Breaking News

Daily Archives: ಫೆಬ್ರವರಿ 17, 2021

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ 5ಲಕ್ಷ ರೂಗಳ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಮೂಡಲಗಿ ತಾಲೂಕಿನ ಅರಭಾವಿ (ಹಟ್ಟಿಗುಡ್ಡ) ಪಟ್ಟಣದ ಕುತುಬಸಾಬ ಬಾಗವಾನ ಅವರ ವಾರಸುದಾರರಿಗೆ ಇಂಧನ ಇಲಾಖೆಯಿಂದ 5ಲಕ್ಷ ರೂಗಳ ಪರಿಹಾರಧನದ ಚೆಕ್‍ನ್ನು ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಕೆಎಮ್‍ಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಧನ ಇಲಾಖೆಯಿಂದ ಮಂಜೂರಾದ ಪರಿಹಾರ ಧನವನ್ನು ಕುಟುಂಬದವರು ಸದ್ಭಳಕೆ ಮಾಡಿಕೊಳ್ಳಬೇಕು. ಈ ಹಣವನ್ನು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಬ್ಯಾಂಕ್‍ನಲ್ಲಿ ಠೇವಣಿಯಾಗಿಟ್ಟು …

Read More »

ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು ಖಂಡಿತ ನಿಜ. ಕಾಂಗ್ರೆಸ್ ನ 15-20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ:

ವಿಜಯಪುರ : ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು ಖಂಡಿತ ನಿಜ. ಕಾಂಗ್ರೆಸ್ ನ 15-20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೊಸ ಬಾಂಬ್ ಹಾಕಿದ್ದಾರೆ. ಇಲ್ಲನ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಆದ್ರೆ ಸಧ್ಯ ನಮಗೆ ಅವಶ್ಯಕತೆ ಇಲ್ಲ ಎಂದು ನಾವೇ ಸುಮ್ಮನಾಗಿದ್ದೀವಿ, ಆದರೂ ಅವರೇ ನಮಗೆ ಕೇಳ್ತಿದ್ದಾರೆ ಎಂದರು. ಕಾಂಗ್ರೆಸ್​ನಲ್ಲಿ ಅಸಮಧಾನವಿದ್ದಂತೆ ಕಾಣ್ತಿದೆ, ಮುಂದೆ ಚುನಾವಣೆಯಲ್ಲಿ ಅವರನ್ನ …

Read More »

ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆ…?

ನವದೆಹಲಿ, ಫೆಬ್ರವರಿ 17: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಬುಧವಾರ(ಫೆ.17) ಮತ್ತೊಮ್ಮೆ ತೈಲ ದರ ಏರಿಕೆ ಮಾಡಿದ್ದು, ಸತತವಾಗಿ ಒಂಭತ್ತನೇ ದಿನದಂದು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಬುಧವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ತಲಾ 25 ಪೈಸೆ ಏರಿಕೆ ಕಂಡಿದೆ. ರಾಜಸ್ಥಾನದಲ್ಲಿ ಅತಿ …

Read More »

ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಲು ಟೆಲಿಕಾಂ ವಲಯಕ್ಕೆ ಪಿಎಲ್‌ಐ ಯೋಜನೆ ವಿಸ್ತರಣೆ: ರವಿಶಂಕರ್ ಪ್ರಸಾದ್

ದೆಹಲಿ: ಕೇಂದ್ರ ಸಚಿವ ಸಂಪುಟವು ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತು ಉತ್ತೇಜನಕ್ಕಾಗಿ ಟೆಲಿಕಾಂ ಮತ್ತು ನೆಟ್​ವರ್ಕಿಂಗ್ ಉತ್ಪನ್ನಗಳಿಗೆ ₹12,195 ಕೋಟಿ ಮೌಲ್ಯದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ (production linked incentive – PLI) ನೀಡಲು ಅನುಮತಿ ನೀಡಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸೃತಿ ಇರಾನಿ ಮತ್ತು ರವಿಶಂಕರ್ ಪ್ರಸಾದ್ ಅವರು ಬುಧವಾರ ಸಚಿವ ಸಂಪುಟದ ತೀರ್ಮಾನಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ …

Read More »

Dhruva Sarja: ಟಾಲಿವುಡ್​ ಸಿನಿಪ್ರಿಯರ ಕ್ಷಮೆ ಯಾಚಿಸಿದ ಧ್ರುವ ಸರ್ಜಾ..!

ಸ್ಯಾಂಡಲ್​ವುಡ್​ ಅಂಗಳದಲ್ಲಿ ಸಖತ್​ ಸದ್ದು ಮಾಡುತ್ತಿರುವ ಸಿನಿಮಾ ಪೊಗರು. ಧ್ರುವ ಸರ್ಜಾ ಅಭಿನಯದ ಹಾಗೂ ನಂದ ಕಿಶೋರ್​ ನಿರ್ದೇಶನದ ಈ ಸಿನಿಮಾದ ರಿಲೀಸ್​ಗೆ ಇವತ್ತೂ ಸೇರಿದಂತೆ ಎರಡು ದಿನದ ನಂತರ ಬಾಕಿ ಇದೆ. ಪೊಗರು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಇದೇ ಮೊದಲ ಸಲ ಧ್ರುವ ಸರ್ಜಾ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ. ಕೆಜಿಎಫ್​ ಸಿನಿಮಾದ ನಂತರ ಕನ್ನಡದ ಬಹುತೇಕ ಸಿನಿಮಾಗಳು ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಾಣಲಿವೆ. …

Read More »

ಹೊಸ ಚಿತ್ರದಲ್ಲಿ ಕುರಿ ಪ್ರತಾಪ್​ ಹೀರೋ.. ಆದ್ರೆ ನಾಯಕಿಯ ಭೇಟಿಗೆ ಅವಕಾಶವೇ ಇಲ್ಲ!

ಕಾಮಿಡಿಯನ್​ಗಳಾಗಿ ಕಾಣಿಸಿಕೊಂಡ ನಂತರ ಹೀರೋ ಆಗುವ ಪ್ರಯತ್ನವನ್ನು ಕನ್ನಡ ಚಿತ್ರರಂಗದಲ್ಲಿ ಅನೇಕರು ಮಾಡಿದ್ದಾರೆ. ಇದರಲ್ಲಿ ಕೆಲವರು ಯಶಸ್ಸು ಕಂಡರೆ, ಇನ್ನೂ ಕೆಲವರು ಸೋತಿದ್ದಾರೆ. ಈಗ ಕನ್ನಡದ ಹಾಸ್ಯ ನಟ ಕುರಿ ಪ್ರತಾಪ್​ (Kuri Prathap) ಇದೇ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಹೀರೋ ಆಗಿ ತೆರೆಮೇಲೆ ಬರುತ್ತಿದ್ದಾರೆ. ಚಿತ್ರಕ್ಕೆ ‘ಆರ್​ಸಿ ಬ್ರದರ್’​ ಎಂದು ನಾಮಕರಣ ಮಾಡಲಾಗಿದೆ. ನಿರ್ದೇಶಕ ಪ್ರಕಾಶ್​ ಕುಮಾರ್​ ಈ ಚಿತ್ರಕ್ಕೆ ಆಯಕ್ಷನ್ …

Read More »

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಹೂಡಿದ್ದ ಮಾನನಷ್ಟ ಮೊಕದ್ದಮೆ ರದ್ದು

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್​ ಹೂಡಿದ್ದ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್​ ರದ್ದು ಮಾಡಿದೆ. ತನಗಾದ ಕಹಿ ಅನುಭವವನ್ನು ಹಲವು ವರ್ಷಗಳ ನಂತರವೂ ವ್ಯಕ್ತಪಡಿಸುವ ಹಕ್ಕನ್ನು ಮಹಿಳೆ ಹೊಂದಿದ್ದಾಳೆ ಎಂದು ಕೋರ್ಟ್​ ಹೇಳಿದೆ. 2018ರಲ್ಲಿ #Metoo ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರರಂಗದವರು ಸೇರಿ ಅನೇಕ ಕ್ಷೇತ್ರದ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮೌನ ಮುರಿದಿದ್ದರು. ಆಗ ಪತ್ರಕರ್ತೆ …

Read More »

IPL Auction 2021: ಐಪಿಎಲ್​ 2021 ಇಂದಿನ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಬಹುದಾದ ದೇಶಿ-ವಿದೇಶಿ ಆಟಗಾರರು ಇವರೆ

ಚೆನ್ನೈ: ಕಳೆದ ವರ್ಷ ಯುಎಇಯಲ್ಲಿ ನಡೆದಿದ್ದಂತಹ ಐಪಿಎಲ್​ 2020 ಕೊರೊನಾ ಸಾಂಕ್ರಾಮಿಕ ಮಹಾಮಾರಿಯ ನಡುವೆಯೂ ಭಾರಿ ಯಶಸ್ಸು ಪಡೆದಿತ್ತು. ಗ್ಯಾಲರಿಯಲ್ಲಿ ಪ್ರೇಕ್ಷಕರಿಲ್ಲದೆ ನಡೆದ ಸರಣಿಯಾದರೂ, ಪ್ರೇಕ್ಷಕರನ್ನು ರಂಜಿಸುವಲ್ಲಿ ಯಾವುದೇ ರೀತಿಯಾಗಿ ಹಿಂದೇಟು ಹಾಕಲಿಲ್ಲ. ಹೀಗಾಗಿ ಐಪಿಎಲ್​ 2020 ಕ್ರಿಕೆಟ್​ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಐಪಿಎಲ್​ 2020 ಗಾಗಿ, 2019 ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಸಾಕಷ್ಟು ಆಟಗಾರರು ನಿರೀಕ್ಷೆಗೂ ಮೀರಿದ ಹಣಕ್ಕೆ ಹರಾಜಾಗಿದ್ದರು. ಅಂತಹ ಟಾಪ್​ 10 …

Read More »

ಪ್ರಿಯಕರನೊಂದಿಗೆ ಪಲ್ಲಂಗ ಸುಖಕ್ಕಾಗಿ ಪತಿಯನ್ನೇ ಕೊಂದ ಪತ್ನಿ!

ಯಮುನನಗರ : ವಿವಾಹೇತರ ಸಂಬಂಧಕ್ಕಾಗಿ 26 ವರ್ಷದ ಪತಿಯನ್ನು ಪತ್ನಿಯೊಬ್ಬಳು ತನ್ನ ಪ್ರೇಮಿಯ ಜೊತೆ ಸೇರಿ ಕತ್ತು ಹಿಸುಕಿ ಕೊಂದ ಘಟನೆ ಹರಿಯಾಣದ ಯಮುನನಗರದ ಖಿಜ್ರಾಬಾದ್ ನಲ್ಲಿ ನಡೆದಿದೆ. ಆರೋಪಿ ಹಾಗೂ ಸಂತ್ರಸ್ತನಿಗೆ 4 ವರ್ಷಗಳ ಹಿಂದೆ ವಿವಾಹವಾಗಿದ್ದು, ಒಂದು ಮಗುವಿದೆ. ಆದರೆ ಪತ್ನಿ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು, ಹೀಗಾಗಿ ಪ್ರೇಮಿಯ ಜೊತೆ ಸೇರಿ ಪತಿಯನ್ನು ಕೊಂದು ಮನೆಯ ಒಳಗೆ ಹೂತು ಹಾಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು …

Read More »

ಬಾಗಲೂರು: ಮದ್ಯ ಸೇವಿಸಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಪತಿಯನ್ನೇ ಬಿಟ್ಟು ಹೋದ ಪತ್ನಿ

ಬೆಂಗಳೂರು: ಮದ್ಯ ಸೇವಿಸುವ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ತವರು ಮನೆ ಸೇರಿದ ಅದೆಷ್ಟೋ ಪ್ರಸಂಗಗಳು ದಿನ ನಿತ್ಯ ನಡೆಯುತ್ತಲೇ ಇರುತ್ತವೆ. ಆದ್ರೆ ಇಲ್ಲೊಂಚೂರು ಬೇರೆ. ಮದ್ಯ ಸೇವಿಸಬೇಡ ಎಂದಿದ್ದಕ್ಕೆ ಪತಿಯನ್ನ ಪತ್ನಿ ಬಿಟ್ಟುಹೋಗಿದ್ದಾರೆ. ಇಂತಹದೊಂದು ಘಟನೆ ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ಯ ಸೇವಿಸಬೇಡ ಎಂದು ಬೈದು ಬುದ್ಧಿ ಹೇಳಿದಕ್ಕೆ ಗಂಡನನ್ನೇ ಬಿಟ್ಟು ಹೆಂಡತಿ ನಾಪತ್ತೆಯಾಗಿದ್ದಳು. ಈ ಬಗ್ಗೆ ದೂರು ದಾಖಲಾದ ಬಳಿಕ ಪೊಲೀಸರು ಮಹಿಳೆಯ ಮನವೊಲಿಸಿ …

Read More »