Breaking News

Daily Archives: ಜನವರಿ 31, 2021

ಶಿವಾಜಿ ಮಹಾರಾಜರ ಮೂಲವೇ ಕನ್ನಡ: ಕಾರಜೋಳ

ಬೆಳಗಾವಿ-ಮುಂಬೈ ನಮ್ಮದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ ಬೆನ್ನಲ್ಲಿಯೇ ಡಿಸಿಎಂ ಗೋವೀಂದ್ ಕಾರಜೋಳ ಅವರು ಶಿವಾಜಿ ಮೂಲ ಕನ್ನಡ ಎಂದು ಹೇಳಿಕೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದು ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡ, ಮಹಾರಾಷ್ಟ್ರದ ಲ್ಲಿ ಉದ್ಧವ್ ಠಾಕ್ರೆ ನೇತೃತ್ವದ್ದು ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್ ಪಕ್ಷದವರು …

Read More »

ಮುಂಬೈ ಅವಶ್ಯಕತೆ ನಮಗಿಲ್ಲ!: ಸತೀಶ ಜಾರಕಿಹೊಳಿ

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಪ್ರಧಾನಿ ಮೋದಿ ಮಧ್ಯಸ್ಥಿಕೆವಹಿಸಿ ಸಮಸ್ಯೆ ಪರಿಹಾರ ಮಾಡಿಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಕರ್ನಾಟಕಕ್ಕೆ ಮಹದಾಯಿಯ ಒಂದು ಹನಿ ನೀರು ಕೊಡುವುದಿಲ್ಲ ಎಂದ ಗೋವಾ ಸಿಎಂ ಹೇಳಿಕೆ ವಿಚಾರವಾಗಿ ನಗರದ ತಮ್ಮ ನಿವಾಸದಲ್ಲಿ ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿ, ಈ ಹಿಂದೆ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಡಿಸೆಂಬರ್ ನಲ್ಲಿ ಸಿಹಿ ಸುದ್ದಿ ನೀಡುವುದಾಗಿ ಘೋಷಣೆ ಮಾಡಿದ್ದರು ಒಂದು ವರ್ಷ …

Read More »

ಪೊಲೀಸ್​​ ಪೇದೆ ಹೆಸರಿನಲ್ಲಿ ಜನರಿಂದ ಸುಲಿಗೆ ಮಾಡುತ್ತಿದ್ದ ಆರೋಪಿ ಅಂದರ್​

ಬೆಂಗಳೂರು: ಪೊಲೀಸ್​ ಪೇದೆ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಬಗಲುಗುಂಟೆ ಪೊಲೀಸರು ಬಂಧಿಸಿದ್ದಾರೆ. ಫಕೀರಪ್ಪ ಬಂಧಿತ ಆರೋಪಿ. ಮೂಲತಃ ಕೊಪ್ಪಳ ಮೂಲದ ಆರೋಪಿ ಬಗಲುಗುಂಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪೊಲೀಸ್​ ಆಗುವ ಕನಸು ಕಂಡಿದ್ದ ಆತ ಎರಡು ಬಾರಿ ಪರೀಕ್ಷೆ ಬರೆದು ಅದರಲ್ಲಿ ಫೇಲಾಗಿದ್ದ ಎನ್ನಲಾಗಿದೆ. ಆದರೆ ತಾನು ವಾಸಿಸುತ್ತಿದ್ದ ಬಾಡಿಗೆ ಮನೆಯ ಮಾಲೀಕರಿಗೂ ಸೇರಿದಂತೆ ಎಲ್ಲರಿಗೂ ತಾನು ಸಶಸ್ತ್ರ ಮೀಸಲು ಪಡೆಯ ಪೊಲೀಸ್​ ಪೇದೆ ಎಂದು ಸುಳ್ಳು …

Read More »

ಒಲಂಪಿಕ್ ನಲ್ಲಿ ಭಾರತಕ್ಕೆ ಮೂರು ಚಿನ್ನದ ಪದಕ

ನವದೆಹಲಿ: ಶನಿವಾರ ಪ್ರಕಟವಾದ ವೈಟ್ಲಿಫ್ತಿಂಗ್ ವಿಭಾಗಗಳ ಒಲಂಪಿಕ್ ಕ್ರೀಡಾ ವಳಿಯಲ್ಲಿ ಈ ಬಾರಿ ಭಾರತ ಮೂರು ಚಿನ್ನದ ಪದಕ, ಮೂರು ಬೆಳ್ಳಿಯ ಪದಕ ಹಾಗೂ ಆರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. 50 ಕೆಜಿಯ ವೈಟ್ ಲಿಫ್ಟಿಂಗ್ ನಲ್ಲಿ ಹರಿಯಾಣದ ಮಿನಕ್ಷಿ ಚಿನ್ನದ ಪದಕವನ್ನು ಗೆದ್ದಿದ್ದು, ಬೆಳ್ಳಿ ಪದಕವನ್ನು ಹೆನ್ನಿ ಕುಮಾರಿ (ಹರಿಯಾಣ) ಹಾಗೂ ಕಂಚಿನ ಪದಕವನ್ನು ಸ್ವಾತಿ ಶಿಂಧೆ (ಮಹಾರಾಷ್ಟ್ರ) ಮತ್ತು ಕೀರ್ತಿ (ದೆಹಲಿ) ತಮ್ಮದಾಗಿಸಿಕೊಂಡಿದ್ದಾರೆ. ಇದೇ ರೀತಿ, 57 …

Read More »

ಬೇಡಿಕೆ ಈಡೇರದಿದ್ದರೆ 4500 ಶಾಲೆಗಳು ಬಂದ್..!

ಬೆಂಗಳೂರು, ಜ.31- ಖಾಸಗಿ ಶಾಲಾ ಶುಲ್ಕ ಕಡಿತ ಮಾಡಿರುವ ಸರ್ಕಾರಕ್ಕೆ ಇದೀಗ ಮತ್ತೊಂದು ಗೊಂದಲ ಶುರುವಾಗಿದೆ.ಒಂದು ಸಮಸ್ಯೆ ಬಗೆಹರಿಯಿತು ಎನ್ನುವಾಗಲೇ ಇದೀಗ ಕಲ್ಯಾಣ ಕರ್ನಾಟಕ ಭಾಗದ 4,500 ಶಾಲೆಗಳು ಬಂದ್ ಆಗುವ ಸಾಧ್ಯತೆ ಇದ್ದು, ಇದರಿಂದ 4.5 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇದಕ್ಕೆ ಸುಮಾರು 7 ವರ್ಷಗಳಿಂದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳಸಿಕೊಳ್ಳದೆ ಇರುವುದೇ ಕಾರಣ ಎನ್ನಲಾಗುತ್ತಿದೆ. ಕಳೆದ 7 ವರ್ಷಗಳಿಂದ ಅನುದಾನವನ್ನೇ ನಂಬಿದ್ದ ಸುಮಾರು 4,500 …

Read More »

ಮಹದಾಯಿ ನೀರು ಕೊಡಲ್ಲ ಎಂದ ಗೋವಾ ಸಿಎಂಗೆ ಬಿಎಸ್ವೈ ತಿರುಗೇಟು

ಬೆಂಗಳೂರು,ಜ.31-ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ನದಿನೀರು ಹಂಚಿಕೆಯಲ್ಲಿ ಕರ್ನಾಟಕ ಯಾವುದೇ ಕಾರಣಕ್ಕೂ ಯಾರಿಗೂ ಬಗ್ಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮಹದಾಯಿ ನದಿನೀರಿನಲ್ಲಿ ನ್ಯಾಯಾೀಕರಣದ ತೀರ್ಪಿನಂತೆ ನಮಗೂ ಕೂಡ ನೀರು ಸಿಗಲೇಬೇಕು. ನಾವು ಕೂಡ ಯಾರಿಗೂ ಬಗ್ಗುವುದಿಲ್ಲ, ಜಗ್ಗುವುದೂ ಇಲ್ಲ ಎಂದು ಗುಡುಗಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿನೀರು …

Read More »

ಕನ್ನಡ ನಾಮಫಲಕ ಕಡ್ಡಾಯಗೊಳಿಸಿದ ಬಿಬಿಎಂಪಿ; ಇಲ್ಲದಿದ್ದರೆ ವ್ಯಾಪಾರ ಪರವಾನಗಿ ರದ್ದು

ಬೆಂಗಳೂರು (ಜ. 30): ಕನ್ನಡ ಜಾಗೃತಿ ಕೆಲಸಕ್ಕೆ ಮುಂದಾಗಿರುವ ಬಿಬಿಎಂಪಿ ಇದಕ್ಕಾಗಿ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಇನ್ಮುಂದೆ ಸಿಲಿಕಾನ್​ ಸಿಟಿಯ ಅಂಗಡಿಗಳಲ್ಲಿ ಕನ್ನಡ ನಾಮಫಲಕಗಳು ಕಡ್ಡಾಯ ಮಾಡಿದೆ. ಒಂದು ವೇಳೆ ಅಂಗಡಿಗಳಲ್ಲಿ ಕನ್ನಡ ನಾಮಫಲಕಗಳು ಕಂಡು ಬರದಿದ್ದರೆ ಅಂಗಡಿಗಳ ವ್ಯಾಪಾರ ಪರವಾನಿಗೆ (ಟ್ರೇಡ್​ ಲೈಸೆನ್ಸ್​ನ್ನು) ರದ್ದುಮಾಡುವುದಾಗಿ ತಿಳಿಸಿದೆ. ಈ ಮೂಲಕ ಸಿಲಿಕಾನ್​ ಸಿಟಿಯಲ್ಲಿ ಕನ್ನಡ ಉಳಿಕೆಗೆ ಬಿಬಿಎಂಪಿ ದಿಟ್ಟ ಹೆಜ್ಜೆ ಇರಿಸಿದೆ. ಅಂಗಡಿಗಳಲ್ಲಿ ಮಾತ್ರವಲ್ಲದೇ, ಕಟ್ಟಡ ಮತ್ತು ಕಚೇರಿಗಳಲ್ಲೂ ಕನ್ನಡ …

Read More »

ಕನ್ನಡ ಚಿತ್ರರಂಗಕ್ಕೆ ಮಾರಕವಾಗುವ ಕೆಲಸಗಳು ನಡೆಯುತ್ತಿವೆ; ಟಿಎಸ್ ನಾಗಾಭರಣ

ಕನ್ನಡ ಸಿನಿಮಾರಂಗಕ್ಕೆ ಮಾರಕವಾಗುವ ಕೆಲಸಗಳು ನಡೆಯುತ್ತಿವೆ. ಅವುಗಳಿಂದ ಚಿತ್ರರಂಗವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಖ್ಯಾತ ನಿರ್ದೇಶಕ, ನಟ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಹೇಳಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಬಿಡುಗಡೆಗೆ ಅಡ್ಡಿಯಾದ ಹಿನ್ನಲೆ ಚಿತ್ರತಂಡ ಫಿಲ್ಮ್ ಚೇಂಬರ್ ಗೆ ದೂರು ನೀಡಿದೆ. ಈ ಬಗ್ಗೆ ಮಡಿಕೇರೆಯಲ್ಲಿ ಮಾತನಾಡಿದ ನಾಗಾಭರಣ ಭಾಷೆ ವಿಚಾರದಲ್ಲಿ ದರ್ಶನ್ ಮಾತ್ರವಲ್ಲ, ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದಿದ್ದಾರೆ.   …

Read More »

ಮತ್ತೆ ಶುರು ಸಖತ್; ಸದ್ಯದಲ್ಲೇ ಯುರೋಪ್​ಗೆ ಪ್ರಯಾಣ..

ಬೆಂಗಳೂರು: ಲಾಕ್​ಡೌನ್ ನಂತರ ‘ಥ್ರಿಬ್ಬಲ್ ರೈಡಿಂಗ್’ ಚಿತ್ರವನ್ನು ಮುಗಿಸಿರುವ ಗಣೇಶ್, ಇದೀಗ ‘ಸಖತ್’ ಚಿತ್ರೀಕರಣಕ್ಕೆ ವಾಪಸಾಗಿದ್ದಾರೆ. ಕಳೆದ ವರ್ಷದ ಆರಂಭದಲ್ಲಿಯೇ, ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಪ್ರಾರಂಭವಾಗಿ ಒಂದು ಹಂತದ ಚಿತ್ರೀಕರಣ ಮುಗಿದಿತ್ತು. ಆದರೆ, ಲಾಕ್​ಡೌನ್ ಹಿನ್ನೆಲೆಯಲ್ಲಿ ನಿಂತಿದ್ದ ಚಿತ್ರೀಕರಣ ಇದೀಗ ಪುನಃ ಶುರುವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಗಣೇಶ್, ‘ಪ್ರತಿ ಚಿತ್ರವೂ ನನಗೆ ಹೊಸತನ. ಮೊದಲ ಬಾರಿಗೆ ಮಾಡುತ್ತಿರುವ ಈ ರೀತಿಯ ಪಾತ್ರ ನಾ. ಚಿತ್ರಕಥೆ- ಸಂಭಾಷಣೆ …

Read More »

ಬಿಗ್‌ಬಾಸ್‌ 08 ಗೆ ರಾಕಿಂಗ್‌ ಸ್ಟಾರ್ ಯಶ್ ತಾಯಿ?

ಸ್ಟಾರ್ ನಟ ಯಶ್ ಅವರ ತಾಯಿ ಪುಷ್ಪಾ ಅವರು ಕನ್ನಡ ಬಿಗ್‌ಬಾಸ್ 8 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಪುಷ್ಪಾ ಅವರು ಕೆಲವು ದಿನಗಳ ಹಿಂದೆಯಷ್ಟೆ ಸಿಹಿ ಕಹಿ ಚಂದ್ರು ನಡೆಸಿಕೊಡುವ ಅಡುಗೆ ಕಾರ್ಯಕ್ರಮ ‘ಬೊಂಬಾಟ್ ಭೋಜನ’ದಲ್ಲಿ ಭಾಗವಹಿಸಿದ್ದರು. ಅದಾದ ನಂತರ ಪುಷ್ಪಾ ಅವರು ಬಿಗ್‌ಬಾಸ್ ಗೆ ಬರಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡಲು ಆರಂಭವಾಯಿತು. ಆದರೆ ಯಶ್ ಅಭಿಮಾನಿಗಳು …

Read More »