Home / 2021 / ಫೆಬ್ರವರಿ (page 28)

Monthly Archives: ಫೆಬ್ರವರಿ 2021

ಖಾಕಿ ರೇಡ್ ಬೆಳಗಾವಿಯಲ್ಲಿ ಅನ್ನಭಾಗ್ಯ ಅಕ್ಕಿ ವಶ

ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ಶೆರಿಗಲ್ಲಿಯಲ್ಲಿ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾಗ ರೇಡ್ ಮಾಡಿ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ.- 1, ಸುಹಾಸ ಸುರೇಶ್ ಪಿಳವಕರ, ಸಾ: ವಡಗಾಂವಿ, ಅನಂ-2 ಮಹಾದೇವ ಲಕ್ಷ್ಮಣ ಪಾಟೀಲ್, ಸಾ: ಧಾಮನೆ, ಹಾಗೂ ಆರೋಪಿ-3 ಅಹಮದ ಬಸೀರ ಅಹಮದ, ಸಾ: ವೀರಭದ್ರನಗರ, ಬೆಳಗಾವಿ ರವರನ್ನು ಬಂಧಿಸಲಾಗಿದೆ ಖಡೇಬಜಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ದೀರಜ್ ಬಿ ಶಿಂಧೆ …

Read More »

ಅಕ್ರಮ ಸಂಬಂಧ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಜೋಡಿಯನ್ನ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿದ ಗ್ರಾಮಸ್ಥರು

ಬೆಳಗಾವಿ: ವಿವಾಹೇತರ ಸಂಬಂಧ ಹೊಂದಿದ್ದ ಜೋಡಿಯನ್ನ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು ಟ್ಯಾಕ್ಟರ್ ಗೆ ಕಟ್ಟಿ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಮುರಕಟನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ. ಚುಂಚನೂರ ಗ್ರಾಮದ ಭೀಮಸಿ ಜೆಟ್ಟೆನ್ನವರ್ ಎಂಬಾತ ಮುರಕಟನಾಳದ ವಿವಾಹಿತ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ. ನಿನ್ನೆ ತಡರಾತ್ರಿ ಮನೆಯವರ ಕಣ್ತಪ್ಪಿಸಿ ಹೊರ ಹೊದಾಕೆ ಮುರಕಟನಾಳ ಗ್ರಾಮ ಹೊರವಲಯದ ಹೊಲದಲ್ಲಿ ಪ್ರಿಯಕರನನ್ನು ಭೇಟಿ …

Read More »

ಬೈಲವಾಡ ಗ್ರಾಮದಲ್ಲಿ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಧ್ವನಿಯಾದರು,ಈ ಗ್ರಾಮದ ಯುವಕ ಡಿಸಿ ಹಿರೇಮಠ ಅವರನ್ನು ಭೇಟಿಯಾಗಿ,ತಂದೆ ಇಲ್ಲ ತಾಯಿಗೆ ಅನಾರೋಗ್ಯ,ನಾನು ಇರೋದು ಬಾಡಿಗೆ ಮನೆಯಲ್ಲಿ ನನಗೊಂದು ಆಶ್ರಯ ಮನೆ ಕೊಡಿ ಎಂದು ಗ್ರಾಮದ ಬಾಲಕನೊಬ್ಬ ಡಿಸಿಗೆ ಮನವಿ ಅರ್ಪಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಇದೇ ಗ್ರಾಮದಲ್ಲಿ ವಾಸ್ತವ್ಯ ಮಾಡಲಿರುವ ಜಿಲ್ಲಾಧಿಕಾರಿಗಳು ಈ ಬಾಲಕನ ಸಮಸ್ಯೆಗೆ ಸ್ಪಂದನೆ ಮಾಡುತ್ತಾರೆಯೋ ಇಲ್ಲವೋ ಕಾದು ನೋಡೋಣ ಬೆಳಗಾವಿ,-ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ …

Read More »

ಬಾಳಿಗೆ ಬೆಳಕಾದ IPL​ ಬಿಡ್ಡಿಂಗ್; ಟೆಂಪೋ ಚಾಲಕನ ಮಗನೀಗ ಕರೋಡ್​ಪತಿ

ಕ್ರೀಡಾಲೋಕದಲ್ಲಿ ರಾತ್ರೋರಾತ್ರಿ ಸ್ಟಾರ್‌ಗಳಾದ ಸಾಕಷ್ಟು ಸಾಧಕರಿದ್ದಾರೆ. ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವರು ಊಹಿಸಲಾರದಷ್ಟು ಎತ್ತರಕ್ಕೆ ಏರಿ, ನಿಬ್ಬೆರಗಾಗುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್​‌ ಲೋಕದಲ್ಲಿ ಇಂತಹ ಹಲವು ಸ್ಫೂರ್ತಿದಾಯಕ ಕಥೆಗಳು ಸಿಗುತ್ತವೆ. ಹಿಂದೆ ಮುಂಬೈನ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಾಟ ಮಾಡಿ ಕ್ರಿಕೆಟ್​ ಕಿಟ್‌ಗೆ ಹಣ ಹೊಂದಿಸಿಕೊಳ್ಳುತ್ತಿದ್ದ ಯಶಸ್ವಿ ಜೈಸ್ವಾಲ್​.. ಶಾಲಾ ವಾಹನ ಚಾಲನೆ, ಹಾಲು ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ನರೇಶ್​​ ಗರ್ಗ್​ ಪುತ್ರ ಪ್ರಿಯಂ ಗರ್ಗ್​‌ 13ನೇ ಸೀಸನ್​​ ಐಪಿಎಲ್​ …

Read More »

ಗೊಡಚಿನ‌ ಮಲ್ಕಿ ಬಸ್ ಅಪಘಾತ: ಗಾಯಗೊಂಡ ಗಾಯಾಳುಗಳ ಆರೋಗ್ಯ ವಿಚಾರಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ

ಗೋಕಾಕ ತಾಲೂಕಿನ‌ ಗೊಡಚಿನ‌‌ ಮಲ್ಲಿ ಸಮೀಪ ರಾಜ ರಸ್ತೆ ಸಾರಿಗೆ ಬಸ್ ಚಾಲಕನ‌ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಗಾಯಗೊಂಡ ಸುಮಾರು 20ಕ್ಕೂ ಹೆಚ್ಚು ಗಾಯಾಳುಗಳು ನಗರದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಎಲ್ಲಾ ಗಾಯಾಳುಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪುತ್ರ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಭೆಟ್ಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು.   ಈ ಅಪಘಾತದಲ್ಲಿ ಗಾಯಗೊಂಡ ಹೆಚ್ಚಿನ …

Read More »

‘ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೀನಿ’ -ಸಿದ್ದರಾಮಯ್ಯ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿರುವುದಾಗಿ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಸ್ವತಃ ಈ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ನಾನು ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ. ಎಷ್ಟು ವೆಚ್ಚ ಎನ್ನುವುದರ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದರು. ರಾಮ ಜನರ ಧಾರ್ಮಿಕ ನಂಬಿಕೆ. ಎಲ್ಲಾ ಕಡೆ ರಾಮಮಂದಿರ ಕಟ್ಟುತ್ತಾರೆ, ಅದರಲ್ಲೇನಿದೆ? ದೇವರು ಅನ್ನೋದು ಜನರಿಗೆ ಭಯ ಭಕ್ತಿಯ ಸಂಕೇತ. ಇದನ್ನು …

Read More »

ಬ್ರಾಹ್ಮಣರು, ವೈದಿಕ ಆಚರಣೆ ಕುರಿತ ವಿವಾದಿತ ಪಠ್ಯ ಕಡಿತಕ್ಕೆ ನಿರ್ಧಾರ

ಬೆಂಗಳೂರು: ಬ್ರಾಹ್ಮಣರು ಮತ್ತು ವೈದಿಕ ಆಚರಣೆಗಳ ಕುರಿತಾದ ವಿವಾದಿತ ಪಾಠಗಳನ್ನು ಪ್ರಸಕ್ತ ಸಾಲಿಗೆ ಕೈಬಿಡಲು ರಾಜ್ಯ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ತಿರ್ಮಾನಿಸಿದೆ. ವೈದಿಕ ಆಚರಣೆಯಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು ಎಂಬುದು ಸೇರಿದಂತೆ ಬ್ರಾಹ್ಮಣರು ಮತ್ತು ವೈದಿಕ ಆಚರಣೆಗಳು ಕುರಿತ ವಿವಾದಕ್ಕೆ ಕತ್ತರಿ ಹಾಕಲಾಗುವುದು. ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ -1 ಧರ್ಮಗಳ ಉದಯ ಪಾಠದಲ್ಲಿ ಬ್ರಾಹ್ಮಣರ ಬಗ್ಗೆ ವೈದಿಕ ಆಚರಣೆ ಬಗ್ಗೆ ವಿವಾದಿತ ಅಂಶಗಳಿದ್ದು, ಇದನ್ನು ಕಲಿಸುವುದರಿಂದ ವಿದ್ಯಾರ್ಥಿಗಳಿಗೆ …

Read More »

RSS ಕ್ಯಾನ್ಸರ್ ಇದ್ದ ಹಾಗೆ, ರಾಮ ಮಂದಿರ ನಿರ್ಮಾಣಕ್ಕೆ ನಯಾ ಪೈಸೆ ಕೊಡಬೇಡಿ

ಮಂಗಳೂರು, ಫೆ 19: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಖಂಡರೊಬ್ಬರು ನೀಡಿದ ಹೇಳಿಕೆಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿವೆ. “ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ರಾಮ ಮಂದಿರವಲ್ಲ, ಅದು ಆರ್ ಎಸ್ ಎಸ್ ಮಂದಿರ. ನಿಮ್ಮ ಮನೆ ಬಾಗಿಲಿಗೆ ಯಾರಾದರೂ ದೇಣಿಗೆಗೆ ಬಂದರೆ ನಯಾಪೈಸೆ ಕೊಡಬೇಡಿ. ಆ ಸಂಘಟನೆ ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ”ಎಂದು ಪಿಎಫ್‌ಐ ಜನರಲ್ …

Read More »

ರಾಮಮಂದಿರವಲ್ಲ ಅದು, RSS​ ಮಂದಿರ : ದೇಣಿಗೆ ನೀಡದಂತೆ PFI ಪ್ರಧಾನ ಕಾರ್ಯದರ್ಶಿ ಅನೀಸ್‌ ಆಹ್ಮದ್‌ ಕರೆ

ಮಂಗಳೂರು :ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ರಾಮಮಂದಿರದ ಬಗ್ಗೆ ವಿವಾದಾತ್ಮಕ ಭಾಷಣ ಮಾಡಿದ್ದು ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಪಿಎಫ್ ಐ ನ ಸಭೆಯಲ್ಲಿ ಮಾತಾನಾಡುತ್ತಾ’ಈ ಹಂತದಿಂದ, ನಾನು ನಿಮ್ಮೆಲ್ಲರಿಗೂ ಹೇಳುತ್ತಿದ್ದೇನೆ, ರಾಮ ಮಂದಿರಕ್ಕೆ ಹಣ ಸಂಗ್ರಹಿಸಲು ನಿಮ್ಮ ಮನೆಗಳಿಗೆ ಬರುತ್ತಿರುವ ಈ ಜನರೆಲ್ಲರೂ ಅವರಿಗೆ ಒಂದು ಪೈಸೆಯನ್ನೂ ನೀಡುವುದಿಲ್ಲ. ಎನ್‌ಆರ್‌ಸಿ (ನಾಗರಿಕರಿಗಾಗಿ ರಾಷ್ಟ್ರೀಯ ನೋಂದಣಿ) ಯನ್ನು ಬಹಿಷ್ಕರಿಸಿದ ರೀತಿಯಲ್ಲಿ ಅವರನ್ನು ಬಹಿಷ್ಕರಿಸಿ. ನಾನು ಇದನ್ನು ಎಲ್ಲಾ ಮುಸ್ಲಿಂ ಉದ್ಯಮಿ …

Read More »

2 ವರ್ಷದಲ್ಲಿ ಮತ್ತೆ ಅಧಿಕಾರಕ್ಕೆ ಬರ್ತೀವಿ, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡ್ತೀನಿ: ಸಿದ್ದರಾಮಯ್ಯ

ಬೆಂಗಳೂರು: 2 ವರ್ಷದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರ್ತೀವಿ. ಬಡವರಿಗೆ 10 ಕೆ.ಜಿ ಅಕ್ಕಿ ಕೊಡ್ತೀನಿ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತ ಪಡಿಸಿದ್ದು, ‘ನಾನು ಅಧಿಕಾರದಲ್ಲಿ ಇದ್ದಾಗ ಪ್ರತಿಯೊಬ್ಬರಿಗೆ ಫ್ರೀಯಾಗಿ 7 ಕೆಜಿ ಅಕ್ಕಿ ಕೊಡ್ತಿದ್ದೆ. ಈಗ 5 ಕೆಜಿ ಮಾಡಿದ್ದಾರೆ, 3 ಕೆಜಿ ಮಾಡ್ತಾರಂತೆ ಈಗ. ಬಡವರ ಹೊಟ್ಟೆ ಮೇಲೆ ಹೊಡೆಯುವ ಇವ್ರನ್ನ …

Read More »