Breaking News

Daily Archives: ಜನವರಿ 20, 2021

ಕಾಕತಿ ವ್ಯಾಪ್ತಿಯಲ್ಲಿ ಬಿಂದಾಸ್ ಕಳ್ಳತನ..!

ಬೆಳಗಾವಿಯಲ್ಲಿ ಕಳ್ಳರ ಕೈಚಳಕ ಮತ್ತಷ್ಟು ಬಲಗೊಳ್ಳುತ್ತಿದೆ. ಮನೆಗಳ್ಳತನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಕಾಕತಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಕಳ್ಳರು ಮಾತ್ರ ಬಿಂದಾಸ್ ಆಗಿ ಕಳ್ಳತನ ಮಾಡುತ್ತಿದ್ದಾರೆ. ಯಾಕೆಂದರೆ ಬಹುಶಃ ಇಲ್ಲಿಯವರೆಗೆ ಆಗಿರುವ ಕಳ್ಳತನಗಳಲ್ಲಿ ಒಂದೇ ಒಂದು ಕಳ್ಳತನ ಪ್ರಕರಣವನ್ನು ಅಲ್ಲಿನ ತನಿಖಾಧಿಕಾರಿಗಳು ಪತ್ತೆ ಹಚ್ಚಿಲ್ಲ. ಹೀಗಾಗಿ ಬಹುಶಃ ಕಳ್ಳರು ಇಲ್ಲಿ ಬಿಂದಾಸಾಗಿ ಹಾಡಹಗಲೇ ಮನೆಗಳಿಗೆ ಕನ್ನ ಹಾಕಿ ದೊಚುತ್ತಿದ್ದಾರೆ. ನಿನ್ನೆ (ಮಂಗಳವಾರ 19) ಮಧ್ಯಾಹ್ನ 12 ಗಂಟೆ ಸುಮಾರಿಗೆ …

Read More »

ಸಿಎಂ ತೋರಿಕೆಗಷ್ಟೇ ಹಸಿರು ಶಾಲು ಹಾಕ್ತಾರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೋರಿಕೆಗಷ್ಟೇ ಹಸಿರು ಶಾಲು ಹಾಕ್ತಾರೆ. ಆದ್ರೆ ಯಾವುದೇ ರೀತಿ ರೈತರ ಬಗ್ಗೆ ಕಾಳಜಿ ಅವರಿಗಿಲ್ಲ. ಬಿಜೆಪಿ ಕಾರ್ಪೊರೇಟರ್ ಪರ ಇರುವುದರಿಂದ ಕಾಯ್ದೆ ಹಿಂಪಡೆಯಲು ಹಿಂದೆಟು ಹಾಕುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇಂದು ನಡೆದ ರಾಜಭವನ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಕಾರ್ಪೊರೇಟರ್ ಪರ ಇವೆ. ಆದ ಕಾರಣ ಸರ್ಕಾರ …

Read More »

ಕಾಂಗ್ರೆಸ್ ನ ಮತ್ತಿಬ್ಬರು ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಪಟ್ಟ !

ಬೆಂಗಳೂರು : ಮಾಜಿ ಸಂಸದ ಧ್ರುವ ನಾರಾಯಣ್ ಹಾಗೂ ಮಾಜಿ ಸಚಿವ, ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಜವಾಬ್ದಾರಿ ನೀಡಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಆದೇಶ ನೀಡಿದ್ದಾರೆ. ಮೂವರು ನಾಯಕರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಸಲೀಂ ಅಹಮ್ಮದ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಈಗಾಗಲೇ ನೇಮಕ ಮಾಡಲಾಗಿದೆ. ನಾಯಕರು ಸಹ ರಾಜ್ಯಾದ್ಯಂತ …

Read More »

ಬೆಳಗಾವಿಯ 19 ವರ್ಷದ ಯುವತಿ ಕಾಣೆ

ಬೆಳಗಾವಿ : ಅನಗೋಳ ನಿವಾಸಿಯಾದ 19 ವರ್ಷದ ಸ್ವಾತಿ ಸದಾನಂದ ಕಮ್ಮಾರ ಜ.4 ರಂದು ಕಾಣೆಯಾಗಿದ್ದಾಳೆ. ಪಾಂಗೂಳ ಗಲ್ಲಿಯಲ್ಲಿರುವ ಸಾಯಿ ಲಕ್ಷ್ಮಿ ಇಂಡೋಲಿಯನ್ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗಿದ್ದಳು. ಸಂಜೆ 4 ಗಂಟೆಗೆ ಮಾಲೀಕರಿಂದ 1400 ರೂಪಾಯಿ ಹಣ ಪಡೆದು ಕೆಲಸಕ್ಕೆ ಬರುವುದಿಲ್ಲವೆಂದು ಮರಳಿದ್ದಾಳೆ. ಆದರೆ ಮನೆಗೆ ಬಾರದೆ ಕಾಣೆಯಾಗಿದ್ದು, ಬೆಳಗಾವಿ ಮಾರ್ಕೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾತಿ ಸದಾನಂದ ಕಮ್ಮಾರ 5 ಪೂಟ 1 ಇಂಚು ಎತ್ತರವಿದ್ದು, …

Read More »

ಜಯನಗರದ ಕಾಂಗ್ರೆಸ್‌ ಶಾಸಕಿ ಶಾಸಕಿ ಸೌಮ್ಯಾ ರೆಡ್ಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.

ಬೆಂಗಳೂರು: ಜಯನಗರದ ಕಾಂಗ್ರೆಸ್‌ ಶಾಸಕಿ ಶಾಸಕಿ ಸೌಮ್ಯಾ ರೆಡ್ಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ರೈತ ಕಾಯ್ದೆ ರದ್ಧತಿ ಆಗ್ರಹಿಸಿ ಇಂದು ಕಾಂಗ್ರೆಸ್‌ ರಾಜಭವನ ಚಲೋವನ್ನು ಆಯೋಜಿಸಿತ್ತು. ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶದ ಬಳಿಕ ರಾಜಭನವನಕ್ಕೆ ತೆರಳಲು ಹೋಗುತ್ತಿದ್ದಾಗ ಪೊಲೀಸರು ಕಾಂಗ್ರೆಸ್‌ ನಾಯಕರನ್ನು ತಡೆದಿದ್ದಾರೆ. ಈ ವೇಳೆ ಸೌಮ್ಯಾ ರೆಡ್ಡಿ ಅವರನ್ನು ಮಹಿಳಾ ಪೊಲೀಸರು ತಡೆದಿದ್ದಾರೆ. ಈ ವೇಳೆ ಸೌಮ್ಯಾ ರೆಡ್ಡಿ “ಹೂ ದಿ ಹೆಲ್‌” ಎಂದು ಹೇಳಿ ಮಹಿಳಾ ಸಿಬ್ಬಂದಿಯ ಮೇಲೆ …

Read More »

ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು

ಮಂಗಳೂರು: ತುಳುವರ ಆರಾಧ್ಯ ದೈವ ಸ್ವಾಮಿ‌ ಕೊರಗಜ್ಜ ಹಾಗೂ ಗುಳಿಗಜ್ಜನ ಪುಣ್ಯಕ್ಷೇತ್ರದ ಕಾಣಿಕೆ‌ ಹುಂಡಿಗೆ ಕಾಂಡೋಮ್ ಹಾಗೂ ನಿಂದನಾರ್ಹ ಬರಹಗಳನ್ನು ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಮಂಗಳೂರು ಸಮೀಪದ ಉಳ್ಳಾಲದಲ್ಲಿ‌ ನಡೆದಿದೆ. ಉಳ್ಳಾಲದ ಬಸ್ ನಿಲ್ದಾಣದ ಬಳಿ ಇರುವ‌ ಸಾರ್ವಜನಿಕ‌ ಶ್ರೀ‌ಕೊರಗಜ್ಜ, ಗುಳಿಗಜ್ಜ ಸೇವಾ ಸಮಿತಿ ಕ್ಷೇತ್ರದಲ್ಲಿರುವ ಕಾಣಿಕೆ‌ ಹುಂಡಿಯಲ್ಲಿ‌ ಇಂದು ಮುಂಜಾನೆ ಈ ವಿಕೃತಿ ಪತ್ತೆಯಾಗಿದೆ. ಈ ಕ್ಷೇತ್ರದಲ್ಲಿ ಪ್ರತೀ ಸಂಕ್ರಮಣದಂದು ಕಾಣಿಕೆ‌ ಹುಂಡಿಯ ಹಣ ಎಣಿಕೆ …

Read More »

ಅಂಜಲಿ ನಿಂಬಾಳ್ಕರ್ ಪ್ರತಿಭಟನೆ ವೇಳೆ ಅಸ್ವಸ್ಥ

; ಬೆಂಗಳೂರು; ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ನಡೆಯುತ್ತಿದ್ದ ರಾಜಭವನ ಚಲೋ ರೈತರ ಪ್ರತಿಭಟನೆ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಅಸ್ವಸ್ಥಗೊಂಡಿದ್ದಾರೆ. ರಾಜಭವನದತ್ತ ತೆರಳುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಮಾರ್ಗ ಮಧ್ಯೆಯೇ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಅಸ್ವಸ್ಥಗೊಂಡಿದ್ದಾರೆ. ನಂತರ ಅಲ್ಲೇ ಕುಳಿತು ವಿಶ್ರಾಂತಿ ಪಡೆದುಕೊಂಡರು. ಕಾಂಗ್ರೆಸ್ ರಾಜಭವನ ಚಲೋ ಪ್ರತಿಭಟನಾ ರ್ಯಾಲಿ ತಡೆದು ನಾಯಕರನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಪ್ರತಿಭಟನೆಗಳು ಭುಗಿಲೆದ್ದಿವೆ.

Read More »

ನೂತನ ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು – ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಕಸರತ್ತು ಶುರುವಾಗಿದೆ. ಪ್ರಮುಖ ಖಾತೆಗಳಿಗೆ ಪ್ರಭಾವಿ ಸಚಿವರಿಂದ ಲಾಬಿ ನಡೆಯುತ್ತಿದ್ದು, ಕೆಲವರ ಖಾತೆಯೂ ಅದಲು ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ನಾಳೆ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಖಾತೆ ಹಂಚಿಕೆ ಜೊತೆಗೆ ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆಯು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕೆಲ ಸಚಿವರು ಪ್ರಮುಖ ಖಾತೆಗೆ ಪಟ್ಟು …

Read More »

ಮಾಸ್ಟರ್ ಸಿನಿಮಾ ಲಿಂಕ್ : 25 ಕೋಟಿ ರೂ. ಪರಿಹಾರಕ್ಕೆ ನಿರ್ಮಾಪಕರು ಬೇಡಿಕೆ ಇಟ್ಟಿದ್ದಾರೆ

ದಳಪತಿ’ ವಿಜಯ್ ಮತ್ತು ‘ಮಕ್ಕಳ್ ಸೆಲ್ವನ್‌’ ವಿಜಯ್ ಸೇತುಪತಿ ಒಟ್ಟಿಗೆ ಅಭಿನಯಿಸಿರುವ ‘ಮಾಸ್ಟರ್‌’ ಸಿನಿಮಾ ಜನವರಿ 13ರಂದು ತೆರೆಕಂಡು ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಶೇ.50 ಆಸನ ಭರ್ತಿಗೆ ಮಾತ್ರ ಅವಕಾಶ ಇದ್ದರೂ, ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆಯುತ್ತಿದೆ. ಈ ಮಧ್ಯೆ ಪೈರಸಿ ಕಾಟವೂ ಚಿತ್ರಕ್ಕೆ ಇದೆ. ಸದ್ಯ ಇದರ ವಿರುದ್ಧ ನಿರ್ಮಾಪಕರು ಹೋರಾಟಕ್ಕೆ ನಿಂತಿದ್ದಾರೆ. ಈ ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ! ಜೊತೆಗೆ 25 ಕೋಟಿ ರೂ. ಪರಿಹಾರಕ್ಕೆ ನಿರ್ಮಾಪಕರು …

Read More »

ಸ್ಮಾಟ್‍ಫೋನ್ ಅಥವಾ ಕಂಪ್ಯೂಟರ್ ನೋಡುವುದರಿಂದ ಕಣ್ಣುಗಳನ್ನು ಕಳಕೋತಿರಾ ಹುಷಾರ್ !

ಮಾನವನ ಕಣ್ಣಿನ ಸ್ವಾಭಾವಿಕ ನೋಡುವ ವಿಧಾನವೆಂದರೆ, ಯಾವುದಾದರೂ ವಸ್ತುವಿನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವುಗಳನ್ನು ಆ ವಸ್ತುವು ಹೀರುವುದರಿಂದ ಹಾಗೂ ಅದರ ಪ್ರತಿಫಲನದಿಂದ ಉಂಟಾಗುವ ಕಿರಣಗಳು ನಮ್ಮ ಕಣ್ಣಿನ ಮೇಲೆ ಬೀಳುವುದರಿಂದ. ಈ ಪ್ರಕ್ರಿಯೆಯಲ್ಲಿ ನಮ್ಮ ಅಕ್ಷಿಪಟಲದ ಮೇಲೆ ಬೀಳುವ ಬೆಳಕಿನ ಶಕ್ತಿಯು ಅಲ್ಪ ಪ್ರಮಾಣದ್ದಾಗಿರುತ್ತದೆ. ಆದರೆ ವಿದ್ಯುನ್ಮಾನ ಪರದೆಗಳನ್ನು ವೀಕ್ಷಿಸುವಾಗ ಈ ಕಿರಣಗಳು ನೇರವಾಗಿ ಅಕ್ಷಿಪಟಲದ ಮೇಲೆ ಬೀಳುವುದರಿಂದ ಹೆಚ್ಚು ಪ್ರಮಾಣದ ಶಕ್ತಿಪಾತ ಕಣ್ಣಿನ ಮೇಲಾಗುತ್ತದೆ. ಫೋನಿನಲ್ಲಿ …

Read More »