Daily Archives: ಫೆಬ್ರವರಿ 28, 2021

ಗೋಕಾಕ: ಜಿಲ್ಲಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯಲ್ಲಿ ಖಾನಾಪೂರದ ರಾಜು ಗಾವಡೆ ಮಿಸ್ಟರ್ ಬಾಡಿ ಲೈನ್ 2021 ಚಾಂಪಿಯನ್ ಆಪ್ ಚಾಂಪಿಯನ್ ಆಗಿ ಬಹುಮಾನ ಪಡೆಯುತ್ತಿರುವುದು.

ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗೋಕಾಕ ತಾಲೂಕಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಶನಿವಾರದಂದು ಆಯೋಜಿಸಿದ್ದ 5ನೇ ಜಿಲ್ಲಾ ಮಟ್ಟದ (ಬೆಳಗಾವಿ ನಗರ ಹೊರತು ಪಡಿಸಿ) ದೇಹದಾಢ್ರ್ಯದ ಸ್ಪರ್ಧೆಯಲ್ಲಿ ಖಾನಾಪೂರದ ರಾಜು ಗಾವಡೆ ಮಿಸ್ಟರ್ ಬಾಡಿ ಲೈನ್ 2021 ಚಾಂಪಿಯನ್ ಆಪ್ ಚಾಂಪಿಯನ್ ಆಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಗ್ರಾಮೀಣದ ರನ್ನರ್ ಆಫ್ ಆಗಿ ಸುನೀಲ ಬಾತಖಾಂಡೆ, ಖಾನಾಪೂರದ ಬೇಸ್ಟ್ ಫೋಜರ್ ಪ್ರಶಸ್ತಿಯನ್ನು ಸಂದೀಪ ಅಂಗಡಿ ಪಡೆದಿದ್ದಾರೆ. ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯಲ್ಲಿ …

Read More »

ರಾಜ್ಯ ಹೆದ್ದಾರಿ ಕಾಮಗಾರಿ

ಗೋಕಾಕ: ಲೋಕೋಪಯೋಗಿ ಇಲಾಖೆಯು 2021-22 ನೇ ಸಾಲಿನಲ್ಲಿ 3500 ಕೋಟಿ ರೂ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಅಭಿವೃದ್ಧಿ ಪಡಿಸಲು ಡಿಪಿಆರ್ ಸಿದ್ದಪಡಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು. ನಗರದಲ್ಲಿ ರವಿವಾರದಂದು ಜಲಸಂಪನ್ಮೂಲ ಸಚಿವರೊಂದಿಗೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಂದ ಈಗಾಗಲೇ ಈ ಪ್ರಸ್ತಾವನೆಯ ಅನುಮೋದನೆ ಪಡೆಯಲಾಗಿದ್ದು, …

Read More »

ಗೋಕಾಕ: ಇಲ್ಲಿಯ ಎನ್‍ಇಎಸ್ ಶಾಲಾ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿದರು.

ಗೋಕಾಕ: ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮುಖಾಂತರ ಕಲೆ, ಸಾಹಿತ್ಯದ ಜೊತೆಗೆ ಕೃಷಿ, ಉದ್ದಿಮೆಗಳ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕು ಎಂದು ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹೇಳಿದರು. ಅವರು ಶನಿವಾರದಂದು ಸಂಜೆ ಇಲ್ಲಿಯ ಎನ್‍ಇಎಸ್ ಶಾಲಾ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಖಂಡ ಗೋಕಾಕದ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿ ಕಾಲದಿಂದಲೂ …

Read More »

ಗೋಕಾಕ: ಸಚಿವರ ಕಛೇರಿಯಲ್ಲಿ ಕೊಣ್ಣೂರ ಪುರಸಭೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನವನ್ನು ಸಚಿವ ರಮೇಶ ಜಾರಕಿಹೊಳಿ ವಿತರಿಸಿದರು.

ಗೋಕಾಕ : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿರಿ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ತಮ್ಮ ಕಛೇರಿಯಲ್ಲಿ ತಾಲೂಕಿನ ಕೊಣ್ಣೂರ ಪುರಸಭೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನ ವಿತರಿಸಿ ಮಾತನಾಡಿದರು. ಸನ್ 2019-20 ಮತ್ತು 2020-21 ರ ಸಾಲಿನ ಎಸ್.ಎಫ್.ಸಿ ಅನುದಾನ ಶೇ 24.10% ರ ಯೋಜನೆಯಡಿಯಲ್ಲಿ ರೂ 2.42 ಲಕ್ಷಗಳ ಅನುದಾನದಲ್ಲಿ 5 ಫಲಾನುಭವಿಗಳಿಗೆ ಪರಿಶಿಷ್ಟ ಜಾತಿ ವರ್ಗದ ಬಿ.ಇ …

Read More »

ಇಂದು ಸಂಜೆ 6 ಗಂಟೆಗೆ ಬಿಗ್​ ಬಾಸ್ 8 ಪ್ರಾರಂಭ​!; ಮನೆ ಒಳಗೆ ಹೋಗುವವರು ಇವ್ರೇನಾ?

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫೆಬ್ರವರಿಯಿಂದ ಆರಂಭವಾಗಲಿದೆ ಎನ್ನುವ ಸುದ್ದಿ ಹೊರ ಬಿದ್ದಿದ್ದೇ ತಡ, ಪ್ರೇಕ್ಷಕರು ಮನೆ ಒಳಗೆ ಯಾರು ಹೋಗಲಿದ್ದಾರೆ? ಈ ಬಾರಿ ಮನೆ ಸೇರುವ ಸ್ಪರ್ಧಿಗಳೆಷ್ಟು? ಸುದೀಪ್​ ಯಾವ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದರು. ಈ ಎಲ್ಲಾ ಪ್ರಶ್ನೆ ಹಾಗೂ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಸಂಜೆ 6 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಸೀಸನ್​ 8 ಗ್ರ್ಯಾಂಡ್​ ಆಗಿ ಪ್ರಾರಂಭಗೊಳ್ಳಲಿದೆ. …

Read More »

ಶಾಸಕ ಅಭಯ ಪಾಟೀಲ ಇವರ ಶಾಸಕರ ಅನುದಾನದಲ್ಲಿ ಮಹಿಳಾ ಬಜಾರ್

ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಇವರ ಶಾಸಕರ ಅನುದಾನದಲ್ಲಿ ಮಹಿಳಾ ಬಜಾರ್ (ತಿನಿಸು ಮಾರುಕಟ್ಟೆ) ಆರಂಭಿಸಲಾಗಿದೆ. ಇಲ್ಲಿನ ಗೋವಾ ವೇಸ್ ಬಳಿ ರಾಣಿ ಚೆನ್ನಭೈರಾದೇವಿ ಮಹಿಳಾ ಬಜಾರ ಮತ್ತು ತಿನಿಸು ಕಟ್ಟೆ ಮಳಿಗೆಗಳನ್ನು ನಿರ್ಮಾಣಮಾಡಿದ್ದು, ಅದರ ಲೋಕಾರ್ಪಣೆ ಕಾರ್ಯಕ್ರಮವನ್ನು ರವಿವಾರ ಸಂಜೆ: 5 ಗಂಟೆಗೆ  ರಾಜ್ಯಸಭಾ ಮಾಜಿ ಸದಸ್ಯ, ಕೆ.ಎಲ್‌.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ನೆರವೇರಿಸಲಿದ್ದಾರೆ.

Read More »

ರಾಮ ಮಂದಿರ ದೇಣಿಗೆ ಅಭಿಯಾನ ಸಂಪನ್ನ.ಇದುವರೆಗೆ ಸಂಗ್ರಹಗೊಂಡಿದ್ದು ಎಷ್ಟು ಕೋಟಿ ?

ಉತ್ತರಪ್ರದೇಶ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಳೆದ 44 ದಿನಗಳಿಂದ ನಡೆಯುತ್ತಿದ್ದ ದೇಣಿಗೆ ಸಂಗ್ರಹ ಅಭಿಯಾನ ಇಂದು (ಫೆ.27) ಮುಕ್ತಾಯಗೊಂಡಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ್ ಗಿರಿ, ದೇಶ್ಯಾದ್ಯಂತ ನಡೆದ ಅಭಿಯಾನ ಇಂದಿಗೆ ಸಂಪನ್ನಗೊಂಡಿದೆ. ಇದುವರೆಗೆ ಮಂದಿರ ನಿರ್ಮಾಣಕ್ಕೆ ಸಂಗ್ರಹಗೊಂಡ 1900 ಕೋಟಿ ರೂ.ಗಳನ್ನು ಶ್ರೀ ರಾಮಲಲ್ಲಾ ಬ್ಯಾಂಕ್ ಖಾತೆಯಲ್ಲಿ ಜಮಾಮಾಡಲಾಗಿದೆ. ಇನ್ನೂ ಕೆಲವೊಂದು ಚೆಕ್ ಗಳ …

Read More »

ನಿವೃತ್ತ ಡಿಜಿ ಶಂಕರ್ ಬಿದರಿ ಇ-ಮೇಲ್ ಐಡಿ ಹ್ಯಾಕ್ : ಹಣಕ್ಕೆ ಡಿಮ್ಯಾಂಡ್ ಇಟ್ಟ ದುಷ್ಕರ್ಮಿಗಳು!

ಬೆಂಗಳೂರು : ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿ ಇ ಮೇಲ್ ಐಡಿಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಶಂಕರ್ ಬಿದರಿ ಅವರ ಇ ಮೇಲ್ ಐಡಿಯನ್ನು ಹ್ಯಾಕ್ ಮಾಡಿ ಬಿದರಿ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಇದನ್ನು ನಂಬಿದ ಬಿದರಿ ಅವರ ಸ್ನೇಹಿತರೊಬ್ಬರು 25 ಸಾವಿರ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆ ಮಾಡಿದ ಬಳಿಕ ಶಂಕರ್ …

Read More »

ಅಂಬಾನಿ ಮನೆ ಬಳಿ ಮತ್ತೊಂದು ಕಾರನ್ನು ನೋಡಿದ ಪೊಲೀಸರು!

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಹತ್ತಿರ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಸ್ಥಳದಲ್ಲಿ ಮತ್ತೊಂದು ಕಾರನ್ನು ಪೊಲೀಸರು ನೋಡಿರುವುದಾಗಿ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ. ಇದರ ವಿಚಾರಣೆ ನಡೆಯುತ್ತಿದ್ದು, ಇಲ್ಲಿಯವರೆಗೂ ಮುಂಬೈ ಅಪರಾಧ ವಿಭಾಗದ ಪೊಲೀಸರು 25 ಜನರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಂಬಾನಿ ಮನೆ ಬಳಿ ನಿಂತಿದ್ದ ಸ್ಪೋಟಕ ತುಂಬಿದ ಕಾರಿನಿಂದ ಇಳಿದ ಚಾಲಕ, ಇನ್ನೋವಾ ಕಾರಿನಲ್ಲಿ ತೆರಳುವುದು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಆ ಚಾಲಕನಿಗಾಗಿ ಪೊಲೀಸರ …

Read More »

ಮೊಬೈಲ್ ಬೇಕು ಅಂದ ಪ್ರೇಯಸಿ,ಸ್ನೇಹಿತನನ್ನೇ ಕೊಂದ ಪ್ರಿಯಕರ..

ತನ್ನ ಪ್ರೇಯಸಿ ಒಂದೊಳ್ಳೇ ಮೊಬೈಲ್ ಬೇಕು ಅಂತ ಕೇಳಿದ್ದಕ್ಕೆ ಪ್ರಿಯಕರ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರೋ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.. ಜೀತೇಂದ್ರ ಕೊಲೆಯಾದ ವ್ಯಕ್ತಿ,ಮೋನು ಎಂಬ ವ್ಯಕ್ತಿ ಕಳೆದ ಕೆಲವುದಿನಗಳಿಂದ ಕೆಲಸ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕ್ಕಿದ್ದ,ಇದೇ ವೇಳೆ ತನ್ನ ಪ್ರೇಯಸಿ ಸ್ಮಾರ್ಟ್ ಫೋನ್ ಬೇಕು ಎಂದು ಕೇಳಿದ್ದಳು,ಏನೂ ಮಾಡೋದು ಎಂದು ಇದ್ದಾಗ ಮೋನುಗೆ ತನ್ನ ಸ್ನೇಹಿತ ಜೀತೇಂದ್ರ ಬಳಿ ಸ್ಮಾರ್ಟ್ ಇರೋದು ಗೊತ್ತಾಗಿದ್ದು,ಇನ್ನೊಬ್ಬ ಸ್ನೇಹಿತನ ಸಹಾಯದಿಂದ …

Read More »