ್ರಾಡೂನ್ : ಮೇ. 17 ರಿಂದ ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥದಲ್ಲಿರುವ ಶಿವನ ದೇವಸ್ಥಾನ ಭಕ್ತರಿಗೆ ಮುಕ್ತವಾಗಲಿದೆ ಎಂದು ಉತ್ತರಾಖಂಡ ಚಾರ್ ಧಾಮ್ ದೇವಸ್ಥಾನಂ ವ್ಯವಸ್ಥಾಪಕ ಮಂಡಳಿ ತಿಳಿಸಿದೆ. ಮೇ. 14 ರಂದು ಶಿವನ ವಿಗ್ರಹವನ್ನು ಓಂಕಾರೇಶ್ವರ ದೇವಾಲಯದಿಂದ ಹೊರ ತೆಗೆದು, ಮೇ. 17 ರಿಂದ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಕೇದಾರನಾಥ ದೇವಾಸ್ಥಾನವನ್ನು ಕಳೆದ ವರ್ಷ ನವೆಂಬರ್ 16 ರಂದು ಮುಚ್ಚಲಾಗಿತ್ತು. ಕಳೆದ ವರ್ಷ ನವೆಂಬರ್ 19 ರಂದು …

Read More »

ಕಮಲ -ಕೈ TWITTER ಫೈಟ್

ಬೆಂಗಳೂರು, – ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವಾಗ್ವಾದ ನಡೆದಿದೆ. ಬಿಜೆಪಿ ಒಡೆದ ಮನೆಯಲ್ಲ, ಛಿದ್ರಗೊಂಡು ಜೋಡಿಸಲಾಗದ ಮಡಕೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಶೋಕಾಸ್ ನೋಟಿಸ್ ಕಥೆ ಏನಾಯ್ತು ಎಂಬ ವರದಿಯನ್ನು ಲಗತ್ತಿಸಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ. ಬಿಜೆಪಿ ನಡೆಸುತ್ತಿರುವ ಯಡಿಯೂರಪ್ಪ ಮುಕ್ತ ಬಿಜೆಪಿ ಅಭಿಯಾನದ ಮುಖವಾಣಿಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಬಿಜೆಪಿ …

Read More »

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿ.ಡಿ.ಯು ಇತ್ತು, ಅದೇನಾಯ್ತು? ವಾಟಾಳ್ ನಾಗರಾಜ್ ಹೊಸ ಬಾಂಬ್

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿ.ಡಿ.ಯು ಇತ್ತು, ಅದೇನಾಯ್ತು? ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ. ಬಜೆಟ್ ನಲ್ಲಿ ಚಾಮರಾಜನಗರ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಪ್ರತಿಭಟನೆ ನಡೆಸಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಶಾಸನ ಸಭೆಯಲ್ಲೇಕೆ ಚರ್ಚೆ ಆಗಲಿಲ್ಲ? ಸಿಎಂ ಯಡಿಯೂರಪ್ಪ ಶಾಸನ ಸಭೆಯನ್ನು ತಮ್ಮ ಸ್ವಂತ ಮನೆ ಮಾಡಿಕೊಂಡಿದ್ದಾರೆ. ಸ್ಪೀಕರ್ ಸಿಎಂ ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಆಗಿದ್ದಾರೆ. ರಾಜ್ಯದಲ್ಲಿ ಸಮರ್ಥ ವಿರೋಧ …

Read More »

ಬಿಜೆಪಿ ಸೇರಿದ್ದಕ್ಕೆ ಮುಸ್ಲಿಂ ಸಮಾಜದಿಂದಲೇ ಬಹಿಷ್ಕಾರ

ಹುಬ್ಬಳ್ಳಿ: ಬಿಜೆಪಿ ಸೇರಿದ್ದಕ್ಕೆ ಮುಸ್ಲಿಂ ಮುಖಂಡರೊಬ್ಬರನ್ನು ಜಮಾತ್‍ನಿಂದ ಹೊರ ಹಾಕಿದ್ದು, ನನಗೆ ನ್ಯಾಯ ಕೊಡಿಸಬೇಕು. ಬಹಿಷ್ಕಾರ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮಾಜದ ಮುಖಂಡ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ನಗರದ ಮುಲ್ಲಾ ಓಣಿಯ ಅಬ್ದುಲ್ ಮುನಾಫ್ ಐನಾಪುರಿ ಅವರು ಮಾರ್ಚ್ 7ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರಿರುವ ಹಿನ್ನೆಲೆಯಲ್ಲಿ ತಮ್ಮನ್ನು ಜಮಾತ್‍ನವರು ಹೊರ ಹಾಕಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ಆರೋಪಿಸಿದ್ದು, …

Read More »

ನಮ್ಮ ದೇಶದ ಸರ್ಕಾರಿ ಶಾಲಾ ಮಕ್ಕಳ ಟ್ಯಾಲೆಂಟ್ ಕಡಿಮೆ ಏನೂ ಇಲ್ಲ..!

ನಮ್ಮ ದೇಶದ ಸರ್ಕಾರಿ ಶಾಲಾ ಮಕ್ಕಳ ಟ್ಯಾಲೆಂಟ್ ಕಡಿಮೆ ಏನೂ ಇಲ್ಲ..! ತಮಿಳುನಾಡಿನ ತಿರುಚ್ಚಿಯ ಪ್ರೌಢಶಾಲಾ ಮಕ್ಕಳ ಹೊಸ ಆವಿಷ್ಕಾರ ಇದು…!! ವಾಟರ್ ಕ್ಯಾನ್’ಗಳನ್ನು ಬಳಸಿ ತುಂಬಾ ಕಡಿಮೆ ಖರ್ಚಿನಲ್ಲಿ ಟಾಯ್ಲೆಟ್ ಬಾತ್’ಗಳನ್ನು ಉಪಯೋಗಿಸುವುದನ್ನು ಕಂಡುಹಿಡಿದಿದ್ದಾರೆ…!! ಪಬ್ಲಿಕ್ ಟಾಯ್ಲೆಟ್, ಕಲ್ಯಾಣ ಮಂಟಪ, ಸರ್ಕಾರಿ ಕಚೇರಿ, ಶಾಲೆ ಕಾಲೇಜು, ಇತರೆ ಜಾಗಗಳಲ್ಲಿ ಕಡಿಮೆ ಖರ್ಚಿನಲ್ಲಿ ಟಾಯ್ಲೆಟ್ ಬಾತ್ ಗಳು ಉಪಯೋಗಿಸುತ್ತಿದ್ದಾರೆ…!

Read More »