ತನ್ನ ಪ್ರೇಯಸಿ ಒಂದೊಳ್ಳೇ ಮೊಬೈಲ್ ಬೇಕು ಅಂತ ಕೇಳಿದ್ದಕ್ಕೆ ಪ್ರಿಯಕರ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರೋ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.. ಜೀತೇಂದ್ರ ಕೊಲೆಯಾದ ವ್ಯಕ್ತಿ,ಮೋನು ಎಂಬ ವ್ಯಕ್ತಿ ಕಳೆದ ಕೆಲವುದಿನಗಳಿಂದ ಕೆಲಸ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕ್ಕಿದ್ದ,ಇದೇ ವೇಳೆ ತನ್ನ ಪ್ರೇಯಸಿ ಸ್ಮಾರ್ಟ್ ಫೋನ್ ಬೇಕು ಎಂದು ಕೇಳಿದ್ದಳು,ಏನೂ ಮಾಡೋದು ಎಂದು ಇದ್ದಾಗ ಮೋನುಗೆ ತನ್ನ ಸ್ನೇಹಿತ ಜೀತೇಂದ್ರ ಬಳಿ ಸ್ಮಾರ್ಟ್ ಇರೋದು ಗೊತ್ತಾಗಿದ್ದು,ಇನ್ನೊಬ್ಬ ಸ್ನೇಹಿತನ ಸಹಾಯದಿಂದ ಜೀತೇಂದ್ರನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನ ಅಂಗಿಯಿಂದಲೇ ಕತ್ತು ಹಿಸುಕಿ ಕೊಲೆ ಮಾಡಿ,ಬಾಯಿ ಮತ್ತು ಮೂಗಿಗೆ ಮಣ್ಣು ತುಂಬಿದ್ದಾರೆ. ಈ ಘಟನೆ ಜನವರಿ 6ರಂದು ನಡೆದಿದ್ದು, ಜೀತೇಂದ್ರ ಶವ ಪತ್ತೆಯಾದಾಗ ಪೊಲೀಸರು ಕಾರ್ಯಪ್ರೌರುತ್ತಿಯಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ. ತನಿಖೆ ವೇಳೆ ಮೋನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಮೊಬೈಲ್ ಬೇಕು ಅಂದ ಪ್ರೇಯಸಿ,ಸ್ನೇಹಿತನನ್ನೇ ಕೊಂದ ಪ್ರಿಯಕರ..
Spread the love
Spread the love