Breaking News
Home / 2021 / ಜನವರಿ (page 62)

Monthly Archives: ಜನವರಿ 2021

ತಾಲೂಕು ಪಂಚಾಯತಿ ವ್ಯವಸ್ಥೆಯನ್ನೇ ರದ್ದು ಮಾಡುತ್ತೇವೆ: ಗೋವಿಂದ ಕಾರಜೋಳ

ಬಾಗಲಕೋಟೆ: ರಾಮಕೃಷ್ಣ ಹೆಗಡೆ ಅವರ ದೂರದೃಷ್ಠಿಯ ಫಲವಾಗಿ ಇಡೀ ದೇಶಕ್ಕೆ ಮಾದರಿಯಾದ ಪಂಚಾಯತ್ ರಾಜ್ ವ್ಯವಸ್ಥೆ ನಮ್ಮ ರಾಜ್ಯದಲ್ಲಿತ್ತು. ಆದರೆ ವೀರಪ್ಪ ಮೋಯ್ಲಿ ಅವರು ಮುಖ್ಯಮಂತ್ರಿಯಾದ ಬಳಿಕ ಪಂಚಾಯತ್ ವ್ಯವಸ್ಥೆಯ ಅರಿವಿಲ್ಲದೆ ಅವಿವೇಕಿತನದ ನಿರ್ಧಾರದಿಂದ ಈ ವ್ಯವಸ್ಥೆಯೇ ಕುಲಗೆಟ್ಟಿತು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಎರಡು ಹಂತದ ವ್ಯವಸ್ಥೆಗೊಳಿಸಲು ಚರ್ಚೆ ನಡೆಸುತ್ತಿದ್ದು, ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಗೊಳಿಸುವ ಚಿಂತನೆ ನಡೆದಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿ ಬುಧವಾರ ಜಿಲ್ಲಾ …

Read More »

ಅಭಿಮಾನಿಯ ಮನದಾಸೆ ಈಡೇರಿಸಿದ ಪವರ್ ಸ್ಟಾರ್ ಪುನೀತ್

ಡಾ.ರಾಜ್‌ಕುಮಾರ್ ಕುಟುಂಬದವರನ್ನು ಸುಮ್ಮನೆ ‘ದೊಡ್ಮನೆಯರು’ ಎನ್ನುವುದಿಲ್ಲ. ಅವರ ವಿಶಾಲ ಮನೋಭಾವಕ್ಕೆ ಅನ್ವರ್ಥವಾಗಿ ಆ ಹೆಸರು ಬಂದಿದೆ. ಶಿವಣ್ಣ, ಬೀದಿ ಬದಿಯಲ್ಲಿ ಚಹ ಕುಡಿದ, ಉಪ್ಪಿಟ್ಟು ತಿಂದ, ಅಭಿಮಾನಿಗಳಿಗೆ ಸಹಾಯ ಮಾಡಿದ ಸುದ್ದಿಗಳು, ಚಿತ್ರಗಳು ನೋಡಿಯೇ ಇರುತ್ತೀರಾ. ಪುನೀತ್ ರಾಜ್‌ಕುಮಾರ್ ಸಹ ಸರಳತೆಯಲ್ಲಿ ಅಣ್ಣನಂತೆಯೇ. ಇತ್ತೀಚೆಗಷ್ಟೆ ತಮ್ಮ ಕಚೇರಿಯ ಉದ್ಯೋಗಿಯೊಬ್ಬರ ಮದುವೆಗಾಗಿ ಕರಾವಳಿಗೆ ಬಂದಿದ್ದ ಪುನೀತ್ ರಾಜ್‌ಕುಮಾರ್, ಇದೀಗ ಮತ್ತೊಮ್ಮೆ ತಮ್ಮ ವಿಶಾಲ ಹೃದಯಕ್ಕೆ, ಮನುಷ್ಯ ಪ್ರೀತಿಗೆ ಉದಾಹರಣೆಯೊಂದನ್ನು ನೀಡಿದ್ದಾರೆ. ಅಭಿಮಾನಿಯೊಬ್ಬ …

Read More »

ಕತ್ರಿನಾ ಕೈಫ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ತಮಿಳಿನ ಸ್ಟಾರ್ ನಟ

ನಟಿ ಕತ್ರಿನಾ ಕೈಫ್ ಈ ಹಿಂದೆ ಕೆಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಾಲಿವುಡ್‌ ನಲ್ಲಿ ಸ್ಥಾನ ಭದ್ರವಾದ ಬಳಿಕ ಅವರು ದಕ್ಷಿಣದತ್ತ ತಲೆ ಹಾಕಿಲ್ಲ. ಆದರೆ ಹೊಸ ಸಿನಿಮಾ ಒಂದರಲ್ಲಿ ನಟಿ ಕತ್ರಿನಾ ಕೈಫ್ ಜೊತೆಗೆ ದಕ್ಷಿಣದ ಖ್ಯಾತ ನಟನೊಬ್ಬ ತೆರೆ ಹಂಚಿಕೊಳ್ಳಲಿದ್ದಾರೆ. ನಟ ವಿಜಯ್ ಸೇತುಪತಿ ಹಿಂದಿ ಸಿನಿಮಾದಲ್ಲಿ ಕತ್ರಿನಾ ಕೈಫ್ ಜೊತೆಗೆ ನಟಿಸಲಿದ್ದಾರೆ. ‘ಅಂಧಾದುನ್’ ಎಂಬ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಶ್ರೀರಾಮ್ ರಾಘವ್ …

Read More »

ಭಂಡಾರ ಆಸ್ಪತ್ರೆಯ ಬೆಂಕಿ ಅವಘಢದಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಹಾರಾಷ್ಟ್ರದ ಭಂಡಾರಾದಲ್ಲಿ ಸಂಭವಿಸಿದ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನೂ ಘೋಷಿಸಲಾಗಿದೆ. ಪಿಎಂ ಮೋದಿ ಈ ಹಿಂದೆ ಟ್ವೀಟ್ ಮಾಡಿ ‘ಮಹಾರಾಷ್ಟ್ರದ ಭಂಡಾರಾದಲ್ಲಿ ನಾವು ಅಮೂಲ್ಯ ಯುವ ಜೀವಗಳನ್ನು ಕಳೆದುಕೊಂಡಿದ್ದೇವೆ. …

Read More »

ಮಗಳ ಮದುವೆಗೆ ಸಿಎಂ ಬಿಎಸ್ ವೈಗೆ ಆಹ್ವಾನ ನೀಡಿದ ಜಮೀರ್ ಅಹ್ಮದ್ ಖಾನ್

ಬೆಂಗಳೂರು : ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮ ಮಗಳ ಮದುವೆಗೆ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುಉತ್ತಿದ್ದು, ನಿನ್ನೆ ಜಮೀರ್ ಅಹ್ಮದ್ ಖಾನ್ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಭೇಟಿಯಾಗಿ ಆಹ್ವಾನ ನೀಡಿದ್ದಾರೆ. ನಿನ್ನೆ ರಾತ್ರಿ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ ಜಮೀರ್ ಅಹ್ಮದ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಗಳ ಮದುವೆಗೆ ಆಮಂತ್ರಣ ನೀಡಿ ಮದುವೆಗೆ ದಯಮಾಡಿ ಬರಬೇಕು ಸಾರ್ ಎಂದರು. ಇದೇ ವೇಳೆ ಯಡಿಯೂರಪ್ಪ ಪುತ್ರ …

Read More »

ಮಹತ್ವದ ಬೆಳವಣಿಗೆ: ಗಡಿಯಿಂದ 10 ಸಾವಿರ ಸೈನಿಕರ ವಾಪಸ್ ಪಡೆದ ಚೀನಾ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಚೀನಾ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ) ಪ್ರದೇಶದಿಂದ 10 ಸಾವಿರ ಸೈನಿಕರನ್ನು ಹಿಂಪಡೆದುಕೊಂಡಿದೆ. ಲಡಾಖ್ ನ ಭಾರತೀಯ ಗಡಿ ಪ್ರದೇಶಕ್ಕೆ ಸಮೀಪವಿರುವ ಚೀನಾ ಸೈನ್ಯದ ಸಾಂಪ್ರದಾಯಿಕ ತರಬೇತಿ ಪ್ರದೇಶಗಳಲ್ಲಿ ಇದ್ದ 10 ಸಾವಿರ ಸೈನಿಕರನ್ನು ಹಿಂಪಡೆದುಕೊಂಡಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ಜಗತ್ತು ಹೋರಾಟ ನಡೆಸುತ್ತಿದ್ದಾಗ ಚೀನಾ 50 ಸಾವಿರ ಸೈನಿಕರನ್ನು …

Read More »

ಕಲ್ಲಿದ್ದಲು ಗಣಿಗಾರಿಕೆಗೆ ಆನ್ ಲೈನ್ ಮೂಲಕ ಅನುಮತಿ ಒದಗಿಸುವ ಏಕ ಗವಾಕ್ಷಿ ಅನುಮೋದನೆ ಪಡೆಯುವ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆಗೆ ಆನ್ ಲೈನ್ ಮೂಲಕ ಅನುಮತಿ ಒದಗಿಸುವ ಏಕ ಗವಾಕ್ಷಿ ಅನುಮೋದನೆ ಪಡೆಯುವ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು. ಈ ಕುರಿತು ಮಾತನಾಡಿದ ಅವರು ಕಲ್ಲಿದ್ದಲು ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದ್ದರೂ ಅದರ ಸದ್ಬಳಕೆ ಆಗುತ್ತಿರಲಿಲ್ಲ, ಇದೀಗ ಕಲ್ಲಿದ್ದಲು ಕ್ಷೇತ್ರದಲ್ಲಿ ಪಾರದರ್ಶಕತೆ ತರುವ ಮತ್ತು ಅದರ ಕ್ಷಮತೆಯನ್ನು ಹೆಚ್ಚಿಸುವ ಹಾಗೂ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಈ ಏಕ …

Read More »

ಪುಣೆ ವಿಮಾನ ನಿಲ್ದಾಣ ತಲುಪಿದ ಕೋವಿಶೀಲ್ಡ್ ಲಸಿಕೆ. : ಆಯಾ ರಾಜ್ಯಗಳಿಗೆ ರವಾನೆಗೆ ಸಿದ್ಧತೆ

ಪುಣೆ : ಕೋವಿಶೀಲ್ಡ್ ಲಸಿಕೆ ಜನರಿಗೆ ನೀಡಲು ಸಿದ್ಧವಾಗುತ್ತಿದ್ದು, ಇದೀಗ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಮೂರೂ ಕಂಟೈನರ್ ಹೊರಟಿದೆ. ಇದು ಕೊರೊನಾ ವೈರಸ್ ವಿರೋಧಿ ಹೋರಾಟದಲ್ಲಿ ನಿರ್ಣಾಯಕ ಹಂತವನ್ನು ಸೂಚಿಸುತ್ತದೆ. ತಾಪಮಾನ ನಿಯಂತ್ರಿತ ಮೂರು ಟ್ರಕ್‌ಗಳು ಸೀರಮ್ ಇನ್‌ಸ್ಟಿಟ್ಯೂಟ್‌ನ ಗೇಟ್‌ಗಳಿಂದ ಮುಂಜಾನೆ 5 ಗಂಟೆಯ ಸುಮಾರಿಗೆ ಹೊರಟು ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿವೆ. ಅಲ್ಲಿಂದ ಭಾರತದಾದ್ಯಂತ ಲಸಿಕೆಗಳನ್ನು ತಲುಪಿಸಲಾಗುತ್ತದೆ. ವಾಹನಗಳು ಹೊರಡುವ ಮೊದಲು ಪೂಜೆ ನಡೆಸಲಾಯಿತು. ಪುಣಿಯಿಂದ ಕೋವಿಶೀಲ್ಡ್ …

Read More »

ಮೊದಲ ಹಂತದಲ್ಲಿ ರಾಜ್ಯದ 16 ಲಕ್ಷ ಮಂದಿಗೆ ಕೊರೊನಾ ಲಸಿಕೆ : ಸಿಎಂ ಬಿಎಸ್ ವೈ

ಬೆಂಗಳೂರು : ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಸಿಹಿಸುದ್ದಿ ನೀಡಿದ್ದು, ರಾಜ್ಯದ ಆಯ್ದ 16 ಲಕ್ಷ ಜನರಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ಸಿಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಡೆಸಿದ ಹಲವು ರಾಜ್ಯಗಳ ಸಿಎಂ ಸಭೆ ಬಳಿಕ ಯಡಿಯೂರಪ್ಪ ಸುದ್ದಿಗಾರರ ಜೊತೆ ಮಾತನಾಡಿದರು. ಲಸಿಕೆ ಫಲಾನುಭವಿಗಳ ಆಯ್ಕೆ ಈಗಾಗಲೇ ನಡೆದಿದೆ, ರಾಜ್ಯ ಲಸಿಕೆ ವಿತರಣೆಗೆ ಸಜ್ಜಾಗಿದೆ ಎಂದಿದ್ದಾರೆ. ದೇಶದಲ್ಲಿ ಮೊದಲ ಹಂತದಲ್ಲಿ ಒಟ್ಟು 3 …

Read More »

BREAKING : ಡ್ರಗ್ಸ್ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಆದಿತ್ಯ ಆಳ್ವಾ ಬಂಧನ

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆದಿತ್ಯ ಆಳ್ವಾನನ್ನು ಸಿಸಿಬಿ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದ ಆದಿತ್ಯ ಆಳ್ವಾನನ್ನು ಪೊಲೀಸರು ನಿನ್ನೆ ರಾತ್ರಿ ಚೆನ್ನೈನಲ್ಲಿ ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದ 6 ನೇ ಆರೋಪಿಯಾಗಿರುವ ಆದಿತ್ಯ ಆಳ್ವಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಚಾಮರಾಜನಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆ …

Read More »