Breaking News

Daily Archives: ಫೆಬ್ರವರಿ 22, 2021

ಹೆಚ್ಚುವರಿ ನೀರು ಬಳಕೆಗೆ ತಮಿಳುನಾಡಿಗೆ ಅವಕಾಶ ನೀಡುವುದಿಲ್ಲ: BSY

ಬೆಂಗಳೂರು: ಕಾವೇರಿ ನದಿಯ ಹೆಚ್ಚುವರಿ ನೀರು ಬಳಸಲು ತಮಿಳುನಾಡಿಗೆ ಅವಕಾಶ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕಾವೇರಿ-ಗುಂಡಾರ್ ನದಿ ಜೋಡಣೆಗೆ ಯೋಜನೆಗೆ ತಮಿಳುನಾಡು ಮುಂದಾಗಿದೆ. ಹೆಚ್ಚುವರಿ ನೀರು ಬಳಕೆಗೆ ಕರ್ನಾಟಕ ವಿರೋಧಿಸಿದ್ದು, ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ , ಹೇಳಿಕೆ ಕೊಡುವುದರಿಂದ ಯಾವುದೇ ಉಪಯೋಗವಿಲ್ಲ. ಈ ಸಂಬಂಧ ಬಿಗಿ ಕ್ರಮ ಕೈಗೊಳ್ಳುತ್ತೇವೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಇನ್ನೂ ಯೋಚನೆ …

Read More »

ಮಹದಾಯಿ ನದಿ ನೀರು ಹಂಚಿಕೆಯ ಮೇಲುಸ್ತುವಾರಿಗೆ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆಯ ಮೇಲುಸ್ತುವಾರಿಗೆ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಕರ್ನಾಟಕ ಸರ್ಕಾರ ಮಲಪ್ರಭಾದ ನೀರಿನ ಹರಿವನ್ನು ತಿರುಗಿಸುತ್ತಿದೆ ಎಂದು ಗೋವಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ನಾಲ್ಕು ವಾರಗಳಲ್ಲಿ ಈ ಸಂಬಂಧ ವರದಿ ನೀಡುವಂತೆ ಸಮಿತಿಗೆ ಸೂಚನೆ ನೀಡಿದೆ. ಆದರೆ, ಮಹದಾಯಿ ನೀರಿನ ಹರಿವನ್ನು ತಿರುಗಿಸುತ್ತಿಲ್ಲ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರ …

Read More »

ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಗೆ ಕಾಲಿಟ್ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.

ಬೆಳಗಾವಿ – ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಗೆ ಕಾಲಿಟ್ಟ ನಂತರದಲ್ಲಿ ಇಂದು ಮೊದಲ ಬಾರಿಗೆ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಕಳೆದ 11 ತಿಂಗಳಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಕೂಡ ಕಂಡುಬಂದಿಲ್ಲ. ಕಳೆದ ಏಪ್ರಿಲ್ ತಿಂಗಳಲ್ಲಿ ಬೆಳಗಾವಿಯಲ್ಲಿ ಮೊದಲ ಬಾರಿಗೆ 4 ಜನರಿಗೆ ಕೊರೋನಾ ಕಾಣಿಸಿಕೊಂಡ ನಂತರ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುತ್ತಿದ್ದರು. ಈವರೆಗೆ 5,16,964 ಜನರ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, 26,860 ಜನರಿಗೆ ಜಿಲ್ಲೆಯಲ್ಲಿ …

Read More »

ಮಾರಾಟವಾದ…ನಿವೇಶನಗಳ ಮೇಲೆ ಮತ್ತೆ ಹಕ್ಕು ಚಲಾವಣೆ ಯತ್ನ: ಪೀರನವಾಡಿ ನಿವಾಸಿಗಳಿಂದ ಪ್ರತಿಭಟನೆ,ಆಕ್ರೋಶ

ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ 25 ವರ್ಷಗಳ ಹಿಂದೆ ಮಾರಾಟ ಮಾಡಿದ ನಿವೇಶನಗಳನ್ನು ಮರಳಿ ವಶಕ್ಕೆ ಪಡೆಯುವ ಗೂಂಡಾ ವರ್ತನೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಪೀರನವಾಡಿಯ 265ಕ್ಕೂ ಹೆಚ್ಚು ನಿವೇಶನಗಳ ಅಸಲಿ ಮಾಲೀಕರು ಮತ್ತು ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಪೀರನವಾಡಿಯ 265ಕ್ಕೂ ಹೆಚ್ಚು …

Read More »

ರಾಜ್ಯದ ಸಂಸದರು ಕನ್ನಡದ ಪರ ಕೆಲಸ ಮಾಡುತ್ತೇವೆ: ಮುಖಂಡರಿಗೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಭರವಸೆ

ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆಯ ಹಾವಳಿ ಕಡಿಮೆಯಾಗಿದೆ.ಸಂಸತ್ತಿನಲ್ಲಿ ಕರ್ನಾಟಕದ ಎಲ್ಲ ಸಂಸದರು ಕನ್ನಡದ ಪರ ಕೆಲಸ ಮಾಡುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಭರವಸೆ ನೀಡಿದರು. ಬೆಳಗಾವಿ ಹಳೆ ಜಿಪಂ ಸಭಾಂಗಣದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಸೋಮವಾರ ನಡೆಯಿತು. ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಲೋಕಸಭೆಯಲ್ಲಿ ಶಿವಸೇನೆಯ ಸಂಸದರು ಬೆಳಗಾವಿ, ಗಡಿ ವಿಷಯದ ಕುರಿತು ಧ್ವನಿ ಎತ್ತಿದ್ದರು. ಈ ಕುರಿತು ಬೆಳಗಾವಿ ಕನ್ನಡ ಕ್ರಿಯಾ …

Read More »

ಕರ್ನಾಟಕ ಕೇಸರಿ ಪುರಸ್ಕೃತ, ಹಿರಿಯ ಪೈಲ್ವಾನ್ ಚಂದ್ರು ಕುರವಿನಕೊಪ್ಪ ನಿಧನ

ಬೆಳಗಾವಿ –  ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ, ಮೂರು ಸಲ ಕರ್ನಾಟಕ ಕೇಸರಿ ಪುರಸ್ಕೃತ, ಹಿರಿಯ ಪೈಲ್ವಾನ್ ಚಂದ್ರು ಕುರವಿನಕೊಪ್ಪ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತರು ಇಬ್ಬರು ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ. ಪೈಲವಾನ್ ಚಂದ್ರು ಅವರ ನಿಧನಕ್ಕೆ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಂತಾಪ ಸೂಚಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಮೃತರ …

Read More »

3000 ರೂ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ

ಬೆಳಗಾವಿ: ಚಿಕ್ಕೋಡಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ನೌಕರ ಚೇತನ್ ಹಂಜಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಥಣಿಯ ಬಾಳಪ್ಪ ಸಿದ್ದಪ್ಪ ಬನ್ನಟ್ಟಿ ಎಂಬುವವರಿಗೆ ಅಥಣಿ ತಾಲೂಕಿನ ಶಿವನೂರ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ನೇದ್ದರ ಹೊಸ ಬೈಲಾ ಅನುಮೋದನೆ ಮಾಡಿ ಸ್ವೀಕೃತಿ ನೀಡಲು ಚೇತನ್ 3000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಾಳಪ್ಪ ಎಂಬುವವರು ಎಸಿಬಿಗೆ …

Read More »

ಯತ್ನಾಳ್ ಕಾಂಗ್ರೆಸ್ ನ `ಬಿ’ ಟೀಂ : ನಿರಾಣಿ, ಪಾಟೀಲ್ ವಾಗ್ದಾಳಿ

ಬೆಂಗಳೂರು,ಫೆ.22- ಪಂಚಮಸಾಲಿ ಹೋರಾಟ ವನ್ನು ಕೆಲವರು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಮುಗಿಬಿದ್ದರು. ಪಂಚಮಸಾಲಿ ಐತಿಹಾಸಿಕ ಹೋರಾಟ, ಸ್ವಾರ್ಥಕ್ಕೆ ಬಳಕೆಯಾಗುತ್ತಿದ್ದು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್‍ನ ಬಿ ಟೀಮ್‍ನಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಸಚಿವರುಗಳು, 2ಎ ಮೀಸಲಾತಿಗಾಗಿ ಆಗ್ರಹಿಸಿ ಶ್ರೀ …

Read More »

ಕುಲಗೋಡ ಬಲಭೀಮ ದೇವರ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮುಂದಿನ ವರ್ಷ ನಡೆಯಲಿರುವ ಇಲ್ಲಿಯ ಪ್ರಸಿದ್ಧ ಬಲಭೀಮ ದೇವಸ್ಥಾನದ ಕಾರ್ತಿಕೋತ್ಸವ ನಿಮಿತ್ಯ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಳೆದ ಶನಿವಾರದಂದು ಚಾಲನೆ ನೀಡಿದರು. ಮೂಡಲಗಿ ತಾಲೂಕಿನ ಕುಲಗೋಡದ ಸುಪ್ರಸಿದ್ಧ ಬಲಭೀಮ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಅವರು, ಕಾರ್ತಿಕೋತ್ಸವದ ಅಂಗವಾಗಿ 2022 ರಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಲಗೋಡ ಭಾಗದ ಬಲಭೀಮ ದೇವಸ್ಥಾನವು …

Read More »

ಸುಮಾರು 15ಕ್ಕೂ ಹೆಚ್ಚು ಬುಕ್ಕಿಗಳನ್ನು ಕರೆದು ಗೋಕಾಕ್ DYSP ಖಡಕ್ ವಾರ್ನಿಂಗ್

ಗೋಕಾಕ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರನ್ನು ಹೆಡಮುರಿ ಕಟ್ಟಲು ಪೊಲೀಸರು ರೆಡಿಯಾಗಿದ್ದಾರೆ, ಮತ್ತೊಂದೆಡೆ ಬೀಸೋ ದೊಣ್ಣೆಯಿಂದ ಪಾರಾಗಲು ಹರಸಾಹಸ ನಡೆಸಿದ್ದಾರೆ.   ಪ್ರಕಟವಾಗುತ್ತಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಗೋಕಾಕ ಪೊಲೀಸರು ಈಗ ದಂಧೆಕೋರರ ಉದ್ದನೆಯ ಪಟ್ಟಿ ಹಿಡಿದುಕೊಂಡು ನಗರದಲ್ಲಿ ಸಂಚರಿಸತೊಡಗಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಬುಕ್ಕಿಗಳ ಪೈಕಿ 15 ಬುಕ್ಕಿಗಳನ್ನು ಗೋಕಾಕ ಡಿಎಸ್ಪಿಯವರು ಎಲ್ಲರನ್ನು ಕರೆಯಿಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.   ಪೊಲೀಸರ ಕ್ರಮದಿಂದ ಬೆಚ್ಚಿಬಿದ್ದ ಇನ್ನೂ …

Read More »