Breaking News
Home / 2021 / ಜನವರಿ (page 2)

Monthly Archives: ಜನವರಿ 2021

ಯಾವುದೇ ದಾಖಲೆ ನೀಡದೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿ

ಆಧಾರ್ ಕಾರ್ಡ್ ಗುರುತಿನ ಪ್ರಮುಖ ದಾಖಲೆಯಾಗಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಇದನ್ನು ನಿರಂತರವಾಗಿ ನವೀಕರಿಸುತ್ತಿದೆ. ನವೀಕರಣದ ಪ್ರಕ್ರಿಯೆಯನ್ನು ಯುಐಡಿಎಐ ಸುಲಭಗೊಳಿಸಲಾಗುತ್ತಿದೆ. ಆಧಾರ್ ಕಾರ್ಡನ್ನು ಮೊಬೈಲ್ ನಂಬರ್ ಗೆ ಲಿಂಕ್ ಮಾಡಬೇಕು. ಒಂದು ವೇಳೆ ಹೊಸ ನಂಬರ್ ಪಡೆದಿದ್ದರೆ ಅದನ್ನು ನವೀಕರಿಸಬೇಕಾಗುತ್ತದೆ. ಈಗ ಯುಐಡಿಎಐ ಮೊಬೈಲ್ ನಂಬರ್ ನವೀಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಯಾವುದೇ ದಾಖಲೆಗಳಿಲ್ಲದೆ …

Read More »

ʼPNBʼ ಗ್ರಾಹಕರೇ, ನಾಳೆಯಿಂದ ನೀವು ʼATMʼನಿಂದ ಹಣ ತೆಗೆಯೋದು ಕಷ್ಟ?

ಎಟಿಎಂ ಮೂಲಕ ವಂಚನೆ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ತನ್ನ ಎಟಿಎಂಗಳಿಂದ ಹಣ ಡ್ರಾ ಮಾಡಲು ಫೆ.1ರಿಂದ ನಿಯಮವನ್ನ ಬದಲಿಸಲಿದ್ದು, ಪಿಎನ್ ಬಿ ಗ್ರಾಹಕರು ಇಎಂವಿ ಯೇತರ ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಪಿಎನ್ ಬಿ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷ್ಯ ತಿಳಿಸಿದ್ದು, ಬ್ಯಾಂಕಿನ ಎಟಿಎಂ ಬಳಕೆ ನಿಯಮಗಳಲ್ಲಿ …

Read More »

ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ಸಂತೋಷ್ ಜಾರಕಿಹೊಳಿ…

ಗೋಕಾಕ: ಇಂದಿನ ಮಕ್ಕಳು ಮುಂದಿನ ಭವಿಷ್ಯ ಹಾಗೂ ಎಂದು ರಾಜ್ಯಾದ್ಯಂತ ಪಲ್ಸ ಪೋಲಿಯೋ ದಿನಾಚರಣೆ ಸದಾ ಸಾಮಾಜಿಕ ಕಳಕಳಿ ಹಾಗೂ ಕಾಳಜಿ ಯಲ್ಲಿರುವ ಶ್ರೀ ಸಂತೋಷ್ ಜಾರಕಿಹೊಳಿ ಅವರು ಯಾವತ್ತೂ ಪ್ರಚಾರ ಬೇಡ ಎಂದು ಹೇಳುತ್ತಾರೆ ಆದರೆ ಅವರ ಗೆಳೆಯರ ಬಳಗ ಸಾಹುಕಾರರು ಮಾಡುವ ಚಿಕ್ಕ ಚಿಕ್ಕ ಕೆಲಸ ಗಳು ಸಮಾಜಕ್ಕೆ ತಿಳಿಯಲಿ ಎಂದು ಅವರು ಮಾಡುವ ಎಲ್ಲ ಕೆಲಸ ಕಾರ್ಯ ಗಳನ್ನ ಸೇರಿ ಹಿಡಿದು ವಾಹಿನಿಗೆ ಸಂದೇಶ ರವಾನೆ …

Read More »

ಕರ್ನಾಟಕದ ತಂಟೆಗೆ ಬಂದ ಮಹಾರಾಷ್ಟ್ರಕ್ಕೆ ಉಪಮುಖ್ಯಮಂತ್ರಿಗಳು ಖಡಕ್ ತಿರುಗೇಟು.!

ಬೆಂಗಳೂರು : ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದಾಗಿ ದಿನಕ್ಕೊಂದು ಹೇಳಿಕೆ ಕೊಡುತ್ತಿರುವಂತ ಮಹಾರಾಷ್ಟ್ರಕ್ಕೆ, ಛತ್ರಪತಿ ಶಿವಾಜಿ ಪೂರ್ವಜರು ಕರ್ನಾಟಕದವರು ಹಾಗಾಗಿ ಶಿವಾಜಿಯ ಮೂಲಕ ಕರ್ನಾಟಕ. ಮುಂಬೈ ಕರ್ನಾಟಕಕ್ಕೆ ಸೇರಬೇಕು ಎನ್ನುವ ಮೂಲಕ ರಾಜ್ಯದ ತಂಟೆಗೆ ಬಂದಂತ ಮಹಾರಾಷ್ಟ್ರಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಗೋವಿಂದ ಕಾರಜೋಳ ಖಡಕ್ ತಿರುಗೇಟು ನೀಡಿದ್ದಾರೆ.   ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ವಾದಕ್ಕೆ, …

Read More »

ದೆಹಲಿ ರೈತರ ಪ್ರತಿಭಟನೆ : ಫೆಬ್ರವರಿ 2 ಕ್ಕೆ ಕೇಂದ್ರದ ಜೊತೆ ರೈತರ ಸಭೆ

ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 67 ನೇ ದಿನಕ್ಕೆ ಕಾಲಿಟ್ಟಿದ್ದು, ಫೆಬ್ರವರಿ 2 ರಂದು ಕೇಂದ್ರ ಮತ್ತು ರೈತರ ಮಧ್ಯೆ ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ. ಗಾಜೀಪುರ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಪ್ರತಿಭಟನಾ ಸ್ಥಳಕ್ಕೆ ಹೆಚ್ಚಿನ ರೈತರು ಆಗಮಿಸುತ್ತಿರುವುದರಿಂದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ಕಾಯ್ದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು. ಹಾಗಾದರೆ ಮಾತ್ರ ಅದು ಸರ್ಕಾರಕ್ಕೆ ಮತ್ತು ರೈತರಿಗೆ …

Read More »

ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ದ ಶಿರ್ಷೀಕೆ ದುಬೈನ ಬುರ್ಜ ಖಲಿಫಾದ ಮೇಲೆ ಬಿಡುಗಡೆ

ಗೋಕಾಕ: ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ದ ಶಿರ್ಷೀಕೆ ಹಾಗೂ ಲಾಂಛನವನ್ನು ಜನೆವರಿ 31ರಂದು ದುಬೈನ ಬುರ್ಜ ಖಲಿಫಾದ ಮೇಲೆ ಬಿಡುಗಡೆ ಮಾಡುವ ಮೂಲಕ ವಿಶ್ವದಾಖಲೆ ಮಾಡಲಿದೆ. ಎರಡು ಸಾವಿರ ಅಡಿ ಎತ್ತರದ ನಟ ಕಿಚ್ಚಾ ಸುದೀಪ ಅವರ ಕಟೌಟನ್ನು ಈ ಕಟ್ಟಡದಲ್ಲಿ ಹಾಕುವ ಮೂಲಕ ಚಲನಚಿತ್ರ ರಂಗದಲ್ಲಿಯೇ ಅತೀ ಎತ್ತರದ ಕಟೌಟನಲ್ಲಿ ರಾರಾಜಿಸುವ ಕೀರ್ತಿಗೆ ಸುದೀಪ ಪಾತ್ರರಾಗುತ್ತಿದ್ದಾರೆ. ಈ ದೃಶ್ಯವನ್ನು ಭಾರತದಲ್ಲಿ ಜನೇವರಿ 31ರ …

Read More »

ಶಿವಸೇನೆ ಕಾರ್ಯಕರ್ತರ ಪುಂಡಾಟ ರಿವಾಲ್ವರ್ ತೋರಿಸಿ ಬೆದರಿಕೆ

ಮುಂಬೈ: ಶಿವಸೇನೆ ಕಾರ್ಯಕರ್ತರ ಪುಂಡಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾರಿನಲ್ಲಿ ತೆರಳುತ್ತಿದ್ದ ಶಿವಸೇನೆ ಕಾರ್ಯಕರ್ತರು ಗನ್ ಹಿಡಿದು ತಮಗೆ ದಾರಿ ಬಿಡುವಂತೆ ಜನರನ್ನು ಬೆದರಿಸಿದ ಘಟನೆ ಮುಂಬೈ ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿವಸೇನೆ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ಶಿವಸೇನೆ ಕಾರ್ಯಕರ್ತರು ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿದ್ದಾರೆ. ವಿಡಿಯೋ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರ …

Read More »

ಫೆಬ್ರವರಿ 1ರಿಂದ ಭಕ್ತರಿಗೆ ಸವದತ್ತಿ ಯಲ್ಲಮ್ಮ ದರ್ಶನ

ಸವದತ್ತಿ – ಪ್ರಸಿದ್ಧ ಯಾತ್ರಾ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನ ಫೆಬ್ರವರಿ 1ರಿಂದ ಭಕ್ತರಿಗೆ ಮುಕ್ತವಾಗಲಿದೆ. ಕೊರೋನಾ ಹಿನ್ನೆಲೆಯಲ್ಲಿ ಭಕ್ತರಿಗೆ ದೇವಿಯ ದರ್ಶನವನ್ನು ಕಳೆದ 10 ತಿಂಗಳಿನಿಂದ ನಿರ್ಬಂಧಿಸಲಾಗಿತ್ತು.  ಇದೀಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಫೆಬ್ರವರಿ 1ರಿಂದ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಕೊಟಾರಗಸ್ತಿ ಮಾಹಿತಿ ನೀಡಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಲಕ್ಷಾಂತರ ಜನರು ಸವದತ್ತಿ ಯಲ್ಲಮ್ಮ ದೇವಿಯ ಭಕ್ತರಿದ್ದಾರೆ. ಫೆಬ್ರವರಿ ತಿಂಗಳಲ್ಲಿ …

Read More »

ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಓಪನ್, ಷರತ್ತುಗಳು ಅನ್ವಯ

ನವದೆಹಲಿ: ಸಿನಿಮಾ ಪ್ರಿಯರಿಗೆ ಭರ್ಜರಿ ಗುಡ್‍ನ್ಯೂಸ್ ಸಿಕ್ಕಿದ್ದು ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಸಮ್ಮತಿ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದ್ದು 10 ತಿಂಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಆಗಲಿದೆ. ನವದೆಹಲಿ: ಸಿನಿಮಾ ಪ್ರಿಯರಿಗೆ ಭರ್ಜರಿ ಗುಡ್‍ನ್ಯೂಸ್ ಸಿಕ್ಕಿದ್ದು ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಸಮ್ಮತಿ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದ್ದು 10 ತಿಂಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಆಗಲಿದೆ. ಮಾರ್ಗಸೂಚಿಯಲ್ಲಿ ಏನಿದೆ? – ಆನ್‍ಲೈನ್  …

Read More »

ಕಷ್ಟದಲ್ಲಿರುವವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಕ್ತದಾನ ಮಾಡಿ: ವಿಜಯ್ ರಾಘವೇಂದ್ರ

ಬೆಂಗಳೂರು : ಕೊರೊನಾ ಸಂಕಷ್ಟ ಸಮಯದಲ್ಲಿ ರಕ್ತದ ಕೊರತೆ ಉಂಟಾಗಿದ್ದ ಪರಿಣಾಮವನ್ನು ಅರಿತು ಇಂದು ಶೇಷಾದ್ರಿಪುರಂ ಕಾಲೇಜು ಶಿಕ್ಷಣ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಮಾಡುವುದು ಬ್ರಹ್ಮ ವಿದ್ಯೆಯಲ್ಲ, ಕಷ್ಟದಲ್ಲಿರುವವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಕ್ತದಾನ ಮಾಡಿ ಎಂದು ನಟ ವಿಜಯ್ ರಾಘವೇಂದ್ರ ಮನವಿ ಮಾಡಿಕೊಂಡರು. ಶೇಷಾದ್ರಿಪುರಂ ಕಾಲೇಜು ಶಿಕ್ಷಣ ಸಂಸ್ಥೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಬರೋಬ್ಬರಿ 560 ಯೂನಿಟ್ ರಕ್ತವನ್ನು …

Read More »