Home / Uncategorized / ಪುಣೆ ವಿಮಾನ ನಿಲ್ದಾಣ ತಲುಪಿದ ಕೋವಿಶೀಲ್ಡ್ ಲಸಿಕೆ. : ಆಯಾ ರಾಜ್ಯಗಳಿಗೆ ರವಾನೆಗೆ ಸಿದ್ಧತೆ

ಪುಣೆ ವಿಮಾನ ನಿಲ್ದಾಣ ತಲುಪಿದ ಕೋವಿಶೀಲ್ಡ್ ಲಸಿಕೆ. : ಆಯಾ ರಾಜ್ಯಗಳಿಗೆ ರವಾನೆಗೆ ಸಿದ್ಧತೆ

Spread the love

ಪುಣೆ : ಕೋವಿಶೀಲ್ಡ್ ಲಸಿಕೆ ಜನರಿಗೆ ನೀಡಲು ಸಿದ್ಧವಾಗುತ್ತಿದ್ದು, ಇದೀಗ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಮೂರೂ ಕಂಟೈನರ್ ಹೊರಟಿದೆ. ಇದು ಕೊರೊನಾ ವೈರಸ್ ವಿರೋಧಿ ಹೋರಾಟದಲ್ಲಿ ನಿರ್ಣಾಯಕ ಹಂತವನ್ನು ಸೂಚಿಸುತ್ತದೆ.

ತಾಪಮಾನ ನಿಯಂತ್ರಿತ ಮೂರು ಟ್ರಕ್‌ಗಳು ಸೀರಮ್ ಇನ್‌ಸ್ಟಿಟ್ಯೂಟ್‌ನ ಗೇಟ್‌ಗಳಿಂದ ಮುಂಜಾನೆ 5 ಗಂಟೆಯ ಸುಮಾರಿಗೆ ಹೊರಟು ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿವೆ. ಅಲ್ಲಿಂದ ಭಾರತದಾದ್ಯಂತ ಲಸಿಕೆಗಳನ್ನು ತಲುಪಿಸಲಾಗುತ್ತದೆ.

ವಾಹನಗಳು ಹೊರಡುವ ಮೊದಲು ಪೂಜೆ ನಡೆಸಲಾಯಿತು. ಪುಣಿಯಿಂದ ಕೋವಿಶೀಲ್ಡ್ ಲಸಿಕೆಗಳು ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನೂಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಖನೌ, ಚಂಡೀಗಢ ಮತ್ತು ಭುವನೇಶ್ವರ ಸೇರಿದಂತೆ 13 ಸ್ಥಳಗಳಿಗೆ ತಲುಪಲಿವೆ.

ಟ್ರಕ್‌ಗಳು ಲಸಿಕೆಗಳ 478 ಪೆಟ್ಟಿಗೆಗಳನ್ನು ಹೊತ್ತೊಯ್ದಿದ್ದು, ಪ್ರತಿ ಪೆಟ್ಟಿಗೆಯ ತೂಕ 32 ಕೆ.ಜಿ. ಇದೆ. ಬೆಳಗ್ಗೆ 10ರೊಳಗೆ ಸರಕುಗಳನ್ನು ಈ ಮೇಲಿನ ಸ್ಥಳಗಳಿಗೆ ರವಾನಿಸಲಾಗುವುದು ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ